ದೇವಾಡಿಗ ಸಂಘ ಮುಂಬಯಿ - ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡುಪ್ ವಲಯದ ಬಾಕ್ಸ್ ಟರ್ಫ್ ಕ್ರಿಕೆಟ್ ಪಂದ್ಯಾವಳಿ. | DSM

ದೇವಾಡಿಗ ಸಂಘ ಮುಂಬಯಿ - ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡುಪ್ ವಲಯದ ಬಾಕ್ಸ್ ಟರ್ಫ್ ಕ್ರಿಕೆಟ್ ಪಂದ್ಯಾವಳಿ.

Featured Image

ಮುಂಬಯಿ, ಮಾ 14: ದೇವಾಡಿಗ ಸಂಘ ಮುಂಬಯಿ ಇದರ ಭಾಂಡುಪ್ ಪ್ರಾದೇಶಿಕ ಸಮನ್ವಯ ಸಮಿತಿಯು ಅಂತರ್ ಪ್ರಾದೇಶಿಕ ಸಮತಿಗಳ ದೇವಾಡಿಗ ಬಾಕ್ಸ್ ಟರ್ಫ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ದೇವಾಡಿಗ ಯುವ ವಿಭಾಗದ ಸಹಯೋಗದೊಂಂದಿಗೆ ತಾರೀಕು 01.03.2026 ರಂದು ಭಾಂಡುಪ್ ಪಶ್ಚಿಮದ ಎನ್.ಇ.ಎಸ್ ರತ್ನಂ ಕಾಲೇಜಿನ ಬಾಕ್ಸ್ ಟರ್ಫ್ ಮೈದಾನದಲ್ಲಿ ಜರಗಿತು.
ಈ ಲೀಗ್ ಪಂದ್ಯಾವಳಿಯಲ್ಲಿ ದೇವಾಡಿಗ ಸಂಘದ ಹತ್ತು ಪ್ರಾದೇಶಿಕ ಸಮತಿಗಳಿಂದ ಹದಿನಾಲ್ಕು ಪುರಷರ ತಂಡಗಳು ಹಾಗೂ ನಾಲ್ಕು ಮಹಿಳೆಯರ ತಂಡಗಳು ಭಾಗವಹಿಸಿದ್ದು ಪ್ರತೀ ಪುರುಷರ ತಂಡದಲ್ಲಿ ಓರ್ವ ಮಹಿಳಾ ಆಟಗಾರ್ತಿ ಕಡ್ಡಾಯವಾಗಿದ್ದು ಸುಮಾರು 300 ಮಂದಿ ಸದಸ್ಯರು ಈ ಟರ್ಫ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ದೇವಾಡಿಗ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ಎಸ್. ದೇವಾಡಿಗರು ದೀಪಪ್ರಜ್ವಲಿಸಿ ಉದ್ಘಾಟನಾ ಮುಖೇನ ಪಂದ್ಯಾವಳಿಯ ಚಾಲನೆಗೈದರು.
ಶ್ರೀಯುತ ನರೇಶ್ ಎಸ್ ದೇವಾಡಿಗರು ನೆರೆದ ಕ್ರೀಡಾಳುಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಂಘದ 100ನೇ ವರ್ಷದ ಆಚರಣೆಯ ಸಂಧರ್ಭದಲ್ಲಿ ನಮ್ಮ ಯುವ ವಿಭಾಗದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದು ಹಾಗೂ ಮುಂದೆಯೂ ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು. ಹೊಸ ಸದಸ್ಯರ ನೋಂದಾವಣೆ ಮತ್ತು ‌‌‌ಪ್ರಾದೇಶಿಕ ಸಮತಿಗಳ ಸಂಪರ್ಕಗಳನ್ನು ಬಲಪಡಿಸುವುದರಿಂದ ಎಲ್ಲಾ ಪ್ರಾದೇಶಿಕ ಸಮನ್ವಯ ಸಮಿತಿಗಳ ಸದಸ್ಯರನ್ನು ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಸಾಮೂಹವಾಗಿ ಭಾಗವಹಿಸುವಂತೆ ಮಾಡುವುದು ನಮ್ಮ ಮೂಲ ಉದ್ದೇಶ ಎಂದರು.
