Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯಿಂದ ಶೇಕಡಾ 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗೌರವ.

ದೇವಾಡಿಗ ಸಂಘ ಮುಂಬಯಿ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯಿಂದ ಶೇಕಡಾ 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗೌರವ.

ನವಿ ಮುಂಬಯಿ, ಆ. 15 - ದೇವಾಡಿಗ ಸಂಘ ಮುಂಬಯಿ ಇದರ ನವಿ ಮುಂಬಯಿ ಪ್ರಾದೇಶಿಕ ಸಮಿತಿಯು ಕಾರ್ಯಧ್ಯಕ್ಷರಾದ ನ್ಯಾಯವಾದಿ ಶ್ರೀ ಪ್ರಬಾಕರ್ ದೇವಾಡಿಗ ಇವರ ನೇತೃತ್ವದಲ್ಲಿ 2020-21 ಶೈಕ್ಷಣಿಕ ವರ್ಷದಲ್ಲಿ S.S.C ಮತ್ತು H.S.C ತರಗತಿಗಳಲ್ಲಿ ಶೇಕಡಾ 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಅಲ್ಲದೆ ಔದ್ಯೋಗಿಕ ಶಿಕ್ಷಣ ಮತ್ತು ಡಿಗ್ರಿ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದೇವಾಡಿಗ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಶ್ರೀ ನರೇಶ್ ದೇವಾಡಿಗ ಇವರು ಮುಖ್ಯ ಅತಿಥಿಗಳಾಗಿದ್ದು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮತಿ ಆಶಾ ಪಿ. ದೇವಾಡಿಗ ಸಾನ್ಪಾಡ, ಆಶಾ ದೇವಾಡಿಗ ನೆರೂಲ್ ಮತ್ತು ಪೂರ್ಣಿಮಾ ಡಿ. ದೇವಾಡಿಗ ಇವರು ಪ್ರಾರ್ಥನೆ ಸಲ್ಲಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಪಿ. ಕರ್ಮರನ್, ಸಂಘದ ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಸಮಿತಿಯ ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಶಾಂತ ಎಸ್. ದೇವಾಡಿಗ, ಶ್ರೀಮತಿ ಸುನಂದಾ ಕರ್ಮರನ್, ನ್ಯಾಯವಾದಿ ಶ್ರೀ ಪ್ರಬಾಕರ್ ದೇವಾಡಿಗ ಇವರು ಸಹಕರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ನರೇಶ್ ದೇವಾಡಿಗ ಇವರು ಇಂತಹ ಕಾರ್ಯಕ್ರಮದ ಆಯೋಜಕರನ್ನು ಶ್ಲಾಘಿಸಿ ಹೆಚ್ಚು ಅಂಕಗಳಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಸಂಘ ಸಂಸ್ಥೆಗಳಲ್ಲಿ ನಡೆಯಬೇಕು. ಅದರಲ್ಲಿ ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಮನಸ್ಥೈರ್ಯ ಬೆಳೆದು ತಮ್ಮ ಜೀವನದಲ್ಲಿ ಸಾಧನೆ ಮಾಡಲು ನೆರವು ಆಗುವುದು ಎಂದು ಹೇಳುತ್ತಾ ಸಾಕಷ್ಟು ಸಾಧನೆ ಮಾಡಿದರೆ ಮಾತ್ರ ಸಾಫಲ್ಯ ಲಭ್ಯ ಎಂದು ಹೇಳಿದರು. ಈಗ ವಿದ್ಯಾರ್ಥಿಗಳಿಗೆ ಅನೇಕ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಅನುಕೂಲ ಆಗುತ್ತಿದ್ದು ಆದಷ್ಟು ಉಚ್ಚ ಶಿಕ್ಷಣ ಪಡೆದು ಉತ್ತಮ ಗುರಿ ಸಾಧಿಸುವಲ್ಲಿ ವಿದ್ಯಾರ್ಥಿಗಳು ಮತ್ತ್ತುಅವರ ಪಾಲಕರು ಖಾಳಜಿ ವಹಿಸಬೇಕು ಎಂದರು. ಅಲ್ಲದೆ ಸಮಾಜ ಸಂಸ್ಥೆಗಳಲ್ಲಿ ಸದಸ್ಯರು ದುಡಿದು ನಿರ್ಮಿಸಿದ ಮೌಲ್ಯಗಳನ್ನು ಕಾಪಾಡಿಕೊಂಡು ಬರುವಂತೆ ಕರೆಕೊಟ್ಟರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಪಿ. ಕರ್ಮರನ್ ಮಾತನಾಡುತ್ತ, ಆದರ್ಶ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಲ್ಲಿ ಭವಿಷ್ಯದ ಜೀವನ ಸುಗಮ ಆಗುವುದು ಎಂದರು. ಈಗಿನ ವಿದ್ಯಾರ್ಥಿಗಳು ಸಂಘದ ಮುಂದಿನ ಭವಿಷ್ಯ ಆಗಿದ್ದು, ತಮ್ಮ ಶಿಕ್ಷಣದ ಜೊತೆಯಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಿಸಿಕೊಳ್ಳಬೇಕು ಎಂದು ಹೇಳಿದರು.

ನ್ಯಾಯವಾದಿ ಶ್ರೀ ಪ್ರಬಾಕರ್ ದೇವಾಡಿಗ ಇವರು ಮಾತನಾಡುತ್ತ, ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಕೋರಿದರು. ಹಿಂದಿನ ಪೀಳಿಗೆಯ ಜನರು ಅಲ್ಪ ಶಿಕ್ಷಿತರಾಗಿದ್ದು ಹಗಲಲ್ಲಿ ದುಡಿಯುತ್ತಿದ್ದು, ರಾತ್ರಿ ಶಾಲೆ, ಕಾಲೇಜು ಮಾಡಿಕೊಂಡು ತಮ್ಮ ಜೀವನದಲ್ಲಿ ಯಶಸ್ಸನ್ನು ಕಂಡು ಕೊಂಡಿದ್ದಾರೆ. ಆದರೆ ಈಗಿನ ಕಾಲದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಾಕಷ್ಟು ಅನುಕೂಲತೆಯನ್ನು ಮಾಡಿಕೊಡುತ್ತಿದ್ದು, ವಿದ್ಯಾರ್ಥಿಗಳು ಅದರ ದುರುಪಯೋಗ ಮಾಡಬಾರದು ಎಂದು ಹೇಳಿದರು. ಅಲ್ಲದೆ, ಸಂಘದಲ್ಲಿ ಸದಸ್ಯರು ಮಾಡಿದ ಸೇವೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಹಿರಿಯ ಸದಸ್ಯ ಶ್ರೀ ಚಂದ್ರಶೇಖರ ದೇವಾಡಿಗ ಅಲ್ಲದೆ ವಿದ್ಯಾರ್ಥಿಗಳು ಕೂಡ ವೇದಿಕೆಗೆ ಬಂದು ತಮ್ಮ ವಾದವನ್ನ ಮಂಡಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಕೋಶಾಧಿಕಾರಿ ಶ್ರೀ ದಯಾನಂದ ದೇವಾಡಿಗ, ಸಂಘದ ಸ್ಥಳೀಯ ಸಮಿತಿ ಸದಸ್ಯರಾದ ಶ್ರೀ ಭೋಜ ದೇವಾಡಿಗ, ಶ್ರೀ ಚಂದ್ರಶೇಖರ ದೇವಾಡಿಗ, ಶ್ರೀ ಸುರೇಶ ದೇವಾಡಿಗ ಬಾರಕೂರು, ಶ್ರೀ ಹರಿಶ್ಚಂದ್ರ ದೇವಾಡಿಗ, ದೇವಾಡಿಗ ಭವನದ ವ್ಯವಸ್ಥಾಪಕರಾದ ಶ್ರೀ ಜಾರಪ್ಪ ದೇವಾಡಿಗ ಮಹಿಳಾ ಸದಸ್ಯರಾದ ಶ್ರೀಮತಿ ಸುನಂದ ಕರ್ಮರನ್, ಶ್ರೀಮತಿ ಧನವತಿ ದೇವಾಡಿಗ, ಶ್ರೀಮತಿ ಶಾಂತ ಪಿ. ದೇವಾಡಿಗ, ಶ್ರೀಮತಿ ಶಾಂತ ದೇವಾಡಿಗ, ಶ್ರೀಮತಿ ಆಶಾ ದೇವಾಡಿಗ, ಕುಮಾರಿ ವೈಷ್ಣವಿ ಏನ್. ದೇವಾಡಿಗ, ಕುಮಾರಿ ತನ್ವಿ ಡಿ. ದೇವಾಡಿಗ, ಕುಮಾರಿ ಸ್ವಾತಿ ದೇವಾಡಿಗ, ಶ್ರೀಮತಿ ವಿಮಲಾ ದೇವಾಡಿಗ, ಮಾಸ್ಟರ್ ಧನುಷ್ ಏನ್. ದೇವಾಡಿಗ, ಮಾಸ್ಟರ್ ರೋಹನ್ ಡಿ. ದೇವಾಡಿಗ ಮಾಸ್ಟರ್ ಕಾರ್ತಿಕ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು

ನ್ಯಾಯವಾದಿ ಶ್ರೀ ಪ್ರಬಾಕರ್ ದೇವಾಡಿಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು