ದೇವಾಡಿಗ ಸಂಘ ಮುಂಬಯಿ: 2025-2028ರ ಅವಧಿಗೆ ನೂತನ ಯುವ ವಿಭಾಗದ ರಚನೆ | DSM

ದೇವಾಡಿಗ ಸಂಘ ಮುಂಬಯಿ: 2025-2028ರ ಅವಧಿಗೆ ನೂತನ ಯುವ ವಿಭಾಗದ ರಚನೆ

Featured Image

ಮುಂಬಯಿ: ಭವಿಷ್ಯದ ಮೇಲೆ ಸ್ಪಷ್ಟ ಗಮನಹರಿಸಿ, ದೇವಾಡಿಗ ಸಂಘ ಮುಂಬಯಿ ("ಡಿಎಸ್‌ಎಂ") ತನ್ನ ಯುವ ವಿಭಾಗ ದ 2025-2028ರ ಅವಧಿಗೆ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯನ್ನು ಭಾನುವಾರ, ಆಗಸ್ಟ್ 31, 2025 ರಂದು ದಾದರ್‌ನ ದೇವಾಡಿಗ ಸೆಂಟರ್ ನಲ್ಲಿ ಆಯೋಜಿಸಿದ್ದರು. ಯುವ ವಿಭಾಗಕ್ಕೆ ಸೇರ್ಪಡೆಗೊಂಡ ಅರ್ಧಕ್ಕಿಂತ ಹೆಚ್ಚು ಪದಾಧಿಕಾರಿಗಳು ಡಿಎಸ್‌ಎಂನ ವಿವಿಧ ಪ್ರಾದೇಶಿಕ ಸಮನ್ವಯ ಸಮಿತಿಗಳಿಂದ (ಎಲ್‌ಸಿಸಿ) ಬಂದ ಹೊಸ ಮುಖಗಳಾಗಿದ್ದಾರೆ. ಈ ಕ್ರಮವು ಡಿಎಸ್‌ಎಂನ ಪ್ರಮುಖ ಮೌಲ್ಯಗಳಿಗೆ ಅನುಗುಣವಾಗಿ ಯುವ ನಾಯಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮವನ್ನು ಅಡ್ವೊಕೇಟ್ ಬ್ರಿಜೇಶ್ ಎಸ್. ನಿಟ್ಟೇಕರ್ ಅವರು ಡಿಎಸ್‌ಎಂನ ಆಡಳಿತ ಸಮಿತಿ ಸದಸ್ಯರಾದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ, ಉಪಾಧ್ಯಕ್ಷರಾದ ಶ್ರೀ ನರೇಶ್ ಎಸ್ ದೇವಾಡಿಗ ಮತ್ತು ಶ್ರೀ ವಿಶ್ವನಾಥ್ ಬಿ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಎ ದೇವಾಡಿಗ, ಜತೆ ಕಾರ್ಯದರ್ಶಿಗಳಾದ ಶ್ರೀಮತಿ ಸಚೀತಾ ಎಸ್ ಶ್ರೀಯಾನ್ ಮತ್ತು ಶ್ರೀ ನಿತೇಶ್ ದೇವಾಡಿಗ, ಜತೆ ಖಜಾಂಚಿ ಶ್ರೀ ಸುರೇಶ್ ದೇವಾಡಿಗ ಮತ್ತು ಎಲ್‌ಸಿಸಿ ಕೊರ್ಡಿನೆಟರ್ ಹಾಗೂ ಸದಸ್ಯತ್ವ ವಿಭಾಗದ ಮುಖ್ಯಸ್ಥ ಶ್ರೀ ಕಿರಣ್ ಆರ್ ದೇವಾಡಿಗ ಅವರ ಸಮ್ಮುಖದಲ್ಲಿ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ, ಈ ವರ್ಷದ ಆರಂಭದಲ್ಲಿ ಮೊಟ್ಟ ಮೊದಲ ತುಳು-ಕನ್ನಡಿಗ ಟರ್ಫ್ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಯುವ ಮತ್ತು ಕ್ರಿಯಾಶೀಲ ನಾಯಕ ಶ್ರೀ ವಿಶಾಲ್ ಸಿ ದೇವಾಡಿಗ ಅವರನ್ನು ದೇವಾಡಿಗ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಹೊಸದಾಗಿ ರಚಿಸಲಾದ ಯುವ ವಿಭಾಗದ ಇತರ ಪದಾಧಿಕಾರಿಗಳು:
ಉಪ ಕಾರ್ಯಾಧ್ಯಕ್ಷ - ಶ್ರೀ ವಿನೀಶ್ ಎಸ್ ದೇವಾಡಿಗ,
ಉಪ ಕಾರ್ಯಾಧ್ಯಕ್ಷೆ - ಶ್ರೀಮತಿ ಪ್ರಿಯಾ ವಿ. ದೇವಾಡಿಗ,
ಯುವ ಕಾರ್ಯದರ್ಶಿ - ಕುಮಾರಿ ನಿಕಿತಾ ಗುಜರಾನ್,
ಯುವ ಖಜಾಂಚಿ - ಶ್ರೀ ಶಿವಸಾಗರ್ ದೇವಾಡಿಗ,
ಸಂವಹನ ಮತ್ತು ಕಾರ್ಯತಂತ್ರದ ಮುಖ್ಯಸ್ಥ - ಶ್ರೀ ಶರಣ್ ಶೇರಿಗಾರ್,
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ - ಶ್ರೀಮತಿ ದೀಕ್ಷಾ ದೇವಾಡಿಗ,
ಕ್ರೀಡಾ ವಿಭಾಗದ ಮುಖ್ಯಸ್ಥೆ - ಕುಮಾರಿ ರಕ್ಷಾ ದೇವಾಡಿಗ,
ಯುವ ಮಾರ್ಗದರ್ಶಕ - ಶ್ರೀ ದೀಕ್ಷಿತ್ ದೇವಾಡಿಗ,
ಸದಸ್ಯರು - ಶ್ರೀ ಕಿಶೋರ್ ದೇವಾಡಿಗ, ಕುಮಾರಿ ತನ್ವಿ ಶೇರಿಗಾರ್.
ತಮ್ಮ ಭಾಷಣದಲ್ಲಿ, ನೂತನ ಅಧ್ಯಕ್ಷ ಶ್ರೀ ವಿಶಾಲ್ ದೇವಾಡಿಗ ಅವರು ತಮ್ಮ ಮೇಲೆ ವಿಶ್ವಾಸ ಇಟ್ಟ ಹಿರಿಯರು ಮತ್ತು ಯುವಕರಿಗೆ ಕೃತಜ್ಞತೆ ಸಲ್ಲಿಸಿದರು. ಹಿರಿಯರ ಬೆಂಬಲ ಮತ್ತು ಮಾರ್ಗದರ್ಶನ ಹಾಗೂ ಯುವಕರ ಭಾಗವಹಿಸುವಿಕೆಯೊಂದಿಗೆ ಈ ಅವಧಿಯಲ್ಲಿ ಯುವ ವಿಭಾಗವು ಅನೇಕ ಪ್ರಭಾವಶಾಲಿ ಮತ್ತು ಸ್ಮರಣೀಯ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಅವರು ಭರವಸೆ ನೀಡಿದರು.