ಭಾಂಡುಪ್ ವಲಯದ ಮಾಜಿ ಹಾಗೂ ಸ್ಥಾಪಕ ಕಾರ್ಯಾಧ್ಯಕ್ಷರಾದ ಶ್ರೀಯುತ ಜಯ ಎಲ್ ದೇವಾಡಿಗರು ಮಾತನಾಡುತ್ತಾ ಕ್ರೀಡಾಕೂಟವು ಒಂದು ಒಗ್ಗಟ್ಪಿನ ಸಂಕೇತವಾಗಿದ್ದು ಇದರಲ್ಲಿ ಗೆಲ್ಲುವುದು ಮುಖ್ಯವಲ್ಲ ಭಾಗವಹಿಸುವುದು ಮಾಖ್ಯವಾಗಿದೆ, ಮಾತ್ರವಲ್ಲದೆ ಅತ್ಯುತ್ತಮ ಪ್ರದರ್ಶನದ ತಂಡವು ಮಾತ್ರ ಗೆಲ್ಲುಲು ಸಾಧ್ಯ ಎಂದರಲ್ಲದೆ ಎಲ್ಲರಿಗೂ ಶುಭಾಶಯವನ್ನಿತ್ತರು.
ಈ ಸಂಧರ್ಭದಲ್ಲಿ ದೇವಾಡಿಗ ಸಂಘದ ಇನ್ನೋರ್ವ ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜತೆ ಖಜಾಂಜಿಗಳಾದ ಶ್ರೀ ಜಯ ಎಲ್ ದೇವಾಡಿಗ ಮತ್ತು ಸುರೇಶ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ವಿಶಾಲ್ ಸಿ. ದೇವಾಡಿಗ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಜಯಂತಿ ಎಂ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಭಾಂಡುಪ್ ವಲಯದ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತಾ ದೇವಾಡಿಗ, ವಲಯದ ಮಾಜಿ ಕಾರ್ಯಾಧ್ಯಕ್ಷ ಶ್ರೀ ವಿಶ್ವನಾಥ್ ದೇವಾಡಿಗ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ವಿನಿಶ್ ದೇವಾಡಿಗ, ಕ್ರೀಡಾ ವಿಭಾಗದ ಮುಖ್ಯಸ್ಥೆ ರಕ್ಷಾ ದೇವಾಡಿಗ, ಸುಜಲ್ ದೇವಾಡಿಗ, ದೀಪ್ತಿ ಶೇರಿಗಾರ್, ಸಿಟಿ ವಲಯದ ಮಾಜಿ ಕಾರ್ಯಾಧ್ಯಕ್ಷರಾದ ಹೇಮನಾಥ ದೇವಾಡಿಗ ಮೊದಲಾದವರು ಉದ್ಘಾಟನಾ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ವಲಯದ ಮಾಜಿ ಕಾರ್ಯಾಧ್ಯಕ್ಷ ಶ್ರೀ ವಿಶ್ವನಾಥ್ ದೇವಾಡಿಗರು ಈ ಟರ್ಫ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಮುಖ್ಯ ರೂವಾರಿಯಾಗಿದ್ದು ಬಹಳ ಉತ್ತಮ ರೀತಿಯಲ್ಲಿ ಯುವ ವಿಭಾಗದ ಸಹಕಾರದೊಂಂದಿಗೆ ಆಯೋಜಿಸಿದರು .
ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ, ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ಯು ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ವಾಸು ಎಸ್. ದೇವಾಡಿಗ ಹಾಗೂ ಭಾಂಡುಪ್ ವಲಯದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ವಾಸು ದೇವಾಡಿಗರು ಟರ್ಫ್ ಕ್ರಿಕೆಟ್ ಪಂದ್ಯಾವಳಿಯ ಯಶಸ್ವಿಗೆ ಶುಭ ಹಾರೈಸಿದರು.

ಭಾಂಡುಪ್ ವಲಯದ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತಾ ದೇವಾಡಿಗ ಮತ್ತು ಅವರ ಕಾರ್ಯಕಾರಿ ಸಮಿತಿಯ ಸದಸ್ಯೆರಾದ ಶ್ರೀಮತಿ ಲೀಲಾ ಶೇರಿಗಾರ್ (ಉಪ ಕಾರ್ಯಾಧ್ಯಕ್ಷ), ಶ್ರೀಮತಿ ಶಕುಂತಲಾ ದೇವಾಡಿಗ (ಖಜಾಂಜಿ), ಶ್ರೀಮತಿ ವೀಣಾ ದೇವಾಡಿಗ (ಕಾರ್ಯಾಧ್ಯಕ್ಷೆ- ಮಹಿಳಾ ವಿಭಾಗ), ಅಶ್ವಿನಿ ದೇವಾಡಿಗ, ದೀಪ್ತಿ ದೇವಾಡಿಗ, ಆಕಾಶ್ ದೇವಾಡಿಗ, ಶ್ರೀ ಕೃಷ್ಣ ಎನ್. ಶೇರಿಗಾರ್ (ಸಲಹೆಗಾರು ಹಾಗೂ ಸಂಘದ ಮಾಜಿ ಗೌರವ ಜತೆ ಕಾರ್ಯದರ್ಶ), ವೆಂಕಟೇಶ್ ದೇವಾಡಿಗ ಮತ್ತು ಲೋಲಾಕ್ಷಿ ದೇವಾಡಿಗ (ಹಿರಿಯ ಸದಸ್ಯರು), ಕೃಷ್ಣ ದೇವಾಡಿಗ, ಲಾಸ್ಯ ದೇವಾಡಿಗ, ಮೇಘಾ ದೇವಾಡಿಗ, ಶಿವಾನಂದ್ ದೇವಾಡಿಗ ಮೊದಲಾದ ವಲಯದ ಸದಸ್ಯರು ಈ ಪಂದ್ಯಾವಳಿಯ ಯಶಸ್ವಿಗೆ ಶ್ರಮಿಸಿದರು. ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಜಯ ವಿ ದೇವಾಡಿಗರು ಲಕ್ಕಿ ಡಿಪ್ ವಿತರಣೆಯನ್ನು ನೆರವೇರಿಸಿದರು.
ದೇವಾಡಿಗ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಏ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಸಚಿತಾ ಎಸ್.` ಶ್ರೀಯಾನ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳಾ ವಿ ಶೇರಿಗಾರ್, ಶ್ರೀ ಕಿರಣ್ ದೇವಾಡಿಗ (ಸದಸ್ಯತ್ವ ಅಭಿಯಾನ ಮತ್ತು ಪ್ರಾದೇಶಿಕ ಸಮತಿಗಳ ಸಂಯೋಜಕರು), ಗಣೇಶ್ ದೇವಾಡಿಗ (ಕಾರ್ಯಾಧ್ಯಕ್ಷರು - ಕ್ರೀಡಾ ಘಟಕ), ರಾಮಣ್ಣ ಬಿ ದೇವಾಡಿಗ, ಪೂರ್ಣಿಮಾ ದೇವಾಡಿಗ, (ಕಾರ್ಯಕಾರಿಸಮಿತಿಯ ಸದಸ್ಯರು),ಸುರೇಖ ಯಚ್ ದೇವಾಡಿಗ (ಕಾರ್ಯಕಾರಿ ಸಮಿತಿಯ ಸದಸ್ಯೆ ಹಾಗೂ ಉಪ ಕಾರ್ಯಾಧ್ಯಕ್ಷೆ-ಮಹಿಳಾ ವಿಭಾಗ ), ನ್ಯಾಯವಾದಿ ಪ್ರಭಾಕರ್ ದೇವಾಡಿಗ (ಸಂಪಾದಕರು-ದೇವಾಡಿಗ ಜ್ಯೋತಿ), ಶ್ರೀಮತಿ ಪ್ರತಿಭಾ ದೇವಾಡಿಗ (ದೇವಾಡಿಗ ಸಂಘದ ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ), ಶ್ರೀಮತಿ ಲತಾ ಶೇರಿಗಾರ್ ಜತೆ ಕಾರ್ಯದರ್ಶಿ), ದೇವಾಡಿಗ ಸಂಘ ಮಹಿಳಾ ವಿಭಾಗ), ಲಕ್ಷ್ಮಣ್ ದೇವಾಡಿಗ (ಮೀರಾ ರೋಡ್-ವಿರಾರ್ ಕಾರ್ಯಾಧ್ಯಕ್ಷ) ರಮೇಶ್ ದೇವಾಡಿಗ ( ಮಾಜಿ ಕಾರ್ಯಾಧ್ಯಕ್ಷರು - ನವಿಮುಂಬಯಿ,), ಶ್ರೀಮತಿ ಜಯಂತಿ ಮೊಯ್ಲಿ, (ಮಾಜಿ ಕಾರ್ಯಾಧ್ಯಕ್ಷೆ-ಮಹಿಳಾ ವಿಭಾಗ), ರಘು ಮೊಯ್ಲಿ (ಕಾರ್ಯಾಧ್ಯಕ್ಷರು-ಚೆಂಬೂರು ವಲಯ), ಸುರೇಶ್ ದೇವಾಡಿಗ (ಕಾರ್ಯಾಧ್ಯಕ್ಷರು- ಡೊಂಬಿವಿಲಿ ವಲಯ), ಯಶವಂತ ಎಂ. ದೇವಾಡಿಗ (ಮಾಜಿ ಕಾರ್ಯಾಧ್ಯಕ್ಷರು- ಚೆಂಬೂರು ವಲಯ), ಶ್ರೀಮತಿ ನಿರ್ಮಲಾ ರಾಮಣ್ಣ ದೇವಾಡಿಗ (ಮಾಜಿ ಕಾರ್ಯಾಧ್ಯಕ್ಷ- ಚೆಂಬೂರು ವಲಯ ) ಮೊದಲಾದವರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು
ಕೃಷ್ಣ ಶೇರಿಗಾರ್ ನೇತೃತ್ವದ ಮೀರಾ ರೋಡ್ - ವಿರಾರ್ ವಲಯ ಮತ್ತು ಭೂಷಣ್ ದೇವಾಡಿಗ ನೇತೃತ್ವದ ಡೊಂಬಿವಿಲಿ ವಲಯಗಳ ಪೈನಲ್ ಸೆಣಸಾಟದಲ್ಲಿ ಮೀರಾ ರೋಡ್ - ವಿರಾರ್ ವಲಯವು ಗೆದ್ದು ವಿಜಯಿಯಾಯಿತು.
