Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಸಂಗೀತ ಸ್ಪರ್ಧೆ

ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಸಂಗೀತ ಸ್ಪರ್ಧೆ

   ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗ ಇವರ ನೇತೃತ್ವದಲ್ಲಿ ವಿಭಾಗದ ಪ್ರಾದೇಶಿಕ ಸಮಿತಿಗಳ ಮಹಿಳೆಯರಿಗೆ ಒಂದು ಭವ್ಯವಾದ ಸಂಗೀತ ಸ್ಪರ್ಧೆಯನ್ನು ಕಳೆದ 24ನೇ ಡಿಸೆಂಬರ್ 2022 ರಂದು ಸಂಘದ ದಾದರ್ ಇಲ್ಲಿನ ಸಭಾಗ್ರಹದಲ್ಲಿ ಆಯೊಜಿಸಿತ್ತು. ಚೆಂಬೂರು ಪ್ರಾದೇಶಿಕ ಸಮಿತಿಯ ಶ್ರೀಮತಿ ಮಾನಸಾ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್ ಸ್ವಾಗತಿಸಿದರು. ಮುಂಬಯಿಯ ಪ್ರಸಿದ್ಧ ಮಹಿಳಾ ಭಾಗವತರಾದ ಶ್ರೀಮತಿ ಜಯಲಕ್ಷ್ಮಿ ಆರ್ ದೇವಾಡಿಗ (ಅಸಲ್ಫಾ ಪ್ರಾದೇಶಿಕ ಸಮಿತಿ), ಶ್ರೀಮತಿ ಸುಶೀಲಾ ಎಸ್. ದೇವಾಡಿಗ, ವಕ್ತಾರರು - ಮುಂಬಯಿ ಆಕಾಶವಾಣಿ (ಸಿಟಿ ಪ್ರಾದೇಶಿಕ ಸಮಿತಿ) ಮತ್ತುಪ್ರಸಿದ್ಧ ನಾಟಕ ಕಲಾವಿದೆ ಮತ್ತು ಕಿರುತೆರೆ ನಟಿಯಾಗಿರುವ ಶ್ರೀಮತಿ ಚಂದ್ರಾವತಿ ವಿ. ದೇವಾಡಿಗ ಇವರು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿದ್ದು ಅವರನ್ನು ಸರದಿಯಂತೆ ಶ್ರೀಮತಿ ಲತಾ ಎ. ಶೇರಿಗಾರ (ಜೊತೆ ಕಾರ್ಯದರ್ಶಿ), ಶ್ರೀಮತಿ ಪ್ರತಿಭಾ ಜಿ. ದೇವಾಡಿಗ (ಉಪಾಧ್ಯಕ್ಷೆ) ಮತ್ತು ಸುಜಯ ವಿ ದೇವಾಡಿಗ (ಕಾರ್ಯದರ್ಶಿ) ಇವರು ಪರಿಚಯಿಸಿದರು.

ಇ ಸಂಗೀತ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 42 ಅಪಾರ್ದ್ಧಕರು ಭಾಗವಹಿಸಿದರು. ಸಂಘದ ಅಸಲ್ಫಾ ಪ್ರಾದೇಶಿಕ ಸಮಿತಿಯಿಂದ ಅತಿ ಹೆಚ್ಚು ಸದಸ್ಯರು ಇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸಂಗೀತ ಸ್ಪರ್ಧೆ, ಸೋಲೋ (ಏಕವ್ಯಕ್ತಿ), ಜಾನಪದ ಮತ್ತು ಗುಂಪು ಹಾಡುಗಾರಿಕೆಗಳ ಪ್ರಕಾರಗಳಲ್ಲಿದ್ದು, ಸೋಲೋ ಪ್ರಕಾರದ ಹಾಡುಗಳು ಹಿಂದಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿನ ಚಲನಚಿತ್ರಗಳ ಹಾಡುಗಳಾಗಿದ್ದು, ಮೂರು ನಿಮಿಷಗಳ ಅವಧಿಗೆ ಸೀಮಿತವಾಗಿತ್ತು. ಅದೇ ರೀತಿ, ಎರಡನೇ ಪ್ರಕಾರದಲ್ಲಿ ಹಿಂದಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿನ ಮೂರು ನಿಮಿಷದ ಯಾವುದೇ ಜಾನಪದವಾಗಿದ್ದು, ಮೂರನೇ ಪ್ರಕಾರವಾದ ಗುಂಪು ಹಾಡುಗಳು ಹಿಂದಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಐದು ನಿಮಿಷದ ದೇಶಭಕ್ತಿ ಆಗಿತ್ತು. ಜಾನಪದ ಹಾಡುಗಳ ಪ್ರಕಾರಗಲ್ಲಿ - ಚೆಂಬೂರು ಪ್ರಾದೇಶಿಕ ಸಮಿತಿಯ ಶ್ರೀಮತಿ ಮಾನಸ ದೇವಾಡಿಗ ಇವರು ಪ್ರಥಮ ಬಹುಮಾನ, ಶ್ರೀಮತಿ ನಿರ್ಮಲಾ ದೇವಾಡಿಗ ದ್ವಿತೀಯ ಬಹುಮಾನ ಮತ್ತು ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಆಶಾ ಆರ್. ದೇವಾಡಿಗ ಇವರು ತ್ರಿತೀಯ ಬಹುಮಾನ ಪಡೆದರು. ಚಲನ ಚಿತ್ರಗಳ ಹಾಡುಗಳಲ್ಲಿ ಅಸಲ್ಫಾ ಪ್ರಾದೇಶಿಕ ಸಮಿತಿಯ ವಿಮಲಾ ದೇವಾಡಿಗ ಪ್ರಥಮ ಬಹುಮಾನ, ಭಾಂಡೂಬ್ ಪ್ರಾದೇಶಿಕ ಸಮಿತಿಯ ಶ್ರೀಮತಿ ಲೋಲಾಕ್ಷಿ ದೇವಾಡಿಗ ದ್ವಿತೀಯ ಬಹುಮಾನ ಮತ್ತು ಮೀರಾ ರೋಡ್ ಪ್ರಾದೇಶಿಕ ಸಮಿತಿಯ ಶ್ರೀಮತಿ ಸುರೇಖಾ ಮೊಯ್ಲಿ ಇವರು ತ್ರಿತೀಯ ಬಹುಮಾನ ಪಡೆದರು. ಗುಂಪು ಹಾಡುಗಾರಿಕೆ ಪ್ರಕಾರದಲ್ಲಿ, ಅಸಲ್ಫಾ ತಂಡದ ಶ್ರೀಮತಿ ಉಷಾ ದೇವಾಡಿಗ, ಶ್ರೀಮತಿ ರೇಖಾ ದೇವಾಡಿಗ ಮತ್ತು ಶ್ರೀಮತಿ ಸವಿತಾ ಮೊಯ್ಲಿ ಇವರು ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಹುಮಾನವನ್ನು ಡೊಂಬಿವಲಿ ತಂಡದ ಶ್ರೀಮತಿ ಶಾಲಿನಿ ದೇವಾಡಿಗ ಶ್ರೀಮತಿ ಪದ್ಮಲತಾ ದೇವಾಡಿಗ, ಶ್ರೀಮತಿ ಮಲ್ಲಿಕಾ ದೇವಾಡಿಗ, ಶ್ರೀಮತಿ ಪುಷ್ಪಲತಾ ದೇವಾಡಿಗ ಮತ್ತು ಶ್ರೀಮತಿ ನಿರ್ಮಲಾ ದೇವಾಡಿಗ ಇವರ ತಂಡ ಪಡೆಯಿತು.

