Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬೈ : ಯುವ ದೃಷ್ಟಿಕೋನ ಕಾರ್ಯಕ್ರಮ<br>ಏಕತೆ ಮತ್ತು ಚಿಂತನೆಗಳ ಪ್ರಕ್ರಿಯೆ ಅಗತ್ಯ - ಶ್ರೀ ಪ್ರವೀಣ್ ಎನ್ ದೇವಾಡಿಗ

ದೇವಾಡಿಗ ಸಂಘ ಮುಂಬೈ : ಯುವ ದೃಷ್ಟಿಕೋನ ಕಾರ್ಯಕ್ರಮ
ಏಕತೆ ಮತ್ತು ಚಿಂತನೆಗಳ ಪ್ರಕ್ರಿಯೆ ಅಗತ್ಯ - ಶ್ರೀ ಪ್ರವೀಣ್ ಎನ್ ದೇವಾಡಿಗ

   ದೇವಾಡಿಗ ಸಂಘದ ದಾದರ್ ಕಛೇರಿಯ ದೇವಾಡಿಗ ಕೇಂದ್ರದಲ್ಲಿ 30 ಅಕ್ಟೋಬರ್ 2022 ರಂದು ಆಯೋಜಿಸಿದ ದೃಷ್ಟಿಕೋನ ಕಾರ್ಯಕ್ರಮವನ್ನು (Orientation programme) ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ ದೇವಾಡಿಗರು, ಸಮಾಜದ ಸದಸ್ಯರಲ್ಲಿ ವಿಶೇಷವಾಗಿ ಯುವಕರಲ್ಲಿ ಜ್ಞಾನದ ಅರಿವು ಮೂಡಲು ಇಂತಹ ಕಾರ್ಯಕ್ರಮಗಳ ಅಗತ್ಯ ಹಾಗೂ , ಇಂತಹ ಕಾರ್ಯಕ್ರಮಗಳು ಸತತವಾಗಿ ನಡೆಯುತ್ತಿರಬೇಕು ಎಂದರು. ಅಲ್ಲದೆ ಸಂಘದ ಪ್ರಾದೇಶಿಕ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಇತರ ಅನೇಕ ಸಮಿತಿಗಳು ಯಾವ ಯಾವ ಚಟುವಟಿಗಳಲ್ಲಿ ತೊಡಗಿರಬೇಕು ಎಂಬುದಾಗಿಯೂ ಅವರು ಮಾರ್ಗದರ್ಶನ ನೀಡಿದರು. ಇಂದಿನ ಯುವಕರು ತಮ್ಮ ಶಿಕ್ಷಣ ಮುಗಿದ ಕೂಡಲೇ ಹಣ ಸಂಪಾದಿಸುವುದಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹಣ ಸಂಪಾದನೆ, ಆರಾಮದಾಯಕ ಜೀವನ ಮಾಡಲಾದ ಕನಸುಗಳು ಪ್ರಮುಖ ಧ್ಯೇಯವಾಗಿರಿಸಿ ಕೊಳ್ಳುತ್ತಾರೆ. ಆದರೆ ಯುವಕರಲ್ಲಿ ಪರಿವಾರದ ಬಗ್ಗೆ, ತಮ್ಮ ಸಮಾಜದ ಬಗ್ಗೆ ಹಾಗೂ ನಮ್ಮ ದೇಶದ ಬಗ್ಗೆ ಏಕತೆ ಮತ್ತು ಚಿಂತನೆಗಳ ಪ್ರಕ್ರಿಯೆ ಅಗತ್ಯವಾಗಿ ಇರಬೇಕು ಎಂದರು.

ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ಯು. ದೇವಾಡಿಗ ಅತಿಥಿಯಾಗಿ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗಾಗಿ ಸರ್ವ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸೇವೆಯನ್ನು ಸತತ ಮಾಡಬೇಕಾಗಿದೆ. ನಮ್ಮ ಸಮುದಾಯವು ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದಿಂದ ಕೂಡಿದೆ. ಸಮುದಾಯದ ಅಭಿವೃದ್ಧಿ ಮತ್ತು ಇತರ ಸಂಘಗಳೊಂದಿಗೆ ಸಂವಹನಕ್ಕಾಗಿ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ. ಸಂಘದ ಸದೃಢತೆಗಾಗಿ ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಾಗಿದ್ದುದು ಅವಶ್ಯ. ಆ ನಿಟ್ಟಿನಲ್ಲಿ ಸಂಘದ ಸದಸ್ಯರು ಸದಸ್ಯತ್ವ ನೋಂದಣಿಗಾಗಿ ಹಚ್ಚಿನ ಗಮನ ಕೊಡಬೆಯಾಗಿದೆ ಎಂದು ಹೇಳಿದರು.

ವಿಶ್ವ ದೇವಾಡಿಗ ಮಹಾ ಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನದಾಸ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಯುವಕರು ತಮ್ಮ ಆಲೋಚನೆ ಮತ್ತು ಚಿಂತನೆಗಳನ್ನು ಸಂಘದ ಶ್ರೇಯೋಭಿವೃದ್ಧಿಗೆ ನೀಡುವ ಮೂಲಕ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅವಶ್ಯವಿದೆ. ಆಕಾಂಕ್ಷೆಗಳನ್ನು ಮತ್ತು ವಿವೇಚನೆಯನ್ನು ಹೊಂದಿರುವ ಯುವಕರನ್ನು ಆಕರ್ಷಿಸಲು ಸಂಘದ ಇಂದಿನ ಚಟುವಟಿಕೆಗಳು ಉತ್ತಮವಾಗಿದ್ದು ಅದಕ್ಕಾಗಿ ಉತ್ತಮ ಅವಕಾಶ ದೊರಕಿದೆ. ಯುವಕರು ಅದರ ಲಾಭ ಪಡೆದು ಸಂಘ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನವನ್ನು ಪುಳಕಿತವನ್ನಾಗಿಸಬೇಕೆಂದು, ಎಂದು ಹೇಳಿದರು. "ಸ್ಥಳೀಯ ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಬೆಳೆಸಿಕೊಂಡು ಸಮಾಜದ ಕಲ್ಯಾಣಕ್ಕಾಗಿ ಸಾಮಾಜಿಕ ಸಂಬಂಧಿತ ವಿಶೇಷ ಕಾರ್ಯಕ್ರಮದೊಂದಿಗೆ ಸ್ಥಳೀಯ ಮಟ್ಟದಲ್ಲಿ ಸಂಘದ ಕೆಲಸ ಆಗುವಂತೆ, ಸರಿಯಾದ ಆಡಳಿತದೊಂದಿಗೆ ನಾವು ಅವರ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು." ಎಂದು ನುಡಿದರು. ಸಂಘವು ಭೂಮಿಯನ್ನು ಪಡೆದು ತನ್ನದೇ ಆದ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವಲ್ಲಿ ಮುತುವರ್ಜಿಯಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರು ಮಾತನಾಡುತ್ತಾ ನಮ್ಮ ಸಂಘದ ಅಗತ್ಯವಿರುವ ಮತ್ತು ಅರ್ಹ ಸದಸ್ಯರಿಗೆ ವೈದ್ಯಕೀಯ ಮತ್ತು ಶಿಕ್ಷಣ ಸಹಾಯವನ್ನು ಆದ್ಯತೆಯ ಆಧಾರದ ಮೇಲೆ ನೀಡಲಾಗುವುದು. ಸಂಘವು ಪ್ರಾರಂಭಿಸಿದ ಯೋಜನೆಗಳನ್ನು ಹಂತ-ಹಂತವಾಗಿ ಕಾರ್ಯಗತಗೊಳಿಸುವುದು ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ಗುರಿಗಳನ್ನು ಸಾಧಿಸಬೇಕು ಅಲ್ಲದೆ ಸಂಘದ ಸದಸ್ಯತ್ವ ಅಭಿಯಾನ ಪ್ರಾರಂಭಿಸಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ವನ್ನು ವ್ಯಕ್ತಪಡಿಸಿದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗರು ಮಾತನಾಡುತ್ತಾ ದೇವಾಡಿಗ ಭವನ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಮತ್ತು ಶ್ರೀ ಪೊಳಲಿ ದೇವಸ್ಥಾನದಲ್ಲಿ ಶ್ರೀ ಪೊಳಲಿ ರಥವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ದೇವಾಡಿಗ ಸಮುದಾಯ ಉದಾರ ದೇಣಿಗೆ ನೀಡಿದ್ದರಿಂದ ಸಂಘದ ಯೋಜನೆಗಳು ಗುರಿ ಮುಟ್ಟಿವೆ. ಸಂಘದ ಬರುವ ಶತಮಾನೋತ್ಸವ ಬಹಳ ವಿಜೃಂಭಣೆಯಿಂದ ಜರಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಲ್ಲದೆ ಸಂಘದ ಅಕ್ಷಯ ಸಹಕಾರಿ ಕ್ರೆಡಿಟ್ ಸೊಸೈಟಿಯಲ್ಲಿ ಉತ್ತಮ ಬಂಡವಾಳ ಇದ್ದು ಅಗತ್ಯವಿರುವ ಸದಸ್ಯರು ಸಾಲ ಪಡೆಯಲು ಸಂಪರ್ಕಿಸುವಂತೆ ಕೇಳಿಕೊಂಡರು.

ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗರು ತಮ್ಮ ಸ್ಲೈಡ್ ಶೋ ಪ್ರೆಸೆಂಟೇಷನ್ ಮೂಲಕ ಸಂಘದ ಎಲ್ಲಾ ಉಪಸಮಿತಿಗಳು, ಮಹಿಳಾ ವಿಭಾಗ, ಯುವಕರು ಮತ್ತು ಸಂಘದ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಯಾವ ರೀತಿಯಲ್ಲಿ ತಮ್ಮ ಕಾರ್ಯಗಳನ್ನು ಮುಂದುವರಿಸಬೇಕೆಂದು ವಿಶ್ಲೇಷಿಸಿ ಹೇಳಿದರು. ಸಂಘದ ಕಲ್ಯಾಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ಲಾನ್ (SOP) ಹೇಗಿರಬೇಕೆಂದು ಹಂತ ಹಂತವಾಗಿ ವಿವರಿಸಿದರು. ನಿರ್ದಿಷ್ಟ ಗುರಿಗಳನ್ನು ಸಾಧಿಸಲು ನಾವು ದೃಷ್ಟಿಯನ್ನು ಯೋಜಿಸಬೇಕು ಅಲ್ಲದೆ ಸಂಘದ ಶಿಕ್ಷಣ ನೀತಿ, ಶೈಕ್ಷಣಿಕ ಮತ್ತು ಆರೋಗ್ಯಕ್ಕಾಗಿ ಧನಸಹಾಯ, ಶತಮಾನೋತ್ಸವ ಆಚರಣೆಯ ವಿಚಾರಗಳು ಸೇರಿದಂತೆ ಸಮಾಜಪರ ಜವಾಬ್ದಾರಿಯನ್ನು ನಿಭಾಯಿಸುವ ಬಗ್ಗೆ ಮಾಹಿತಿ ನೀಡಿದರು.

ಈ ದೃಷ್ಟಿಕೋನ ಕಾರ್ಯಕ್ರಮದಲ್ಲಿ, ಅಸ್ತಿತ್ವದಲ್ಲಿರುವ ಸಂಘದ ಸದಸ್ಯತ್ವದ ಉನ್ನತೀಕರಣ, ಸದಸ್ಯತ್ವ ಸಜ್ಜುಗೊಳಿಸುವಿಕೆ, ಸಂಘದಲ್ಲಿ ಸದಸ್ಯರ ಭಾಗವಹಿಸುವಿಕೆಗೆ ಪ್ರೇರಣೆ , ಹೊಸ ಕಾರ್ಯಕ್ರಮಗಳ ಜೋಡಣೆ ಮತ್ತು ಅದರ ವಿಧಾನಗಳು, ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನಿಧಿ, ವೈದ್ಯಕೀಯ ನೆರವು ಮತ್ತು ಸಂಘದ ಇತರ ಯೋಜನೆಗಳಿಗಾಗಿ ದೇಣಿಗೆಯ ಸಂಗ್ರಹ, ಸದಸ್ಯರ ತರಬೇತು ಮತ್ತು ಸಮ್ಮೇಳನಗಳು, ರಾಷ್ಟ್ರ ಮತ್ತು ಪರಿಸರದ ಕಡೆಗೆ ಸಾಮಾಜಿಕ ಜವಾಬ್ದಾರಿಗಳು ಮೊದಲಾದ ವಿಷಯಗಳ ಬಗ್ಗೆ ಶ್ರೀ ನರೇಶ್ ದೇವಾಡಿಗರು ಸಂಭೋದಿಸಿ ಚರ್ಚಿಸಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯ್ಲಿ, ಮಾಜಿ ಉಪಾಧ್ಯಕ್ಷರಾದ ಶ್ರೀ ಎಸ್ ಎಸ್ ರಾವ್; ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಶ್ರೀ ಪ್ರಭಾಕರ ಎಸ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿಗಳಾದ ಶ್ರೀಮತಿ. ಸುರೇಖಾ ಎಚ್ ದೇವಾಡಿಗ ಮತ್ತು ಶ್ರೀ ಸುರೇಶ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಸಿ.ಎ. ಜಗದೀಶ್ ದೇವಾಡಿಗ, ಆಂತರಿಕ ಲೆಕ್ಕ ಪರಿಶೋಧಕರು, ಮಾಜಿ ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ರಂಜಿನಿ ಆರ್. ಮೊಯ್ಲಿ, ಪ್ರಾದೇಶಿಕ ಸಮಿತಿಗಳ ಸಂಯೋಜಕರು ಮತ್ತು ಸದಸ್ಯತ್ವದ ಕಾರ್ಯಧ್ಯಕ್ಷರಾದ ಶ್ರೀ ಜಯ ಎಲ್. ದೇವಾಡಿಗ; ಸಾರ್ವಜನಿಕ ಸಂಪರ್ಕದ ಕಾರ್ಯಧ್ಯಕ್ಷರಾದ ಶ್ರೀ ಪ್ರಭಾಕರ ಎಸ್. ದೇವಾಡಿಗ; ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಬಾಲಚಂದ್ರ ಜಿ. ದೇವಾಡಿಗ ಮತ್ತು ಮಾಜಿ ಕಾರ್ಯಧ್ಯಕ್ಷರಾದ ಶ್ರೀ ಹೇಮನಾಥ ದೇವಾಡಿಗ, ನವಿ ಮುಂಬೈ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ, ಜೋಗೇಶ್ವರಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಸತೀಶ್ ಕಣ್ವತೀರ್ಥ; ಬೊರಿವಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಭಾಸ್ಕರ್ ದೇವಾಡಿಗ; ಮೀರಾ ರೋಡ್ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಎಂ. ಸಿ. ಹೆಮ್ಮಾಡಿ; ವೈವಾಹಿಕ ಮಾರ್ಗದರ್ಶನ ಕೇಂದ್ರದ ಕಾರ್ಯಧ್ಯಕ್ಷೆಯಾದ ಶ್ರೀಮತಿ ಪ್ರಫುಲ್ಲ ವಿ. ದೇವಾಡಿಗ, ಯುವ ಘಟಕದ ಮಾಜಿ ಕಾರ್ಯಧ್ಯಕ್ಷರಾದ ಶ್ರೀ ಹರೀಶ್ ದೇವಾಡಿಗ, ಚೆಂಬೂರ್ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯದರ್ಶಿ ಯೋಗೀಶ್ ಗುಜರನ್; ಶ್ರೀ ಕೃಷ್ಣ ಶೇರಿಗಾರ್, ಉಪಕಾರ್ಯಧ್ಯಕ್ಷ, ಪ್ರಾದೇಶಿಕ ಸಮನ್ವಯ ಸಮಿತಿ,ಭಾಂಡೂಪ್ ಮೊದಲಾದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಸಂಘದ 2022-2025 ನೇ ಸಾಲಿನ ದೇವಾಡಿಗ ಯುವ ಸದಸ್ಯರ ಸಮಿತಿಯನ್ನು ಸ್ಥಾಪಿಸಲಾಯಿತು. ದೇವಾಡಿಗ ಯುವ ಘಟಕದ ಕಾರ್ಯಧ್ಯಕ್ಷರಾಗಿ ಶ್ರೀ ಬ್ರಿಜೇಶ್ ಎಸ್ ನಿಟ್ಟೆಕರ್ ಸರ್ವಾನುಮತದಿಂದ ಆಯ್ಕೆಯಾದರು. ಸಹ ಅಧ್ಯಕ್ಷರಾಗಿ ಶ್ರೀ ರಾಕೇಶ್ ದೇವಾಡಿಗ (ಶಿಕ್ಷಣ) ಮತ್ತು ಶ್ರೀ ಸಚಿನ್ ದೇವಾಡಿಗ (ಕ್ರೀಡೆ), ಕುಮಾರಿ ಸೋನಾಲಿ ಕೆ ದೇವಾಡಿಗ ಮತ್ತು ಕುಮಾರಿ ಪ್ರಿಯಾ ಜಯಕರ್ ದೇವಾಡಿಗ (ಸಾಮಾಜಿಕ ಜವಾಬ್ದಾರಿ), ಜೊತೆ ಕಾರ್ಯದರ್ಶಿಗಳಾಗಿ ಶ್ರೀ ಪ್ರಶಾಂತ್ ದೇವಾಡಿಗ ಮೀರಾ ರೋಡ್ ಪ್ರಾದೇಶಿಕ ಸಮನ್ವಯ ಸಮಿತಿ , ಶ್ರೀ ವಿಘ್ನೇಶ್ ದೇವಾಡಿಗ ಮತ್ತು ಡೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿ, ಶ್ರೀ ಭುವನ್ ಎಸ್ ಕಣ್ವತೀರ್ಥ ಜೋಗೇಶ್ವರಿ ಪ್ರಾದೇಶಿಕ ಸಮನ್ವಯ ಸಮಿತಿ, ಶ್ರೀ ಶಿವಸಾಗರ್ ವಿ. ದೇವಾಡಿಗ ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ ಆಯ್ಕೆಯಾದರು. ಯುವ ಸಮಿತಿ ಸದಸ್ಯರಾಗಿ ಶ್ರೀಮತಿ ಕಸ್ತೂರಿ ಪಿ. ಮೊಯ್ಲಿ; ಶ್ರೀಮತಿ ಭಾಗ್ಯಶ್ರೀ ಆರ್. ದೇವಾಡಿಗ, ಯುವ ಸಮಿತಿ ಸಲಹೆಗಾರರಾಗಿ ಶ್ರೀಮತಿ ಅಶ್ವಿನಿ ದೇವಾಡಿಗ, ಶ್ರೀ ಹರೀಶ್ ದೇವಾಡಿಗ ಮತ್ತು ಶ್ರೀ ದೀಕ್ಷಿತ್ ದೇವಾಡಿಗರು ಆಯ್ಕೆಯಾದರು.

ಕಾರ್ಯಕ್ರಮವು ಮಹಿಳಾ ವಿಭಾಗದ ಶ್ರೀಮತಿ ಉಮಾ ಗುಜರನ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಬಿ ದೇವಾಡಿಗರು ಎಲ್ಲರನ್ನೂ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದ್ಯಸರು ಹಾಗೂ ಸದ್ಯಸರು, , ಉಪಸಮಿತಿ ಹಾಗೂ ಪ್ರಾದೇಶಿಕ ಸಮಿತಿ ಸದಸ್ಯರು ಬಹುಸಂಖ್ಯೆಯಲ್ಲಿ ಭಾಗವಹಿಸದ್ದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗರ ಧನ್ಯವಾದ ಸಮರ್ಪಣೆ , ರಾಷ್ಟ್ರ ಗೀತೆ ಹಾಗೂ ಪ್ರೀತಿಯ ಭೋಜನೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.