ಮಹಿಳಾ ವಿಭಾಗದಲ್ಲಿ ರಕ್ಷಾ ದೇವಾಡಿಗ ನೇತೃತ್ವದ ಸಂಘದ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ತಂಡ ಮತ್ತು ವಿದ್ಯಾ ದೇವಾಡಿಗ ನೇತೃತ್ವದ ಅಸಲ್ಫಾ ವಲಯಗಳ ಪೈನಲ್ ಸೆಣಸಾಟದಲ್ಲಿ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಮುಂಬಯಿ ತಂಡವು ಗೆದ್ದು ವಿಜಯಿಯಾಯಿತು.
ವಿಜೇತ ಮತ್ತು ರನ್ವರ್ಸ ಅಪ್ ತಂಡಗಳಿಗೆ ಟ್ರೋಫಿ ಹಾಗೂ ಪದಕಗಳೊಂದಿಗೆ ಗೌರವಿಸಲಾಯಿತು,
ಅತ್ಯುತ್ತಮ ಬೌಲರ್: ನಿತಿನ್ ದೇವಾಡಿಗ (ನವಿಮುಂಬಯಿ ವಲಯ); ಅತ್ಯುತ್ತಮ ಬ್ಯಾಟ್ಸಮನ್ : ಕ್ಷಿತಿಜ್ ದೇವಾಡಿಗ (ಥಾಣೆ ವಲಯ) ಅತ್ಯುತ್ತಮ ಆಟಗಾರ : ರಿತೇಶ್ ದೇವಾಡಿಗ (ಮೀರಾ ರೋಡ್ - ವಿರಾರ್ ವಲಯ);
ಮಹಿಳೆಯರ ವಿಭಾಗ: ಅತ್ಯುತ್ತಮ ಆಟಗಾರ್ತಿ-ನಂದಿನಿ ದೇವಾಡಿಗ (ಮೀರಾ ರೋಡ್ - ವಿರಾರ್ ವಲಯ )
ವಿಜೇತರಿಗೆ ಫಲಕ ಟ್ರೋಫಿಯನ್ನು ಮುಖ್ಯ ಅತಿಥಿಗಳಾದ ಕಡ್ಯಾರ್ ಹೌಸ್ ಮುಂಡ್ಕೂರು ಶ್ರೀ ಸದಾಶಿವ ಯಸ್ ಶೆಟ್ಪಿ ಅಡ್ರೊಯಿಟ್ ಕಂಪೆನಿ - ಅಂಧೇರಿ ( ಪ್ರೋಮೋಟರ್ & ಮ್ಯಾನೇಜಿಂಗ್ ಡೈರೆಕ್ಟರ್ ) ಇವರು ಹಸ್ತಾಂತರಿಸಿದರು.
ಮುಖ್ಯ ಕಮೆಂಟ್ರೇಟರ್ ಹಾಗೂ ನಿರೂಪಣೆಯನ್ನು ಶ್ರೀ ದೀಕ್ಷಿತ್ ದೇವಾಡಿಗರು ನೆರವೇರಿಸಿದರೆ, ಶ್ರೀ ವಿಶ್ವನಾಥ್ ದೇವಾಡಿಗರ ಧನ್ಯವಾದದೊಂದಿ ಅಂದಿನ ಟರ್ಫ್ ಕ್ರಿಕೆಟ್ ಲೀಗ್ ಪಂದ್ಯಾವಳಿಯು ಮುಖ್ತಾಯಗೊಂಡಿತು.