ದೇವಾಡಿಗ ಸಂಘ ಮುಂಬಯಿ, ಮಹಿಳಾವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ | DSM

ದೇವಾಡಿಗ ಸಂಘ ಮುಂಬಯಿ, ಮಹಿಳಾವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಸ್ಥನ ಕ್ಯಾನ್ಸರ್ ವಿಷಯದಕುರಿತು ವಿಚಾರ ಸಂಕಿರಣ

Featured Image

ಮುಂಬಯಿ, ಮಾ 8: ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದಿಂದ ಮಾರ್ಚ್ 8, 2025 ರಂದು ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು. ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹದಲ್ಲಿ ಜರಗಿದ ಈ ಕಾರ್ಯಕ್ರಮಕ್ಕೆ ಪಹಿಲೇ ಮಾಝೆ ಕರ್ತವ್ಯ (ಪಿ.ಎಂ.ಕೆ.) ಫೌಂಡೇಶನ್ ನ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಶ್ರೀಮತಿ ನಯನಾ ಕನಾಲ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂಸ್ಥೆಯು ಕ್ಯಾನ್ಸರ್ ಪೀಡಿತ ಮಹಿಳೆಯರಿಗಾಗಿ ಕೆಲಸಮಾಡುವ ಮುಂಬಯಿಯ ಸರಕಾರೇತರ ಸಂಸ್ಥೆಯಾಗಿದೆ.
ಆರಂಭದಲ್ಲಿ ಕಾರ್ಯಕ್ರಮವು ಮಹಿಳಾ ಸದಸ್ಯರ ಮೋಜಿನ ಆಟಗಳೊಂದಿಗೆ ಆರಂಭಗೊಂಡಿತು. ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಶೇರಿಗಾರ್ ಮತ್ತು ಯುವವಿಭಾಗದ ಕುಮಾರಿ ತನ್ವಿ ಶೇರಿಗಾರ್ ಇವರು ವಿವಿಧ ಮನೋರಂಜನಾ ಕ್ರೀಡಾ ಸ್ಪರ್ಧೆಗಳ ಮೂಲಕ ಮಹಿಳೆಯರನ್ನು ರಂಜಿಸಿದರು.
ಸಂಘದ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಸುಪ್ರಿತಾ ದೇವಾಡಿಗ, ಶ್ರೀಮತಿ. ಪದ್ಮಲತಾ ದೇವಾಡಿಗ, ಶ್ರೀಮತಿ. ಮಲ್ಲಿಕಾ ದೇವಾಡಿಗ ಮತ್ತು ಶ್ರೀಮತಿ ಶುಭಮಗಲ ದೇವಾಡಿಗ, ಥಾಣೆ ಪ್ರಾದೇಶಿಕ ಸಮಿತಿಯ ಶ್ರೀಮತಿ ಸುಜಾತಾ ಶೇರಿಗಾರ್, ಬೋರಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ರೀನಾ ದೇವಾಡಿಗ, ಇವರು ವಿವಿಧ ಮೋಜಿನ ಸ್ಪರ್ಧೆಗಳಲ್ಲಿ ಬಹುಮಾನ ಪಡೆದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ ಇವರು ಮುಖ್ಯ ಅತಿಥಿ ಶ್ರೀಮತಿ ನಯನಾ ಕನಾಲ್, ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯ್ಲಿ, ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಉಪ ಕಾರ್ಯಧ್ಯಕ್ಷೆಯರಾದ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್ ಮತ್ತು ಶ್ರೀಮತಿ ಪ್ರತಿಭಾ ಜಿ. ದೇವಾಡಿಗ ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಲತಾ ಎ. ಸೇರಿಗಾರ ಮತ್ತು ಶ್ರೀಮತಿ ನಳಿನಿ ಎಸ್. ದೇವಾಡಿಗ, ಮತ್ತು ಇತರರನ್ನು ವೇದಿಕೆಗೆ ಆವ್ಹಾನಿಸಿದರು. ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ಮುಖ್ಯ ಅತಿಥಿ ಶ್ರೀಮತಿ ನಯನಾ ಕನಾಲ್ ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸೇರಿ ಸಾಮೂಹಿಕವಾಗಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.
ಡೊಂಬಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಪ್ರಿಯಾ ದೇವಾಡಿಗ ಇವರು ಅತಿಥಿಗಳನ್ನು ಪರಿಚಯಿಸಿದರು. ಜಯಂತಿ ಎಂ. ದೇವಾಡಿಗ ಇವರು ಮುಖ್ಯ ಅತಿಥಿ ಶ್ರೀಮತಿ ನಯನಾ ಕನಾಲ್ ಇವರನ್ನು ಸ್ವಾಗತಿಸಿ ಸನ್ಮಾನಿಸಿದರು ಮಹಿಳಾ ದಿನದ ನಿಮಿತ್ತ ಮಹಿಳೆಯರ ಸ್ಥನ ಕ್ಯಾನ್ಸರ್ ವಿಷಯದಲ್ಲಿ ಶ್ರೀಮತಿ ನಯನಾ ಕನಾಲ್ ಇವರು ವಿಚಾರ ಸಂಕಿರಣ ನಡೆಸಿದರು. ಸ್ಥನ ಕ್ಯಾನ್ಸರ್ ವಿಷಯದ ಕುರಿತು ಅತ್ಯುತ್ತಮ ಮಾಹಿತಿ ನೀಡಿದ ಇವರು ಸ್ಥನ ಕ್ಯಾನ್ಸರ್ ಖಾಯಿಲೆಯನ್ನು ಮುಂಚಿತವಾಗಿ ಪತ್ತೆಹಚ್ಚುವುದನ್ನು ಹೇಗೆ ಮತ್ತು ಅದನ್ನು ತಡೆಯಬಹುದಾದ ವಿಧಾನಗಳು, ಉಪಚಾರ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿ ಸ್ಥನ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.
ಜೀವನದಲ್ಲಿ ಏನೇ ಸಂಭವಿಸಿದರೂ ನಾವು ಆತ್ಮ ಸ್ಥರ್ಯ ಕಳೆದುಕೊಳ್ಳದೆ ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಬೇಕು" ಎಂದು ಅವರು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಸ್ಥನ ಕ್ಯಾನ್ಸರ್ನಿಂದ ಬದುಕುಳಿದ ಹಿರಿಯ ಸದಸ್ಯೆ ಶ್ರೀಮತಿ. ಶೀಲಾ ಬಿಜೂರ್ ಅವರು ತಮ್ಮ ಅನುಭವವನ್ನು ವ್ಯಕ್ತ ಪಡಿಸಿದರು. ಅವರನ್ನು ಮುಖ್ಯ ಅತಿಥಿಗಳ ಕಾರಕಮಲಗಳಿಂದ ಸನ್ಮಾನಿಸಲಾಯಿತು.
ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ ಶ್ರೀ ಧರ್ಮಪಾಲ ಯು ದೇವಾಡಿಗ, ಅಕ್ಷಯ ಕೋ. ಒಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಅಧ್ಯಕ್ಷ ಶ್ರೀ ವಾಸು ದೇವಾಡಿಗ, ವಿಶ್ವ ದೇವಾಡಿಗ ಮಹಾ ಮಂಡಲದ ಗೌರವ ಕಾರ್ಯದರ್ಶಿ ಶ್ರೀ ಎಚ್. ಮೋಹನ್ದಾಸ್, ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ ಜೊತೆ ಖಜಾಂಚಿಗಳಾದ ಶ್ರೀ. ಸುರೇಶ್ ದೇವಾಡಿಗ ಮತ್ತು ಶ್ರೀಮತಿ. ಸುರೇಖಾ ಎಚ್. ದೇವಾಡಿಗ, ಪ್ರಾದೇಶಿಕ ಸಮಿತಿಗಳ ಸಂಯೋಜಕರಾದ ಶ್ರೀ ಜಯ ಎಲ್ ದೇವಾಡಿಗ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆಯರಾದ ಶ್ರೀಮತಿ. ಪುಷ್ಪ ಎಸ್. ರಾವ್ ಮತ್ತು ಜಯಂತಿ ಆರ್. ಮೊಯ್ಲಿ, ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಹೇಮನಾಥ್ ಎನ್. ದೇವಾಡಿಗ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಶೇರಿಗಾರ್ ಮತ್ತು ಶ್ರೀಮತಿ ಪ್ರತಿಭಾ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ, ಜೊತೆಕಾರ್ಯದರ್ಶಿ ಶ್ರೀಮತಿ ಲತಾ ಶೇರಿಗಾರ ಹಾಗೂ ಸಂಘದ ಎಲ್ಲಾ ಹತ್ತು ಸಮನ್ವಯ ಸಮಿತಿಯ ಕಾರ್ಯಧ್ಯಕ್ಷೆಯರಿಗೆ ಸ್ಮರಣಿಕೆ ಹಾಗೂ ಹೂ ಗುಚ್ಛವನ್ನು ನೀಡಿ ಗೌರವಿಸಲಾಯಿತು.
ಮೀರಾ ರೋಡ್ ಪ್ರಾದೇಶಿಕ ಸಮಿತಿಯ ಶ್ರೀಮತಿ. ಸುರೇಖಾ ಮೊಯ್ಲಿ, ಚೆಂಬೂರ್ ಪ್ರಾದೇಶಿಕ ಸಮಿತಿಯ ಶ್ರೀಮತಿ. ಮಾನ್ಸಾ ದೇವಾಡಿಗ, ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಮಹತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಗೊಳಿಸಿದರು . ಭಾಗವಹಿಸಿದ ಎಲ್ಲರಿಗೂ ಮತ್ತು ಸದಸ್ಯರಿಗೆ ಚಹಾ ಮತ್ತು ಉಪಾಹಾರಗಳನ್ನು ನೀಡಲಾಯಿತು. ಮಹಿಳಾ ಅಂತರರಾಷ್ಟ್ರೀಯ ದಿನಾಚರಣೆಯನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ಸದಸ್ಯರಿಗೆ ಮತ್ತು ಕಾರ್ಯಕ್ರಮವನ್ನು ಆಯೋಜಿಸಲು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಕ್ಕಾಗಿ ವ್ಯವಸ್ಥಾಪಕ ಸಮಿತಿಗೆ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್ ಇವರು ಧನ್ಯವಾದ ಸಮರ್ಪಿಸಿದರು.