ದೇವಾಡಿಗ ಸಂಘ ಮುಂಬಯಿ: 77ನೇ ಗಣರಾಜ್ಯೋತ್ಸವ ಆಚರಣೆ: | DSM

ದೇವಾಡಿಗ ಸಂಘ ಮುಂಬಯಿ: 77ನೇ ಗಣರಾಜ್ಯೋತ್ಸವ ಆಚರಣೆ:

ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರದ ಅಗತ್ಯವಿದೆ - ರವಿ ಎಸ್. ದೇವಾಡಿಗ

Featured Image

ನವಿ ಮುಂಬಯಿ, ಜ. 30: ಮುಂಬಯಿಯಲ್ಲಿ ಶತಮಾನ ಮುಗಿಸಿದ ದೇವಾಡಿಗ ಸಂಘ ಮುಂಬಯಿಯ ಆಶ್ರಯದಲ್ಲಿ ಭಾರತದ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಇವರ ಮಾರ್ಗದರ್ಶನದಲ್ಲಿ ಇಲ್ಲಿಯ ನೆರೂಲ್ ಪಶ್ಚಿಮದ ದೇವಾಡಿಗ ಭವನದಲ್ಲಿ ಬಹಳ ಅದ್ದೂರಿಯಿಂದ ಮತ್ತು ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತು.
ಶ್ರೀ ರವಿ ಎಸ್. ದೇವಾಡಿಗರು ದೇಶದ ತ್ರಿವರ್ಣ ಧ್ವಜವನ್ನು ಅರಳಿಸಿ ಧ್ವಜ ವಂದನೆ ಮತ್ತು ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರು. ಜೊತೆಯಲ್ಲಿ ಸೇರಿದ ಸಂಘದ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸಂಘದ ಉಪಸಮಿತಿಗಳ ಸದಸ್ಯರು ಎಲ್ಲರೂ ಸೇರಿ ರಾಷ್ಟ್ರಗೀತೆ ಹಾಡಿದರು ಮತ್ತು ರಾಷ್ಟ್ರ ಧ್ವಜಕ್ಕೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗರು ಸಂಘದ ಎಲ್ಲಾ ಸದಸ್ಯರಿಗೆ ದೇಶದ 77ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಶತಮಾನದ ಹಿಂದೆ ಸಂಘವನ್ನು ಸ್ಥಾಪಿಸಿ ಇದುವರೆಗೆ ಬೆಳೆಸಿದ ಸಂಘದ ಸ್ಥಾಪಕರನ್ನು ನೆನೆಸಿಕೊಂಡು ಅವರು ಮಾಡಿದ ತ್ಯಾಗದ ಫಲದಿಂದ ಮತ್ತು ಅವರ ದೂರಾಲೋಚನೆಯ ಫಲವಾಗಿ ಸಂಘವು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾ ಎಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿದೆ ಎಂದರು. ಸದಸ್ಯರು ಸಂಘದ ಸೇವೆಯನ್ನು ಸಶಕ್ತವಾಗಿ ಮುನ್ನಡೆಸಿಕೊಂಡು ಹೋಗುವ ಸಲುವಾಗಿ ನನಗೆ ಈಗ ಮೂರನೇ ಅವಧಿಗೆ ಸಂಘದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ದಾದರ್ ಪೂರ್ವದ ಸಂಘದ ದೇವಾಡಿಗ ಸೆಂಟರ್ ಸಭಾಗ್ರಹ ಮತ್ತು ನೆರೂಲ್ ಇಲ್ಲಿಯ ದೇವಾಡಿಗ ಭವನ ಶತಮಾನೋತ್ಸವದ ಸಲುವಾಗಿ ನವೀಕರಣಕೊಂಡು ಮದುಮಗಳಂತೆ ಕಂಗೊಳಿಸುತ್ತಿದೆ ಮತ್ತು ಅದರ ಕಾರಣದಿಂದಾಗಿ ಈಗ ಸಂಘಕ್ಕೆ ಆದಾಯವೂ ಹೆಚ್ಚು ಬರುತ್ತಿದ್ದು ಅದಕ್ಕೆ ಸಹಕರಿಸುತ್ತಿದ್ದ ಭವನದ ಗುತ್ತಿಗೆದಾರರೂ ಕಾರಣರಾಗಿದ್ದಾರೆ ಎಂದರು. ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರ ಬೆಂಬೆಲದ ಅಗತ್ಯವನ್ನು ಒತ್ತಿ ಹೇಳುತ್ತಾ ಎಲ್ಲರ ಸಹಕಾರಕ್ಕೆ ಅವರು ಕರೆ ನೀಡಿದರು.
ಸಂಘದ ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಪಿ. ಕರ್ಮರನ್, ಗೌ.ಪ್ರ. ಕಾರ್ಯದರ್ಶಿ ಶ್ರೀ ಪದ್ಮನಾಭ ಎ. ದೇವಾಡಿಗ, ಜೊತೆ ಕೋಶಾಧಿಕಾರಿ ಶ್ರೀ ಜಯ ಎಲ್. ದೇವಾಡಿಗ, ಮಾಜಿ ಉಪಾಧ್ಯಕ್ಷೆ ಶ್ರೀ ಮಾಲತಿ ಜೆ. ಮೊಯ್ಲಿ, ಅಡ್ವೋಕೇಟ್ ಶ್ರೀ ಪ್ರಭಾಕರ್ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಜಗದೀಶ್ ದೇವಾಡಿಗ, ಅರೋಗ್ಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ್ ಎಲ್ಲೂರು, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್, ಮಾಜಿ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಯುವ ವಿಭಾಗದ ಉಪಕಾರ್ಯಧ್ಯಕ್ಷರಾದ ಶ್ರೀ ವಿನೀಶ್ ದೇವಾಡಿಗ, ಸಮಿತಿ ಸದಸ್ಯೆ ಶ್ರೀಮತಿ ಪೂರ್ಣಿಮಾ ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಪದ್ಮನಾಭ ಮೊಯ್ಲಿ, ಮಾಜಿ ಕಾರ್ಯಾಧ್ಯಕ್ಷರು ಶ್ರೀ ರಮೇಶ್ ದೇವಾಡಿಗ, ಮುಂಬಯಿ ಆಕಾಶವಾಣಿಯ ಕಲಾವಿದೆ ಗಾಯಕಿ ಶ್ರೀಮತಿ ಸುಶೀಲಾ ದೇವಾಡಿಗ, ಸಿಟಿ ವಲಯದ ಶ್ರೀ ಹೇಮನಾಥ ದೇವಾಡಿಗ, ಬೋರಿವ್ಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಲಕ್ಷ್ಮೀ ಜಿ.ದೇವಾಡಿಗ ಮತ್ತು ಶ್ರೀಮತಿ ಕುಸುಮ ದೇವಾಡಿಗ ಮೊದಲಾದವರು ಸಮಯೋಚಿತವಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತ ಪಡಿಸಿದರು.
ಈ ಸಮಾರಂಭದಲ್ಲಿ ಸಂಘದ ಜೊತೆ ಕಾರ್ಯದರ್ಶಿಗಳಾದ ಶ್ರೀ ನಿತೇಶ್ ದೇವಾಡಿಗ ಮತ್ತುಶ್ರೀಮತಿ ಸಚಿತಾ ಶ್ರೀಯಾನ್, ಜೊತೆ ಖಜಾಂಚಿ ಶ್ರೀ ಸುರೇಶ್ ಆರ್. ದೇವಾಡಿಗ, ಸಮಿತಿ ಸದಸ್ಯರಾದ ಶ್ರೀ ಪ್ರಭಾಕರ್ ದೇವಾಡಿಗ, ಶ್ರೀಮತಿ ಸುರೇಖಾ ದೇವಾಡಿಗ, ಶ್ರೀಮತಿ ಉಮಾವತಿ ಗುಜರನ್, ಪ್ರಾದೇಶಿಕ ಸಮಿತಿಗಳ ಸಂಯೋಜಕರಾದ ಶ್ರೀ ಕಿರಣ್ ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಆನಂದ್ ಶೇರಿಗಾರ , ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷರಾದ ಶ್ರೀಮತಿ ಪ್ರತಿಭಾ ದೇವಾಡಿಗ ಮತ್ತು ಶ್ರೀಮತಿ ಲತಾ ಆನಂದ್ ಶೇರಿಗಾರ , ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ ಮತ್ತು , ಮಾಜಿ ಕಾರ್ಯಧ್ಯಕ್ಷೆ ಶ್ರೀಮತಿ ರಂಜಿನಿ ಮೊಯ್ಲಿ, ನವಿ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಪಿ. ದೇವಾಡಿಗ, ಸದಸ್ಯೆ ಶ್ರೀಮತಿ ಧನವತಿ ದೇವಾಡಿಗ, ಶ್ರೀ ಮೊದಲಾದವರು ಭಾಗವಹಿಸಿದರು.
ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು. ಕೊನೆಯಲ್ಲಿ ಎಲ್ಲರೂ ಸೇರಿ ರಾಷ್ಟ್ರಗಾನ ಹಾಡಿ ದೇಶಕ್ಕೆ ಜಯಘೋಷ ಹಾಕಿದರು. ಗಣರಾಜ್ಯೋತ್ಸವದ ಅಂಗವಾಗಿ ಎಲ್ಲರಿಗೂ ಮಿಠಾಯಿ ವಿತರಣೆಯ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.