Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ನವಿ ಮುಂಬಯಿ ಪ್ರಾದೇಶಿಕ ಸಮಿತಿಯಿಂದ "ಆಟಿದ ಒಂಜಿ ದಿನ” ಕಾರ್ಯಕ್ರಮದ ಆಯೋಜನೆ

ದೇವಾಡಿಗ ಸಂಘ ಮುಂಬಯಿ: ನವಿ ಮುಂಬಯಿ ಪ್ರಾದೇಶಿಕ ಸಮಿತಿಯಿಂದ "ಆಟಿದ ಒಂಜಿ ದಿನ” ಕಾರ್ಯಕ್ರಮದ ಆಯೋಜನೆ

ನವಿ ಮುಂಬಯಿ, ಜುಲೈ 23 : ದೇವಾಡಿಗ ಸಂಘ ಮುಂಬಯಿ ನವಿ ಮುಂಬಯಿ ಪ್ರಾದೇಶಿಕ ಸಮಿತಿಯು "ಆಟಿದ ಒಂಜಿ ದಿನ" ಕಾರ್ಯಕ್ರಮವನ್ನು ಸಮಿತಿಯ ಕಾರ್ಯಧ್ಯಕ್ಷ ಶ್ರೀ ರಮೇಶ್ ದೇವಾಡಿಗ ಐರೋಲಿ ಇವರ ನೇತೃತ್ವದಲ್ಲಿ ಸಂಘದ ಇಲ್ಲಿರ್ ನೆರೂಲ್ ಇಲ್ಲಿನ ದೇವಾಡಿಗ ಭವನದಲ್ಲಿಬಹಳ ಅದ್ದೂರಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಪಿ. ಕರ್ಮರನ್, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ, ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಯುವ ಸಮಿತಿಯ ಕಾರ್ಯಾಧ್ಯಕ್ಷರು ಶ್ರೀ ಬೃಜೇಶ್ ನಿಟ್ಟೇಕರ್, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಶ್ರೀ ರಮೇಶ್ ದೇವಾಡಿಗ ಐರೋಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸ್ವಪ್ನ ಪಿ. ಮೊಯ್ಲಿ, ಉಪಾಧ್ಯಕ್ಷರಾದ ಶ್ರೀ ಸುರೇಶ್ ದೇವಾಡಿಗ ಬಾರ್ಕೂರು, ಕಾರ್ಯದರ್ಶಿ ಗಣೇಶ್ ಸೇರಿಗಾರ್ ಇವರು ಉಪಸ್ಥಿತರಿದ್ದರು. ಶ್ರೀಮತಿ ಆಶಾ ಆರ್. ದೇವಾಡಿಗ ನೆರೂಲ್ ಮತ್ತು ಶ್ರೀಮತಿ ಆಶಾ ದೇವಾಡಿಗ ಸಾನ್ಪಾಡ ಇವರು ಪ್ರಾರ್ಥನೆ ಸಲ್ಲಿಸಿದರು

ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರು ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮಗಳನ್ನು ಪ್ರಶಂಸಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಬೇರೆ ಸಂಘಗಳಂತೆ ಸಂಘಕ್ಕೆ ಬಲ ಬರ ಬೇಕಾದರೆ ಸಂಘದಲ್ಲಿ ದೊಡ್ಡ ಪ್ರಮಾಣದ ಸದಸ್ಯರು ಬೇಕಾಗುತ್ತದೆ. ಆದುದರಿಂದ ಎಲ್ಲರೂ ಸಂಘದ ಸದಸ್ಯತ್ವವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು. ಸದಸ್ಯರು ಇಲ್ಲದಿದ್ದರೆ ಜನರು ಬರುವುದಿಲ್ಲ. ಹೆಚ್ಚು ಸದಸ್ಯರಿದ್ದರೆ ಹೆಚ್ಚು ಜನರು ಭಾಗವಹಿಸುತ್ತಾರೆ. ಯುವಕರು ಪಾಲಕರನ್ನು ಮತ್ತು ಪಾಲಕರು ತಮ್ಮ ಮಕ್ಕಳನ್ನು ಕರೆ ತಂದು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಸಂಘ ಬೆಳೆಯುತ್ತದೆ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಇಲ್ಲದಿರುವದಕ್ಕೆ ಖೇದ ವ್ಯಕ್ತ ಪಡಿಸಿದರು. ಅಲ್ಲದೆ ಇಂತಹ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಯುವಕರಿಗೆ ಬಿಟ್ಟುಬಿಡಬೇಕು. ಅವರು ತಮ್ಮದೇ ಆದ ಮತ್ತು ಒಳ್ಳೆಯ ರೀತಿಯಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಅದರಿಂದಾಗಿ ನಮಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ಹೇಳಿದರು. ಅಲ್ಲದೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸಂಘವು ಆರ್ಥಿಕ ಬೆಂಬಲ ನೀಡುತ್ತಿದ್ದು ಸದಸ್ಯರು ಅದರ ಲಾಭ ಪಡೆಯಬೇಕು ಎಂದು ಹೇಳಿದರು. ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗರು ಮಾತನಾಡುತ್ತಾ ಹಿಂದಿನ ಕಾಲದಲ್ಲಿ ಆಷಾಡ ಮಾಸದಲ್ಲಿ ನಮ್ಮ ಪೂರ್ವಜರು ತಿಂಡಿ ತಿನಸುಗಳಿಗೆ ಪರದಾಡುತಿದ್ದರು. ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿತ್ತು. ಅಂತ ಹ ದಿನಗಳ ನೆನಪಿಗೋಸ್ಕರ ಇಂದು ತುಳುನಾಡಿನ ಭಾಂದವರು ಆಷಾಡ ಮಾಸವನ್ನು ಆಚರಿಸುತ್ತಿದ್ದಾರೆ ಮಾತ್ರವಲ್ಲದೆ ನಮ್ಮ ಮಕ್ಕಳಿಗೂ ಇದನ್ನು ತಿಳಿಸಬೇಕು ಎಂದರು. ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಬಂದಿದ್ದಾರೆ ಅಲ್ಲದೆ ಮನೋರಂಜನೆಯ ಸಲುವಾಗಿ ಜಾನಪದ ಗೀತೆ,ಭಾವಗೀತೆ ಮತ್ತು ಆಟಿ ಕಲಂಜ ಡಾನ್ಸ್ ಮಾಡಿದ್ದಾರೆ. ಇವರಿಗೆಲ್ಲ ನನ್ನ ತುಂಬು ಹೃದಯದ ಧನ್ಯವಾದಗಳು ಎಂದರು.

ಬಳಿಕ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಇವರು ಜಾನಪದ ಪಾರ್ದನ ಹಾಡಿದರು. ಶ್ರೀಮತಿ ಸುನಂದಾ ಕರ್ಮರನ್ ಮತ್ತು ಶ್ರೀ ಪದ್ಮನಾಭ ಮೊಯಿಲಿ ಇವರು "ಆಟಿ" ತಿಂಗಳ ಮಹತ್ವದ ಕುರಿತು ತಮ್ಮ ತಮ್ಮ ತಮ್ಮ ಮಾಹಿತಿ ನೀಡಿದರು. ಶ್ರೀ ಗಣೇಶ್ ಸೇರಿಗಾರ್, ಶ್ರೀ ರಮೇಶ್ ದೇವಾಡಿಗ, ಶ್ರೀಮತಿ ಪೂರ್ಣಿಮಾ ಮತ್ತು ಶ್ರೀ ದಯಾನಂದ್ ದೇವಾಡಿಗ,ಶ್ರೀಮತಿ ಆಶಾ ಆರ್. ದೇವಾಡಿಗ ನೆರೂಲ್ ಮತ್ತು ಶ್ರೀಮತಿ ಆಶಾ ದೇವಾಡಿಗ ಸಾನ್ಪಾಡ, ಶ್ರೀಮತಿ ಪ್ರಭಾವತಿ ದೇವಾಡಿಗ ಮತ್ತು ತಂಡ, ಶ್ರೀಮತಿ ಶಾಂತ ದೇವಾಡಿಗ ಶ್ರೀಮತಿ ಉಮಾವತಿ ಗುಜರನ್, ಮಾಸ್ಟರ್ ನಿಹಾನ್, ಕುಮಾರಿ ಸನ್ನಿದಿ ಮೊದಲಾದವರು, ವಿವಿಧ ಜಾನಪದ ಹಾಡುಗಳನ್ನು ಹಾಡಿದರು. ಕುಮಾರಿ ರಕ್ಷತ ದೇವಾಡಿಗ ಇವರ ನೇತೃತ್ವದಲ್ಲಿ ಕುಮಾರಿ ಕೃತಿಕಾ ದೇವಾಡಿಗ, ಕುಮಾರಿ ವಿಹಾಕ ದೇವಾಡಿಗ ಮಾತು ಶ್ರೀಮತಿ ಹೇಮಲತಾ ದೇವಾಡಿಗ ಇವರು "ಆಟಿಕಳಿಂಜ" ನ್ರತ್ಯ ರೂಪಕ ಆಡಿ ತೋರಿಸಿದರು. ಶ್ರೀ ಪದ್ಮನಾಭ ಮೊಯಿಲಿ ಇವರು ಪಾರ್ದನವನ್ನು ಹಾಡಿದರು. ಸುಮಿತ್ರಾ ದೇವಾಡಿಗ, ಸುಮತಿ ದಯಾನಂದ್ ದೇವಾಡಿಗ, ಉಮಾವತಿ ಗುಜರನ್, ಸ್ವಷ್ಮಿ ದೇವಾಡಿಗ ಐರೋಲಿ, ಶಾಂತ ಪಿ. ದೇವಾಡಿಗ, ಪುಷ್ಪಲತ ವಸಂತ್ ದೇವಾಡಿಗ ಇವರನ್ನು ಗೌರವಿಸಲಾಯಿತು.
ಬಳಿಕ ನಡೆದ ಆಟಿ ತಿಂಗಳ ವಿಶೇಷ ಅಡುಗೆ ಸ್ಪರ್ಧೆಯಲ್ಲಿ ಅನೇಕ ಮಹಿಳೆಯರು ಭಾಗವಹಿಸಿದರು. ಇದರಲ್ಲಿ ಶ್ರೀಮತಿ ಸಪ್ನಾ ಮೊಯ್ಲಿ, ಗೀತಾ ಸುನಿಲ್, ಲತಾ ಶೇರಿಗಾರ, ಆಶಾ ಆರ್. ದೇವಾಡಿಗ, ಆಶಾ ದೇವಾಡಿಗ ಸಾನ್ಪಾಡ, ಸುನೀತಾ ಪರಮೇಶ್ವರ್, ಅಂಬಿಕಾ ದೇವಾಡಿಗ, ಧನ್ವತಿ ದೇವಾಡಿಗ, ಪೂರ್ಣಿಮಾ ದೇವಾಡಿಗ, ಅಶ್ವಿನಿ ದೇವಾಡಿಗ, ಅಮಿತ ರಮೇಶ್, ಸುನಂದಾ ಕರ್ಮರನ್, ಸುಂದರಿ ಮೊಯ್ಲಿ, ಜಾನಕೀ ನಾಗರಾಜ್, ಗೀತಾ ನರೇಶ್, ನಿರ್ಮಲ ದೇವಾಡಿಗ, ಹೇಮಾ ದೇವಾಡಿಗ,ಶಾಂತ ದೇವಾಡಿಗ, ಸುಮನ್ ಸೇರಿಗಾರ್, ಕಲಾ ಸೇರಿಗಾರ್, ಸುಮತಿ ಶಂಕರ್,ವಾಣಿ ವಿಶ್ವನಾಥ್, ಶುಭವತೀ ದೇವಾಡಿಗ, ಲೀಲಾ ದೇವಾಡಿಗ, ರವಿಕಲಾ ದೇವಾಡಿಗ, ವನಿತಾ ರವಿ, ಮಲ್ಲಿಕಾ ದೇವಾಡಿಗ, ಪ್ರಭಾವತಿ ದೇವಾಡಿಗ, ನಂದಿನಿ ಸುರೇಶ ಮೊದಲಾದವರು ಭಾಗವಹಿಸಿದರು. ಇದರಲ್ಲಿ ಅಮಿತ ರಮೇಶ್ ಮತ್ತಿ ನಂದಿನಿ ಸುರೇಶ ಇವರು ಮೂರನೇ ಬಹುಮಾನ ಪಡೆದರು. ವನಿತಾ ರವಿ ಇವರು ದ್ವಿತೀಯ ಬಹುಮಾನ ಪಡೆದರು ಮತ್ತು ಆಶಾ ದೇವಾಡಿಗ ಸಾನ್ಪಾಡ ಇವರು ಪ್ರಥಮ ಸ್ಥಾನ ಪಡೆದರು. ಡಾ. ಹರೀಶ್ ಪೂಜಾರಿ ಮತ್ತು ಶ್ರೀಮತಿ ಸವಿತಾ ಪೂಜಾರಿ ಇವರು ಪರೀಕ್ಷಕರಾಗಿದ್ದರು.

ಈ ಸಂದರ್ಭದಲ್ಲಿ ಎಲ್ಲಾ ಅತಿಥಿಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು., ಅಡುಗೆ ಸ್ಪರ್ಧೆಯಲ್ಲಿ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಮತ್ತು ಬಹುಮಾನ ಪಡೆದವರನ್ನು ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅಶ್ವಿನಿ ದೇವಾಡಿಗ ಇವರು ನೆರವೇರಿಸಿದರು ಹಾಗೂ ಶ್ರೀ ರಮೇಶ್ ದೇವಾಡಿಗ ಇವರು ಧನ್ಯವಾದ ಸಮರ್ಪಣೆ ಮಾಡಿದರು.