Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಸಾಮೂಹಿಕ ವರಲಕ್ಷ್ಮಿಪೂಜೆ.

ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಸಾಮೂಹಿಕ ವರಲಕ್ಷ್ಮಿಪೂಜೆ.

ದೇವಾಡಿಗ ಸಂಘ ಮುಂಬೈ ಇದರ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಮಹಿಳಾ ವಿಭಾಗದವರಿಂದ ಸಾಮೂಹಿಕ ವರಲಕ್ಷ್ಮಿ ಮಹಾಪೂಜೆಯು ಆಗಸ್ಟ್ 12, 2022 ರಂದು ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಲತಾ ವಿಶ್ವನಾಥ ಮೊಯ್ಲಿ ಮತ್ತು ಅವರ ಸಮಿತಿ ಸದಸ್ಯರಿಂದ ದೇವಾಡಿಗ ಸೆಂಟರ್ ದಾದರ್ ನಲ್ಲಿ ನೆರವೇರಿತು. ಅಂದು ಸಂಜೆ ಶ್ರೀ ರಾಘವೇಂದ್ರ ತಂತ್ರಿ ಮೀರಾ ರೋಡ್ ಅವರ ಪೌರೋಹಿತ್ಯದಲ್ಲಿ ಕಳಸ ಪ್ರತಿಷ್ಠಾಪನೆ ಹಾಗೂ ಮಹಿಳಾ ವಿಭಾಗದ ಎಲ್ಲಾ ಮುತ್ಯದೆಯರ ಸಹಕಾರದೊಂದಿಗೆ ಪೂಜೆಯು ಸಾಯಂಕಾಲ 4 ಗಂಟೆಗೆ ಏಕಃನಾಥೇಶ್ವರಿ ಭಜನಾ ಮಂಡಳಿ, ಮುಂಬೈ ಇದರ ಸದ್ಯಸರ ಭಜನೆಯೊಂದಿಗೆ ಭಕ್ತಿ ಶ್ರದ್ಧೆಯಿಂದ ಪ್ರಾರಂಭವಾಯಿತು.

ಈ ವರಲಕ್ಷ್ಮಿ ಮಹಾಪೂಜೆಗೆ ಸುಮಾರು 80 ಸುಮಂಗಲೆಯರು ಸೇರಿ 90ಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿದರು. ಎಲ್ಲಾ ಸುಮಂಗಲೆಯರು ಶೃದ್ಧಾ ಭಕ್ತಿಯಿಂದ ಪೂಜೆಯಲ್ಲಿ ಭಾಗವಹಿಸಿದರಲ್ಲದೆ ಭಜನಾ ಕಾರ್ಯಕ್ರಮದಲ್ಲೂ ಪಾಲ್ಗೊಂಡರು. ತದನಂತರ ಆಗಮಿಸಿದ ಎಲ್ಲಾ ಸುಮಂಗಲೆಯರಿಗೆ ಸಾಂಪ್ರದಾಯಿಕವಾಗಿ ವಸ್ತ್ರ, ಬಳೆ, ಪ್ರಸಾದವನ್ನು ವಿತರಿಸಲಾಯಿತು. ದಂಪತಿಯಾದ ಶ್ರೀ ಹಿತೇಶ್ ಕಾರ್ಕಳ್ ಮತ್ತು ಶ್ರೀಮತಿ ಶಿಲ್ಪಾ ಹಿತೇಶ್ ಕಾರ್ಕಳ್ ರಿಂದ ಪೂಜೆ ನೆರವೇರಿತು.

ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಯಸ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗ , ಶ್ರೀ ಹಿರಿಯಡ್ಕ ಮೋಹನದಾಸ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀ ಜಯ ದೇವಾಡಿಗ ಜೊತೆ ಖಛಾಂಜಿ ಸುರೇಖಾ ಹೆಚ್ ದೇವಾಡಿಗ, ಕಾರ್ಯಕಾರಿ ಸದ್ಯಸರು ಸಂಘದ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಜಯಂತಿ ಆರ್ ಮೊಯಿಲಿ, ಮಹಿಳಾ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ , ಮಹಿಳಾ ಉಪ ಕಾರ್ಯಾಧ್ಯಕ್ಷೆ ಜಯಂತಿ ಎಂ ದೇವಾಡಿಗ, ಸಿಟಿ ವಲಯದ ಕಾರ್ಯಾದ್ಯಕ್ಷ ಬಾಲಚಂದ್ರ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಹೇಮನಾಥ್ ದೇವಾಡಿಗ, ಶ್ರೀಧರ್ ದೇವಾಡಿಗ, ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಲತಾ ವಿ ಮೊಯಿಲಿ, ಉಪಕಾರ್ಯಾದ್ಯಕ್ಷೆ ಶ್ರೀಮತಿ ಸುಜಯ ವಿ ದೇವಾಡಿಗ, ಮಾಜಿ ಮಹಿಳಾ ಕಾರ್ಯಾದ್ಯಕ್ಷೆ ಗೀತ ಎಲ್ ದೇವಾಡಿಗ ಮತ್ತು ಯುವ ವಿಭಾಗದ ಅಧ್ಯಕ್ಷ ಶ್ರೀ ಬ್ರಿಜೇಶ್ ಯಸ್ ನಿಟ್ಟೇಕರ್, ಶ್ರೀಮತಿ ಪ್ರತಿಮಾ ಜಿ ಮೊಯಿಲಿ, ಶ್ರೀಮತಿ ಸುಶೀಲಾ ದೇವಾಡಿಗ, ಆಕಾಶವಾಣಿ ಮುಂಬೈ, ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರ್ ಇದರ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ನಿರ್ಮಲ ಆರ್ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿ ಜೋಗೇಶ್ವರಿ ಇದರ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿ ನವಿ ಮುಂಬೈ ಇದರ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಲತಾ ಎ ಶೇರಿಗಾರ್, ಪ್ರಾದೇಶಿಕ ಸಮನ್ವಯ ಸಮಿತಿ ಬೊರಿವಲಿ ಇದರ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಕುಸುಮ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿ ಮೀರಾ ರೋಡ್ ಇದರ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಎಲ್ ದೇವಾಡಿಗ ಮತ್ತು ಅವರ ಎಲ್ಲಾ ಸಮಿತಿಯ ಕಾರ್ಯಕಾರಿ ಸದ್ಯಸರು ಮ್ಯಾನೇಜರ್ ಶ್ರೀ ಶಂಭು ದೇವಾಡಿಗ ಮತ್ತು ಅನೇಕ ಸದ್ಯಸ್ಸರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಶ್ರೀ ರವಿ ಯಸ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿ, ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಲತಾ ವಿ ಮೊಯಿಲಿ ಇವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು ಹಾಗೂ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಎಲ್ಲಾ ಮಕ್ಕಳನ್ನು ಸನ್ಮಾನಿಸಲಾಯಿತು.

ಪಾವಂಜೆ ದೇವಾಡಿಗ ಸಂಘದಿಂದ ಆಗಮಿಸಿದ ಉಪಾಧ್ಯಕ್ಷ ಶ್ರೀ ಅಣ್ಣಪ್ಪ ದೇವಾಡಿಗ, ಕಟ್ಟಡ ಸಮಿತಿಯ ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ಜನಾರ್ಧನ್ ಪಡುಪಣಂಬೂರ್, ಖಚಾಂಜಿ ಶ್ರೀ ಅಶೋಕ್ ಪಾವಂಜೆ , ಹಾಗೂ ಶ್ರೀ ರಾಮಣ್ಣ ದೇವಾಡಿಗ ಮುಂಬೈ ಸಮಿತಿಯ ಕಾರ್ಯದರ್ಶಿ ಹಾಗೂ ಮಾಜಿ ಕಾರ್ಯಾಧ್ಯಕ್ಷ ಚೆಂಬೂರ್ ಪ್ರಾದೇಶಿಕ ಸಮನ್ವಯ ಸಮಿತಿ ಅವರನ್ನು ಹೂ ಗುಚ್ಛ ನೀಡಿ ಸನ್ಮಾನಿಸಲಾಯಿತು. ಪೂಜೆಯ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಶ್ರೀಮತಿ ಲತಾ ವಿಶ್ವನಾಥ ಮೊಯ್ಲಿ ಮತ್ತು ಶ್ರೀಮತಿ. ಪ್ರತಿಮಾ ಗುಣಪಾಲ್ ಮೊಯ್ಲಿ ಮಾಡಿದರು.

ಕಾರ್ಯದರ್ಶಿ ಮಮತಾ ದೇವಾಡಿಗರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.