ಶ್ರೀ ವಿಶಾಲ್ ದೇವಾಡಿಗ ಅವರು ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಡ್ವೊಕೇಟ್ ಬ್ರಿಜೇಶ್ ಎಸ್ ನಿಟ್ಟೇಕರ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ. ತಮ್ಮ ಉತ್ತರಾಧಿಕಾರಿಗೆ ಶುಭಾಶಯ ಕೋರಿದ ಅಡ್ವೊಕೇಟ್ ಬ್ರಿಜೇಶ್ ಎಸ್ ನಿಟ್ಟೇಕರ್ ಅವರು ಯುವ ವಿಭಾಗದ ಹಿಂದಿನ ಸಾಧನೆಗಳನ್ನು ಶ್ಲಾಘಿಸಿದರು ಮತ್ತು ಶ್ರೀ ವಿಶಾಲ್ ದೇವಾಡಿಗ ಅವರ ಸಮರ್ಥ ನಾಯಕತ್ವದಲ್ಲಿ ಅದು ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಹೇಮನಾಥ್ ದೇವಾಡಿಗ ಅವರು, ನೂತನ ಯುವ ಪದಾಧಿಕಾರಿಗಳು ಹೊಸ ಮಾನದಂಡಗಳನ್ನು ಸ್ಥಾಪಿಸಿ, ಯುವ ವಿಭಾಗದ ಚಟುವಟಿಕೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಂತೆ ಪ್ರೇರೇಪಣಾದಾಯಕ ಭಾಷಣ ಮಾಡಿದರು.
ಡಿಎಸ್‌ಎಂನ ಆಡಳಿತ ಸಮಿತಿ ಸದಸ್ಯರು ನೂತನ ಯುವ ವಿಭಾಗಕ್ಕೆ ಶುಭ ಹಾರೈಸಿದರು. ನಿರ್ದಿಷ್ಟವಾಗಿ, ಜತೆ ಕಾರ್ಯದರ್ಶಿ ಶ್ರೀಮತಿ ಸಚೀತಾ ಎಸ್ ಶ್ರೀಯಾನ್ ಅವರು ಯುವ ತಂಡಕ್ಕೆ ಕೇವಲ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೆ, ಯುವಕರ ಗರಿಷ್ಠ ಪಾಲ್ಗೊಳ್ಳುವಿಕೆಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೆ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಎ ದೇವಾಡಿಗ ಅವರು ಮುಂದಿನ ಅರ್ಥಪೂರ್ಣ ಕಾರ್ಯಗಳಿಗೆ ಶುಭಾಶಯ ಕೋರಿದರು. ಜೊತೆಗೆ, ಉಪಾಧ್ಯಕ್ಷರಾದ ಶ್ರೀ ನರೇಶ್ ಎಸ್ ದೇವಾಡಿಗ ಮತ್ತು ಶ್ರೀ ವಿಶ್ವನಾಥ್ ದೇವಾಡಿಗ ಅವರು ಡಿಎಸ್‌ಎಂನ ಹೆಚ್ಚಿನ ಒಳಿತಿಗಾಗಿ ಯುವಕರು ಭವಿಷ್ಯದಲ್ಲಿ ಆಡಳಿತ ಸಮಿತಿಯಲ್ಲಿ ಪಾತ್ರ ವಹಿಸಲು ಆಕಾಂಕ್ಷೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು. ಕೊನೆಯದಾಗಿ, ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ ಅವರು ಯುವ ವಿಭಾಗಕ್ಕೆ ಹಿರಿಯರ ಸಂಪೂರ್ಣ ಬೆಂಬಲವನ್ನು ಕೊಡಿವುದಾಗಿ ಭರವಸೆ ನೀಡಿದರು, ಜಂಟಿಯಾಗಿ ದೊಡ್ಡ ಮತ್ತು ಹೆಚ್ಚು ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕರಿಸುವುದಾಗಿ ತಿಳಿಸಿದರು.
ಅಡ್ವೊಕೇಟ್ ಬ್ರಿಜೇಶ್ ಎಸ್. ನಿಟ್ಟೇಕರ್ ಅವರು ಪ್ರಾಯೋಜಿಸಿದ ಚಹಾ ಮತ್ತು ತಿಂಡಿಯೊಂದಿಗೆ ವಂದನಾರ್ಪಣೆಯೊಂದಿಗೆ ಸಂಜೆ ಕಾರ್ಯಕ್ರಮ ಮುಕ್ತಾಯಗೊಂಡಿತು.