Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ ಯಶಸ್ವಿ ವೈದ್ಯಕೀಯ ಶಿಬಿರದ ಆಯೋಜನೆ

ದೇವಾಡಿಗ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ ಯಶಸ್ವಿ ವೈದ್ಯಕೀಯ ಶಿಬಿರದ ಆಯೋಜನೆ

ಡೊಂಬಿವಿಲಿ, ಸೆ. 15, 2024 : ದೇವಾಡಿಗ ಸಂಘದ ಶತಮಾನೋತ್ಸವ ಆಚರಣೆ ಅಚ್ಚಳಿಯದೆ ಸದಾ ಜನರ ಮನದಲ್ಲಿರುವಂತೆ ಆಯೋಜಿಸುವುದು ಸಂಘದ ಯೋಜನೆ. ಸಂಘದ ಪ್ರಾದೇಶಿಕ ಸಮಿತಿಗಳು ಸಂಘಕ್ಕೆ ಬೆಂಬಲ ನೀಡುತ್ತಾ ಸಮಾಜಪರ ಕಾರ್ಯಕ್ರಮಗಳನ್ನು ನಡೆಸಬೇಕು. ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಚಿತ ವೈದ್ಯಕೀಯ ಶಿಬಿರ ಜನರ ಅರೋಗ್ಯ ಕಾಪಾಡುವ ಉತ್ತಮ ಮತ್ತು ಸ್ತುತ್ಯ ಸೇವೆ. ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ಇಂತಹ ಜನಹಿತ ಕಾರ್ಯಕ್ರಮಗಳು ನಡೆಯಲಿ ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗರು ಹೇಳಿದರು.

ಸಂಘದ ಡೊಂಬಿವಲಿ ಪ್ರಾದೇಶಿಕ ಸಮಿತಿಯು, ಡೊಂಬಿವಿಲಿ ಪಶ್ಚಿಮದ ಉಮೇಶ್ ನಗರದ ಅಷ್ಟವಿನಾಯಕ ಮಿತ್ರ ಮಂಡಳ ಸಭಾಗ್ರಹದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದು, ಈ ಶಿಬಿರವನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಮೇಲಿನ ಮಾತುಗಳನ್ನು ಹೇಳುತ್ತಾ ಶಿಬಿರಕ್ಕೆ ಶುಭ ಕೋರಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಮತಿ ಜಯಂತಿ ಎಂ. ದೇವಾಡಿಗ , ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೇಕರ್, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಅಶೋಕ್ ದೇವಾಡಿಗ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಲಿನಿ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಚೇತನ್ ದೇವಾಡಿಗ ಮೊದಲಾದವರು ಈ ಸಂದರ್ಭದಲ್ಲಿ ಪ್ರಾಮುಖ್ಯವಾಗಿ ಉಪಸ್ಥಿತರಿದ್ದರು

ದೇವಾಡಿಗ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ್ ದೇವಾಡಿಗ ಅವರ ನೇತೃತ್ವದಲ್ಲಿ ಸಮಿತಿ ಸದಸ್ಯರ ಸಹಕಾರದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ನೂರಾರು ಸ್ಥಳೀಯ ನಾಗರಿಕರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಲಾಭ ಪಡೆದರು. ಈ ಆಯೋಜನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಂಘದ ಅಧ್ಯಕ್ಷರು ಶ್ರೀ ಅಶೋಕ್ ದೇವಾಡಿಗ ಮತ್ತು ಅವರ ಸಮಿತಿಯನ್ನು ಅಭಿನಂದಿಸಿದರು.

ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಸ್ಥಳೀಯ ಜಿಲ್ಲಾಧ್ಯಕ್ಷ ಶ್ರೀ ಪ್ರಕಾಶ್ ಭೋರ್, ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸ್ಥಳೀಯ ಜಿಲ್ಲಾಧ್ಯಕ್ಷರು ಮತ್ತು ನಗರಸೇವಕಿ ಶ್ರೀಮತಿ ಬೋರ್ ಇವರು ಈ ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಶುಭ ಕೋರಿದ ಅತಿಥಿಗಳು ದೇವಾಡಿಗ ಸಂಘದ ಸ್ಥಳೀಯ ಸಮಿತಿಯ ಉಪಕ್ರಮವನ್ನು ಶ್ಲಾಘಿಸಿದರು ಹಾಗೂ ಮುಂದಿನ ಕಾರ್ಯಕ್ರಮಗಳಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.

ಯುನಿಕೇರ್ ಹೆಲ್ತ್ ಸೆಂಟರ್‌ನ ತಜ್ಞ ವೈದ್ಯರ ತಂಡವು ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ರೋಗನಿರ್ಣಯ ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಆರೈಕೆಯನ್ನು ನಡೆಸಿದರು.

ಈ ವೈದ್ಯಕೀಯ ಶಿಬಿರವು ಸಮಾಜ ಸೇವೆಯ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅಶೋಕ್ ದೇವಾಡಿಗ ಹೇಳಿದರು. "ಅಗಾಧ ಪ್ರತಿಕ್ರಿಯೆಗಾಗಿ ನಾವು ಕೃತಜ್ಞರಾಗಿದ್ದೇವೆ ಮತ್ತು ನಮ್ಮ ಸದಸ್ಯರು, ವ್ಯವಸ್ಥಾಪಕ ಸಮಿತಿ ಮತ್ತು ಅತಿಥಿಗಳ ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಹೇಳಿ ಆಗಮಿಸಿದ ಎಲ್ಲರಿಗೂ ಅವರು ಧನ್ಯವಾದ ನೀಡಿದರು.