Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ನವಿ ಮುಂಬಯಿ ಸಮನ್ವಯ ಸಮಿತಿಯಿಂದ ಅರೋಗ್ಯ ಶಿಬಿರ ಜೀವನದಲ್ಲಿ ಎಲ್ಲಾ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯ ಬಹಳ ಮಹತ್ವದ್ದು - ಶ್ರೀ ರವಿ ಎಸ್. ದೇವಾಡಿಗ

ದೇವಾಡಿಗ ಸಂಘ ಮುಂಬಯಿ: ನವಿ ಮುಂಬಯಿ ಸಮನ್ವಯ ಸಮಿತಿಯಿಂದ ಅರೋಗ್ಯ ಶಿಬಿರ ಜೀವನದಲ್ಲಿ ಎಲ್ಲಾ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯ ಬಹಳ ಮಹತ್ವದ್ದು - ಶ್ರೀ ರವಿ ಎಸ್. ದೇವಾಡಿಗ

   ನವಿಮುಂಬೈ: ಮಾ. 12 ಆರೋಗ್ಯ ಇದ್ದಲ್ಲಿ ಏನನ್ನೂ ಸಾಧಿಸಬಹುದು ಆದರೆ ಎಲ್ಲಾ ಇದ್ದು ಆರೋಗ್ಯವೇ ಇಲ್ಲವಾದಲ್ಲಿ ಮಾನವ ನ ಬದುಕು ದುರಂತವೇ ಸರಿ. ಆರೋಗ್ಯ ವಿಚಾರದಲ್ಲಿ ಎಲ್ಲಾ ಹದೆಗೆಟ್ಟ ಮೇಲೆ ಪರಿತಪಿಸುವುದಕ್ಕಿಂತ ಮೊದಲೇ ಸಂಘ ಸಂಸ್ಥೆಗಳು ಆಯೋಜಿಸುವ ಉಚಿತ ಆರೋಗ್ಯ ಶಿಬಿರದ ಲಾಭ ಪಡೆದು ನಂತರ ನುರಿತ ವೈದ್ಯರ ಮಾರ್ಗದರ್ಶದಂತೆ ನಡೆದರೆ ಬದುಕು ಸುಗಮ ಎಂದು ದೇವಾಡಿಗ ಸಂಘ ಮುಂಬೈ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗರು ಇಲ್ಲಿ ಹೇಳಿದರು. ನವಿ ಮುಂಬಯಿ ಸಮನ್ವಯ ಸಮಿತಿಯು ಇಂದು ಇಲ್ಲಿಯ ದೇವಾಡಿಗ ಭವನದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ ಇವರ ನೇತೃತ್ವದಲ್ಲಿ ಆಯೋಜಿಸಿದ ಅರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ - ಶ್ರೀ ರವಿ ದೇವಾಡಿಗರು, ನಾಗರಿಕರ ಆರೋಗ್ಯದ ದ್ರಿಷ್ಠಿಯಿಂದ ಸಂಘವು ಅರೋಗ್ಯ ನಿಧಿಯನ್ನು ಹಮ್ಮಿಕೊಂಡಿದ್ದು, ಸಂಘದ ಸದಸ್ಯರ ಆರೋಗ್ಯದ ವಿಷಯಕ್ಕೆ ಸ್ಪಂಧಿಸುತ್ತಾ, ಇಂತಹ ಅರೋಗ್ಯ ಶಿಬಿರಗಳಿಗೂ ಸಹಾಯ ಧನ ನೀಡಿ ಜನರ ಆರೋಗ್ಯವನ್ನು ಕಾಪಾಡುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು. ಈ ಅರೋಗ್ಯ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗರು ಮಾತನಾಡುತ್ತಾ, ಇಂತಹ ಕಾರ್ಯಕ್ರಮವನ್ನು ಸಂಘವು ಮಾಡುತ್ತಿರುವಾಗ ಸಂಘದ ಸದಸ್ಯರು ಅಧಿಕಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕು ಅಲ್ಲದೆ ಸಂಘವು ಆಯೋಜಿಸುವ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭಗಳಲಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಇಂತಹ ಸೌಲಭ್ಯಗಳ ಲಾಭ ಪಡೆಯಲು ಸಾಧ್ಯವಾಗಬಹುದುದಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಶ್ರೀ ನಾಗರಾಜ್ ಪಡುಕೋಣೆ ಮತ್ತು ಉದ್ಯಮಿ ಹಾಗು ನವಿ ಮುಂಬೈ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರು ಶ್ರೀ ರಾಜಾರಾಮ್ ಆಚಾರ್ಯ ಅವರು ಇಂತಹ ಉಚಿತ ಅರೋಗ್ಯ ತಪಾಸಣೆ ಶಿಬಿರಗಳು ಮತ್ತು ವೈದ್ಯಕೀಯ ಶಿಬಿರಗಳು ಜನ ಸಾಮಾನ್ಯರಿಗೆ ಸಂಘ ಸಂಸ್ಥೆಗಳಿಂದ ದೊರಕುವ ಉತ್ತಮ ಸೇವೆ ಎಂದು ಹೇಳುತಾ, ಸಂಘದ ಚಟುವಟಿಕೆಗಳನ್ನು ಶ್ಲಾಘಿಸಿದರು.

ಸಂಘದ ಮಾಜಿ ಅಧ್ಯಕ್ಷರು ಶ್ರೀ ಶ್ರೀನಿವಾಸ್ ಕರ್ಮರನ್, ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಧ್ಯಕ್ಷರು ಶ್ರೀ ರಮೇಶ್ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳಾ ವಿಭಾಗದ ಶ್ರೀಮತಿ ಸ್ವಪ್ನಾ ಮೊಯ್ಲಿ, ಸಂಘದ ಪ್ರಾದೇಶಿಕ ಸಮಿತಿಗಳ ಸಂಯೋಜಕರಾದ ಶ್ರೀ ಜಯ ಎಲ್ ದೇವಾಡಿಗ ಇವರು ಉಪಸ್ಥಿತರಿದ್ದು, ಸಂದರ್ಬೋಚಿತವಾಗಿ ಮಾತನಾಡಿದರು. ಈ ವೈದ್ಯಕೀಯ ತಪಾಸಣಾ ಶಿಬಿರವನ್ನು ಇಲ್ಲಿಯ ನೆರೂಲ್ನ ಭಾವನಾ ಆಸ್ಪತ್ರೆಯ ಮುಖ್ಯಸ್ಥರು ಡಾ. ಜಿತೇಂದ್ರ ಖಂಡ್ಗೆ ಮತ್ತು ಅವರ ಸಿಬ್ಬಂದಿ ವರ್ಗದ ಸಹಾಯದಿಂದ ಆಯೋಜಿಸಲಾಗಿತ್ತು. ಶಿ ಬಿರದಲ್ಲಿ ದಂತ ತಪಾಸಣೆ, ಸಕ್ಕರೆ ಖಾಯಿಲೆ ತಪಾಸಣೆ, ರಕ್ತದ ಒತ್ತಡ, ಕಿಡ್ನಿ ಸಂಬಂದಿತ ಯೂರಿನ್ ಡಿಪ್ ಸ್ಟಿಕ್ ತಪಾಸಣೆ, ಯುರೋಫ್ಲೆಮೆಟ್ರಿ, ಇ ಸಿ ಜಿ, ಪಲ್ಸ್ ರೇಟ್, ಮುಂತಾದ ತಪಾಸಣೆ ಗಳನ್ನು ಮಾಡಿ; ಕೌನ್ಸಿಲಿಂಗ್ ನಡೆಸಿದ್ದು ಮಾತ್ರವಲ್ಲದೆ ಅವಶ್ಯಕ ಔಷದಿಗಳನ್ನು ಉಚಿತವಾಗಿ ನೀಡಲಾಯಿತು. ಹೆಮ್ಮೆಯ ದೇವಾಡಿಗ ವೈದ್ಯರುಗಳಾದ ಡಾ. ಶ್ರೀಮತಿ ರೇಖಾ ಸಿ. ದೇವಾಡಿಗರು MBBS, ಇವರು ಜನರಲ್ ಚೆಕ್ ಅಪ್ ನಡೆಸಿದರೆ, ದಂತ ವೈದ್ಯೆ ಶ್ರೀಮತಿ ಪ್ರೀತಿ ದೇವಾಡಿಗರು ಬಂದ ಎಲ್ಲಾ ಶಿಬಿರಾರ್ಥಿಗಳ ದಂತತಪಾಸಣೆ ನಡೆಸಿ ತಮ್ಮ ಸೇವೆಯನ್ನು ನೀಡಿ ಜನ ಮೆಚ್ಚುಗೆಗೆ ಪಾತ್ರರಾದರು. ಎಲ್ಲಾ ಡಾಕ್ಟರುಗಳು ಮತ್ತು ಅವರ ಸೈಬ್ಬಂದಿ ವರ್ಗದವರನ್ನು ಸಂಘದ ಪರವಾಗಿ ಗೌರವಿಸಲಾಯಿತು. ಇಂದಿನ ಶಿಬಿರದಲ್ಲಿ ನವಿ ಮುಂಬೈ ಸಮನ್ವಯ ಪ್ರಾದೇಶಿಕ ಸಮಿತಿಯ ಉಪ ಕಾರ್ಯಧ್ಯಕ್ಷರುಗಳಾದ ಶ್ರೀ ಸುರೇಶ್ದೇವಾಡಿಗ ಬಾರಕೂರು, ಶ್ರೀ ದಯಾನಂದ್ ದೇವಾಡಿಗರು ನೆರೂಲ್, ಶ್ರೀಮತಿ ಆಶಾ ದೇವಾಡಿಗ ಸಾನ್ ಪಾಡಾ, ಶ್ರೀಮತಿ ಪೂರ್ಣಿಮಾ ದೇವಾಡಿಗ ನೆರೂಲ್, ಶ್ರೀಮತಿ ಗೀತಾ ದೇವಾಡಿಗ ನೆರೂಲ್, ಶ್ರೀಮತಿ ದಿವ್ಯ ದೇವಾಡಿಗ ಉಲ್ವೆ, ಶ್ರೀ ಚಂದ್ರಶೇಖರ್ ದೇವಾಡಿಗದಂಪತಿಗಳು ಉಲ್ವೆ, ಶ್ರೀಮತಿ ಆಶಾ ದೇವಾಡಿಗ ನೆರೂಲ್, ಶ್ರೀ ಕಾರ್ತಿಕ್ ದೇವಾಡಿಗ ನೆರೂಲ್, ಶ್ರೀಮತಿ ಶಾಂತ ದೇವಾಡಿಗ ನೆರೂಲ್, ಶ್ರೀಮತಿ ಉಮಾವತಿ ಗುಜರಾನ್, ಶ್ರೀಮತಿ ಧನವತಿ ಪುತ್ತೂರು, ಶ್ರೀಮತಿ ಅಂಬಿಕಾ ದೇವಾಡಿಗ ನೆರೂಲ್, ಶ್ರೀ ದಯಾನಂದ್ ದೇವಾಡಿಗ ದಂಪತಿಗಳು ಸೀ ವುಡ್, ದೇವಾಡಿಗ ಸಂಘದ ಜತೆ ಕಾರ್ಯದರ್ಶಿ ಅಡ್ವೋಕೇಟ್ ಶ್ರೀ ಪ್ರಭಾಕರ್ ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷರುಗಳಾದ ಶ್ರೀ ಆನಂದ್ ಶೇರಿಗಾರ್ ಖಾರ್ಘರ್, ಶ್ರೀ ಪಿ.ವಿ. ಎಸ್. ಮೊಯಿಲಿ, ಶ್ರೀಮತಿ ಲತಾ ಶೇರಿಗಾರ್ ಖಾರ್ಗರ್, ಶ್ರೀ ಜಾರಪ್ಪ ದೇವಾಡಿಗರು ನೆರೂಲ್, ದೇವಾಡಿಗ ಸಂಘ ಮುಂಬೈ ಯ ಕೋಶಾಧಿಕಾರಿ ಸುರೇಶ್ ದೇವಾಡಿಗ ಡೊಂಬಿವಲಿ, ಶ್ರೀಮತಿ ರಂಜಿನಿ ಮೊಯ್ಲಿ ದಾದರ್, ಶ್ರೀ ಅಶೋಕ್ ದೇವಾಡಿಗ ಪೋವಾಯಿ, ಶ್ರೀ ಗುರು ಮೂರ್ತಿ ಪೋವಾಯಿ, ಸಂಘದ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು ಶ್ರೀ ಸುಧಾಕರ್ ಎಲ್ಲೂರು, ಠಾಣೆ ಪ್ರಾದೇಶಿಕ ಸಮಿತಿಯ ಉಪ ಕಾರ್ಯಧ್ಯಕ್ಷರು ಶ್ರೀ ಸದಾಶಿವ ಮೊಯ್ಲಿ, ಶ್ರೀ ಶಂಕರ್ ದೇವಾಡಿಗರು ಐರೋಲಿಕುಮಾರಿ ತನ್ವಿ ದೇವಾಡಿಗ ನೆರೂಲ್, ಶ್ರೀಮತಿ ಕಲಾ ಜಿ. ಶೇರಿಗಾರ್ ವಾಶಿ, ಕುಮಾರಿ ಶ್ರದ್ಧಾ ಜಿ ಶೇರಿಗಾರ್, ಬಿಜೆಪಿ ಕರ್ನಾಟಕ ಸೆಲ್ ಉಪಾಧ್ಯಕ್ಷರು ಶ್ರೀ ಜಗದೀಶ್ ಶೆಟ್ಟಿ ದೇಪುಣಿ ಗುತ್ತು ಮೊದಲಾದವರು ಭಾಗವಹಿಸಿ ಸಹಕಾರ ನೀಡಿದರೆ; ಇಂದಿನ ಅನ್ನದಾನ ವನ್ನು ಖಾಲಾಪುರ ರಸಾಯನಿ ಉದ್ಯಮಿ ಶ್ರೀ ಪದ್ಮನಾಭ್ ಮೊಯ್ಲಿ ಅವರು ಆಯೋಜಿಸಿದ್ದರು. ಸಮಿತಿಯ ಕಾರ್ಯದರ್ಶಿ ಶ್ರೀ ಗಣೇಶ್ ಎಸ್. ಬ್ರಹ್ಮಾವರ್ , ನಿರೂಪಿಸಿದರು ಮತ್ತು ವಂದನಾರ್ಪಣೆಗೈದರು.