Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ - ಬೋರಿವಲಿ ಪ್ರಾದೇಶಿಕ ಸಮಿತಿಯ ಸ್ನೇಹ ಸಮ್ಮೇಳನ - ನಮ್ಮ ಸದಸ್ಯ ಸಂಖ್ಯೆ ನಮ್ಮ ಬಲ: ಶ್ರೀ ಪ್ರವೀಣ್ ಎನ್. ದೇವಾಡಿಗ

ದೇವಾಡಿಗ ಸಂಘ ಮುಂಬಯಿ - ಬೋರಿವಲಿ ಪ್ರಾದೇಶಿಕ ಸಮಿತಿಯ ಸ್ನೇಹ ಸಮ್ಮೇಳನ - ನಮ್ಮ ಸದಸ್ಯ ಸಂಖ್ಯೆ ನಮ್ಮ ಬಲ: ಶ್ರೀ ಪ್ರವೀಣ್ ಎನ್. ದೇವಾಡಿಗ

   ನಮ್ಮ ಸಂಘದ ಸದಸ್ಯರೇ ಸಂಘದ ಬಲ. ಸಂಘವು ಯಾವುದರಲ್ಲಿ ಪ್ರಾತಿನಿಧ್ಯ ಪಡಯಲು ಇಚ್ಚಿಸಿದರೂ ಸಂಘದಲ್ಲಿ ಸದಸ್ಯತ್ವದ ಬಲ ಅವಶ್ಯಕವಾಗಿರುವುದರಿಂದ ನಮ್ಮ ಸದಸ್ಯ ಸಂಖ್ಯೆಯನ್ನು ಹೆಚ್ಚಿಸುವುದು ಪರಿಹಾರ, ಎಂಬುದಾಗಿ ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಹೇಳಿದರು.

ಸಂಘದ ಕಾಂದಿವಲಿ - ಬೋರಿವಲಿ ಮತ್ತು ದಹಿಸರ್ ವಲಯದ ಸ್ನೇಹ ಸಮ್ಮೇಳನ ಕಾರ್ಯಕ್ರಮವು ರವಿವಾರ ಫೆಬ್ರುವರಿ 26ರಂದು ಇಲ್ಲಿಯ ವಝೀರಾ ನಾಕಾದ ರಾಯಲ್ ಬಾಂಕ್ಯೂಟ್ ಹಾಲಿನಲ್ಲಿ (ಬೋರಿವಲಿ) ಜರಗಿತು. ಈ ಸಂದರ್ಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪ್ರವೀಣ್ ದೇವಾಡಿಗರು ಸದಸ್ಯರು ತಮ್ಮ ತಮ್ಮ ವಲಯಗಳಲ್ಲಿ ಆದಷ್ಟು ಸದಸ್ಯರನ್ನು ಒಟ್ಟುಮಾಡುವ ಕೆಲಸ ಮಾಡುವಂತೆ ಒತ್ತಿ ಹೇಳಿದರು. ಸಂಘದ ಯಾವುದೇ ಯೋಜನೆಗಳಿಗೆ , ಸರಕಾರದ ಪ್ರತಿನಿಧ್ಯಕ್ಕೆ, ಸರಕಾರದ ಯೋಜನೆಗಳ ಲಾಭ ಪಡೆಯುವುದಕ್ಕೆ ಮತ್ತು ನಮ್ಮ ಸಂಘದ ಸದಸ್ಯರ ಅಭಿವೃದ್ಧಿ ಯೋಜನೆಗಳಿಗೆ ಸದಸ್ಯ ಸಂಖ್ಯೆಯ ಬಲ ಬೇಕಾಗಿದೆ. ಅದಕ್ಕಾಗಿ ಹೊಸ ಸದಸ್ಯರನ್ನು ಒಟ್ಟುಗೂಡಿಸುವುದರೊಂದಿಗೆ ಸದ್ಯ ಸದಸ್ಯರಾಗಿದ್ದವರು ತಮ್ಮ ಸದ್ಸ್ಯತ್ವದ ದರ್ಜೆಗಳನ್ನು ಹೆಚ್ಚಿಸಿ ಸಂಘವನ್ನು ಆರ್ಥಿಕವಾಗಿಯೂ ಸಬಲಗೊಳಿಸುವಿದಕ್ಕಾಗಿ ಸದಸ್ಯರು ಮುಂದೆ ಬರುವುದು ಅನಿವಾರ್ಯ ಶ್ರೀ ಪ್ರವೀಣ್ ನಾರಾಯಣ್ ಹೇಳಿದರು. ಕಾರ್ಯಕ್ರಮದ ಆಯೋಜನೆಯನ್ನು ಪ್ರಶಂಸಿದ ಅಧ್ಯಕ್ಷರು ಈ ವಲಯದ ಕಾರ್ಯಕ್ರಮಕ್ಕೆ ಸಂಘದ ಇತರ ವಲಯಗಳಿಂದ ಸಾಕಷ್ಟು ಸದಸ್ಯರು ಸೇರಿರಿರುವುದು ಸ್ವಾಗತಾರ್ಹ. ಆದರೆ ಯುವಕರ ಸಹಭಾಗತ್ವದಲ್ಲಿ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಅದಕ್ಕಾಗಿ ಯುವಕರು ಕ್ರಿಕೆಟ್, ಫುಟ್ಬಾಲ್ ಮೊದಲಾದ ಆಟೋಟಗಳಲ್ಲಿ ಆಸಕ್ತಿ ಹೊಂದಿದ್ದರೂ ಸಂಘದ ಕಾರ್ಯಕ್ರಮಗಳಲ್ಲಿ ಅವರು ಮುಂದೆ ಬರಬೇಕಾಗಿ ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ದೇವಾಡಿಗ ಮಹಾಮಂಡಳ ಅಧ್ಯಕ್ಷರು ಹಾಗು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರು ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗ ಇವರು ಉಪಸ್ಥಿತರಿದ್ದು ದೇವಾಡಿಗರು ಇನ್ನು ಮುಂದೆ ತಮ್ಮ ಕಾರ್ಯಕ್ರಮಗಳಲ್ಲಿ ದರ್ಜೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವುದರೊಂದಿಗೆ ಸದಸ್ಯರು ಸಮಯದ ಉಪಯೋಗವನ್ನು ಕ್ರಿಯಾಶೀಲವಾಗಿ ಮುಂದೆ ನಡೆಸಿಕೊಂಡು ಹೋಗಬೇಕು ಎಂದು ಒತ್ತಿ ಹೇಳಿದರು. ನಮ್ಮಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಚರಿಸುವಾಗ ಅದು ಅಚ್ಚುಕಟ್ಟಾಗದಿದ್ದು, ಶಿಸ್ತುಪರ, ವೃತ್ತಿಪರತೆಯನ್ನು ಹೊಂದಿರಬೇಕು. ಅದಕ್ಕಾಗಿ ಸ್ವಲ್ಪ ವಿನಿಮಯ ಹೆಚ್ಚಾದರೂ ಅದು ಈಗಿನ ಕಾಲದ ಸ್ಪರ್ಧಾತ್ಮಕ ಯುಗದಲ್ಲಿ ಅನಿವಾರ್ಯ ಎಂದು ಹೇಳಿದರು.

