Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ಶ್ರೀ ರಾಮ ಭಜನಾ ಮಂಡಳಿ ದೇವಾಡಿಗ ಸಂಘ ಮುಂಬೈ: ರಾಮನವಮಿ ಆಚರಣೆ.

ಶ್ರೀ ರಾಮ ಭಜನಾ ಮಂಡಳಿ ದೇವಾಡಿಗ ಸಂಘ ಮುಂಬೈ: ರಾಮನವಮಿ ಆಚರಣೆ

ದೇವಾಡಿಗ ಸಂಘ ಮುಂಬಯಿಯ ಶ್ರೀ ರಾಮ ಭಜನಾ ಮಂಡಳಿಯು ತನ್ನ ಒಂಬತ್ತನೇ ರಾಮನವಮಿ ಮಹೋತ್ಸವವನ್ನು ಭಜನಾ ಕಾರ್ಯಕ್ರಮಗಳೊಂದಿಗೆ ಏಪ್ರಿಲ್ 21 ರಂದು ವಿಜ್ರಂಬಣೆಯಿಂದ ನೆರವೇರಿಸಿತು. ಕೋವಿಡ್-19 ರ ಏರಡನೇ ಅಲೆಯಿಂದಾಗಿ ಸಂಘದ ನೆರೂಲ್ ನಲ್ಲಿರುವ ದೇವಾಡಿಗ ಭವನದಲ್ಲಿ ಜರಗಬೇಕಾಗಿದ್ದ ಶ್ರೀರಾಮನವಮಿ ಮಹೋತ್ಸವವು ರದ್ದಾಗಿತ್ತು. ಮಂಡಳಿಯ ಪ್ರಾಯೋಜಕರಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಸದ್ಯಸರ ಸೂಚನೆಯ ಮೇರೆಗೆ ಆನ್‌ಲೈನ್ ವರ್ಚುವಲ್ ಭಜನಾ ಕಾರ್ಯಕ್ರಮವನ್ನು ಝೂಮ್ ಮುಖಾಂತರ ಆಯೋಜಿಸಲಾಗಿತ್ತು.

ಸಂಪ್ರದಾಯದಂತೆ ದೇವಾಡಿಗ ಭವನದಲ್ಲಿರುವ ಶ್ರೀ ರಾಮ ಮಂದಿರವನ್ನು ಕೀರ್ತನಕಾರರಾದ ಶ್ರೀ ಸುರೇಶ್ ದೇವಾಡಿಗ ಹಳೆಯಂಗಡಿಯವರು ದೇವರ ಸನ್ನಿದಿಯನ್ನು ವಿವಿದ ಫಲ ಪುಷ್ಪಗಳಿಂದ ಅಲಂಕರಿಸಿದರು. ಸಂಘದ ಮಾಜಿ ಕೋಶದಿಕಾರಿ ಶ್ರೀ ದಯಾನಂದ ದೇವಾಡಿಗರು ಸಂಪೂರ್ಣ ಸಹಕಾರ ನೀಡಿ ಮಂದಿರವನ್ನು ಸಜ್ಜು ಗೊಳಿಸಿದರು. ಅಲ್ಲದೆ ಹಿರಿಯರಾದ ಶ್ರೀ ಭೋಜ ದೇವಾಡಿಗರು ಪೂಜಾ ಕ್ರಮ, ತೀರ್ಥ ಪ್ರಸಾದ ಪಂಚಕ ಜ್ಜಾಯದ ನೈವೇದ್ಯ ನೀಡಿ ಆರತಿ ಬೆಳಗಿದರು. ಭವನದ ರಾಮ ಮಂದಿರದಲ್ಲಿ ನಡೆದ ರಾಮ ದೇವರ ಪೂಜೆಯನ್ನು ಝೂಮ್ ಮೂಲಕ ಸದ್ಯಸರಿಗೆ ಆನ್‌ಲೈನ್ ನಲ್ಲಿ ತೋರಿಸಲಾಯಿತು. ಭಕ್ತಾದಿಗಳು ತಮ್ಮ ತಮ್ಮ ಮನೆಯಲ್ಲಿಯೇ ಇದ್ದು ಭಜನೆ ಹಾಡಿ ಶ್ರೀ ರಾಮ ದೇವರ ದರ್ಶನ ಹಾಗೂ ಮಂಗಳಾರತಿ ದರ್ಶನ ಪಡೆದರು.

ಪ್ರಾರಂಭದಲ್ಲಿ ಸಂಘದ ಅಧ್ಯಕ್ಷರಕದ ಶ್ರೀ ರವಿ ದೇವಾಡಿಗರು ಎಲ್ಲಾ ಸದ್ಯಸರಿಗೆ ರಾಮನವಮಿಯ ಶುಭಾಶಯಗಳನ್ನು ನೀಡಿದರು. ಕೋವಿಡ್ ಪ್ಯಾಂಡಮಿಕ್ ನಿಂದಾಗಿ ಹೊರಗೆ ಬರಲು ಅವಕಾಶವಿಲ್ಲದ ಸಂದರ್ಭದಲ್ಲಿ ರಾಮನವಮಿಯ ಪವಿತ್ರ ದಿನದಂದು ವರ್ಚುವಲ್ ಭಜನೆ ಕಾರ್ಯಕ್ರಮವನ್ನು ಆಯೋಜಿಸಿದ ನ್ಯಾಯವಾದಿ ಪ್ರಭಾಕರ್ ದೇವಾಡಿಗರನ್ನು ಅಬಿನಂದಿಸಿದರು. ಅಲ್ಲದೆ ಕೋವಿಡ್ ಪ್ಯಾಂಡಮಿಕ್ ಈ ಪ್ರಪಂಚದಿಂದ ಆದಷ್ಟು ಬೇಗ ಮಾಯವಾಗಿ ಎಲ್ಲರೂ ನೆಮ್ಮದಿಯಿಂದ ದಿನ ಕಳೆಯುವಂತಾಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಪ್ರಭಾಕರ್ ದೇವಾಡಿಗರು ಸಂಘದ ವಿವಿದ ಪ್ರಾದೇಶಿಕ ಸಮಿತಿಗಳನ್ನು ಸ್ವಾಗತಿಸಿದರು. ಕೋವಿಡ್ ಪ್ಯಾಂಡಮಿಕ್ ನಿಂದಾಗಿ ಏಪ್ರಿಲ್ 2020 ರಂದು ನಿಂತುಹೋಗಿದ್ದ ಭಜನಾ ಕಾರ್ಯಕ್ರಮವು ಆಗಸ್ಟ್ 2020 ರಿಂದ ಹಂತ ಹಂತವಾಗಿ ಮುಂದುವರಿದಿದ್ದು ಮಾರ್ಚ್ 2021ರ ವರೆಗೆ ಉತ್ತಮವಾಗಿ ನಡೆದಿತ್ತು. ಏಪ್ರಿಲ್ 2021 ಕ್ಕೆ ಸರಕಾರ ಘೋಷಿಸಿದ ಲಾಕ್ ಡೌನ್ ನಿಂದ ಭಜನಾ ಕಾರ್ಯಕ್ರಮ ನಡೆಸಲಾಗದಿದ್ದುದಕ್ಕೆ ವಿಷಾದ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಸೇರಿದ ಎಲ್ಲ ಸದ್ಯಸರಿಗೆ ಶುಭಾಶಯ ಕೋರಿದರು. ಈ ಸ್ಸಂದರ್ಭದಲ್ಲಿ ಸಂಘದ ಪ್ರಾದೇಶಿಕ ಸಮಿತಿಗಳಾದ ನವಿ ಮುಂಬೈ ವಲಯ, ಸಿಟಿ ವಲಯ, ಚೆಂಬೂರ್ ವಲಯ, ಅಸಲ್ಫ ವಲಯ ಬಾಂಡೂಪ್ ವಲಯ. ಥಾನೆ ವಲಯ. ಡೊಂಬಿವಿಲಿ ವಲಯ, ಜೋಗೇಶ್ವರಿ ವಲಯ, ಬೋರಿವಿಲಿ ವಲಯ, ಮತ್ತು ಮೀರಾ ರೋಡ್ ವಲಯದವರು ಭಾಗವಹಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್‌ದಾಸ್ ರವರು ಮಾತನಾಡುತ್ತಾ ಈ ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸಿದರು. ಲಾಕ್ ಡೌನ್ ಸಮಯದಲ್ಲಿಯೂ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಸಾಕಷ್ಟು ಸದ್ಯಸರನ್ನು ಆನ್‌ಲೈನ್ ಮೂಲಕ ಒಟ್ಟುಗೂಡಿಸಿ ದಕ್ಕೆ ಸಂತೋಷ ವೈಕ್ತ ಪಡಿಸಿದರು. ಎಲ್ಲರಿಗೂ ಸರಕಾರವು ನಿಗದಿ ಪಡಿಸಿದ ಕೊರೋನಾದ ಬಗ್ಗೆಯ ಶಿಷ್ಟಾಚಾರವನ್ನು ಪಾಲಿಸುವಂತೆ ಮನವಿ ಮಾಡಿ ದೇವರು ಎಲ್ಲರನ್ನೂ ರಕ್ಷಿಸಲಿ, ಸಂಘವು ಬೆಳೆಯಲಿ, ಸಂಘದಲ್ಲಿ ಚಟುವಟಿಕೆಗಳು ನಡೆಯುತ್ತಿರಲಿ ಎಂದು ಪ್ರಾರ್ಥಿಸಿದರು.

ಸಂಘದ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀ ಜಯ ಎಲ್ ದೇವಾಡಿಗ, ಮಹಿಳಾ ಕಾರ್ಯದರ್ಶಿ ಶ್ರೀಮತಿ ರಂಜಿನಿ ಮೊಯಿಲಿಯವರು ಉಪಸ್ಥಿತರಿದ್ದರು. ನಿತೇಶ್ ದೇವಾಡಿಗ ಇವರು ಜೂಮ್ ಮೀಟಿಂಗ್ ಅನ್ನು ಯಾವುದೇ ಅಡಚಣೆಯಾಗದಂತೆ ನಿರ್ವಹಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಂಗಳಾರತಿಯನ್ನು ಲೈವ್ ತೋರಿಸುವುದರ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು.