ದೇವಾಡಿಗ ಸಂಘ ಮುಂಬೈ ಇದರ ಮಹಿಳಾ ವಿಭಾಗ ದಿಂದ ಶಾರದಾ ಪೂಜಾ ಆಚರಣೆ

ದೇವಾಡಿಗ ಸಂಘ ಮುಂಬೈ ಇದರ ಮಹಿಳಾ ವಿಭಾಗ ದಿಂದ ಶಾರದಾ ಪೂಜಾ ಆಚರಣೆ

   ದೇವಾಡಿಗ ಸಂಘ ಮುಂಬಯಿ, ಮಹಿಳಾ ವಿಭಾಗವು 3ನೇ ಅಕ್ಟೋಬರ್ 2022 ರಂದು ದೇವಾಡಿಗ ಸೆಂಟರ್, ದಾದರ್ ಕಛೇರಿಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗರವರ ನೇತೃತ್ವದಲ್ಲಿ ಉಪಕಾರ್ಯಧ್ಯಕ್ಷೆಯರಾದ ಶ್ರೀಮತಿ ಪ್ರಮೀಳಾ ವಿ ಶೇರಿಗಾರ್ ಮತ್ತು ಶ್ರೀಮತಿ ಪ್ರತಿಭಾ ಜಿ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಸುಜಯ ವಿ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಲತಾ ಎ ಶೇರಿಗಾರ್ ಮತ್ತು ಶ್ರೀಮತಿ ನಳಿನಿ ಎಸ್ ದೇವಾಡಿಗ ಹಾಗೂ ದೇವಾಡಿಗ ಸಮುದಾಯದ 70ಕ್ಕೂ ಹೆಚ್ಚು ಮಹಿಳೆಯರು ಹಸಿರು ನವಿಲು ಬಣ್ಣದ ಸೀರೆಯನ್ನು ಉಟ್ಟುಕೊಂಡು ಶಾರದಾ ಪೂಜೆಯಲ್ಲಿ ಭಾಗವಹಿಸಿ ಶಾರದಾಂಬೆಯ ಪೂಜೆಯನ್ನು ಭಕ್ತಿ ಭಾವದಿಂದ ನೆರವೇರಿಸಿದರು.

ಎಲ್ಲಾ ಮಹಿಳಾ ವಿಭಾಗ ಸದಸ್ಯರು ಪಠಿಸಿದ ಗಣಪತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಾರದ ಮಾತೆಯ ಅಲಂಕಾರವನ್ನು ಮಹಿಳಾ ವಿಭಾಗದ ಸದಸ್ಯರು ಹಾಗೂ ಪೂಜಾ ವಿಧಿಗಳನ್ನು ಶ್ರೀಮತಿ ಶಶಿಕಲಾ ಎಸ್ ಮೊಯ್ಲಿಯವರು ನೆರವೇರಿಸಿದರು. ಕೆಲವು ಮಹಿಳಾ ಸದಸ್ಯರು ಪೂಜಾ ಸಾಮಗ್ರಿಗಳನ್ನು ಪ್ರಾಯೋಜಿಸಿದರೆ ಇನ್ನು ಕೆಲವರು ಶಾರದ ಪೂಜೆಗೆ ನಗದು ದೇಣಿಗೆ ನೀಡಿ ಸಹಕರಿಸಿದರು.

ಎಲ್ಲಾ ಪ್ರಾದೇಶಿಕ ಸಮನ್ವಯ ಸಮಿತಿಯ ಪದಾಧಿಕಾರಿಗಳು, ಸದ್ಯಸರು, ಕುಣಿತ ಭಜನೆ ಮತ್ತು ದಾಂಡಿಯಾ ರಾಸ್ ಸೇರಿದಂತೆ ಶಾರದ ಪೂಜೆಯ ಸಾಮೂಹಿಕ ಭಜನೆಯಲ್ಲಿ ಭಾಗವಹಿಸಿದರು. ಏಕನಾಥೇಶ್ವರಿ ಭಜನೆ ತಂಡದವರು ಭಕ್ತಿಗೀತೆಗಳನ್ನು ಪಠಿಸಿದರು ಹಾಗೂ ಶ್ರೀಮತಿ ಜಯಲಕ್ಷ್ಮಿ ದೇವಾಡಿಗ ಭಕ್ತಿಗೀತೆಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್ ದೇವಾಡಿಗ, ಸಂಘದ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜನಿ ಆರ್ ಮೊಯ್ಲಿ, ಶ್ರೀಮತಿ ಜಯಲಕ್ಷ್ಮಿ ದೇವಾಡಿಗ (ದೇವಾಡಿಗ ಸಮುದಾಯದ ಮೊದಲ ಮಹಿಳಾ ಯಕ್ಷಗಾನ ಭಾಗವತರು) ಮತ್ತು ಏಕನಾಥೇಶ್ವರಿ ಭಜನೆ ತಂಡವನ್ನು ಮಹಿಳಾ ವಿಭಾಗದ ಮಹಿಳಾ ಕಾರ್ಯಾಧ್ಯಕ್ಷೆ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.

ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ ಮೊಯ್ಲಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಬಿ.ದೇವಾಡಿಗ, ಜೊತೆ ಖಚಾಂಜಿ ಶ್ರೀಮತಿ ಸುರೇಖಾ ಹೆಚ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀ ಸಿ.ಎ. ಜಗದೀಶ್ ದೇವಾಡಿಗ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗ, ಸಾಂಸ್ಕೃತಿಕ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತಾ ಎಲ್ ದೇವಾಡಿಗ, ಶ್ರೀಮತಿ ಜಯಂತಿ ಆರ್ ಮೊಯಿಲಿ, ಸಂಘದ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ, ಮಾಜಿ ಖಚಾಂಜಿ ಶ್ರೀ ದಯಾನಂದ ದೇವಾಡಿಗ, ಎಲ್‌ಸಿಸಿ ಬೊರಿವಲಿಯ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಕುಸುಮಾ ದೇವಾಡಿಗ, ಸಿಟಿ ವಲಯದ ಮಹಿಳಾ ಕಾರ್ಯದ್ಯಕ್ಶೆ ಶ್ರೀಮತಿ ಮಮತಾ ದೇವಾಡಿಗ, ಎಲ್‌ಸಿಸಿ ಚೆಂಬೂರ್‌ನ ಮಾಜಿ ಕಾಯಾಧ್ಯಕ್ಷ ಶ್ರೀ ರಾಮಣ್ಣ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ನಿರ್ಮಲ ದೇವಾಡಿಗ, ಶ್ರೀಮತಿ ಸುಶೀಲಾ ದೇವಾಡಿಗ, ಮಾಜಿ ಆಕಾಶವಾಣಿ ವಕ್ತಾರರು, ಶ್ರೀ ಶಂಕರ ದೇವಾಡಿಗ, ಎಲ್‌ಸಿಸಿ ಥಾಣೆಯ ಅಧ್ಯಕ್ಷೆ ಉಷಾ ದೇವಾಡಿಗ, ಶಾರದ ಪೂಜೆಯಲ್ಲಿ ಭಾಗವಹಿಸಿದ್ದರು.

ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಎ ಶೇರಿಗಾರ್ ಧನ್ಯವಾದ ಹೇಳಿದರು ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು