Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಸೋಣದ ಐಸಿರಿ ವರ್ಚುವಲ್ ಸೆಲೆಬ್ರೇಶನ್

ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಸೋಣದ ಐಸಿರಿ ವರ್ಚುವಲ್ ಸೆಲೆಬ್ರೇಶನ್

ದೇವಾಡಿಗ ಸಂಘ ಮಹಿಳಾ ವಿಭಾಗದವರಿಂದ “ಸೋಣದ ಐಸಿರಿ ವರ್ಚುವಲ್ ಸೆಲೆಬ್ರೇಶನ್“ 29ನೇ ಆಗಸ್ಟ್ ಸಂಜೆ 4 ಗಂಟೆಗೆ ನಡೆಯಿತು. ತುಳುವರ ಪವಿತ್ರ ತಿಂಗಳು ಸೋಣ ಎಂದರೆ ಭೂಮಿ ತಾಯಿ ಮಳೆಗಾಲದ ಕಾಲದಿ ಹಸಿರಿನಿಂದ ನಳನಳಿಸುವ ಹಬ್ಬಗಳ ಸುಂದರ ಪರ್ವ ಕಾಲ.

ಕುಸುಮ ದೇವಾಡಿಗರ ಗಣಪತಿ ವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮಹಿಳಾ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರವರು ಕಾರ್ಯಕ್ರಮಕ್ಕೆ ಆನ್ಲೈನ್ ಮೂಲಕ ಸೇರಿದ ಎಲ್ಲಾ ಸಮಾಜ ಬಾಂಧವರಿಗೆ ಸ್ವಾಗತ ಕೋರಿದರು. ಭಕ್ತಿ ಸಂಗೀತ ಎಲ್ಲಾ ಮುಂಬಯಿಯ ಸಮನ್ವಯ ಸಮಿತಿಯ ಮಹಿಳಾ ಸದ್ಯಸರಿಂದ ನಡೆದರೆ ಸುರೇಖಾ ಮೊಯಿಲಿಯವರು ಭಾವಗೀತೆಯನ್ನು ಹಾಡಿದರು. ಸೋಣದ ಬಗ್ಗೆ ಮಾಹಿತಿಯನ್ನು ಶ್ರೀ ಸುಧಾಕರ್ ಎಲ್ಲೂರ್, ಮಹಿಳಾ ವಿಭಾಗದ ಉಪ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ , ಉಪ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ದೇವಾಡಿಗರು ನೀಡಿದರು

ಡಾಕ್ಟರ್ ರೇಖಾ ದೇವಾಡಿಗರು "ಕೊರೋನ ಪ್ಯಾಂಡಮಿಕ್" ಅದರ ಬಗ್ಗೆ ನಿಖರವಾಗಿ ಸಮಾಜ ಬಾಂಧವರಿಗೆ ಮನವರಿಕೆ ಮಾಡಿದರು. ಪರಿಸರ, ಅದರ ರಕ್ಷಣೆ, ಪ್ಲಾಸ್ಟಿಕ್ ತ್ಯಜಿಸುವಿಕೆ, ನೀರಿನ ಮಿತಬಳಕೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಹಿತ ನುಡಿದರು. ಸಂಘದ ಅಧ್ಯಕ್ಷರಾದ ಶ್ರೀ ರವಿ ದೇವಾಡಿಗರು, ಮಹಿಳಾ ವಿಭಾಗದವರು ಆಯೋಜಿಸಿದ "ಆನ್ಲೈನ್ ಸೋಣದ ಐಸಿರಿ" ಕಾರ್ಯಕ್ರಮದಲ್ಲಿ ಈ ಲಾಕ್ಡೌನ್ ಕಾಲದಲ್ಲಿ ಮಹಿಳಾ ವಿಭಾಗದವರನ್ನು ಒಟ್ಟುಗೂಡಿಸಿ ಒಂದು ಸಂವಾದದಂತೆ ಇರಿಸಿದ ಮಹಿಳಾ ವಿಭಾಗದವರನ್ನು ಅಬಿನಂದಿಸಿದರು. ಮಾಜಿ ಅಧ್ಯಕ್ಷರಾದ ಶ್ರೀ ಯಚ್ ಮೋಹನ್ದಾಸ್, ಉಪಾದ್ಯಕ್ಷ ಶ್ರೀ ಪ್ರವೀಣ್ ನಾರಾಯಣ್, ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಮಹಿಳಾ ವಿಭಾಗದ ಉಪಾಕಾರ್ಯಾದ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗರವರು, ಸೋಣದ ಬಗ್ಗೆ ಮತ್ತು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು. ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿಯವರು ಮೊದಲಿಗೆ ಕನೆಕ್ಟ್ ಆದ ಸಮಾಜ ಬಾಂಧವರಿಗೆ ಶುಭ ಕೋರಿದರೆ, ಆಟಿಯ ಕಲಂಜೆ, ಮತ್ತು ಸೋಣದ ಜೋಗಿಯ ಬಗ್ಗೆ ವಿವರಿಸಿ ಕೊರೋಣದಿಂದ ನಮ್ಮ ಭಾರತ ಮುಕ್ತಿ ಪಡೆಯಲಿ ಎಂದು ಆಶಿಸಿದರು. ತಾಂತ್ರಿಕ ಸಹಾಯವನ್ನು ಯೂತ್ ವಿಂಗ್ ಮೆಂಟರ್ ಶ್ರೀ ಗಿರೀಶ್ ಕೇಶವ್ ಮಾಡಿದರೆ ನಿರೂಪಣೆ ಶ್ರೀಮತಿ ಪ್ರಮೀಳಾ ಶೇರಿಗಾರ್ ನಿರ್ವಹಿಸಿದರು.