ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗ- ವಿಜ್ರಂಬಣೆಯಿಂದ ಶಾರದಾ ಪೂಜೆ ಆಚರಣೆ.

ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗ- ವಿಜ್ರಂಬಣೆಯಿಂದ ಶಾರದಾ ಪೂಜೆ ಆಚರಣೆ.

ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗದವರಿಂದ ವರ್ಷಂಪ್ರತಿಯಂತೆ ಶಾರದಾ ಪೂಜೆಯು ಅಕ್ಟೋಬರ್ 6ರಂದು ದೇವಾಡಿಗ ಸೆಂಟರ್, ದಾದರ್ ನಲ್ಲಿ ವಿಜ್ರಂಬಣೆಯಿಂದ ನೆರವೇರಿತು. ಸಂಘದ ಎಲ್ಲಾ ವಲಯದ ಸಮನ್ವಯ ಸಮಿತಿಯವರಿಂದ ಭಜನಾ ಕಾರ್ಯಕ್ರಮವು ನೆರವೇರಿತು. ಮಹಿಳಾ ವಿಭಾಗದ ಮಾಜಿ ಕಾರ್ಯಾದ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್ ರವರು ಪೂಜಾ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಶ್ರೀ ಕೆ. ಕೆ. ಮೋಹನ್ದಾಸ್ ಹಾಗೂ ಉಪಾದ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ, ಶ್ರೀ ನರೇಶ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ, ಕೋಶದೀಕಾರಿ ಶ್ರೀ ಕೃಷ್ಣ ದೇವಾಡಿಗ ಮಾಜಿ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಆರ್ ಮೊಯಿಲಿ, ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿ, ಉಪಾಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಯಮ್. ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್, ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ದೇವಾಡಿಗ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ರಘು ಮೊಯಿಲಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಹರೀಶ್ ದೇವಾಡಿಗ, ನಿತೇಶ್ ದೇವಾಡಿಗ, ಶ್ರೀಮತಿ ಪ್ರೇಮ ಮೋಹನ್ದಾಸ್, ಶ್ರೀಮತಿ ವನಿತಾ ರವಿ ದೇವಾಡಿಗ, ಸರ್ವ ಸದ್ಯಸರು, ಉಪ ವಿಭಾಗ ಹಾಗೂ ಸರ್ವ ಸಮನ್ವಯ ಸಮಿತಿಯ ಮಹಿಳಾ ಸದ್ಯಸರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗೈದರು.