ದೇವಾಡಿಗ ಸಂಘ ಮುಂಬಯಿ - ಡೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಹರಶಿಣ ಕುಂಕುಮ ಸಾಂಸ್ಕೃತಿಕ ಕಾರ್ಯಕ್ರಮ | DSM

ದೇವಾಡಿಗ ಸಂಘ ಮುಂಬಯಿ - ಡೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಹರಶಿಣ ಕುಂಕುಮ ಸಾಂಸ್ಕೃತಿಕ ಕಾರ್ಯಕ್ರಮ

Featured Image

ದೇವಾಡಿಗ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಹರಶಿಣ ಕುಂಕುಮ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 14/02/2026 ರಂದು ಸಾಯಂಕಾಲ ಗಂಟೆ 06:00 ರಿಂದ ಡೊಂಬಿವಲಿ ಪಶ್ಚಿಮ ರೈಲ್ವೆ ನಿಲ್ದಾಣದ ಎದುರಿಗಿರುವ ಜಾನಕೀ ಸಭಾಗೃಹದಲ್ಲಿ ಡೊಂಬಿವಲಿ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ನಿರ್ಮಲ ರಾಮಚಂದ್ರ ದೇವಾಡಿಗ ಹಾಗೂ ಕಾರ್ಯಾಧ್ಯಕ್ಷರಾದ ಶ್ರೀಯುತ ಸುರೇಶ್ ದೇವಾಡಿಗರ ಮುಂದಾಳತ್ವ ಹಾಗೂ ಮಂಡಳಿಯ ಸದಸ್ಯರೆಲ್ಲರ ಉಪಸ್ಥಿತಿಯಲ್ಲಿ ಬಹಳ ವಿಜೃಂಮಣೆಯಿಂದ ನಡೆಯಿತು. ಮೊದಲಿಗೆ ವಲಯದ ಮಹಿಳೆಯರಿಂದ ಹಾಗೂ ಮಕ್ಕಳಲಿಂದ ನಡೆದ ಮನೋರಂಜನ ಕಾರ್ಯಕ್ರಮವು ನೆರೆದ ಸಭೆಯನ್ನು ರಂಜಿಸಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ಸಂಘ ಡೊಂಬಿವಲಿಯ ಉಪ ಕೋಶಾಧಿಕಾರಿ ಶ್ರೀಮತಿ ವಿಮಲಾ ವಿಠಲ ಶೆಟ್ಟಿ, ಸಮಾಜ ಸೇವಕರಾದ ಶ್ರೀಮತಿ ಶೋಭಾ ವಾಮನ ಶೆಟ್ಟಿ ಹಾಗೂ ನಮ್ಮ ಮಾತ್ರ್ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮಿಳಾ ವಿಜಯ್ ಶೇರಿಗಾರ್ ಆಗಮಿಸಿದರು. ಡೊಂಬಿವಲಿ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ನಿರ್ಮಲ ರಾಮಚಂದ್ರ ದೇವಾಡಿಗರು ಅಂದಿನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮಾತ್ರ್ ಸಂಘದ ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಸಚಿತಾ ಶ್ರೀಯಾನ್ ಹಾಗೂ ನಮ್ಮ ಡೊಂಬಿವಲಿ ವಲಯದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪದ್ಮಲತಾ ರಾಜು ಮೊಯ್ಲಿ ಇವರು ವೇದಿಕೆಯಲ್ಲಿದ್ದರು.
ವೇದಿಕೆಯಲ್ಲಿದ್ದ ಅತಿಥಿಗಳಿಗೆ ಶಾಲು ಹಾಗೂ ಪುಷ್ಪ ಗುಚ್ಛ ಕೊಟ್ಟು ಸ್ವಾಗತಿಸಲಾಯಿತು. ಮಾತ್ರ್ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಯುತ ಪದ್ಮನಾಭ ದೇವಾಡಿಗ, ವಲಯದ ಕಾರ್ಯಾಧ್ಯಕ್ಷರಾದ ಶ್ರೀಯುತ ಸುರೇಶ್ ದೇವಾಡಿಗ ಮಾತ್ರ್ ಸಂಘದ ಗೌ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಗೌ ಖಜಾಂಚಿ ಶ್ರೀ ಸುರೇಶ್ ದೇವಾಡಿಗ ಹಾಗೆಯೇ ನಮ್ಮ 10ವಲಯದ ಕಾರ್ಯಾಧ್ಯಕ್ಷರು, ಮಹಿಳಾ ಕಾರ್ಯಧ್ಯಕ್ಷರು, ಸಮಿತಿಯು ಪದಾದಿಕಾರಿಗಳಿಗೆ, ಯುವ ವಿಭಾಗದವರಿಗೆ, ಮಾತ್ರ್ ಸಂಘದ ಯುವ ವಿಭಾಗದ ಕಾರ್ಯಧ್ಯಕ್ಷರು ಹಾಗೂ ಅವರ ಸಮಿತಿ ಪದಾಧಿಕಾರಿಗಳಿಗೆ ವಲಯದ ಪದಾಧಿಕಾರಿಗಳು ಪುಷ್ಪ ಗುಚ್ಛ ಕೊಟ್ಟು ಸನ್ಮಾನಿಸಿಸಲಾಯಿತು.
