Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ, ನವರಾತ್ರೋತ್ಸವದ ಅಂಗವಾಗಿ ಮಹಿಳಾ ವಿಭಾಗದ ವತಿಯಿಂದ ಶಾರದ ಪೂಜೆ ಮತ್ತು ವಿವಿಧ ಕಾರ್ಯಕ್ರಮಗಳು

ದೇವಾಡಿಗ ಸಂಘ ಮುಂಬಯಿ, ನವರಾತ್ರೋತ್ಸವದ ಅಂಗವಾಗಿ ಮಹಿಳಾ ವಿಭಾಗದ ವತಿಯಿಂದ ಶಾರದ ಪೂಜೆ ಮತ್ತು ವಿವಿಧ ಕಾರ್ಯಕ್ರಮಗಳು

   ಮುಂಬಯಿ, ಅ. ೯: ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರ ನೇತೃತ್ವದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶಾರದ ಪೂಜೆ ಕಾರ್ಯಕ್ರಮವನ್ನು 9ನೇ ಅಕ್ಟೋಬರ್ 2024 ರಂದು ಶಾರದ ಪೂಜೆ, ಭಜನೆ ಮತ್ತು ಗರ್ಭ ನ್ರತ್ಯಗಳಿಂದ ಬಹಳ ಅದ್ದೂರಿಯಲ್ಲಿ ಆಚರಿಸಿದರು. ಈ ಕಾರ್ಯಕ್ರಮವು ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹದಲ್ಲಿ ಜರಗಿತು.

ಮಹಿಳಾ ವಿಭಾಗದ ಸದಸ್ಯೆಯರು ಶ್ರೀ ಗಣೇಶಸ್ತುತಿ ಪಠಣ ಮಾಡುವುದರೊಂದಿಗೆ ಶಾರದಾ ಪೂಜೆಯು ಪ್ರಾರಂಭವಾಯಿತು. ಶ್ರೀಮತಿ ಶಶಿಕಲಾ ಎಸ್ ಮೊಯ್ಲಿ ಅವರಿಂದ ಶಾರದ ಪೂಜಾ ವಿಧಿವಿಧಾನಗಳು ಜರುಗಿದವು. ಮಹಿಳಾ ವಿಭಾಗದ ಹಿರಿಯ ಸದಸ್ಯರು ಮತ್ತು ಸಂಘದ ಪ್ರಾದೇಶಿಕ ಸಮಿತಿಗಳ ಸದಸ್ಯರ ಸಹಯೋಗದಿಂದ ಶಾರದಾ ಪೂಜೆಯನ್ನು ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ ಮತ್ತು ಸಂಘದ ಸದಸ್ಯರು ಸುಶ್ರಾವ್ಯವಾಗಿ ಭಜನೆ ಸಂಕೀರ್ತನ ಹಾಡಿದರು.

ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ ಮೊಯ್ಲಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಬಿ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿಗಳು ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ಹೆಚ್. ದೇವಾಡಿಗ, ಸಾಂಸ್ಕ್ರತಿಕ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಉಪಕಾರ್ಯಧ್ಯಕ್ಷೆ ಶ್ರೀಮತಿ ಗೀತಾ ಎಲ್ ದೇವಾಡಿಗ, ಬೊರಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಜಿ. ದೇವಾಡಿಗ, ಠಾಣೆ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ. ಉಷಾ ದೇವಾಡಿಗ, ಅಸಲ್ಫಾ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ. ರೇಖಾ ದೇವಾಡಿಗ ಮತ್ತು ಸಿಟಿ ವಲಯ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಮಮತಾ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯರಾದ ಶ್ರೀಮತಿ ಶಾಂತಾ ಜಿ. ಮೊಯ್ಲಿ. ಶ್ರೀಮತಿ ಜಯಂತಿ ಆರ್. ಮೊಯ್ಲಿ, ಶ್ರೀಮತಿ ರಂಜಿನಿ ಆರ್. ಮೊಯ್ಲಿ ಮತ್ತು ಶ್ರೀಮತಿ. ಪ್ರದ್ನ್ಯಾ ಮೋಹನ್‌ದಾಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮಹಾ ಆರತಿಯನ್ನು ನೆರವೇರಿಸಿದರು. ಕಾರ್ಯಕ್ರಮಕ್ಕೆ ಶುಭ ಕೋರಿದ ಅವರು ಶ್ರೀಮತಿ ಜಯಂತಿ ಎಂ. ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆಯರಾದ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್ ಮತ್ತು ಪ್ರತಿಭಾ ಜಿ. ದೇವಾಡಿಗ, ಕಾರ್ಯದರ್ಶಿ ಶ್ರೀಮತಿ. ಸುಜಯ ವಿ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಎ. ಶೇರಿಗಾರ ಇವರ ದಕ್ಷ ನೇತೃತ್ವವನ್ನು ಶ್ಲಾಘಿಸಿದರು. "ಸಂಘದ ಶತಮಾನೋತ್ಸವ ವರ್ಷದ ಈ ಸಂದರ್ಭದಲ್ಲಿ ಮಹಿಳಾ ವಿಭಾಗದಿಂದ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳು ಗಮನೀಯವಾಗಿವೆ ಎಂದು ಶ್ರೀ ಪ್ರವೀಣ್ ಎನ್ ದೇವಾಡಿಗ ಇವರು ಪ್ರಶಂಸಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಸದಸ್ಯರು ಸೇರಿದಂತೆ ಎಲ್ಲಾ ಮಹಿಳಾ ಸದಸ್ಯರು ದಾಂಡಿಯಾ ರಾಸ್ ಮತ್ತು ಗರ್ಬಾ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಈ ಸಮಾರಂಭಕ್ಕೆ ಉದಾರವಾಗಿ ದೇಣಿಗೆ ನೀಡಿದ ಎಲ್ಲಾ ಸದಸ್ಯರಿಗೆ ಧನ್ಯವಾದ ನೀಡಿ ಅಭಿನಂದಿಸಿದರು ಮತ್ತು ಮಹಿಳಾ ವಿಭಾಗದ ವತಿಯಿಂದ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು ಹಾಗೂ ಅವರ ಕುಟುಂಬದ ಯೋಗಕ್ಷೇಮಕ್ಕೆ ಶುಭ ಕೋರಿದರು.

ಕಾರ್ಯಕ್ರಮವು ಅನ್ನ ಪ್ರಸಾದದೊಂದಿಗೆ ಕೊನೆಗೊಂಡಿತು. ಶ್ರೀಮತಿ ಗೀತಾ ಎಲ್. ದೇವಾಡಿಗ ಇವರು ಬುಂದಿಲಾಡು ಪ್ರಾಯೋಜಿಸಿದ್ದರು ಹಾಗೂ ಕೊನೆಯಲ್ಲಿ ವಿಭಾಗದ ಕಾರ್ಯದರ್ಶಿ ಹಾಗೂ ನಿರೂಪಕಿ ಶ್ರೀಮತಿ ಸುಜಯ ವಿ. ದೇವಾಡಿಗ ಇವರು ವಂದಿಸಿದರು.