ವಲಯದ ಕಾರ್ಯಾಧ್ಯಕ್ಷರಾದ ಶ್ರೀ ಭಾಸ್ಕರ್ ದೇವಾಡಿಗ ಇವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರು ಇತರ ಗಣ್ಯರೊಂದಿಗೆ ಸೇರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಂಘದ ಹಿರಿಯ ಸದಸ್ಯರಾದ ವಲಯದ ಶ್ರೀಮತಿ ವಸಂತಿ ನಾರಾಯಣ್ ಸಾಲಿಯಾನ್ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಎಲ್ಲರಿಗೂ ಶುಭ ಕೋರಿದರು. ಈ ಸಂದರ್ಭದಲ್ಲಿ ಪ್ರಥಮ ಮಹಿಳೆ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ, ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಸಂಘದ ಕ್ರಿಯಾಶೀಲಾ ಸದಸ್ಯರು ಮತ್ತು ಸಾಧಕರಾದ ಕ್ರೀಡಾಪಟು ಶ್ರೀಮತಿ ಜಯಂತಿ ಎಂ. ದೇವಾಡಿಗ, ಲೇಖಕಿ ಶ್ರೀಮತಿ ಸುರೇಖಾ ಹೆಚ್. ದೇವಾಡಿಗ, ಯುವ ಕಾರ್ಯಾಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೇಕರ್, ಅಲ್ಲದೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಶ್ರೀ ವಾಸು ದೇವಾಡಿಗ, ಡಾ. ಮೇಘಾ ದೇವಾಡಿಗ ಮತ್ತು ಅಮಮಂತ್ರಿತ ಅತಿಥಿಗಳನ್ನು ಗೌರವೋಚಿತವಾಗಿ ಸನ್ಮಾನಿಸಲಾಯಿತು.

ವಲಯದ ಮಹಿಳಾ ಸದಸ್ಯರು ಮತ್ತು ಮಕ್ಕಳು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಹಳದಿ-ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿದರು. ಭಾಗವಸಿದ ಎಲ್ಲಾ ಸದಸ್ಯರನ್ನು ಬಹುಮಾನ ನೀಡಿ ಗೌರವಿಸಲಾಯಿತು ಅಲ್ಲದೆ ಉಪಸ್ಥಿತ ಇತರ ವಲಯದ ಆಡಳಿತ ಮಂಡಳಿಯ ಸದಸ್ಯರನ್ನೂ ಗೌರವಿಸಲಾಯಿತು. ಕಾರ್ಯಕ್ರಮವು ಸ್ನೇಹ ಭೋಜನದೊಂದಿಗೆ ಪೂರ್ಣಗೊಂಡಿತು.

ಈ ಕಾರ್ಯಕ್ರಮಕ್ಕೆ, ವಲಯದ ಉಪ ಕಾರ್ಯಾಧ್ಯಕ್ಪ ಶ್ರೀ ಹೆಚ್. ಜಯಾ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಷಿ ಗೋಪಾಲ್ ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಕುಸುಮಾ ಸಂಜೀವ ದೇವಾಡಿಗ ಕಾರ್ಯದರ್ಶಿ ಶ್ರೀ ಮಹೇಶ್ ಟಿ. ದೇವಾಡಿಗ, ಕಾರ್ಯದರ್ಶಿ ಮಹಿಳಾ ವಿಭಾಗ ಶ್ರೀಮತಿ ವನಿತಾ ಭಾಸ್ಕರ್ ದೇವಾಡಿಗ,ಕೋಶಾಧಿಕಾರಿ ಶ್ರೀ ಪ್ರವೀಣ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಆಶೀಶ್ ದೇವಾಡಿಗ, ಉಪಕಾರ್ಯಧ್ಯಕ್ಷ ಶ್ರೀ ಅಭಿಜಿತ್ ದೇವಾಡಿಗ, ಯುವ ಕಾರ್ಯದರ್ಶಿ ಶ್ರೀ ಉತ್ತೆಜ್ ದೇವಾಡಿಗ ಮೊದಲಾದವರು ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು. ಶ್ರೀಮತಿ ವನಿತಾ ಭಾಸ್ಕರ್ ದೇವಾಡಿಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶ್ರೀಮತಿ ಕುಸುಮಾ ಸಂಜೀವ ದೇವಾಡಿಗ ಇವರು ವಂದಿಸಿದರು.