Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಶ್ರೀ ರಾಮ ಭಜನಾ ಮಂಡಳಿಯಿಂದ ಸಂಭ್ರಮದ ರಾಮನವಮಿ ಆಚರಣೆ

ದೇವಾಡಿಗ ಸಂಘ ಮುಂಬಯಿ: ಶ್ರೀ ರಾಮ ಭಜನಾ ಮಂಡಳಿಯಿಂದ ಸಂಭ್ರಮದ ರಾಮನವಮಿ ಆಚರಣೆ

   ನವಿ ಮುಂಬಯಿ, ಮಾರ್ಚ್ 30: ದೇವಾಡಿಗ ಸಂಘ ಮುಂಬಯಿ ಸಂಚಾಲನದ ಶ್ರೀ ರಾಮ ಭಜನಾ ಮಂಡಳಿಯು ತನ್ನ ಹನ್ನೊಂದನೇ ರಾಮನವಮಿ ಉತ್ಸವವನ್ನು ಇಲ್ಲಿಯ ನೆರೂಲ್ ಪಶ್ಚಿಮದ ದೇವಾಡಿಗ ಭವನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ ೭.೩೦ಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ವಾಚನದೊಂದಿಗೆ ಆರಂಭಗೊಂಡ ಕಾರ್ಯಕ್ಕ್ರಮವು ರಾತ್ರಿ ೯.೦೦ ಗಂಟೆಯ ತನಕ ಸಂಘದ ವಿವಿಧ 10 ಪ್ರಾದೇಶಿಕ ಸಮಿತಿಗಳು ಮತ್ತು ಆಮಂತ್ರಿತ ತಂಡಗಳ ಸರದಿಯಂತೆ ಭಜನಾ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ಸುಮಾರು ೧೮ ತಂಡಗಳು ತಮ್ಮ ತಮ್ಮ ಭಜನಾ ಕಾರ್ಯಕ್ರಮವನ್ನು ನಡೆಸಿದರೆ, ಭಕ್ತಾದಿಗಳು ಕುಣಿತ ಭಜನೆ ಮಾಡಿದರು.

ಸಾಮೂಹಿಕ ವಿಷ್ಣು ಸಹಸ್ರನಾಮ ವಾಚನವನ್ನು ಇಲ್ಲಿಯ ಪ್ರಸಿದ್ಧ ಗೋಪಾಲ್ ಭಟ್ ಇವರು ನಡೆಸಿಕೊಟ್ಟರು. ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರು ಮತ್ತು ಉದ್ಯಮಿ ಶ್ರೀ ರಾಜಾರಾಮ್ ಆಚಾರ್ಯ ದಂಪತಿಗಳು ವಿಷ್ಣು ಸಹಸ್ರನಾಮ ವಾಚನದಲ್ಲಿ ಪಾಲ್ಗೊಂಡರು. ರಾಮ ಮಂದಿರದ ಅರ್ಚಕರಾದ ಶ್ರೀ ಶ್ರೀನಿವಾಸ್ ಪಿ. ಕರ್ಮರನ್ ಇವರು ಪೂಜಾ ವಿಧಿಗಳನ್ನು ನೆರವೇರಿಸಿದರು. ಕಾರ್ಯಕ್ರಮದ ರೂವಾರಿ ನ್ಯಾಯವಾದಿ ಪ್ರಭಾಕರ್ ದೇವಾಡಿಗ ದಂಪತಿಗಳು ಮತ್ತು ಸಂಘದ ಸದಸ್ಯರು ಪಾಲ್ಗೊಂಡರು.

ಸಮಯ ೮.೦೦ ಗಂಟೆಗೆ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಹೆಚ್. ಮೋಹನದಾಸ್ ಇವರ ಉಪಸ್ಥಿತಿಯಲ್ಲಿ ಸಂಕಲ್ಪ ಪ್ರಾರ್ಥನೆಯೊಂದಿಗೆ ಮಂಗಳಾರತಿ ನಡೆಸಿ ಅಧ್ಯಕ್ಷರು ನಂದಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯಿಂದ ಪ್ರಾರಂಭದ ಭಜನಾ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ದೇವಾಡಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾ ಸಂಘವು ಆಯೋಜಿಸಿದ ರಾಮ ನವಮಿ ಮಹೋತ್ಸವದ ಕಾರ್ಯಕ್ರಮವನ್ನು ಹೊಗಳಿ ಕೊಂಡಾಡಿದರು. ಇಂತಹ ಕಾರ್ಯಕ್ರದಿಂದ ಸಂಘದಲ್ಲಿ, ಬಾಂಧವರಲ್ಲಿ ಅಲ್ಲದೆ ಸಂಸ್ಥೆಗಳಲ್ಲಿ ಐಕ್ಯತೆ, ಸಾಮರಸ್ಯ ಮತ್ತು ಸೌಹಾರ್ದ ನಿರ್ಮಾಣವಾಗಿ ಅದು ಸಂಘದ ಬೆಳವಣಿಗೆಯಲ್ಲಿ ಮಹತ್ವದ ಪಾಲು ವಹಿಸುತ್ತದೆ ಎಂದರು. ಮುಂದಿನ ವರ್ಷಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳು ಮತ್ತೂ ವಿಜೃಂಭಣೆಯಿಂದ ಆಚರಿಸೋಣ; ಎಂದು ಹೇಳುತ್ತಾ ಸಂಘದ ಸಂಪೂರ್ಣ ಸಹಕಾರವಿದೆ ಎಂದರು.

ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನದಾಸ್ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಘದ ಎಲ್ಲಾ ಪ್ರಾದೇಶಿಕ ಸಮಿತಿಗಳ ಉತ್ಸಾಹವನ್ನು ಕೊಂಡಾಡಿದರು. ;ನಾವು ಯಾವುದರಲ್ಲಿಯೂ ಹಿಂದಿಲ್ಲ. ನಾವು ಸಂಘಗಳ ಭಜನಾ ಸ್ಪರ್ಧೆಯನ್ನು ಆಯೋಜಿಸಬೇಕು. ಧಾರ್ಮಿಕ ಪರಂಪರೆಯನ್ನು ಮುಂದುವರಿಸುವಲ್ಲಿ ನಮ್ಮ ಸಂಘದಲ್ಲಿಯೇ ಸ್ಪರ್ಧೆ ನಡೆಯಬೇಕು. ರಾಮ ಭಜನಾ ಮಂಡಳಿಯ ಸ್ಥಾಪನೆಯ ಉದ್ದೇಶವೇ ನಮ್ಮಲ್ಲಿ ಐಕ್ಯತೆ ಮತ್ತು ಸೌಹಾರ್ದತೆ ಬೆಳೆಸುವುದು. ಅದು ನಿಜವಾಗಿಯೂ ಇಂದು ಕಾಣಲು ಸಿಕ್ಕಿದೆ; ಎಂದು ಹೇಳುತ್ತಾ ಸಂಘದ ಎಲ್ಲಾ ಸದಸ್ಯರಿಗೆ ಶುಭ ಕೋರಿದರು. ಸಂಘದ ಉಪಾಧ್ಯಕ್ಷ ಶ್ರೀ ನರೇಶ್ ದೇವಾಡಿಗರು ರಾಮನವಮಿ ಮಹೋತ್ಸವವನ್ನು ಬಹಳ ಅಚ್ಚುಕಟ್ಟಾಗಿ, ಶಿಸ್ತು ಬದ್ಧವಾಗಿ ಮತ್ತು ಪಾರಂಪರಿಕ ಆಚರಣೆಯೊಂದಿಗೆ ನಡೆದಿದೆ. ಕಾರ್ಯಕ್ರಮದ್ ಆಯೋಜನೆ ಅದ್ಭುತ. ಇದರಲ್ಲಿ ಸಂಘದ ಪ್ರತೀ ಪ್ರಾದೇಶಿಕ ಸಮಿತಿಗಳ ಮತ್ತು ಇತರ ಸಂಸ್ಥೆಗಳ ಸಹಕಾರ ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಕಾಣಸಿಗುವುದು ಬಹಳ ಸಂತೋಷದ ವಿಷಯ ಎಂದು ಹೇಳಿದರು. ಕಾರ್ಯಕ್ರಮದ ವ್ಯವಸ್ಥಾಪನೆಯನ್ನು ಪರೀಕ್ಷಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ದೇವಾಡಿಗ ಇವರು ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಕೋರಿದರು. ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಮಾಜಿ ಕಾರ್ಯಾಧ್ಯಕ್ಶರು ಶ್ರೀಮತಿ ರಂಜನಿ ಮೊಯ್ಲಿ, ಜಯಂತಿ ಆರ್. ಮೊಯ್ಲಿ, ಜೊತೆ ಕೋಶಾಧಿಕಾರಿಗಳು ಶ್ರೀಮತಿ ಸುರೇಖಾ ಹೆಚ್. ದೇವಾಡಿಗ ಮತ್ತು ಶ್ರೀ ಸುರೇಶ ದೇವಾಡಿಗ ಮತ್ತು ವ್ಯವಸ್ಥಾಪಕ ಮಂಡಳಿಯ ಉಪಸ್ಥಿತರಿದ್ದರು. ಬಳಿಕ ಸಂಘದ ಪ್ರಾದೇಶಿಕ ಸಮಿತಿಗಳಾದ ಸಿಟಿ ವಲಯ, ಚೆಂಬೂರು ವಲಯ, ಅಸಲ್ಫ ವಲಯ, ಬೋರಿವಲಿ ವಲಯ, ಜೋಗೇಶ್ವರಿ ವಲಯ, ಡೊಂಬಿವಲಿ ವಲಯ, ಮೀರಾ ರೋಡ್ ವಲಯ, ಮತ್ತು ಥಾಣೆ ವಲಯದ ತಂಡಗಳಿಂದ ಕ್ರಮವಾಗಿ ಭಜನಾ ಕಾರ್ಯಕ್ರಮಗಳು ಜರಗಿದವು. ಅಲ್ಲದೆ ಈ ಕಾರ್ಯಕ್ರಮಕ್ಕೆ ಮುಂಬಯಿ ಮತ್ತು ನವಿ ಮುಂಬಯಿಯ ಅನೇಕ ಪ್ರಸಿದ್ಧ ಭಜನಾತಂಡಗಳನ್ನು ಆಮಂತ್ರಿಸಲಾಗಿತ್ತು. ಇದರಲ್ಲಿ ಶ್ರೀ ಜೈ ಅಂಬೇ ಚಾರಿಟೇಬಲ್ ಟ್ರಸ್ಟ್ ಸಾನ್ ಪಾಡ, ಎಸ್. ಎಂ. ಶೆಟ್ಟಿ ವಿದ್ಯಾರ್ಥಿ ಬಳಗ, ಶ್ರೀ ಶನೀಶ್ವರ ಭಜನಾ ಮಂಡಳಿ ದಿಘಾ, ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ, ಗೋಕುಲ ಭಜನಾ ಮಂಡಳಿ ಸಾಯನ್, ಶ್ರೀ ಗಣಪತಿ-ಅಯ್ಯಪ್ಪ-ದುರ್ಗಾದೇವಿ ಭಜನಾ ಮಂಡಳಿ ನೆರೂಲ್ ಪೂರ್ವ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನವಿ ಮುಂಬಯಿ ಈ ತಂಡಗಳು ತಮ್ಮ ಅತ್ಯುತ್ತಮ ಭಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದವು. ಶ್ರೀ ಉದ್ಭವ ದುರ್ಗಾಪರೆಮೇಶ್ವರಿ ಭಜನಾ ಮಂಡಳಿ ಚೆಂಬೂರು ಇವರು ಆಕರ್ಷಕ ಕುಣಿತ ಭಜನೆ ಪ್ರದರ್ಶಿಸಿದರು.