ವಲಯದ ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಪುಷ್ಪಲತಾ ಲೋಕೇಶ್ ದೇವಾಡಿಗರು ಚುಟುಕಾಗಿ ಹಳದಿ-ಕುಂಕುಮದ ವಿಷಯದಲ್ಲಿ ನೆರೆದ ಸಭೆಗೆ ತಿಳಿಸಿದರು. ಮಹಿಳಾ ಜೊತೆ ಕಾರ್ಯಾಧ್ಯಕ್ಷರಾದ ಶ್ರೀಮತಿ ಭಾರತಿ ಎಮ್ ದೇವಾಡಿಗರು ಕೊರಗಜ್ಜನ ಪದ್ಯವನ್ನು ಹಾಡಿ ಮನರಂಜಿಸಿದರು.
ಅತಿಥಿಗಳಾದ ಶ್ರೀಮತಿ ವಿಮಲಾ ವಿಠಲ ಶೆಟ್ಟಿಯವರ ಕಿರು ಪರಿಚಯವನ್ನು ಮಹಿಳಾ ಕಾರ್ಯದರ್ಶಿಗಳಾದ ಶ್ರೀಮತಿ ಪದ್ಮಲತಾ R ಮೊಯ್ಲಿ ಹಾಗೂ ಶ್ರೀಮತಿ ಶೋಭಾ ವಾಮನ ಶೆಟ್ಟಿಯವರ ಪರಿಚಯವನ್ನು ಮಹಿಳಾ ಖಜಾಂಚಿಗಳಾದ ಶ್ರೀಮತಿ ಮಲ್ಲಿಕಾ ಶೇಕರ್ ದೇವಾಡಿಗ ಇವರು ಪರಿಚಯಿಸಿದರು. ಅತಿಥಿ ಶ್ರೀಮತಿ ವಿಮಲ ವಿಠಲ ಶೆಟ್ಟಿಯವರು ಹಳದಿ-ಕುಂಕುಮದ ಬಗ್ಗೆ ಚುಟುಕಾಗಿ ತಿಳಿಸಿದರು.
ಮತ್ತು ನಮ್ಮ ಸಂಘ ಸಂಸ್ಥೆಯನ್ನು ಸ್ಥಾಪಿಸಿ ಮುಂದೆ ನಮ್ಮವರಿಗಾಗಿ ಕೊಟ್ಟು ಹೋಗಿದ್ದಾರೆ ಅದನ್ನು ಮುಂದೆ ನಾವು ನಮ್ಮ ಮಕ್ಕಳು ಮುಂದುವರಿಸಿ ಕೊಂಡು ಹೋಗುವುದು ಮುಖ್ಯ ಕರ್ತವ್ಯವಾಗಿದೆ. ನಿಮ್ಮ ಈ 100 ವರ್ಷದ ಸಂಸ್ಥೆಯು ಮುಂದೆ ಹೆಮ್ಮರವಾಗಿ ಬೆಳೆಯಲಿ ಎಂದು ತಮ್ಮ ಅತಿಥಿ ಭಾಷಣ ದಲ್ಲಿ ಕೊಂಡಾಡಿದರು. ಇನ್ನೊಬ್ಬ ಅತಿಥಿ ಶ್ರೀಮತಿ ಶೋಭಾ ವಾಮನ ಶೆಟ್ಟಿಯವರು ನಮ್ಮ ಅಪ್ಪೆಭಾಷೆ ತುಳು ಹಾಗೂ ತಾನು ಜನ್ಮ ತಳೆದ ನಾಡಿನ ಭಾಷೆ ಮರಾಠಿ ಯಲ್ಲಿಯು ಬಹಳ ಚೊಕ್ಕಟ ವಾಗಿ ಮಾತನಾಡಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಆಟೋಟಗಳಲ್ಲಿ ಭಾಗಿಯಾದ/ಭಾಗಿಯಾಗುವ ವಿಚಾರದಲ್ಲಿ ನಮ್ಮ ಮಕ್ಕಳಲ್ಲಿನ ಪ್ರತಿಭೆಯ ವಿಷಯದಲ್ಲಿ ಒಳ್ಳೆಯ ವಿಚಾರ ವನ್ನು ತಿಳಿಸಿದರು. ಮುಂದೆ ನಿಮ್ಮ ಸಂಸ್ಥೆ ಉತ್ತರೊತ್ತರ ಬೆಳಗಲಿ. ನಾನು ಇನ್ನು ಮುಂದೆಯು ನಿಮ್ಮೊಂದಿಗೆ ನಿಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಸದಾ ಇರುತ್ತೇನೆ ಎಂದು ತಮ್ಮ ಹಿತ ನುಡಿಗಳಿಂದ ಕೊಂಡಾಡಿದರು.
ಮಾತ್ರ್ ಸಂಘದ ಮಹಿಳಾ ಕಾರ್ಯಧ್ಯಕ್ಷರಾದ ಶ್ರೀಮತಿ ಪ್ರಮಿಳಾ ವಿಜಯ್ ಶೇರಿಗಾರ್ ಮಾತನಾಡುತ್ತಾ ನಮ್ಮ ಸಂಘ 101ನೇ ವರ್ಷಕ್ಕೆ ತಲುಪಿದೆ ಇನ್ನು ಮುಂದೆಯೂ ಒಳ್ಳೆಯ ಕೆಲಸ ಕಾರ್ಯ ನಡೆಯುತ್ತಿರಲಿ ಎಂದರು. ಹಳದಿ-ಕುಂಕುಮದ ಬಗ್ಗೆ ಸೂಕ್ತ ದಲ್ಲಿ ವಿವರಿಸಿದರು. LCCಯ ಎಲ್ಲಾ ಮಹಿಳೆಯರು ಮಾತ್ರ್ ಸಂಘದ ಎಲ್ಲಾ ಕಾರ್ಯಕ್ರಮದಲ್ಲಿ ಸಹಭಾಗಿತ್ವವನ್ನು ಪಡೆಯ ಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಶ್ರೀಮತಿ ಮಾಲತೀ J ಮೊಯ್ಲಿ, ಶ್ರೀಮತಿ ಸುರೇಖ H ದೇವಾಡಿಗ, ಶ್ರೀಮತಿ ಪ್ರತಿಭಾ G ದೇವಾಡಿಗ, ಶ್ರೀಮತಿ ರೇಖಾ ದೇವಾಡಿಗ, ಶ್ರೀಯುತ ರಾಘು ಮೊಯ್ಲಿ , ಶ್ರೀಯುತ ಹೆಮನಾಥ್ ದೇವಾಡಿಗ, ಶ್ರೀಯುತ ಲಕ್ಷ್ಮಣ ದೇವಾಡಿಗ, ಶ್ರೀಯುತ ಮೋಹನ್ದಾಸ್ ಗುಜರಾನ್, ರೂಪಾಲತಾ ದೇವಾಡಿಗ, ಇವರೆಲ್ಲದೆ ಸಾದಾರಣ 200 ಸದಸ್ಯ ಭಾಂದವರು ಉಪಸ್ತಿತರಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ರಾಮಚಂದ್ರ ದೇವಾಡಿಗರು ಅತಿಥಿಗಳಿಗೆ, ಮಾತ್ರ್ ಸಂಘದ 9 ವಲಯದ ಹಾಗೂ ನಮ್ಮ ವಲಯದ ಪದಾಧಿಕಾರಿಗಳಿಗೆ, ಸದಸ್ಯ ಬಾಂಧವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಸಭಾ ಕಾರ್ಯಕ್ರಮದ ನಿರೂಪಣೆ ಯನ್ನು ವಲಯದ ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣ ದೇವಾಡಿಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣಿಯನ್ನು ವಲಯದ ಯುವ ವಿಭಾಗದ ಶ್ರೀಮತಿ ಪೂರ್ಣಿಮ S ದೇವಾಡಿಗ ಹಾಗೂ ಶ್ರೀಮತಿ ಜೋಸ್ನ ದೇವಾಡಿಗ ನಡೆಸಿ ಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ವಲಯದ ಜೊತೆ ಕಾರ್ಯಾಧ್ಯಕ್ಷರಾದ ಶ್ರೀಮತಿ ಜಯತಾಕ್ಷಿ ವಿಜಯ್ ದೇವಾಡಿಗರವರು ಅತಿಥಿಗಳಿಗೆ, ಮಾತ್ರ್ ಸಂಘದ ಪದಾಧಿಕಾರಿಗಳಿಗೆ, ವಲಯದ ಕಮಿಟಿ ಪದಾಧಿಕಾರಿಗಳಿಗೆ, ಸದಸ್ಯ ಬಾಂಧವರಿಗೆ ದನ್ಯವಾದ ಸಮರ್ಪಣೆಯನ್ನು ಅರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳೆರ ಹಳದಿ-ಕುಂಕುಮ ಹಾಗೂ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮದ ಮುಕ್ತಾಯವಾಯಿತು.