ದೇವಾಡಿಗ ಸಂಘ ಮುಂಬೈ, ಮಹಿಳಾ ವಿಭಾಗದವರಿಂದ - ಶಾರದಾ ಪೂಜೆ ಆಚರಣೆ

ದೇವಾಡಿಗ ಸಂಘ ಮುಂಬೈ, ಮಹಿಳಾ ವಿಭಾಗದವರಿಂದ - ಶಾರದಾ ಪೂಜೆ ಆಚರಣೆ

   ದೇವಾಡಿಗ ಸಂಘ, ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗರ ಹಿರಿತನದಲ್ಲಿ 22 ಅಕ್ಟೋಬರ್ 2023 ರಂದು ದೇವಾಡಿಗ ಸೆಂಟರ್, ದಾದರ್ ಕಛೇರಿಯಲ್ಲಿ ನವರಾತ್ರಿಯ ಶುಭ ಸಂದರ್ಭದಲ್ಲಿ ಶಾರದಾ ಪೂಜೆಯು ವಿಜೃಂಬಣೆಯಿಂದ ನಡೆಯಿತು .

ಶಾರದಾ ಪೂಜಾ ಕಾರ್ಯಕ್ರಮವು ಮಹಿಳಾ ವಿಭಾಗದ ಸದಸ್ಯರಿಂದ ಗಣಪತಿ ಸ್ತುತಿಯೊಂದಿಗೆ ಪ್ರಾರಂಭವಾಯಿತು. ಪೂಜಾ ವಿಧಿವಿಧಾನವನ್ನು ಶ್ರೀಮತಿ ಶಶಿಕಲಾ ಎಸ್ ಮೊಯ್ಲಿಯವರ ಮತ್ತು ಮಹಿಳಾ ವಿಭಾಗದ ಒಂಬತ್ತು ಹಿರಿಯ ಮಹಿಳಾ ಸದಸ್ಯರ ಸಮನ್ವಯದಲ್ಲಿ ನೆರವೇರಿಸಿದರು; ಆನಂತರ ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ ಮತ್ತು ೧೦ ಸ್ಥಳೀಯ ಸಮನ್ವಯ ಸಮಿತಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು.

ಈ ಶುಭ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು-ಶ್ರೀ.ವಾಸು ಎಸ್ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಮೊಯ್ಲಿ, ಗೌರವ ಪ್ರಧಾನ ಕಾರ್ಯದರ್ಶಿ- ಶ್ರೀ ವಿಶ್ವನಾಥ ದೇವಾಡಿಗ, ಗೌರವ ಜೊತೆ ಕಾರ್ಯದರ್ಶಿ- ಶ್ರೀ ನಿತೇಶ್ ದೇವಾಡಿಗ, ಗೌರವ ಜೊತೆ ಕೋಶಾಧಿಕಾರಿ - ಶ್ರೀ.ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಯುವ ಘಟಕದ ಕಾರ್ಯಾಧ್ಯಕ್ಷ ಹಾಗೂ ಸಮಿತಿಯ ಸದಸ್ಯರು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ - ಶ್ರೀಮತಿ ಪೂರ್ಣಿಮಾ ದೇವಾಡಿಗ, ಉಪಕಾರ್ಯಾಧ್ಯಕ್ಷೆ ಸಾಮಾಜಿಕ/ಸಾಂಸ್ಕೃತಿಕ ಸಮಿತಿ- ಶ್ರೀಮತಿ ಗೀತಾ ದೇವಾಡಿಗ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ- ಶ್ರೀ ಸುಧಾಕರ ಎಲ್ಲೂರು ಮತ್ತು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಶ್ರೀಮತಿ ಶಾಂತಾ ಗೋಪಾಲ್ ಮೊಯ್ಲಿ, ಶ್ರೀಮತಿ ಭಾರತಿ ಎಸ್ ನಿಟ್ಟೆಕರ್, ಶ್ರೀಮತಿ ಜಯಂತಿ ಆರ್ ಮೊಯ್ಲಿ, ಶ್ರೀಮತಿ ರಜಿನಿ ಆರ್ ಮೊಯ್ಲಿ ಹಾಗೂ ಜೋಗೇಶ್ವರಿ, ಸಿಟಿ ವಲಯ, ಚೆಂಬೂರು, ಭಾಂಡೂಪ್, ಥಾಣೆ, ಅಸಲ್ಫಾ, ಮತ್ತು ಬೊರಿವಲಿ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು ಸಕ್ರೀಯವಾಗಿ ಭಾಗವಹಿಸಿದ್ದರು.

ಮಾಜಿ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಶ್ರೀ ಅತ್ತಾವರ, ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ - ಶ್ರೀಮತಿ ಅಮಿತಾ ರಾವ್ ಹಾಗೂ ಡಾ.ರೇಖಾ ಇವರು ಉಪಸ್ಥಿತರಿದ್ದರು.

ನವಿ ಮುಂಬೈನ ಶ್ರೀ ಶಂಕರ ದೇವಾಡಿಗರ ಮಾರ್ಗದರ್ಶನದಲ್ಲಿ ಎಲ್ಲಾ ದೇವಾಡಿಗ ಕುಟುಂಬಗಳ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿಗಾಗಿ ಮಹಾ ಆರತಿಯನ್ನು ಸದಸ್ಯರ ಸಹಭಾಗಿತ್ವದಲ್ಲಿ ನಡೆಸಿ ಪ್ರಾರ್ಥಿಸಲಾಯ್ತು .

ಬೊರಿವಲಿ ಸ್ಥಳೀಯ ಸಮನ್ವಯ ಸಮಿತಿಯ ಮಹಿಳಾ ಸದಸ್ಯರು ತಮ್ಮ ಲಯಬದ್ಧ ನೃತ್ಯದೊಂದಿಗೆ ಕುಣಿತ ಭಜನೆಯನ್ನು ಶ್ರೀಮತಿ ಕುಸುಮಾ ದೇವಾಡಿಗ ಮತ್ತು ಶ್ರೀಮತಿ ಜಯಂತಿ ಎಸ್ ದೇವಾಡಿಗ ಇವರ ಭಜನೆಯ ಧಾಟಿಯೊಂದಿಗೆ ಹಾಗೂ ಶ್ರೀಮತಿ ಲಕ್ಷ್ಮಿ ಜಿ ದೇವಾಡಿಗರ ಹಾರ್ಮೋನಿಯಂ ಸಮನ್ವಯದಲ್ಲಿ ನಡೆಯಿತು. ವೈವಾಹಿಕ ಸೇವೆಗಳ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ವಿ ದೇವಾಡಿಗರು ಕನ್ಯಾ ಪೂಜೆ ಗೈದರು

ಶಾರದಾ ಪೂಜಾ ಕಾರ್ಯಕ್ರಮವು ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ- ಶ್ರೀಮತಿ ಪ್ರಮೀಳಾ ವಿ ಶೇರಿಗಾರ್, ಕಾರ್ಯದರ್ಶಿ- ಶ್ರೀಮತಿ ಸುಜಯ ವಿ ದೇವಾಡಿಗ, ಜೊತೆ ಕಾರ್ಯದರ್ಶಿ- ಶ್ರೀಮತಿ. ಲತಾ ಎ ಶೇರಿಗಾರ ಮತ್ತು ಶ್ರೀಮತಿ. ನಳಿನಿ ಎಸ್ ದೇವಾಡಿಗ ಇವರ ಸಮನ್ವಯದಲ್ಲಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲಾ ಮಹಿಳಾ ಸದಸ್ಯರಿಂದ ದಾಂಡಿಯಾ ರಾಸ್ ಮತ್ತು ಗರ್ಬಾ ನೃತ್ಯ ನಡೆಯಿತು

ಉಪಸ್ಥಿತರಿದ್ದ ಸರ್ವ ಸದಸ್ಯರಿಗೆ ಮಹಾಪ್ರಸಾದ ವಿತರಿಸಿ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು .