Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ : ಭವ್ಯ ಕುಣಿತ ಭಜನೆಯೊಂದಿಗೆ ರಾಮನವಮಿ ಮಹೋತ್ಸವ

ದೇವಾಡಿಗ ಸಂಘ : ಭವ್ಯ ಕುಣಿತ ಭಜನೆಯೊಂದಿಗೆ ರಾಮನವಮಿ ಮಹೋತ್ಸವ

ರಾಮನವಮಿಯ ಅಂಗವಾಗಿ ಭವನದಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ರಾಮ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಭವನದ ವರಾಂಡಲ್ಲಿ ಅಲಂಕೃತವಾದ ಹೂವಿನ ರಂಗೋಲಿಯ ಮಧ್ಯದಲ್ಲಿ ಪವಿತ್ರ ನಂದಾದೀಪವನ್ನು ಬೆಳಗಿಸಲಾಗಿತ್ತು. ಮುಂಜಾನೆ ಎಂಟು ಗಂಟೆಯ ಸಮಯಕ್ಕೆ ಶ್ರೀ ರಾಮ ದೇವರ ಪೂಜೆ ನಡೆಸಿ ಬಳಿಕ ಶಂಖ, ಘಂಟೆ, ಚಂಡೆ ತಾಳ ಇತ್ಯಾದಿ ಧ್ವನಿಗಳ ಮತ್ತು ಭಜನೆಯ ನಾದದೊಂದಿಗೆ ಮಂಡಳಿಯ ಮುಖ್ಯಸ್ಥರಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ, ಅರ್ಚಕರಾಗಿದ್ದ ಶ್ರೀ ಭೋಜ ದೇವಾಡಿಗ, ಹಿರಿಯ ಭಜಕರಾದ ಶ್ರೀ ಶಂಕರ ದೇವಾಡಿಗ, ಶ್ರೀ ಚಂದ್ರಶೇಖರ್ ದೇವಾಡಿಗ ಮೊದಲಾದವರು ಸೇರಿ ನಂದಾದೀಪವನ್ನು ಬೆಳಗಿಸಿದರು. ತದನಂತರ ಪ್ರಾರಂಭಗೊಂಡ ಭಜನೆಯು ವಿವಿಧ ಭಜನಾ ತಂಡಗಳು, ಸ್ತ್ರೀಯರು, ಪುರುಷರು, ಮಕ್ಕಳು ಸೇರಿ ರಾತ್ರಿ 9 ಗಂಟೆಯ ತನಕ ಭಜನೆಯನ್ನು ಮುಂದುವರಿಸುತ್ತಾ ರಾತ್ರಿ ಸುಮಾರು 9.30ಕ್ಕೆ ಅಸಲ್ಫಾದ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸಾಕಿನಾಕ ಇದರ ಮುಖ್ಯಸ್ಥರಾದ ಶ್ರೀಮತಿ ರಂಜನಿ ಶೆಟ್ಟಿ ಇವರ ಮಾರ್ಗದರ್ಶನಲ್ಲಿ ನಂದಾದೀಪನ್ನು ವಿಸರ್ಜಿಸಿ, ರಾಮ ದೇವರಿಗೆ ಮಹಾ ಆರತಿ, ಮಂಗಳದೊಂದಿಗೆ ರಾಮನವಮಿ ಮಹೋತ್ಸವಕ್ಕೆ ಮಂಗಳ ಹಾಡಲಾಯಿತು. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು.

ಈ ಸಂದರ್ಭದಲ್ಲಿ, ಕಾರ್ಯಕ್ರಮದ ಆಚರಣೆ, ವ್ಯವಸ್ಥೆಗಳು, ಸಂಪ್ರದಾಯ ಮತ್ತು ಭಕ್ತಿಗಳ ಅವಲೋಕನಗಳ ಬಗ್ಗೆ ಪ್ರಭಾವಿತರಾದ ಸಂಘದ ಮಾಜಿ ಅಧ್ಯಕ್ಷ ಶ್ರೀ ಎಚ್. ಮೋಹನ್ದಾಸ್ ಅವರು ಪ್ರಮುಖ ಆಯೋಜಕರಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಮತ್ತು ಅವರಿಗೆ ಸಹಕರಿಸಿದ ಸಂಘದ ಎಲ್ಲಾ 10 ಸ್ಥಳೀಯ ಸಮಿತಿಗಳನ್ನು ಹಾಗೂ ಭಜನಾ ಮಂಡಳಿಗಳನ್ನು ಶ್ಲಾಘಿಸಿದರು. “ಶ್ರೀರಾಮ ಭಜನಾ ಮಂಡಳಿಯ ಸಂಯೋಜಕ ಹಾಗೂ ಸಂಘದ ನವಿ ಮುಂಬಯಿ ಘಟಕದ ಅಧ್ಯಕ್ಷ ಪ್ರಭಾಕರ್ ದೇವಾಡಿಗ ಇವರ ನೇತೃತ್ವದಲ್ಲಿ ನಡೆದ 10 ನೇ ರಾಮನವಮಿ ಮಹೋತ್ಸವ ಆಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲಾ ಸ್ಥಳೀಯ ಸಮನ್ವಯ ಸಮಿತಿಗಳಿಗೆ ಅಭಿನಂದನೆಗಳು, ಆಚರಣೆಯು ಅದ್ಧೂರಿಯಾಗಿ ಯಶಸ್ವಿಯಾಗಿದೆ " ಎಂದು ಶ್ರೀ ಮೋಹನ್‌ದಾಸ್ ಪ್ರತಿಕ್ರಿಯಿಸಿದರು. “ಅಖಿಲ ಭಾರತ ತುಳು ಒಕ್ಕೂಟ”ದ ಅಧ್ಯಕ್ಷರಾದ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ದೇವಾಡಿಗ ಇವರು ಉಪಸ್ಥಿತರಿದ್ದು, ಸಂತೋಷ ವ್ಯಕ್ತಪಡಿಸಿ ಸಂಘಟಕರನ್ನು ಅಭಿನಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ದೇವಾಡಿಗ ಅವರು ಇಂತಹ ಆಚರಣೆಗಳಿಗೆ ಸಂಘದ ಸಂಪೂರ್ಣ ಸಹಕಾರ ಇರುವುದಾಗಿ ಘೋಷಿಸಿದರು. ಶ್ರೀರಾಮನು “ಮರ್ಯಾದಾ ಪುರುಷೋತ್ತಮ” ಮತ್ತು ಅವರ ಬೋಧನೆಗಳು “ರಾಮರಾಜ್ಯ”ಕ್ಕೆ ಕಾರಣವಾಗುತ್ತವೆ, ಇದರಲ್ಲಿ ಪ್ರತಿಯೊಬ್ಬ ನಾಗರಿಕನು ಏಳಿಗೆ ಹೊಂದುತ್ತಾನೆ. ಅವರ ವಿಚಾರಧಾರೆ ಅನುಸರಿಸಬೇಕು. ರಾಮನವಮಿ ಆಚರಣೆಯು ಶ್ರೀ ರಾಮನ ಸಂದೇಶವನ್ನು ಜನಸಾಮಾನ್ಯರಲ್ಲಿ ಹರಡುವ ಪ್ರಯತ್ನವಾಗಿದೆ ಎಂದು ಪ್ರಭಾಕರ್ಪ್ರಭಾಕರ ದೇವಾಡಿಗರು ಈ ಸಂದರ್ಭದಲ್ಲಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.

ಸಂಘದ 10 ಸ್ಥಳೀಯ ಸಮನ್ವಯ ಸಮಿತಿಗಳ ಹತ್ತು ಭಜನಾ ತಂಡಗಳ ಅಧ್ಯಕ್ಷರಾದ ಶ್ರೀ ಅಶೋಕ್ ದೇವಾಡಿಗ (ಡೊಂಬಿವಲಿ), ಶ್ರೀ ಭಾಲಚಂದ್ರ ದೇವಾಡಿಗ (ಸಿಟಿ), ಶ್ರೀ ಯೋಗೇಶ್ ಎಸ್ ದೇವಾಡಿಗ (ಅಸಲ್ಫಾ), ಶ್ರೀ ಭಾಸ್ಕರ್ ದೇವಾಡಿಗ (ಬೋರಿವಲಿ), ಶ್ರೀ ಎಂ.ಸಿ. ಹೆಮ್ಮಾಡಿ (ಮೀರಾ ರೋಡ್), ಶ್ರೀ ಯೋಗೇಶ್ ಶ್ರೀಯಾನ್ (ಜೋಗೇಶ್ವರಿ), ಶ್ರೀ ವಿಶ್ವನಾಥ ಪಿ ದೇವಾಡಿಗ (ಭಾಂಡೂಪ್), ಶ್ರೀ ಪ್ರವೀಣ್ ಸಾಲಿಯಾನ್ (ಥಾಣೆ), ಶ್ರೀ ಯಶವಂತ ದೇವಾಡಿಗ (ಚೆಂಬೂರು) ಇವರು ಉತ್ತಮ ಭಜನೆಯನ್ನು ಪ್ರಸ್ತುತಪಡಿಸಿದರು. ಅತಿಥಿ ತಂಡಗಳಾದ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸಾಕಿನಾಕ, ಶ್ರೀ ಅಯ್ಯಪ್ಪ ಸೇವಾ ಭಜನಾ ಮಂಡಳಿ ಐರೋಲಿ, ಶ್ರೀ ಜೈ ಅಂಬೆ ಚಾರಿಟೇಬಲ್ ಟ್ರಸ್ಟ್ ಸಾನ್ ಪಾಡಾ, ಬಿ.ಎಸ್.ಕೆ.ಬಿ. -ಗೋಕುಲ ಭಜನಾ ಮಂಡಳಿ ಸಾಯನ್, ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್, ಶ್ರೀ ಗಣೇಶ-ಅಯ್ಯಪ್ಪ-ದುರ್ಗಾ ಕ್ಷೇತ್ರ ನೆರೂಳ್, ಗುರುವಂದನಾ ಭಜನಾ ಮಂಡಳಿ, ಕುಲಾಲ ಸಂಘ ಇವರು ತಮ್ಮ ಪಾರಂಪರಿಕ ಭಜನೆಗಳನ್ನು ಪ್ರಸ್ತುತಪಡಿಸಿದರು ಮತ್ತು ಕುಣಿತ ಭಜನೆಯನ್ನು ಪ್ರದರ್ಶಿಸಿದರು, ಇದರಿಂದಾಗಿ ಕಾರ್ಯಕ್ರಮವು ಅತ್ಯಂತ ಅದ್ಧೂರಿ ಮತ್ತು ಯಶಸ್ವಿಯಾಯಿತು. ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಈ ಸಮಾರಂಭದಲ್ಲಿ ಭ್ರಾಮರೀ ಯಕ್ಷ ನೃತ್ಯ ಕಲಾ ನಿಲಯ ಚಾರಿಟೇಬಲ್ ಟ್ರಸ್ಟ್ ಇದರ ನೆರೂಲ್ ಒಂದರ ವಿಭಾಗ ಪ್ರಮುಖೆ ಶ್ರೀಮತಿ ಪೂರ್ಣಿಮಾ ದೇವಾಡಿಗ ಮತ್ತು ನೆರೂಲ್ ಎರಡನೇ ವಿಭಾಗ ಪ್ರಮುಖೆ ಶ್ರೀಮತಿ ತಾರಾ ಶೆಟ್ಟಿ ಇವರು ಮತ್ತು ಇವರ ನೇತೃತ್ವದ ಕಲಾವಿದ ಮಕ್ಕಳು ಕುಣಿತ ಭಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕೆ ಆಯೋಜಕರು ಸಂತೋಷ ವ್ಯಕ್ತ ಪಡಿಸಿದರು.

ಸಂಘದ ಜೊತೆಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ. ಮೊಯ್ಲಿ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ರಂಜಿನಿ ದೇವಾಡಿಗ ಸೇರಿದಂತೆ ವ್ಯವಸ್ಥಾಪನಾ ಸಮಿತಿ, ಸ್ಥಳೀಯ ಸಮನ್ವಯ ಸಮಿತಿ, ಉಪಸಮಿತಿ ಹಾಗೂ ಯುವ ಘಟಕದ ಸದಸ್ಯರು ಸಂಭ್ರಮಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಶ್ರೀಮತಿ ಲತಾ ಮತ್ತು ಶ್ರೀ ಆನಂದ್ ಸೇರಿಗಾರ್ ಖಾರ್ಘರ್, ಶ್ರೀಮತಿ ಸರಸ್ವತಿ ಮತ್ತು ಶ್ರೀ ಭೋಜ ದೇವಾಡಿಗ ವಾಶಿ, ಶ್ರೀಮತಿ ಪೂರ್ಣಿಮಾ ಮತ್ತು ಶ್ರೀ ದಯಾನಂದ ದೇವಾಡಿಗ ನೆರೂಲ್, ಶ್ರೀಮತಿ ಶುಭಾವತಿ ಮತ್ತು ಶ್ರೀ ಚಂದ್ರಶೇಖರ ದೇವಾಡಿಗ ಉಳ್ವೆ, ಶ್ರೀ. ವಿಠಲ್ ದೇವಾಡಿಗ ಐರೋಲಿ, ಶ್ರೀ ಸುರೇಶ್ ದೇವಾಡಿಗ ಬಾರ್ಕೂರು, ಶ್ರೀ ಸುರೇಶ್ ದೇವಾಡಿಗ ಹಳೆಅಂಗಡಿ, ಶ್ರೀ ಶಂಕರ್ ದೇವಾಡಿಗ ಐರೋಲಿ, ಶ್ರೀಮತಿ ಶಾಂತಾ ಪಿ. ದೇವಾಡಿಗ, ಶ್ರೀಮತಿ ಸುಂದರಿ ದೇವಾಡಿಗ, ಶ್ರೀಮತಿ ಗೀತಾ ಮತ್ತು ಶ್ರೀ ಹರೀಶ್ ದೇವಾಡಿಗ, ಶ್ರೀಮತಿ ಕಲಾ ಜಿ ಸೇರಿಗಾರ್, ಶ್ರೀಮತಿ ಅಂಬಿಕಾ ಮತ್ತು ಶ್ರೀ ಜನಾರ್ಧನ ದೇವಾಡಿಗ, ಶ್ರೀಮತಿ ಆಶಾ ದೇವಾಡಿಗ ಸಾನ್ ಪಾಡಾ, ಶ್ರೀಮತಿ ಶಾಂತಾ ದೇವಾಡಿಗ ನೆರೂಲ್, ಕುಮಾರಿ ತನ್ವಿ ಡಿ. ದೇವಾಡಿಗ, ಶ್ರೀಮತಿ ಕ್ಷಿತಿ ಜೆ. ದೇವಾಡಿಗ, ಕುಮಾರಿ ಶ್ವೇತ ದೇವಾಡಿಗ , ಶ್ರೀಮತಿ ಮತ್ತು ಶ್ರೀ ರಮೇಶ್ ಐರೋಲಿ, ಶ್ರೀಮತಿ ರವಿಲಕಲಾ ದೇವಾಡಿಗ, ಶ್ರೀಮತಿ ವನಿತಾ ಆರ್.ದೇವಾಡಿಗ, ಶ್ರೀಮತಿ ಆಶಾ. ದೇವಾಡಿಗ ನೆರೂಲ್, ಶ್ರೀಮತಿ ಅಶ್ವಿನಿ ಮತ್ತು ಶ್ರೀ ಕರಣ್ ದೇವಾಡಿಗ ಐರೋಲಿ, ಶ್ರೀಮತಿ ಶಾಂಭವಿ ದೇವಾಡಿಗ ವಾಶಿ, ಶ್ರೀಮತಿ ಪ್ರಿಯಾ ದೇವಾಡಿಗ ಖರ್ಗಹಾರ್ ಖಾರ್ಘರ್, ಶ್ರೀ ಸಚಿನ್ ದೇವಾಡಿಗ ಐರೋಲಿ, ಶ್ರೀ ಜಾರಪ್ಪ ಮೊಯಿಲಿ ಸೇರಿದಂತೆ ಅನೇಕ ಸದಸ್ಯರು ಈ ರಾಮನವಮಿ ಮಹೋತ್ಸವದ ಯಶಸ್ವಿಗೆ ದುಡಿದರು.

ಸಂಘದ ಅಧ್ಯಕ್ಷರಾದ ಶ್ರೀ ರವಿ ದೇವಾಡಿಗರು ಉಪಸ್ಥಿತರಿರಲಿಲ್ಲ. ಆದರೇ ಸಾಮಾಜಿಕ ಜಾಲತಣಗಳಲ್ಲಿ ಸಿಕ್ಕಿದ ಮಾಹಿತಿಗಳನ್ನು ನೋಡಿ ತಿಳಿದು ಕಾರ್ಯಕ್ರಮ ಯಶಸ್ವಿಯಾದ ಬಗೆ ಸಂದೇಶವನ್ನು ಕಳುಹಿಸಿ ಶುಭಕೋರಿದರು.

ಸಮಾರಂಭದ ಕೊನೆಯಲ್ಲಿ ಶ್ರೀ ಪ್ರಭಾಕರ್ ದೇವಾಡಿಗ ಇವರು, ರಾಮನವಮಿ ಮಹೋತ್ಸವಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದುಡಿದ, ಸಹಕರಿಸಿದ ಎಲ್ಲಾ ಸದಸ್ಯರಿಗೆ ವಿಶೇಷವಾಗಿ ಭಾಗವಾಶಿಸಿದ ಭಜನಾ ತಂಡಗಳಿಗೆ ಮತ್ತು ಸಂಘದ ಸಹಕಾರಕ್ಕೆ ಧನಿವಾದ ಕೋರಿದರು.