ಭಾಗವಹಿಸಿದ ಎಲ್ಲಾ ತಂಡಗಳನ್ನು ಆಯೋಜಕ ತಂಡವು ಮಂಗಳಾರತಿಯಿಂದಿಗೆ ಸ್ವಾಗತಿಸಿ ವಿಶೇಷವಾಗಿ ಅಲಂಕರಿಸಿದ್ದ ಶ್ರೀ ರಾಮ ದೇವರ ಸಾನಿಧ್ಯಕ್ಕೆ ಕರೆತಂದು ದೇವರ ದರ್ಶನ ಮಾಡಿಸಿ ಭಜನೆಗೆ ಅನುವು ಮಾಡುತ್ತಾ ಭಜನೆ ಮುಗಿತ ನಂತರ ಪ್ರತ್ಯೇಕ ತಂಡದವರನ್ನು ಪುನಃ ದೇವರ ಸಾನಿಧ್ಯದಲ್ಲಿ ಆರತಿ, ಪ್ರಾರ್ಥನೆ ಫಲ ಪುಷ್ಪದ ಹರಿವಾಣ ನೀಡಿ ಮತ್ತು ಪ್ರಸಾದ ವಿತರಿಸುವ ಮೂಲಕ ಕೃತಜ್ಞತೆ ಮಂಡಿಸಿ ಉಪಾಹಾರಾದಿಗಳನ್ನು ನೀಡಿ ಬೀಳ್ಕೊಡಲಾಯಿತು.

ಕೊನೆಯಲ್ಲಿ ಮುಂಬಯಿಯ ಯುವ ಸ್ಯಾಕ್ಸೋಫೋನ್ ಕಲಾವಿದರಾದ ಶ್ರೀ ಕಿರಣ್ ಮೊಯ್ಲಿ ಇವರ ಸ್ಯಾಕ್ಸೋಫೋನ್ ವಾದನದೊಂದಿಗೆ ಸಂಘದ ಎಲ್ಲಾ ಪ್ರಾದೇಶಿಕ ಸಮಿತಿಯ ಸದಸ್ಯರು ಸಾಮೂಹಿಕ ಕುಣಿತ ಭಜನೆ ಮಾಡುತ್ತಾ ಮಹಾಮಂಗಳಾರತಿಯೊಂದಿಗೆ ಮತ್ತು ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಈ ಕಾರ್ಯಕ್ರಮಕ್ಕೆ ಶ್ರೀ ರಾಮ ಭಜನಾ ಮಂಡಳಿಯ ಭಜನಾ ಮಂದಿರವನ್ನು ಭಜಕರು ಮತ್ತು ಭಜನಾ ಗುರು ಶ್ರೀ ಸುರೇಶ ದೇವಾಡಿಗರ ನೇತೃತ್ವದಲ್ಲಿ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವರ ಮಂಟಪದ ಅಲಂಕಾರವನ್ನು ಅರ್ಚಕ ಶ್ರೀ ಶ್ರೀನಿವಾಸ್ ಕರ್ಮರನ್ ಇವರು ನೆರವೇರಿಸಿದರು. ದೇವಾಡಿಗ ಅಕ್ಷಯ ಕಿರಣ ಫೌಂಡೇಶನ್ ಸಂಸ್ಥೆಯು ಹೂವಿನ ಸಂಪೂರ್ಣ ಖರ್ಚನ್ನು ವಹಿಸಿಕೊಂಡಿತ್ತು. ಮಹಿಳಾ ಮಂಡಳಿಯ ಸದಸ್ಯರಾದ ಶ್ರೀಮತಿ ಶಾಂತಾ ಪಿ. ದೇವಾಡಿಗ, ಶ್ರೀಮತಿ ಲತಾ ಎ. ಶೇರಿಗಾರ್, ಶ್ರೀಮತಿ ಸುನಂದಾ ಕರ್ಮರನ್, ಶ್ರೀಮತಿ ಆಶಾ ಆರ್. ದೇವಾಡಿಗ, ಶ್ರೀಮತಿ ಅಂಬಿಕಾ ಜೆ. ದೇವಾಡಿಗ, ಶ್ರೀಮತಿ ಸುನಿತಾ ದೇವಾಡಿಗ, ಶ್ರೀಮತಿ ಧನವತಿ ಪುತ್ತೂರು, ಶ್ರೀಮತಿ ಹೇಮಲತಾ ದೇವಾಡಿಗ, ಶ್ರೀಮತಿ ಶಾಂತಾ ದೇವಾಡಿಗ, ಶ್ರೀಮತಿ ಗೀತಾ ಹೆಚ್. ದೇವಾಡಿಗ, ಶ್ರಮತಿ ಆಶಾ ದೇವಾಡಿಗ, ಶ್ರೀಯಂತಿ ಸುಂದರಿ ಮೊಯಿಲಿ, ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ ಮೊದಲಾದವರು ರಾಮನವಮಿ ಉತ್ಸವದ ಆಚರಣೆಯ ಸಂಪೂರ್ಣ ತಯಾರಿಯ ಕೆಲಸಗಳನ್ನು ವಹಿಸಿಕೊಂಡರು.

ಈ ಕಾರ್ಯಕ್ರಮದ ಯಶಸ್ಸಿಗೆ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷರಾದ ಶ್ರೀ ಆನಂದ್ ಶೇರಿಗಾರ್, ಶ್ರೀ ಪಿ. ವಿಠಲ್ ಮೊಯ್ಲಿ, ಸಮಿತಿ ಸದಸ್ಯರಾದ ಶ್ರೀ ಸುರೇಶ ಬಾರಕೂರು, ಶ್ರೀ ಚಂದ್ರಶೇಖರ ದೇವಾಡಿಗ, ಶ್ರೀ ಶಂಕರ್ ದೇವಾಡಿಗ, ಶ್ರೀ ಗಣೇಶ್ ಶೇರಿಗಾರ್, ಶ್ರೀ ದಯಾನಂದ್ ದೇವಾಡಿಗ, ಶ್ರೀ ಹರೀಶ್ ದೇವಾಡಿಗ, ಶ್ರೀ ವಸಂತ್ ದೇವಾಡಿಗ, ಶ್ರೀ ಕರಣ್ ದೇವಾಡಿಗ, ಹಿರಿಯರಾದ ಶ್ರೀ ವಿಠಲ್ ದೇವಾಡಿಗ ಐರೋಲಿ, ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಸ್ವಪ್ನಾ ಮೊಯ್ಲಿ, ಕಾರ್ಯದರ್ಶಿ ಶ್ರೀಮತಿ ಭಾಗ್ಯ ಆರ್. ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ವನಿತಾ ಆರ್. ದೇವಾಡಿಗ, ಶ್ರೀಮತಿ ಅಶ್ವಿನಿ ದೇವಾಡಿಗ, ಶ್ರೀಮತಿ ಅಮಿತಾ ಆರ್. ದೇವಾಡಿಗ, ಕುಮಾರಿ ತನ್ವಿ ಡಿ. ದೇವಾಡಿಗ, ಶ್ರೀಮತಿ ಕಲಾ ಶೇರಿಗಾರ್, ಶ್ರೀಮತಿ ಶುಭ ದೇವಾಡಿಗ, ಭವನದ ವ್ಯವಸ್ಥಾಪಕರಾದ ಶ್ರೀ ಜಾರಪ್ಪ ಮೊಯಿಲಿ ಮೊದಲಾದವರು ಸಹಕರಿಸಿದರು.