Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬೈ- ನವೀ ಮುಂಬೈ ವಲಯದಿಂದ ದಾಂಡಿಯ ರಾಸ್ ಮತ್ತು ಯುವಕರಿಗೆ ಗೌರವ.

ದೇವಾಡಿಗ ಸಂಘ ಮುಂಬೈ- ನವೀ ಮುಂಬೈ ವಲಯದಿಂದ ದಾಂಡಿಯ ರಾಸ್ ಮತ್ತು ಯುವಕರಿಗೆ ಗೌರವ.

ದೇವಾಡಿಗ ಸಂಘ ಮುಂಬೈ- ನವೀ ಮುಂಬೈ ಪ್ರಾದೇಶಿಕ ಸಮನ್ವಯ ಸಮಿತಿಯ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಭಜನೆ, ದಾಂಡಿಯ ರಾಸ್ ಮತ್ತು ಯುವಕರಿಗೆ ಸನ್ಮಾನದ ಒಂದು ಜಂಟಿ ಕಾರ್ಯಕ್ರಮವನ್ನು ಅಕ್ಟೋಬರ್ 5 ರಂದು ನೆರುಳಿನಲ್ಲಿರುವ ದೇವಾಡಿಗ ಭವನದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ನವೀ ಮುಂಬೈಯ ಹೊಸ ನಿರ್ವಚಿತ ಕಾರ್ಯಾದ್ಯಕ್ಷರಾದ ಹಾಗೂ ಎಲ್ಲರಿಗೂ ಪರಿಚಿತರಾದ ನ್ಯಾಯವಾದಿ ಶ್ರೀ ಪ್ರಭಾಕರ್ ಎಸ್ ದೇವಾಡಿಗ, ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಲತಾ ಆನಂದ್ ಶೇರಿಗಾರ್ ಇವರ ನೇತ್ರತ್ವದಲ್ಲಿ ಸಮಿತಿ ಸದ್ಯಸರು ಮತ್ತು ಯುವ ವಿಭಾಗದ ಸಹಯೋಗದಿಂದ ಅದ್ದೂರಿಯಾಗಿ ಜರಗಿತು.

ಪ್ರಾರಂಭದಲ್ಲಿ ಶ್ರೀ ರಾಮ ಭಜನಾ ಮಂಡಲಿಯ ಸದ್ಯಸರಿಂದ ದಸರಾ ನವರಾತ್ರಿ ಹಬ್ಬದ ಆಚರಣೆಯ ಅಂಗವಾಗಿ ಭಜನಾ ಕಾರ್ಯಕ್ರಮವನ್ನು ಮಾಡಲಾಯಿತು. ಬಳಿಕ ನವೀ ಮುಂಬೈ ಸ್ಥಳೀಯ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ವತಿಯಿಂದ ಗರ್ಭಾ ಮತ್ತು ಧಾಂಡಿಯ ರಾಸ್ ಕಾರ್ಯಕ್ರಮವನ್ನು ಅದ್ದೂರಿಯಿಂದ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯಾಗಾರಿಕೆ, ಅತ್ಯುತ್ತಮ ಉಡುಗೆ ಈ ಶೀರ್ಷಿಕೆಯ ಸ್ಪರ್ದೆಗಳನ್ನು ಆಯೋಜಿಸಿದ್ದು, ಸ್ಪರ್ದೆಯ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಪಾರಿತೋಷಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೇವಾಡಿಗ ಫುಟ್ಬಾಲ್ ಲೀಗ್ ಫುಟ್ಬಾಲ್ ಪಂದ್ಯದ ಚ್ಯಾಂಪಿಯನ್ ಶಿಪ್ ಗಳಿಸಿದ ನವೀ ಮುಂಬೈ ಯುವ ವಿಭಾಗದ ತಂಡವನ್ನು ವಿಶೇಷ ಕಪ್ ಮತ್ತು ಪಾರಿತೋಷಕಗಳನ್ನು ವಿತರಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗರು ಉಪಸ್ಥಿತರಿದ್ದು, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ರೀಡಾ ವಿಬಾಗದ ಕಾರ್ಯಾಧ್ಯಕ್ಷರಾದ ಶ್ರೀ ರಘು ಮೊಯಿಲಿ, ಸ್ಥಳೀಯ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಆನಂದ್ ಶೇರಿಗಾರ್, ಸಂಘದ ಮಾಜಿ ಕೋಶದಿಕಾರಿ ಶ್ರೀ ದಯಾನಂದ್ ದೇವಾಡಿಗ, ಮಹಿಳಾ ವಿಭಾಗದ ಉಪಾಕಾರ್ಯಾದ್ಯಕ್ಷೆ (ಕಲ್ಚರಲ್) ಶ್ರೀಮತಿ ಪೂರ್ಣಿಮಾ ದೇವಾಡಿಗ, ನವೀ ಮುಂಬೈ ಸಮಿತಿಯ ಮಾಜಿ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಅಂಬಿಕಾ ಜೆ. ದೇವಾಡಿಗ, ಕಾರ್ಯಾದ್ಯಕ್ಷೆ ಶ್ರೀಮತಿ ಲತಾ ಶೇರಿಗಾರ್, ಉಪಾದ್ಯಕ್ಷರಾದ ಶ್ರೀ ಕರುಣಾಕರ್ ವಿ. ದೇವಾಡಿಗ, ಕಾರ್ಯದರ್ಶಿ ಶ್ರೀ ಚಂದ್ರಶೇಕರ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ಸುರೇಶ್ ದೇವಾಡಿಗ ಬಾರ್ಕೂರ್, ಕೋಶದಿಕಾರಿ ಶ್ರೀಹರಿಶ್ಚಂದ್ರ ದೇವಾಡಿಗ, ಜೊತೆ ಕೋಶದಿಕಾರಿ ಶ್ರೀ ಶಂಕರ್ ದೇವಾಡಿಗ, ಮಹಿಳಾ ಉಪಾದ್ಯಕ್ಷೆ ಶ್ರೀಮತಿ ಶಾಂತಾ ಪಿ. ದೇವಾಡಿಗ, ಕೋಶದಿಕಾರಿ ಶ್ರೀಮತಿ ಧನವತಿ ದೇವಾಡಿಗ, ಶ್ರೀ ವಿಟ್ಟಲ್ ದೇವಾಡಿಗ, ಯುವ ವಿಭಾಗದ ಶ್ರೀ ಸಚಿನ್ ದೇವಾಡಿಗ, ಯುವ ವಿಭಾಗದ ಮಾರ್ಗದರ್ಶಕ ಶ್ರೀ ಗಿರೀಶ್ ದೇವಾಡಿಗ, ಸಂದೇಶ್ ದೇವಾಡಿಗ, ಅಶ್ವಿನ್ ದೇವಾಡಿಗ, ರಾಜೇಶ್ ದೇವಾಡಿಗ, ಕಾರ್ತಿಕ್ ದೇವಾಡಿಗ, ಅಕ್ಷಯ ದೇವಾಡಿಗ, ವಿನಯ್ ದೇವಾಡಿಗ, ಶಾಂಬವಿ ದೇವಾಡಿಗ, ಭವನದ ಮೇಲ್ವಿಚಾರಕರಾದ ಶ್ರೀ ಜಾರಪ್ಪ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.