Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
DSM News

ದೇವಾಡಿಗ ಸಂಘ ಮುಂಬೈ:ಪ್ರಾದೇಶಿಕ ಸಮನ್ವಯ ಸಮಿತಿ ನವಿ ಮುಂಬೈ ಮಹಿಳಾವಿಭಾಗದ ವತಿಯಿಂದ ಆಟಿಡೊಂಜಿ ದಿನ ಆಚರಣೆ

ನವಿ ಮುಂಬೈ: ಸಂಘವು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಅಥವಾ ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಬಹು ಸಂಖ್ಯೆಗಳಲ್ಲಿ ಭಾಗವಹಿಸಬೇಕು, ಸಮಾಜ ಬಾಂಧವರನ್ನು ಒಟ್ಟುಗೂಡಿಸಿ ಎಲ್ಲರನ್ನೂ ಸಂತೈಸುವುದೇ ಸಂಘದ ಉದ್ದೇಶ ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಹೇಳಿದರು. ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿ ಆಯೋಜಿಸಿದ್ದ ಆಷಾಢ ಮತ್ತು ಶ್ರಾವಣ ಮಾಸಗಳ ಮಹತ್ವ ಮತ್ತು ಮಳೆಗಾಲದ ಅಡುಗೆಯ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಶ್ರೀ ದೇವಾಡಿಗರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಈ ಕಾರ್ಯಕ್ರಮವು ಇತ್ತೀಚೆಗೆ ಸಂಘದ ನೆರೂಲ್ನಲ್ಲಿರುವ ದೇವಾಡಿಗ ಭವನದಲ್ಲಿ ವೈವಿಧ್ಯಮಯಗಳಿಂದ ಕೂಡಿದ ಕಾರ್ಯಕ್ರಮ ನೆರವೇರಿತು.

ಶ್ರೀ ರವಿ ಎಸ್ ದೇವಾಡಿಗರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಸಂಘದ ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು. ಸಂಘದ ಪ್ರಾದೇಶಿಕ ಸಮಿತಿಗಳಿಂದ ಸಮಾಜದ ಕೊನೆಯ ವ್ಯಕ್ತಿಯವರೆಗೆ ಈ ಸಂಘವನ್ನು ಒಯ್ಯಲು ಅನುಕೂಲವಾಗಿದ್ದು ಇಂತಹ ಸಮಿತಿಗಳು ತಮ್ಮ ತಮ್ಮ ವಲಯಗಳಲ್ಲಿ ಸಮಾಜ ಬಾಂಧವರನ್ನು ಒಟ್ಟುಗೂಡಿಸುವ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಮಳೆಗಾಲದ ಅಡುಗೆ ಹಾಗೂ ಮಳೆಗಾಲದ ಜೀವನ ಪರಿ ಹಿಂದೆ ಹೇಗಿತ್ತು ಮತ್ತು ಅದು ಹೇಗೆ ಬದಲಾಗುತ್ತಿದೆ ಎನ್ನುವ ವಿಷಯಗಳಲ್ಲಿ ವಿವಿಧ ಸದಸ್ಯರುಗಳು ತಮ್ಮ ತಮ್ಮ ಅನುಭವಗಳನ್ನು ಮಂಡಿಸಿದರು. ಆಷಾಢ ಮಾಸ ಕಳೆಯುತ್ತಲೇ ಶ್ರಾವಣ ಮಾಸ ಪ್ರಾರಂಭವಾಗುವುದು, ಶ್ರಾವಣ ಮಾಸದಲ್ಲಿ ಬರುವ ವಿವಿಧ ಹಬ್ಬಗಳು ಉದಾ: ನಾಗರಪಂಚಮಿ, ರಕ್ಷಾ ಬಂಧನ, ಚೌತಿ ಹಬ್ಬ, ನವರಾತ್ರಿ ಹಬ್ಬಗಳು ಜನರಲ್ಲಿ ಹೇಗೆ ಉತ್ಸಾಹಗಳನ್ನು ತುಂಬುತ್ತಿತ್ತು ಎಂದು ನ್ಯಾಯವಾದಿ ಶ್ರೀ ಪ್ರಭಾಕರ ದೇವಾಡಿಗ ಹೇಳಿದರು ಅಲ್ಲದೇ ಆಗಿನ ಆಷಾಢ ತಿಂಗಳ ಕಠಿಣ ಪರಿಸ್ಥಿತಿಗಳ ಕಡೆಗೆ ಬೆಳಕನ್ನು ಚೆಲ್ಲುತ್ತ ಹಿಂದಿನವರು ಮಳೆಗಾಲದ ದಿನಗಳನ್ನು ಎದುರಿಸಲು ಮಾಡುತ್ತಿದ್ದ ಮುಂಜಾಗ್ರತೆ ಮತ್ತು ಮಳೆಗಾಲವನ್ನು ಕಳೆಯುವ ವಿಧಾನದ ಬಗ್ಗೆ ಅವರು ವಿವರಿಸಿದರು. ಅಂದಿನ ಮಳೆಗಾಲದಲ್ಲಿ ಬರುವ ರೋಗ ರುಜಿನಗಳನ್ನು ಯಾವುದೇ ಆಧುನಿಕ ವೈದ್ಯಕೀಯ ಅನಾನುಕೂಲತೆಯೊಂದಿಗೆ ಆಟಿಕಳಂಜನು ಏಕೆ ಭೂಲೋಕಕ್ಕೆ ಬರುತ್ತಾನೆ ಮತ್ತು ಏನು ಮಾಡುತ್ತಾನೆ ಎಂಬುದನ್ನು “ಆಟಿ ಕಳಂಜ” ಪಾಡ್ದನದ ಮೂಲಕ ಶ್ರೀ ಪ್ರಭಾಕರ ದೇವಾಡಿಗರು ಹಾಡಿ ತೋರಿಸಿದರು.

ವಲಯದ ಮಹಿಳಾ ವಿಭಾಗವು ನಡೆಸಿದ ಈ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನೆ, ಸ್ಪರ್ಧಿಗಳಲ್ಲದೆ, ಎಪ್ಪತ್ತು ವರುಷ ಮೇಲ್ಪಟ್ಟ ಹಿರಿಯ ಮಹಿಳೆಯರನ್ನು ಶಾಲು, ಫಲ, ಪುಷ್ಪಗಳಿಂದ ಗೌರವಿಸಿದರು. ಅಲ್ಲದೆ ವಿವಿಧ ಪಕ್ವಾನ್ನಗಳನ್ನು ತಯಾರಿಸಿ, ಪ್ರದರ್ಶಿಸಿ ಬಡಿಸಿದ ಎಲ್ಲ ಮಹಿಳೆಯರನ್ನು ಗೌರವಿಸಲಾಯಿತು. ವಲಯದ ಮಹಿಳಾ ಕಾರ್ಯದರ್ಶಿ ಶ್ರೀಮತಿ ಲತಾ ಆನಂದ ದೇವಾಡಿಗ ಶೇರಿಗಾರರು ಸ್ವಾಗತಿಸಿದರು, ಉಪಾಧ್ಯಕ್ಷೆ ಶ್ರೀಮತಿ ಶಾಂತಾ ದೇವಾಡಿಗರು ಸಹಕರಿಸಿದರು. ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗರು ಕಾರ್ಯಕ್ರಮವನ್ನು ನಿರೂಪಿಸಿದರು, ಆಶಾ ದೇವಾಡಿಗ, ವನಿತಾ ದೇವಾಡಿಗ, ಸುನಂದಾ ಕರ್ಮರನ್, ಪ್ರಭಾವತಿ ದೇವಾಡಿಗ ಇವರು ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಕರ್ಮರನ್, ಶ್ರೀ ಗೋಪಾಲ್ ಮೊಯ್ಲಿ, ವಲಯದ ಕಾರ್ಯಾಧ್ಯಕ್ಷರಾದ ಶ್ರೀ ಆನಂದ್ ಶೇರಿಗಾರ್, ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೋಯ್ಲಿ, ಶ್ರೀ ಗಣೇಶ್ ಶೇರಿಗಾರ್, ಜೊತೆ ಕೋಶಾಧಿಕಾರಿ ದಯಾನಂದ ದೇವಾಡಿಗ, ಸಂಘದ ಮಹಿಳಾ ಅಧ್ಯಕ್ಷೆ ಶ್ರೀಮತಿ ಜಯಂತಿ ಮೊಯ್ಲಿ, ಆರೋಗ್ಯ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ ದೇವಾಡಿಗ, ಇತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರುಗಳು ಮತ್ತು ಸಮಿತಿಯ ಸದಸ್ಯರು ಹಾಗೂ ಸಮಾಜ ಬಾಂಧವರು ಬಹುಸಂಖ್ಯೆಯಲ್ಲಿ ನೆರೆದಿದ್ದರು. ವಲಯದ ಮಹಿಳಾ ಅಧ್ಯಕ್ಷೆ ಶ್ರೀಮತಿ ಅಂಬಿಕಾ ಜನಾರ್ದನ ದೇವಾಡಿಗರು ಪ್ರಾಸ್ತಾವಿಕ ದೊಂದಿಗೆ ಎಲ್ಲರನ್ನು ವಂದಿಸಿದರು