Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ಶಾರದಪೂಜೆ - ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದವರಿಂದ..

ಶಾರದಪೂಜೆ - ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದವರಿಂದ..

ದೇವಾಡಿಗ ಸೆಂಟರ್, ದಾದರ್ ನಲ್ಲಿ ಅಕ್ಟೋಬರ್ 10, 2021ರಂದು ಸಂಜೆ ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದವರು ನವರಾತ್ರಿಯ "ಶಾರದಾಪೂಜೆ" ಯನ್ನು ವಿಜ್ರಂಭಣೆಯಿಂದ ನೆರವೇರಿಸಿದರು.

ಹಿರಿಯ ಮಹಿಳಾ ಸದಸ್ಯರಿಂದ ಕಳಶ ಪೂಜೆ ಆರಂಭವಾಗಿ "ಶ್ರೀ ಸರಸ್ವತಿ ದೇವಿ ಅಷ್ಟೋತ್ತರ ಶತನಾಮವಳಿ" , "ಶ್ರೀ ಅಷ್ಟ ಲಕ್ಷ್ಮೀ ಸ್ತೋತ್ರಂ" ಪಠಣೆ ಮಾಡಿದರು. ಹಾಗೂ ಸೇರಿದ ಎಲ್ಲಾ ಮಹಿಳಾ ಸದಸ್ಯರು ದೇವಿಯ ಭಜನೆಗಳನ್ನು ಹಾಡಿದರು ಹಾಗೂ ಮಂಗಳಾರತಿ ಮಾಡಿ ಪ್ರಸಾದ ವಿತರಣೆಯ ನಂತರ ಎಲ್ಲರೂ ಲಘು ಉಪಹಾರ ಮಾಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳು, ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ, ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೋಯ್ಲಿ, ಕೋಶಾಧಿಕಾರಿಗಳಾದ ಶ್ರೀ ಕೃಷ್ಣ ದೇವಾಡಿಗ ಮತ್ತು ಶ್ರೀಮತಿ ಸುರೇಖ ದೇವಾಡಿಗ, ಕ್ರೀಡಾ ವಿಭಾಗದ ಅಧ್ಯಕ್ಷರಾದ ಶ್ರೀ ರಘು ಮೋಯ್ಲಿ ಸದಸ್ಯರಾದ ಶ್ರೀ ರಮೇಶ್ ಮೋಯ್ಲಿ, ಮ್ಯಾನೇಜರ್ ಶಂಭು ದೇವಾಡಿಗ ಇವರೆಲ್ಲರೂ ಉಪಸ್ಥಿತರಿದ್ದರು.

ಶ್ರೀಮತಿ ರಂಜನಿ ಮೋಯ್ಲಿ, ಶ್ರೀಮತಿ ಪ್ರತಿಭಾ ದೇವಾಡಿಗ, ಶ್ರೀಮತಿ ವನಿತಾ ರವಿ ದೇವಾಡಿಗ, ಶ್ರೀಮತಿ ಜಯಂತಿ ಮೋಯ್ಲಿ, ಶ್ರೀಮತಿ ಜಯಂತಿ ದೇವಾಡಿಗ, ಶ್ರೀಮತಿ ಪೂರ್ಣಿಮಾ ದೇವಾಡಿಗ, ಶ್ರೀಮತಿ ಪ್ರಮೀಳಾ ಶೇರಿಗಾರ್, ಶ್ರೀಮತಿ ಶಶಿಕಲಾ ಮೋಯ್ಲಿ, ಸಿಟಿ ಪ್ರಾದೇಶಿಕ ಸಮಿತಿ, ಬೊರಿವಲಿ ಪ್ರಾದೇಶಿಕ ಸಮಿತಿ ಇವರೆಲ್ಲರು ಪೂಜೆಗೆ ವಿತ್ತೀಯ ದೇಣಿಗೆಯನ್ನು ಕೊಟ್ಟು ಸಹಕರಿಸಿದರೆ ಶ್ರೀ ನಿತೇಶ್ ದೇವಾಡಿಗ, ಶ್ರೀಮತಿ ಶಾಂತ ದೇವಾಡಿಗ, ಶ್ರೀಮತಿ ಪ್ರತಿಮಾ ಮೋಯ್ಲಿ, ಕುಮಾರಿ ವೈಷ್ಣವೀ ದೇವಾಡಿಗ, ಇವರು ಇನ್ನೀತರ ಕೆಲಸಗಳಿಗೆ ಸಹಕರಿಸಿದರು.

ಬೋರಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಕುಸುಮ ದೇವಾಡಿಗ, ಶ್ರೀಮತಿ ಲಕ್ಷ್ಮೀ ದೇವಾಡಿಗ, ಶ್ರೀಮತಿ ಇಂದುಮತಿ ಶ್ರೀಯಾನ್, ಶ್ರೀಮತಿ ಉಷಾ ದೇವಾಡಿಗ, ಮೀರಾರೋಡ್ ಪ್ರಾದೇಶಿಕ ಸಮಿತಿಯ ಶ್ರೀಮತಿ ವಿಜಯಲಕ್ಷ್ಮಿ ದೇವಾಡಿಗ, ಶ್ರೀಮತಿ ಶಕುಂತಳಾ ಶೇರಿಗಾರ್, ಸಿಟಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಲತಾ ಮೋಯ್ಲಿ, ಶ್ರೀಮತಿ ಸುಜಯಾ ದೇವಾಡಿಗ, ಶ್ರೀಮತಿ ಮಮತ ದೇವಾಡಿಗ, ಶ್ರೀಮತಿ ಗೀತಾ ದೇವಾಡಿಗ, ಶ್ರೀಮತಿ ಸರಸ್ವತಿ ಕಾರ್ಕಳ, ಚೆಂಬೂರು ಶ್ರೀಮತಿ ಹೇಮ ಶೇರಿಗಾರ್, ಶ್ರೀಮತಿ ಸೌಮ್ಯ ದೇವಾಡಿಗ ಇವರೆಲ್ಲರೂ ಉಪಸ್ಥಿತರಿದ್ದರು.

ಕೊನೆಗೆ ಎಲ್ಲರೂ ಕೂಡಿ ನವರಾತ್ರಿಯಲ್ಲಿ ಆಡುವ ವಿಶೇಷವಾದ "ಕೋಲಾಟ" ವನ್ನು ಆಡಿ ಆನಂದಿಸಿದರು.