ಕಾರ್ಯಕ್ರಮವನ್ನು ಆಯೋಜಿಸಿದ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಕಾರ್ಯಕ್ರಮಕ್ಕೆ ಸಹಕರಿಸಿದ ಮತ್ತು ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸಿ ಧನ್ಯವಾದ ಗೈದರು. ಮಹಿಳಾ ಸದಸ್ಯರಲ್ಲಿ ಅಡಗಿರುವ ಸಂಗೀತ ಪ್ರತಿಭೆಯ ಮೇಲೆ ಬೆಳಕು ಚೆಲ್ಲುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ನಿರ್ವಹಿಸಲು ಸಂಘವು ಸದಾ ಪ್ರೋತ್ಸಾಹಿಸುತ್ತದೆ ಎಂದರು. ಅಲ್ಲದೆ , ಈ ಕಾರ್ಯಕ್ರಮವನ್ನು ಆಯೋಜಿಸಲು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಏನ್. ದೇವಾಡಿಗ ಮತ್ತು ಅವರ ನೇತೃತ್ವದ ಸಂಘದ ವ್ಯವಸ್ಥಾಪಕ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮಕ್ಕೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ - ಶ್ರೀ.ವಿಶ್ವನಾಥ್ ಬಿ ದೇವಾಡಿಗ, ಜೊತೆ ಕಾರ್ಯದರ್ಶಿ - ಶ್ರೀ. ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿ - ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಅಧ್ಯಕ್ಷರು - ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ - ಶ್ರೀಮತಿ ಪೂರ್ಣಿಮಾ ಡಿ ದೇವಾಡಿಗ; ಕ್ರೀಡಾ ಸಮಿತಿಯ ಉಪಾಧ್ಯಕ್ಷರು – ಶ್ರೀಮತಿ ಶುಭ ದೇವಾಡಿಗ, ಮಾಜಿ ಮಹಿಳಾ ಅಧ್ಯಕ್ಷರುಗಳಾದ ಶ್ರೀಮತಿ ಭಾರತಿ ನಿಟ್ಟೆಕರ್ , ಶ್ರೀಮತಿ ಜಯಂತಿ ಆರ್. ಮೊಯ್ಲಿ ಮತ್ತು ಶ್ರೀಮತಿ ರಂಜನಿ ಆರ್ ಮೊಯ್ಲಿ; ಬೋರಿವಲಿ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷರು ಶ್ರೀ. ಗೋಪಾಲ್ ಜಿ. ದೇವಾಡಿಗ, ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷರು ಶ್ರೀ ಹೇಮನಾಥ ದೇವಾಡಿಗ ಇವರು ಪ್ರಾಮುಖ್ಯವಾಗಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು, ಸಂಘದ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಎ. ಶೇರಿಗಾರ ಇವರ ಧನ್ಯವಾದಗಳೊಂದಿಗೆ ಮತ್ತು ಉಪಾಹಾರದೊಂದಿಗೆ ಮುಕ್ತಾಯಗೊಂಡಿತು.