Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಶತಮಾನೋತ್ಸವ ವರ್ಷ: ಶ್ರೀ ರಾಮ ಭಜನಾಮಂಡಳಿಯ ಶ್ರೀ ರಾಮ ದೇವರ ಪೂಜಾ ಸ್ಥಾನದ ಪುನರ್ನಿರ್ಮಾಣ

ದೇವಾಡಿಗ ಸಂಘ ಶತಮಾನೋತ್ಸವ ವರ್ಷ: ಶ್ರೀ ರಾಮ ಭಜನಾಮಂಡಳಿಯ ಶ್ರೀ ರಾಮ ದೇವರ ಪೂಜಾ ಸ್ಥಾನದ ಪುನರ್ನಿರ್ಮಾಣ

ನವಿ ಮುಂಬಯಿ: ಫೆ. 2: ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ, ಶತಮಾನೋತ್ಸವದ ಸಂಭ್ರಮದಲ್ಲಿರುವ ದೇವಾಡಿಗ ಸಂಘದ ಸಂಚಾಲಕತ್ವದ ಶ್ರೀರಾಮ ಭಜನಾ ಮಂಡಳಿ ಆರಾಧಿಸಿಕೊಂಡು ಬರುತ್ತಿರುವ ಶ್ರೀರಾಮದೇವರ ಪೂಜಾ ಕೇಂದ್ರದ ಪುನರ್ ಪ್ರತಿಷ್ಠೆ ಫೆ. ರಂದು ಆದಿತ್ಯವಾರ ಇಲ್ಲಿಯ ನೇರುಲ್ ನ ಸೆಕ್ಟರ್ 12ರಲ್ಲಿರುವ ದೇವಾಡಿಗ ಭವನದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು. ಆ ಪ್ರಯುಕ್ತ ಇಲ್ಲಿಯ ಮೂಕಾಂಬಿಕಾ ದೇವಾಲಯ ಘನ್ಸೋಲಿ ಇಲ್ಲಿನ ಶ್ರೀ ಗುರುಪ್ರಸಾದ್ ಭಟ್ ಇವರ ಪುರೋಹಿತ್ಯದಲ್ಲಿ ಶಾಸ್ತ್ರೋಕ್ತವಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನದವರೆಗೆ ನಡೆಯಿತು.

ನೆರೂಲ್ ಇಲ್ಲಿನ ಭವ್ಯ ದೇವಾಡಿಗ ಭವನದ ನೆಲಮಾಳಿಗೆಯಲ್ಲಿನ ಒಂದು ಕೊಠಡಿಯಲ್ಲಿ ಸಂಘದ ಭಜನಾ ಮಂಡಳಿಯು ಕಳೆದ ಹನ್ನೆರಡು ವರ್ಷಗಳಿಂದ ಈ ಶ್ರೀ ರಾಮ ದೇವರ ಪೂಜಾಲಯ ನಿರ್ಮಿಸಿ ಭಜನೆ, ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಶ್ರೀ ರಾಮ ದೇವರನ್ನು ಆರಾಧಿಸಿಕೊಂಡು ಬಂದಿರುತ್ತದೆ. ಸಂಘದ ಶತಮಾನೋತ್ಸವ ವರ್ಷ ಆಚರಣೆ ಮತ್ತು ದೇವಾಡಿಗ ಭವನದ ನೂತನಿಕರಣ ವಿಸ್ತಾರದ ಯೋಜನೆಯ ಅಡಿಯಲ್ಲಿ ನೆಲಮಾಳಿಗೆಯ ಕೆಲವು ವಿವಿದೋದ್ಧೇಶ ಸೇವಾ ಕೊಠಡಿಗಳನ್ನು ಒಂದುಗೂಡಿಸಿ ಒಂದು ಭವ್ಯವಾದ ಬ್ಯಾಂಕ್ವೆಟ್ ಹಾಲ್ (ಮಿನಿ ಸಭಾಗ್ರಹ) ನಿರ್ಮಾಣ ಮಾಡಲು ಸಂಘವು ಆಯೋಜಿಸಿದೆ. ಅದಕ್ಕೆ ಈ ಶ್ರೀರಾಮ ದೇವರ ಪೂಜಾಲಯದ ಸ್ಥಳಾಂತರದ ಅಗತ್ಯವಿತ್ತು. ಅದಕ್ಕಾಗಿ ಮುಂಬಯಿಯ ಪ್ರಸಿದ್ಧ ವಾಸ್ತು ತಜ್ಞರಾದ ಶ್ರೀ ನವೀನಚಂದ್ರ ಸನಿಲ್ ಅವರನ್ನು ಆಮಂತ್ರಿಸಿ ಅವರು ಶಾಸ್ತ್ರೀಕ್ತವಾಗಿ ಮತ್ತು ವಾಸ್ತುವಿನ ಪ್ರಕಾರ ದೇವರ ಆರಾಧನಾ ಕೇಂದ್ರದ ಸ್ಥಳ ಮತ್ತು ದಿಶೆಗಳನ್ನು ಗುರುತಿಸಿ ಸಂಘದ ಪರವಾದ ಒಂದು ದೇವಾಲಯವನ್ನು ನಿರ್ಮಾಣಗೊಳಿಸಲಾಯಿತು. ಬಳಿಕ ಪೂಜಾಲಯದ ಸ್ಥಳಾಂತರಕ್ಕೆ ಪುರೋಹಿತರಿಂದ ದಿನದ ಬಗ್ಗೆ ಚರ್ಚಿಸಿದಾಗ, 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳದ 48 ದಿನಗಳಲ್ಲಿ ನವಗ್ರಹಗಳು ಭೂಮಿಯಲ್ಲಿ ಒಟ್ಟಿಗೆ ಸೇರುವ ಮತ್ತುವಸಂತ ಪಂಚಮಿಯ ದಿನ ಫೆಬ್ರವರಿ 2ನೇ ತಾರೀಕು ಪವಿತ್ರ ದಿನವಾದುದು ಎಂದು ಅವರು ತಿಳಿಸಿದಾಗ ಆ ದಿನವನ್ನೇ ಸ್ಥಳಾಂತರಕ್ಕೆ ಆರಿಸಲಾಯಿತು.

ಆರಂಭದಲ್ಲಿ ಪುರೋಹಿತರಾದ ಮತ್ತು ಘನ್ಸೋಲಿ ಮೂಕಾಂಬಿಕಾ ದೇವಾಲಯದ ಮುಖ್ಯ ಅರ್ಚಕರಾದ ಶ್ರೀ ಗುರುಪ್ರಸಾದ್ ಭಟ್ ಇವರು ದೇವರಿಗೆ ಪೂಜೆ ಸಲ್ಲಿಸಿದರು ಬಳಿಕ ಹರಿವಾಣದಲ್ಲಿ ಮಂತ್ರಪುಷ್ಪವನ್ನಿಟ್ಟು ಎಲ್ಲರಂದಲೂ ಮುಟ್ಟಿಸಿ ದೇವರ ಮುಂದೆ ಇಟ್ಟು ಎಲ್ಲರೂ ಮಂತ್ರಾಕ್ಷತೆಯನ್ನು ಕೈಯಲ್ಲಿ ಹಿಡಿದು ಪುರೋಹಿತರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶಾಸ್ತ್ರೋಕ್ತವಾಗಿ ಕಲಶ ಗಂಟೆಗಳಿಂದ ಮುನ್ನಡೆದು ಹೊಸತಾಗಿ ನಿರ್ಮಿಸಿದ ವಾಸ್ತುವಿನ ಶಾಸ್ತ್ರೀಯವಾದ ಶುದ್ಧೀಕರಣವಾಯಿತು. ಆಲಯದ ಶುದ್ಧೀಕರಣದ ಬಳಿಕ ಮಂಡಳಿಯು ಆರಾಧಿಸಿಕೊಂಡು ಬಂದಿರುವ ಶ್ರೀ ರಾಮ ದೇವರು ಭಾವಚಿತ್ರವನ್ನಿಟ್ಟು ದೇವರ ಪ್ರತಿಷ್ಠಾಪನೆಗೊಂಡಿತು. ನಂತರದಲ್ಲಿ ವಾಸ್ತು ಶಾಂತಿ ಪೂಜೆ ಮತ್ತು ಗಣಹೋಮ ಇತ್ಯಾದಿ ಕಾರ್ಯಕ್ರಮಗಳು ಶ್ರೀ ಗುರುಪ್ರಸಾದ್ ಭಟ್ ಮತ್ತು ಅವರ ತಂಡದವರಿಂದ ನೆರವೇರಿತು. ಸಂಘದ ಶ್ರೀ ರಾಮ ಪೂಜಾಲಯದ ಅರ್ಚಕರಾದ ಶ್ರೀ ಶ್ರೀನಿವಾಸ್ ಕರ್ಮರನ್ ಮತ್ತು ಶ್ರೀಮತಿ ಸುನಂದಾ ಕರ್ಮರನ್ ದಂಪತಿಗಳನ್ನು ಪೂಜೆಯಲ್ಲಿ ಕುಳ್ಳಿಸರಿಸಿ ಪುರೋಹಿತರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬಳಿಕ ಮಂಗಳಾರತಿ ಬೆಳಗಿ ತೀರ್ಥ ಪ್ರಸಾದ ವಿತರಿಸಲಾಯಿತು.. ನಂತರದಲ್ಲಿ ಸಂಘದ ಶ್ರೀ ರಾಮ ಭಜನಾಮಂಡಳಿಯ ಸದಸ್ಯರಿಂದ ಭಜನೆ ಮತ್ತು ಕುಣಿತ ಭಜನೆಗಳು ನಡೆದು ಮಧ್ಯಾಹ್ನ ಒಂದು ಗಂಟೆಗೆ ಶ್ರೀ ದೇವರಿಗೆ ಮಹಾಮಂಗಳಾರತಿಯನ್ನು ಬೆಳಗಿದರು. ಮಂಡಳಿಯ ಭಜಕರದಾದ ಶ್ರೀಮತಿ ಪೂರ್ಣಿಮಾ ದೇವಾಡಿಗ ಮತ್ತು ಶ್ರೀ ದಯಾನಂದ್ ದೇವಾಡಿಗ ಇವರ ಮದುವೆ ವರ್ಷದ ಬೆಳ್ಳಿಹಬ್ಬದ ದಿನದ ಔಚಿತ್ಯವನ್ನು ಬಳಸಿ ಅವರಿಂದ ಶ್ರೀ ದೇವರಿಗೆ ಪೂಜೆ ಮಾಡಿಸಿ ಆಶೀರ್ವಚನ ನೀಡಲಾಯಿತು. ಭಜಕರಾದ ಶ್ರೀ ಶಂಕರ್ ದೇವಾಡಿಗ ಇವರು ಪ್ರಾರ್ಥನೆ ಸಲ್ಲಿಸಿದರು.

ಈ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗರು ಪ್ರಮುಖವಾಗಿ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷರು ಮತ್ತು ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರವಿ ದೇವಾಡಿಗ ಮತ್ತು ಜೊತೆ ಕೋಶಾಧಿಕಾರಿ ಶ್ರೀ ಸುರೇಶ ದೇವಾಡಿಗ ಇವರು ಹೊಸ ಪೂಜಾಲಯದ ನಿರ್ಮಾಣ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಲ್ಲಿ ಬಹಳ ಶ್ರಮಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಏಕನಾಥೇಶ್ವರಿ ದೇವಾಲಯದ ಟ್ರಸ್ಟಿಗಳಾದ ಶ್ರೀ ಜನಾರ್ಧನ್ ದೇವಾಡಿಗ, ಎಲ್.ಜಿ. ಫೌಂಡೇಶನ್ ಇದರ ಅಧ್ಯಕ್ಷರು ಮತ್ತು ಶ್ರೀ ಏಕನಾಥೇಶ್ವರಿ ದೇವಾಲಯದ ಬಾರ್ಕುರ್ ಇದರ ಟ್ರಸ್ಟಿಗಳು ಆದ ಶ್ರೀ ನಾಗರಾಜ್ ಪಡುಕೋಣೆ, ಸಂಘದ ಮಾಜಿ ಗೌ.ಪ್ರ. ಕಾರ್ಯದರ್ಶಿ ಶ್ರೀ ಪದ್ಮನಾಭ ದೇವಾಡಿಗ, ನವಿ ಮುಂಬಯಿ ಒಕ್ಕಲಿಗ ಸಂಘದ ಅಧ್ಯಕ್ಷ ಶ್ರೀ ಮೋಹನ್ ಗೌಡ, ಗುತ್ತಿಗೆದಾರರಾದ ಶ್ರೀ ರಾಜೂಭಾಯ್ ಮೊದಲಾದವರು ಭಾಗವಿಹಿಸಿದರು. ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮಕ್ಕೆ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಅಡ್ವೋಕೇಟ್ ಶ್ರೀ ಬ್ರಿಜೇಶ್ ನಿಟ್ಟೇಕರ್ ಸಂಘದ ಸಮಿತಿ ಸದಸ್ಯರಾದ ಶ್ರೀ ಸುಧಾಕರ್ ಎಲ್ಲೂರು, ಶ್ರೀ ಜಯ ಎಲ್. ದೇವಾಡಿಗ, ಸಾಂಸ್ಕ್ರತಿಕ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ , ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಶ್ರೀ ಭಾಲಚಂದ್ರ ದೇವಾಡಿಗ, ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಶೇರಿಗಾರ್, ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಶೇರಿಗಾರ್, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಶ್ರೀ ಗಣೇಶ್ ಸೇರಿಗಾರ್, ವಲಯದ ಮಾಜಿ ಕಾರ್ಯಾಧ್ಯಕ್ಷ ಶ್ರೀ ಆನಂದ್ ಶೇರಿಗಾರ, ಸಂಘದ ಮಾಜಿ ಜೊತೆ ಖಜಾಂಚಿ ಶ್ರೀ ದಯಾನಂದ್ ದೇವಾಡಿಗ, ಶ್ರೀ ಚಂದ್ರಶೇಖರ ದೇವಾಡಿಗ, ಭಜನೆ ಗುರು ಶ್ರೀ ಸುರೇಶ ದೇವಾಡಿಗ, ಶ್ರೀ ಸುರೇಶ ದೇವಾಡಿಗ ಬಾರಕೂರು, ಶ್ರೀ ಹರಿಶ್ಚಂದ್ರ ದೇವಾಡಿಗ, ಶ್ರೀ ಭೋಜ ದೇವಾಡಿಗ, ಶ್ರೀ ವಸಂತ್ ದೇವಾಡಿಗ, ನವಿ ಮುಂಬಯಿ ವಲಯದ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆಯಾರಾದ ಶ್ರೀಮತಿ ಪ್ರಭಾವತಿ ಆರ್. ದೇವಾಡಿಗ, ಶ್ರೀಮತಿ ಅಂಬಿಕಾ ಜೆ. ದೇವಾಡಿಗ, ಶ್ರೀಮತಿ ವನಿತಾ ಆರ್. ದೇವಾಡಿಗ, ಸದಸ್ಯರು ಶ್ರೀಮತಿ ಶಾಂತ ಪಿ. ದೇವಾಡಿಗ, ಶ್ರೀಮತಿ ಸುನಂದಾ ಕರ್ಮರನ್, ಶ್ರೀಮತಿ ಧನವತಿ ಪುತ್ತೂರು, ಶ್ರೀಮತಿ ಆಶಾ ಆರ್. ದೇವಾಡಿಗ, ಶ್ರೀಮತಿ ಆಶಾ ಪಿ. ದೇವಾಡಿಗ, ಶ್ರೀಮತಿ ಗೀತಾ ಹೆಚ್. ದೇವಾಡಿಗ, ಶ್ರೀಮತಿ ಉಮಾವತಿ ಗುಜರನ್, ಶ್ರೀಮತಿ ಕಲಾವತಿ ಸೇರಿಗಾರ್, ಶ್ರೀಮತಿ ಭಾಗ್ಯ ಆರ್. ದೇವಾಡಿಗ, ಶ್ರೀಮತಿ ಅಶ್ವಿನಿ ದೇವಾಡಿಗ, ಶ್ರೀಮತಿ ಶುಭ ದೇವಾಡಿಗ, ಕುಮಾರಿ ತನ್ವಿ ಡಿ. ದೇವಾಡಿಗ, ಕುಮಾರಿ ಹರ್ಷಿತ ಹೆಚ್. ದೇವಾಡಿಗ, ಮಾಸ್ಟರ್ ಋಷಭ್ ದೇವಾಡಿಗ, ಶ್ರೀ ಲೋಕೇಶ್ ದೇವಾಡಿಗ ಚೆಂಬೂರು ಕುಮಾರಿತನ್ವಿ ದೇವಾಡಿಗ, ಠಾಣೆ, ಹರ್ಷಿತಾ ಎನ್. ಶೇರಿಗಾರ್, ಶ್ರೀಮತಿ ವಸಂತಿ ಎನ್. ಶೇರಿಗಾರ್, ಠಾಣೆ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷ ಶ್ರೀ ಸದಾಶಿವ ಮೊಯ್ಲಿ, ಶ್ರೀ ಮೋಹನ್ ಗುಜರನ್, ಶ್ರೀ ವಿಜಯಕುಮಾರ್ ಶೇರಿಗಾರ್, ಶ್ರೀಮತಿ ಲ್ಲಿಕಾ ದೇವಾಡಿಗಮೊದಲಾದವರು ಉಪಸ್ಥಿತರಿದ್ದು ಶ್ರಮಿಸಿದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನದಾಸ್, ಶ್ರೀ ವಾಸು ದೇವಾಡಿಗ, ಶ್ರೀ ಧರ್ಮಪಾಲ್ ಯು. ದೇವಾಡಿಗ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಮೊಯ್ಲಿ, ಗೌ.ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಅಲ್ಲದೆ ಆಡಳಿತ ಮಂಡಳಿಯವರು ಕಾರ್ಯಕ್ರ್ರಮಕ್ಕೆ ಶುಭ ಕೋರಿದರು. ಈ ಆಯೋಜನೆಯು ಶ್ರೀ ರಾಮ ಭಜನ ಮಂಡಳಿ ದೇವಾಡಿಗ ಸಂಘ ಮುಂಬಯಿ ಇದರ ಸಂಯೋಜಕರು ಮತ್ತು ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಂಪೂರ್ಣ ಸಮಾರಂಭದ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ, ವಿಶೇಷವಾಗಿ ಸಂಘದ ಆಡಳಿತ ಮಂಡಳಿ, ಎಲ್ಲಾ ಪ್ರಾದೇಶಿಕ ಸಮಿತಿಗಳು, ವಿಶೇಷವಾಗಿ ನವಿ ಮುಂಬಯಿ ಪ್ರಾದೇಶಿಕ ಸಮಿತಿಗೆ ಸಂಯೋಜಕರಾದ ಪ್ರಭಾಕರ್ ದೇವಾಡಿಗ ಇವರು ಧನ್ಯವಾದ ನೀಡಿದರು.