ದೇವಾಡಿಗ ಸಂಘ ಮುಂಬಯಿ; ನೂತನ ವ್ಯವಸ್ಥಾಪಕ ಮಂಡಳಿಯ ಆಯ್ಕೆ | DSM

ದೇವಾಡಿಗ ಸಂಘ ಮುಂಬಯಿ; ನೂತನ ವ್ಯವಸ್ಥಾಪಕ ಮಂಡಳಿಯ ಆಯ್ಕೆ

Featured Image

ಮುಂಬಯಿ, ಆ 31: ದೇವಾಡಿಗ ಸಂಘ ಮುಂಬಯಿಯ 2025-2028 ಈ ಅವಧಿಗೆ ನೂತನ ವ್ಯಸ್ಥಾಪಕ ಮಂಡಳಿಯ ಆಯ್ಕೆ ಶನಿವಾರ ಆಗಸ್ಟ್ 23, 2025ರಂದು ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹದಲ್ಲಿ ಅಧ್ಯಕ್ಷ ಶ್ರೀ ರವಿ ಎಸ್. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಶರು ಮತ್ತು 19 ಸದಸ್ಯರ ವ್ಯವಸ್ಥಾಪನಾ ಮಂಡಳಿಯನ್ನು ಆಗಸ್ಟ್ ತಿಂಗಳ 15ನೇ ತಾರೀಕು ೨೦೨೫ರಂದು ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು ಮತ್ತು ಸಂಘದ ಅಧ್ಯಕ್ಷರಾಗಿ ಶ್ರೀ ರವಿ ಎಸ್, ದೇವಾಡಿಗ ಇವರನ್ನು ಮೂರನೇ ಬಾರಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಅಲ್ಲದೆ ಇತರ 19 ನೂತನ ಸದಸ್ಯರ ಆಯ್ಕೆಯನ್ನು ಘೋಷಿಸಲಾಗಿತ್ತು
ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳ ಆಯ್ಕೆಯ ಸಭೆಯನ್ನು ಅಧ್ಯಕ್ಷ ಶ್ರೀ ರವಿ ಎಸ್.ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಆಗಸ್ಟ್ 23, 2025ರಂದು ನಡೆಯಿತು. ಆಯ್ಕೆಯಾದ ನೂತನ ವ್ಯವಸ್ಥಾಪಕ ಮಂಡಳಿ ಈ ಕೆಳಗಿನಂತಿದೆ.:
ಉಪಾಧ್ಯಕ್ಷರು: ಶ್ರೀ ನರೇಶ್ ಎಸ್. ದೇವಾಡಿಗ ಮತ್ತು ಶ್ರೀ ವಿಶ್ವನಾಥ ಬಿ. ದೇವಾಡಿಗ; ಗೌರವ ಪ್ರಧಾನ ಕಾರ್ಯದರ್ಶಿ-ಶ್ರೀ ಪದ್ಮನಾಭ ಎ. ದೇವಾಡಿಗ, ಗೌರವ ಜೊತೆ ಕಾರ್ಯದರ್ಶಿಗಳು-ಶ್ರೀ ನಿತೇಶ್ ದೇವಾಡಿಗ ಮತ್ತು ಶ್ರೀಮತಿ ಸಚಿತಾ ಎಸ್. ಶ್ರೀಯಾನ್; ಜೊತೆ ಖಜಾಂಚಿಗಳು-ಶ್ರೀ ಸುರೇಶ್ ಆರ್. ದೇವಾಡಿಗ ಮತ್ತು ಶ್ರೀ ಜಯ ಎಲ್. ದೇವಾಡಿಗ; ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ-ಶ್ರೀಮತಿ ಜಯಂತಿ ಎಂ. ದೇವಾಡಿಗ; ವೈದ್ಯಕೀಯ ಸಹಾಯ ಸಮಿತಿ ಕಾರ್ಯಧ್ಯಕ್ಷ-ಶ್ರೀ ಸುಧಾಕರ ಎಲ್ಲೂರು; ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ-CA ಶ್ರೀ ಜಗದೀಶ್ ದೇವಾಡಿಗ; ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ-ಶ್ರೀ ಗಣೇಶ್ ಕೆ. ದೇವಾಡಿಗ; ಪ್ರಾದೇಶಿಕ ಸಮಿತಿಗಳ ಸಮನ್ವಯಕರು-ಶ್ರೀ ಕರಣ್ ಆರ್. ದೇವಾಡಿಗ; ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ-ಶ್ರೀಮತಿ ಪ್ರಮೀಳಾ ಎ. ದೇವಾಡಿಗ; ಆಂತರಿಕ ಲೆಕ್ಕ ಪರಿಶೋಧಕರು-ಶ್ರೀ ಉಮೇಶ್ ಆರ್. ದೇವಾಡಿಗ; ವೈವಾಹಿಕ ಸೇವಾ ಸಮಿತಿ ಕಾರ್ಯಾಧ್ಯಕ್ಷರು-ಶ್ರೀಮತಿ ಸುರೇಖಾ ಎಚ್. ದೇವಾಡಿಗ ಮತ್ತು ಸಮಿತಿ ಸದಸ್ಯರು- ಶ್ರೀ ಪ್ರಭಾಕರ್ ಎಸ್. ದೇವಾಡಿಗ, ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ; ಶ್ರೀ ಜನಾರ್ಧನ್ ಎಸ್. ದೇವಾಡಿಗ ಮತ್ತು ಶ್ರೀಮತಿ ಉಮಾವತಿ ಜೆ. ಗುಜರನ್. ಅಲ್ಲದೆ ಸ್ವೀಕೃತಿ ಸದಸ್ಯಸರು ಮತ್ತು ಸಲಹಾ ಸಮಿತಿಯನ್ನು ಆಯ್ಕೆಗೊಳಿಸಗಿದೆ.
ನೂತನ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದ ಸಂಘದ ಅಧ್ಯಕ್ಶ ರವಿ ದೇವಾಡಿಗರು ಸಂಘದ ಒಳಿತಿಗಾಗಿ ಮತ್ತು ಸಾಮಾನ್ಯ ಸದಸ್ಯರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಕೇಳಿಕೊಂಡರು.