Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ಮಾಜಿ ಅಧ್ಯಕ್ಷರಾದ ದಿವಂಗತ ಶ್ರೀ ನಾರಾಯಣ್ ಗುರುವ ಪಡುಬಿದ್ರಿ ಅವರ ಗೌರವಾರ್ಥ ಸಾರ್ವಜನಿಕ ಸಂತಾಪ ಸಭೆ

ಮಾಜಿ ಅಧ್ಯಕ್ಷರಾದ ದಿವಂಗತ ಶ್ರೀ ನಾರಾಯಣ್ ಗುರುವ ಪಡುಬಿದ್ರಿ ಅವರ ಗೌರವಾರ್ಥ ಸಾರ್ವಜನಿಕ ಸಂತಾಪ ಸಭೆ

ಸಂಘದ ಮಾಜಿ ಅಧ್ಯಕ್ಷರಾದ ದಿವಂಗತ ಶ್ರೀ ನಾರಾಯಣ್ ಗುರುವ ಪಡುಬಿದ್ರಿ ಅವರ ಗೌರವಾರ್ಥ ಸಾರ್ವಜನಿಕ ಸಂತಾಪ ಸಭೆಯು 5 ಮಾರ್ಚ್ 2022 ರಂದು ಸಂಘದ ದಾದರ್ ಕಚೇರಿಯಲ್ಲಿ ಜರಗಿತು.

ದೇವಾಡಿಗ ಸಂಘ ಮುಂಬಯಿ ಇದರ ವತಿಯಿಂದ 5 ಮಾರ್ಚ್ 2022 ರಂದು ಸಂಘದ ದಾದರ್ ಕಛೇರಿಯಲ್ಲಿ ಮಾಜಿ ಅಧ್ಯಕ್ಷರಾದ ದಿವಂಗತ ಶ್ರೀ ನಾರಾಯಣ್ ಗುರುವ ಪಡುಬಿದ್ರಿ ಅವರ ಗೌರವಾರ್ಥ ಸಾರ್ವಜನಿಕ ಸಂತಾಪ ಸಭೆಯನ್ನು ಏರ್ಪಡಿಸಲಾಯಿತು.


ಶ್ರೀ ವಿಶ್ವನಾಥ ಬಿ ದೇವಾಡಿಗ, ಸನ್ಮಾನ್ಯ ಪ್ರಧಾನ ಗೌರವ ಕಾರ್ಯದರ್ಶಿಯವರು ದಿವಂಗತ ಶ್ರೀಯುತ ನಾರಾಯಣ್ ಗುರುವ ಪಡುಬಿದ್ರಿಯವರ 1972 ರಿಂದ 1987 ರವರೆಗೆ ವಿವಿಧ ಸಾಮರ್ಥ್ಯಗಳಲ್ಲಿ ಅಂದರೆ ಖಜಾಂಚಿ, ಜೊತೆ ಕಾರ್ಯದರ್ಶಿ, ಉಪಕಾರ್ಯಧ್ಯಕ್ಷ ಹಾಗು ಅಧ್ಯಕ್ಷರಾಗಿ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಬಗ್ಗೆ ತಿಳಿಸಿದರು. ಹಾಗೂ ಅವರು ಉತ್ತಮ ಸಂವಹನಕಾರರಾಗಿ ನಗುತ್ತಿರುವ ಮುಖದೊಂದಿಗೆ ನಮಸ್ಕಾರದೊಂದಿಗೆ ಎಲ್ಲರೊಂದಿಗೆ ಬೆರೆಯುತ್ತಿದ್ದರು ಎಂದರು.


ಮಾಜಿ ಕಾರ್ಯಾಧ್ಯಕ್ಷರಾದ ಶ್ರೀಯುತ ಶ್ರೀನಿವಾಸ್ ಪಿ ಕರ್ಮರನ್, ಶ್ರೀಯುತ ವಾಸು ಎಸ್ ದೇವಾಡಿಗ, ಶ್ರೀಯುತ ಹಿರಿಯಡ್ಕ ಮೋಹನ್‌ದಾಸ್ ರವರು ಮಾಜಿ ಅಧ್ಯಕ್ಷ ದಿವಂಗತ ಶ್ರೀ ನಾರಾಯಣ ಜಿ ಪಡುಬಿದ್ರಿಯವರ ಕೊಡುಗೆ ಮತ್ತು ಆ ಸಮಯದಲ್ಲಿ ವಿವಿಧ ಹುದ್ದೆಗಳಲ್ಲಿ ಸಂಘಕ್ಕೆ ನೀಡಿದ ಕೆಲಸಗಳ ಕುರಿತು ಮಾತನಾಡಿದರು. ದಿವಂಗತ ಶ್ರೀ ಪಡುಬಿದ್ರಿಯವರು ದೇವಾಡಿಗ ಕ್ರೀಡಾಕೂಟ ದಿನಾಚರಣೆ ಸಮಯದಲ್ಲಿ ಅವರು ಕೆಲಸ ಮಾಡುತ್ತಿದ್ದ ಪಾರ್ಲೆ ಕಂಪನಿಯಿಂದ ತಂಪು ಪಾನೀಯದ ಪ್ರಾಯೋಜಕತ್ವವನ್ನು ತರುತ್ತಿದ್ದರು. ಅವರು ಉತ್ತಮ ಸಂವಹನಕಾರರು ಕೂಡ ಆಗಿದ್ದರು ಎಂದರು.


ದಿವಂಗತ ಶ್ರೀ ಪಡುಬಿದ್ರಿಯವರ ಸ್ನೇಹಿತರಾದ ಶ್ರೀ ಸುಬ್ರಹ್ಮಣ್ಯ ಅಯ್ಯರ್ ಹೇಳಿದರು - ಅವರು ಸರಳ ಮತ್ತು ವಿನಮ್ರ ವ್ಯಕ್ತಿ, ಸಾಮಾಜಿಕ ಉದ್ದೇಶಕ್ಕಾಗಿ ಕೆಲಸ ಮಾಡುವ ಶಕ್ತಿ ಮತ್ತು ಉತ್ಸಾಹವನ್ನು ಹೊಂದಿದ್ದರು. ಹೌಸಿಂಗ್ ಸೊಸೈಟಿಯಲ್ಲೂ ಎಲ್ಲರ ಸಹಕಾರದೊಂದಿಗೆ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದ ರೆಂದರು.


ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಮಾಲತಿ ಜೆ ಮೊಯಿಲಿ ಮತ್ತು ಶ್ರೀ ಜಯ ಎಲ್ ದೇವಾಡಿಗ, ಖಜಾಂಚಿ ಶ್ರೀ ಕೃಷ್ಣ ದೇವಾಡಿಗ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ರಘು ಮೊಯಿಲಿ, ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರಿನ ಕಾರ್ಯದರ್ಶಿ ಶ್ರೀ ಸುಧಾಕರ್ ಎಲ್ಲೂರು ,ಪ್ರಾದೇಶಿಕ ಸಮನ್ವಯ ಸಮಿತಿ ಅಸಲ್ಫಾದ ಕಾರ್ಯಾಧ್ಯಕ್ಷ ಶ್ರೀ ಯೋಗೀಶ್ ದೇವಾಡಿಗ, ಶ್ರೀಮತಿ ಜಯಂತಿ ಮೊಯಿಲಿ, ಶ್ರೀಮತಿ ಉಮಾ ಗುಜರನ್ ಬೊರಿವಲಿ ಯುವಜನರಿಗೆ ದಿವಂಗತ ಶ್ರೀ ಪಡುಬಿದ್ರಿಯವರ ಉತ್ಸಾಹ ಮತ್ತು ಪ್ರೋತ್ಸಾಹ ಶ್ಲಾಘನೀಯ ಎಂದು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು


ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ ಮಾತನಾಡಿ, ನಾವು ಒಬ್ಬ ಅಮೂಲ್ಯವಾದ ಹಿರಿಯ ಮಾರ್ಗದರ್ಶಕ ಹಾಗೂ ಸಂಘದ ಬೆಂಬಲಿಗರನ್ನು ಕಳೆದುಕೊಂಡಿದ್ದೇವೆಂದರು.


ದಿವಂಗತ ಶ್ರೀ ನಾರಾಯಣ ಜಿ ಪಡುಬಿದ್ರಿಯವರ ಪುತ್ರಿ ಪಲ್ಲವಿ ಡಿ ಶೇರಿಗಾರ್ ಮತ್ತು ಪುತ್ರ ಶ್ರೀ ಪರಾಗ್ ಏನ್ ಪಡುಬಿದ್ರಿಯವರು ಉಪಸ್ಥಿತರಿದ್ದರು ಅವರ ಗೌರವಾರ್ಥ ಸಂತಾಪ ಸಭೆಯು 2 ನಿಮಿಷಗಳ ಮೌನದೊಂದಿಗೆ ಕೊನೆಗೊಂಡಿತು.ರು.