Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ : ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಸಮಾಜ ಬಾಂಧವರು ಕೈ ಜೋಡಿಸಿದರೆ ಮಾತ್ರಾ ಸಮಾಜ ಬೆಳೆಯಲು ಸಾಧ್ಯ: ರವಿ ಎಸ್. ದೇವಾಡಿಗ.

ದೇವಾಡಿಗ ಸಂಘ ಮುಂಬಯಿ : ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಸಮಾಜ ಬಾಂಧವರು ಕೈ ಜೋಡಿಸಿದರೆ ಮಾತ್ರಾ ಸಮಾಜ ಬೆಳೆಯಲು ಸಾಧ್ಯ: ರವಿ ಎಸ್. ದೇವಾಡಿಗ.

ನವಿ ಮುಂಬಯಿ: ದೇವಾಡಿಗ ಸಂಘ ಮುಂಬಯಿ ಶತಮಾನೋತ್ಸವ ಆಚರಣೆಯ ತಯಾರಿಯಲ್ಲಿದೆ. ಕಳೆದ 97 ವರ್ಷಗಳಲ್ಲಿ ಸಂಘವು ಸಮಾಜದ ಉನ್ನತಿಗೆ ಅಭೂತಪೂರ್ವವಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇಷ್ಟು ಸುಧೀರ್ಘವಾದ ಈ ಸಂಘಟನೆ ಬೆಳೆಯಲು ಸಮಾಜ ಬಾಂಧವರ ಕೊಡುಗೆಯೇ ಕಾರಾಣವಾಗಿದ್ದು, ಸಮಾಜ ಬಾಂಧವರು ಕೈ ಜೋಡಿಸಿದರೆ ಮಾತ್ರ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ, ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರವಿ ಎಸ್. ದೇವಾಡಿಗ ಇವರು ಹೇಳಿದರು.

ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಮತ್ತು ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮವು ಸಮಿತಿಯ ಕಾರ್ಯಾಧ್ಯಕ್ಷರಾದ ನ್ಯಾಯವಾದಿ ಶ್ರೀ ಪ್ರಭಾಕರ ಎಸ್. ದೇವಾಡಿಗ ಇವರ ಸಭಾಧ್ಯಕ್ಷತೆಯಲ್ಲಿ ಇಲ್ಲಿಯ ದೇವಾಡಿಗ ಭವನದ ಶ್ರೀಮತಿ ನಾಗಿ ಮತ್ತು ಉಚ್ಚಿಲ ಮುತ್ತಯ್ಯ ಮೊಯಿಲಿ ವಾತಾನುಕೂಲಿತ ಸಭಾಗ್ರಹದಲ್ಲಿ ಬಹಳ ಅದ್ದೂರಿಯಿಂದ ಆಚರಿಸಲಾಗಿದ್ದು, ಶ್ರೀ ರವಿ ದೇವಾಡಿಗರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಕಲಾಪಗಳನ್ನು ಮೆಚ್ಚಿ ಇದು ಒಂದು ಮಾದರಿ ಸಮಿತಿಯಾಗಿದೆ ಎಂದರು. "ಸಂಘದ ಮುಂದಿನ ಆಡಳಿತ ಸಮಿತಿಯು ಶೀಘ್ರವೇ ಘೋಷಣೆಯಾಗಲಿದ್ದು, ಆ ಬರುವ ಸಮಿತಿಗೆ ಸಂಘದ ಶತಮಾನೋತ್ಸವ ಆಚರಣೆಯ ಜವಾಬ್ದಾರಿ ಇದ್ದು ಸಂಘದ ಎಲ್ಲಾ ಸದಸ್ಯರು ಕೈ ಜೋಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ವಿಶ್ವ ದೇವಾಡಿಗ ಮಹಾಮಂಡಳ ಅಧ್ಯಕ್ಷರು ಹಾಗು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗ ಇವರು ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಮಾತನಾಡುತ್ತಾ ದೇವಾಡಿಗ ಸಂಘದ ಬೆಳವಣಿಗೆಯ ಕುರಿತು ಸಮಾಧಾನ ವ್ಯಕ್ತ ಪಡಿಸಿದರು. "ಇತರ ಕೆಲವು ಸಂಘಗಳನ್ನು ಗಮನಿಸಿದರೆ ನಮ್ಮ ಸಂಘದ ಬೆಳವಣಿಗೆ ಸಾಲದು, ಇದಕ್ಕೆ ಸಮಾಜ ಬಾಂಧವರ ಕಡಿಮೆ ಸಂಖ್ಯೆ ಮತ್ತು ವ್ಯವಸಾಯದ ಅಭಾವವೂ ಕಾರಣವಾಗಿದೆ. ಸಮಾಜದ ಜನರು ಉದ್ಯೋಗದಲ್ಲಿ ಸದ್ರಢರಾದರೆ ಸಮಾಜವು ಮತ್ತು ಸಮಾಜ ಸಂಘವು ಆರ್ಥಿಕವಾಗಿ ಬೆಳೆಯುವುದು" ಎಂದು ಅವರು ಹೇಳಿದರು.

ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಕಲಾಪಗಳನ್ನು ಶ್ಲಾಘಿಸಿದ ಅವರು, ಕೊರೋನಾ ಸಮಯದಲ್ಲಿಯೂ ಈ ಸಮಿತಿ ತುಂಬಾ ಕ್ರಿಯಾಶೀಲವಾಗಿದ್ದು, ಭಜನಾ ಮಂಡಳಿಯನ್ನು ಸ್ಥಾಪಿಸಿ ನಿರಂತರ ಧಾರ್ಮಿಕ ಕಾರ್ಯಾಚರಣೆ ಅಲ್ಲದೆ ಭ್ರಾಮರಿ ಸಂಸ್ಥೆಯ ಯಕ್ಷಗಾನ ತರಬೇತು ಮೊದಲಾದ ಉತ್ತಮ ಕಾರ್ಯಕ್ರಮಗಳಿಂದ ದೇವಾಡಿಗರ ಮಹತ್ವಾಕಾಂಕ್ಷಿ ವಾಸ್ತುವಾದ ದೇವಾಡಿಗ ಭವನವನ್ನು ಜೇವಂತವಾಗಿ ಬೆಳೆಯುವಂತೆ ಮಾಡಿದೆ ಎಂದರು. ಸಮಿತಿಯ ವಾರ್ಷಿಕೋತ್ಸವದ ಭವ್ಯವಾದ ಸಮಾರಂಭವನ್ನು ಮೆಚ್ಚಿದ ಅವರು ಇಂತಹ ಕಾರ್ಯಕ್ರಮಗಳು ಸಂಘದ ಎಲ್ಲಾ ಹತ್ತು ಸಮಿತಿಗಳಲ್ಲಿ ನಡೆದರೆ ಸಂಘಕ್ಕೆ ಯಾವುದೇ ಸರಿಸಾಠಿ ಸಾಧ್ಯವಿಲ್ಲ ಎನ್ನುತ್ತಾ ಸಂಘಕ್ಕಾಗಿ ತನ್ನ ಪೂರ್ಣ ಸಹಕಾರ ಇರುವುದಾಗಿ ಆಶ್ವಾಸನೆ ನೀಡಿದರು. ಅಲ್ಲದೆ, ವಿಶ್ವ ದೇವಾಡಿಗ ಮಹಾಮಂಡಳ ಮತ್ತು ದೇವಾಡಿಗ ಶತಮಾನೋತ್ಸವದ ದೊಡ್ಡ ಯೋಜನೆ ಇದ್ದು ಸಮಾಜ ಬಾಂಧವರ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.

ದೇವಾಡಿಗ ಸಮಾಜದ ಚಾಣಕ್ಯರೆಂದೇ ಎಲ್ಲರಲ್ಲೂ ಹೇಳಿಸಿಕೊಳ್ಳುವ ದೇವಾಡಿಗ ಸಂಘದ ಹಿತಚಿಂತಕ ವಿಶ್ವ ದೇವಾಡಿಗ ಮಹಾ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಹಿರಿಯಡ್ಕ ಮೋಹನದಾಸ್ ಇವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ಎಲ್ಲಾ ಬಾಂಧವರಿಗೆ ವಿಶೇಷವಾಗಿ ನವಿ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿಯನ್ನು ಅಭಿನಂದಿಸಿ, ಸಮಾಜ ಬಾಂಧವರು ಇನ್ನೂ ಹೊರಗೆ ಬಂದು ತಮ್ಮನ್ನು ಸಮಾಜ ಗುರುತಿಸುವ ಕಾರ್ಯವನ್ನು ಮಾಡಬೇಕು ಎಂದರು. ಇಂತಹ ಸಮಿತಿಗಳ ನಿರ್ಮಾಣದಿಂದ ಪ್ರಾದೇಶಿಕ ವಲಯಗಳಲ್ಲಿ ಸಾಮಾನ್ಯ ಜನರಲ್ಲಿ ನಾಯಕತ್ವದ ಗುಣಮಟ್ಟ ಬೆಳೆದು ಸಮಾಜ ಮುಖಂಡರು ತಯಾರಾಗುತ್ತಾರೆ ಮತ್ತು ಸಂಘವನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಸಮಾಜದ ಅನೇಕ ಮುಂದಾಳುಗಳನ್ನು ನೆನೆವರಿಸುತ್ತಾ, ಅವರು ಸಮಾಜಕ್ಕೆ ನೀಡಿದ ದೇಣಿಗೆಯಿಂದ ಸಮಾಜ ಸಂಘವು ಹೆಮ್ಮೆರವಾಗಿ ಬೆಳೆದಿದ್ದು , ಅದರ ಛತ್ರಛಾಯೆಯಲ್ಲಿ ಹೊಸ ಮುಖಗಳು ಮತ್ತು ಹೊಸ ಪ್ರತಿಭೆಗಳಿಂದ ಸಂಘದ ಸರ್ವೋತ್ತರ ಪ್ರಗತಿ ಆಗಲಿ ಎಂದು ಅವರು ಆಶಿಸಿದರು, ಸಮಾಜವು ಕೊರೋನಾ ಸಮಯದಲ್ಲಿ ಶ್ರೀ ಗೋಪಾಲ ಮೊಯಿಲಿ, ಶ್ರೀ ಭುಜಂಗಾಧರ್ ಮೊದಲಾದ ಶ್ರೇಷ್ಠ ವ್ಯಕ್ತಿಗಳನ್ನು ಕಳೆದು ಕೊಂಡಿದ್ದು, ಅನಾರೋಗ್ಯದಲ್ಲಿರುವ ಮತ್ತು ಸಂಘಕ್ಕೆ ಅವಿರತ ದುಡಿದ, ದೇವಾಡಿಗ ಶ್ರೀ ಪಾದೆಬೆಟ್ಟು ವಿಠಲ ಮೊಯಿಲಿ ಮೊದಲಾದವರು ಸಂಘ ಶತಮಾನೋತ್ಸವ ಆಚರಿಸುವ ಸಂಭ್ರಮಕ್ಕೆ ಸಾಕ್ಷಿಯಾಗಬೇಕು ಎಂದು ಅವರು ತಮ್ಮ ಭಾವನೆಯನ್ನು ವ್ಯಕ್ತ ಪಡಿಸಿದರು. ನವಿ ಮುಂಬಯಿ ಪ್ರಾದೇಶಿಕ ಸಮಿತಿಯು ಅಡ್ವೋಕೇಟ್ ಪ್ರಭಾಕರ ದೇವಾಡಿಗರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಸಮಾಜದ ಕುಲದೇವತೆ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಇದರ ನಿರ್ಮಾಣಕ್ಕೆ ತನ್ನ ವೈಯುಕ್ತಿಕ ನೆಲೆಯಲ್ಲಿ ಗರಿಷ್ಠ ದೇಣಿಗೆ ನೀಡಿದ ಆಡಳಿತ ವಿಶ್ವಸ್ಥರಾದ ಶ್ರೀ ಅಣ್ಣಯ್ಯ ಬಿ. ಶೇರಿಗಾರರು ಇವರನ್ನು ಅಭಿನಂದಿಸಿ ಮುಂಬರುವ ದಿನಗಳಲ್ಲಿ ಸಂಘದ ಶತಮಾನೋತ್ಸವ, ವಿಶ್ವ ದೇವಾಡಿಗ ಮಹಾಮಂಡಳ ಮೊದಲಾದ ಮಹತ್ವಾಕಾಂಕ್ಷಿ ಯೋಜನರಿಯನ್ನು ಹಮ್ಮಿಕೊಂಡಿದ್ದು, ಅದಕ್ಕೆ ಎಲ್ಲರ ಸಹಕಾರದ ಅಗತ್ಯವನ್ನು ಅವರು ಒತ್ತಿ ಹೇಳಿದರು

ಇನ್ನೋರ್ವ ಗೌರವ ಅತಿಥಿ ಹಾಗೂ ದೇವಾಡಿಗ ಸಮಾಜದಿಂದ ನಿರ್ಮಿಸಲ್ಪಟ್ಟ ಸಮಾಜದ ಕುಲದೇವತೆ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಇದರ ಆಡಳಿತ ವಿಶ್ವಸ್ತರಾದ ಶ್ರೀ ಅಣ್ಣಯ್ಯ ಬಿ. ಶೇರಿಗಾರ್ ಇವರು ಉಪಸ್ಥಿತರಿದ್ದು, ದೇವಾಡಿಗ ಸಂಘ ಮುಂಬಯಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸಿದರು. ತಾನು ಮುಂಬಯಿ ಸಮೀಪದ ಪುಣೆಯಲ್ಲಿ ಅನೇಕ ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿದ್ದರೂ, ಸಮೀಪದ ಮುಂಬಯಿ ಸಂಘದ ಸಂಪರ್ಕಕ್ಕೆ ಇತ್ತೀಚಿಗೆ ಬಂದಿದ್ದು, ಮುಂಬಯಿ ಸಂಘದ ಮುಂದಾಳುಗಳಾದ ವಿಶೇಷವಾಗಿ ಚಾಣಕ್ಯರಾದ ಶ್ರೀ ಹಿರಿಯಡ್ಕ ಮೋಹನದಾಸ್, ಶ್ರೀ ಧರ್ಮಪಾಲ ದೇವಾಡಿಗ, ಶ್ರೀ ರವಿ ದೇವಾಡಿಗ, ಶ್ರೀ ಪಿ. ವಿ. ಎಸ್ ಮೊಯಿಲಿ, ಶ್ರೀ ಜನಾರ್ಧನ ದೇವಾಡಿಗ ಶ್ರೀ ಗಣೇಶ್ ಬ್ರಹ್ಮಾವರ ಇವರ ಸಹಕಾರದಿಂದ ಬಾರ್ಕೂರಿನಲ್ಲಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದರು. ದೇವಾಲಯವು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದ್ದು ದಿನ ನಿತ್ಯವೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ, ವಿಶೇಷವಾಗಿ ಮುಂಬಯಿಂದ ಬರುವ ಭಕ್ತಾದಿಗಳು ಮಾತ್ರವಲ್ಲದೆ ಅವರಿಂದ ಉತ್ತಮ ದೇಣಿಗೆಯೂ ನಮ್ಮ ದೇವಸ್ಥಾನಕೆ ಬರುತ್ತಿದೆ ಎಂದರು. ಅಲ್ಲದೆ ಮುಂಬಯಿ ಸಂಘವು ತನ್ನ ಮೇಲೆ ಇಟ್ಟ ಗೌರವಕ್ಕಾಗಿ ತಾನು ನತಮಸ್ತಕನಾಗಿದ್ದೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ. ಸಂಘದ ಮಾಜಿ ಅಧ್ಯಕ್ಶರುಗಳಾದ ಶ್ರೀ ವಾಸು ಎಸ್, ದೇವಾಡಿಗ, ಶ್ರೀ ಶ್ರೀನಿವಾಸ್ ಪಿ. ಕರ್ಮರನ್, ವಿಶ್ವ ದೇವಾಡಿಗ ಮಹಾಮಂಡಳದ ಸಂಘಟನಾ ಅಧಿಕಾರಿ ಜನಾರ್ದನ ಎಸ್. ದೇವಾಡಿಗ, ಸಂಘದ ಉಪಾಧ್ಯಕ್ಷರುಗಳಾದ ಶ್ರೀ ಪ್ರವೀಣ್ ಎನ್. ದೇವಾಡಿಗ, ಶ್ರೀ ನರೇಶ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಬಿ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ, ಶ್ರೀಮತಿ ರಂಜನಿ ಆರ್. ಮೊಯಿಲಿ, ಯುವ ವಿಭಾಗದ ಕಾರ್ಯಾಧ್ಯಕ್ಷರು ಶ್ರೀ ಹರೀಶ್ ಆರ್. ದೇವಾಡಿಗ, ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ಸಚಿನ್ ಎಸ್. ದೇವಾಡಿಗ ಇವರು ತಮ್ಮ ತಮ್ಮ ಮನೋಗತವನ್ನು ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನ ವಹಿಸಿಕೊಂಡಿದ್ದ ಸಮಿತಿಯ ಕಾರ್ಯಾಧ್ಯಕ್ಷರಾದ ನ್ಯಾಯವಾದಿ ಶ್ರೀ ಪ್ರಭಾಕರ ಎಸ್. ದೇವಾಡಿಗ ಇವರು ಮಾತನಾಡುತ್ತಾ ಕಾರ್ಯಕ್ರಮಕದ ಯಶಸ್ಸಿಗೆ ಹೋರಾಡಿದ ಎಲ್ಲರನ್ನೂ ಅಭಿನಂದಿಸಿದರು. ಸಂಘದ ಕೇಂದ್ರ ಸಮಿತಿ ಮತ್ತು ಗೌರವ ಅತಿಥಿಗಳ ಉಪಸ್ಥಿತಿಗೆ ಹರ್ಷವನ್ನು ವ್ಯಕ್ತಪಡಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲರನ್ನು ಅಭಿನಂದಿಸಿದರು. ಜೊತೆಗೆ ಸಂಘದ ಮುಂಬರುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ತನ್ನ ಪೂರ್ಣ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಶ್ರೀ ಆನಂದ ಕಾಂತಪ್ಪ ಶೇರಿಗಾರ, ಉಪ ಕಾರ್ಯಾಧ್ಯಕ್ಷರಾದ ಶ್ರೀ ಭೋಜ ಗುಲ್ಲ ದೇವಾಡಿಗ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಭಾವತಿ ರಘು ದೇವಾಡಿಗ ಮತ್ತು ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ಪಿ. ದೇವಾಡಿಗ ಇವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು, ಮನೋರಂಜನೆಯ ಅಂಗವಾಗಿ "ಐಕ್ಯಮ್" ನಮ್ಮ ಏಕತೆ, ನಮ್ಮ ಹೆಮ್ಮೆ ಎಂಬ ದೇಶದ ವಿವಿಧ ರಾಜ್ಯಗಳ ಸಾಂಸ್ಕ್ರತಿಕ ಸಮೂಹ ನ್ರತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು

ಸಂಘಕ್ಕೆ ದುಡಿದ ಸಾಧಕರನ್ನು ಸನ್ಮಾನಿಸುವುದು, ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಗೌರವಿಸಿ ಪ್ರೋತ್ಸಾಹಿಸುವುದು, ವ್ಯಾವಸಾಯಿಕ ಶಿಕ್ಷಣವನ್ನು ಮುಗಿಸಿ ಜೀವನದ ವ್ಯವಸಾಯಕ್ಕೆ ಹೆಜ್ಜೆ ಇಡುತ್ತಿರುವ ಯುವ ತರುಣರನ್ನು ಸತ್ಕರಿಸಿ ಅವರನ್ನು ಹುರಿದುಂಬಿಸುವುಸು ಮೊದಲಾದ ಕಾರ್ಯಕ್ರಮಗಳಿಂದ ಸದಸ್ಯರು ಸಂಘದ ಕಡೆಗೆ ಆಕರ್ಷಿತರಾಗುವುದಲ್ಲದೆ, ಇಂತಹ ಅನೇಕ ಪ್ರೇರಣಾದಾಯಿ ಕಾರ್ಯಕ್ರಮಗಳಿಂದ ಸಂಘವು ಬಲಗೊಳ್ಳುವುದು ಎಂದು ಹೇಳಿದರು.

ಆರಂಭದಲ್ಲಿ ಸಂಘದ ಮಹಿಳಾ ಕಾರ್ಯಕರ್ತೆ ಶ್ರೀಮತಿ ಪೂರ್ಣಿಮಾ ದೇವಾಡಿಗ ಇವರು ಅತಿಥಿಗಳನ್ನು ವೇದಿಕೆಗೆ ಆಮಂತ್ರಿಸಿ, ಬಳಿಕ ಅತಿಥಿಗಳು ದೀಪ ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಭಜನಾ ಮಂಡಳಿಯ ಉತ್ತಮ ಭಜಕರಾದ ಶ್ರೀಮತಿ ಆಶಾ ಪಿ. ದೇವಾಡಿಗ ಮತ್ತು ಶ್ರೀಮತಿ ಆಶಾ ಆರ್, ದೇವಾಡಿಗ ಇವರು ಪ್ರಾರ್ಥನೆಯನ್ನು ಸಲ್ಲಿಸಿದರು. ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಕರ್ತೆ ಶ್ರೀಮತಿ ಅಶ್ವಿನಿ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಗೆ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಲತಾ ಎ. ಸೇರಿಗಾರ ಇವರು ಧನ್ಯವಾದ ಸಮರ್ಪಣೆಯನ್ನು ಮಾಡಿದರು.

ಈ ಕಾರ್ಯಕ್ರಮದ ಯಶಸ್ಸಿಗೆ, ಸರ್ವಶ್ರೀ ಗಿರೀಶ್, ಕರಣ್, ದಯಾನಂದ್, ಚಂದ್ರಶೇಖರ್, ಹರಿಶ್ಚಂದ್ರ, ಸುರೇಶ್, ರಮೇಶ್, ಭೋಜ , ಆನಂದ್, ಸಚಿನ್, ಶಂಕರ್ . ಜಾರಪ್ಪ, ಕುಮಾರಿಯರಾದ ತನ್ವಿ, ಭಾಗ್ಯ ಶ್ರೀ, ಕ್ಷಿಥಿ, ಸಿದ್ಧೀ, ಶ್ರೀಮತಿಯರಾದ ಲತಾ ಶಾಂಭವಿ , ಅಂಬಿಕಾ, ಗೀತಾ, ವನಿತಾ, ಶಾಂತಾ, ಶೋಭಾ, ಧನ್ವತಿ, ಸರಸ್ವತಿ, ಸುನಂದಾ, ಸುಂದರಿ, ಆಶಾ, ಪ್ರಿಯಾ, ಪ್ರಭಾವತಿ, ಭಾಗ್ಯಶ್ರೀ, ಮೊದಲಾದ ಕಾರ್ಯಕರ್ತರು ಶ್ರಮಿಸಿದರು