DSM News

ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗ ಮತ್ತು ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗ ಮತ್ತು ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಯ ಆಶ್ರಯದಲ್ಲಿ ಆಗಸ್ಟ್ 4 ರಂದು ಪರೆಲಿನ ವಾಡಿಯ ಮಕ್ಕಳ ಆಸ್ಪತ್ರೆಯ ಎದುರುಗಡೆ ಪರಿಸರ ಸಂರಕ್ಷಣೆಗಾಗಿ ವನಮಹೋತ್ಸವ ಕಾರ್ಯಕ್ರಮವನ್ನು (4-8-2019) ಮುಂಬೈ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಆಯೋಜಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿ ಸಂಘದ ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾದ್ಯಕ್ಷ ಶ್ರೀ ಹೇಮನಾಥ್ ದೇವಾಡಿಗ, ಮಾಜಿ ಕಾರ್ಯಾದ್ಯಕ್ಷ ಶ್ರೀ ಶ್ರೀಧರ್ ಶೇರಿಗಾರ್, ಯುವ ವಿಭಾಗದ ಕಾರ್ಯಾದ್ಯಕ್ಷ ಶ್ರೀ ನಿತೇಶ್ ದೇವಾಡಿಗ ರವರು ಗಿಡಗಳನ್ನು ನೆಟ್ಟರೆ, ಶ್ರೀ ರಘು ಮೊಯಿಲಿ, ಶ್ರೀಮತಿ ಜಲಜಾಕ್ಷಿ ಎಸ್ ಶೇರಿಗಾರ್ , ಶ್ರೀಮತಿ ಪ್ರತಿಮಾ ಮೊಯಿಲಿ, ಲಾವಣ್ಯ ಮೊಯಿಲಿ, ಶಿವಸಾಗರ್ ಮತ್ತು ಗುರುಪ್ರಸಾದ್ ದೇವಾಡಿಗರು ಉಪಸ್ಥಿತರಿದ್ದರು.

ಶ್ರೀ ಹೇಮನಾಥ್ ದೇವಾಡಿಗ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾದ್ಯಕ್ಷೆಯಾರಾದ ಶ್ರೀಮತಿ ಸುರೇಖಾ ಯಚ್ ದೇವಾಡಿಗ ಹಾಗೂ ಶ್ರೀಮತಿ ರಂಜಿನಿ ಮೊಯಿಲಿಯವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಂಪೂರ್ಣ ಸಹಕಾರವನ್ನಿತ್ತರು.