Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ - ದೇವಾಡಿಗ ಮಹಿಳಾ ವಿಭಾಗದವರ ದಕ್ಷಿಣ ಭಾರತ ಪ್ರವಾಸ

ದೇವಾಡಿಗ ಸಂಘ ಮುಂಬಯಿ - ದೇವಾಡಿಗ ಮಹಿಳಾ ವಿಭಾಗದವರ ದಕ್ಷಿಣ ಭಾರತ ಪ್ರವಾಸ

   ದೇವಾಡಿಗ ಸಂಘ, ಮುಂಬಯಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗ ಇವರ ಮುತುವರ್ಜಿಯಲ್ಲಿ- ದಕ್ಷಿಣ ಭಾರತ ಪ್ರವಾಸ 9 ರಿಂದ 15 ಅಕ್ಟೋಬರ್ 2023 ರವರೆಗೆ ಆಯೋಜಿಸಲಾಗಿತ್ತು.

ದಕ್ಷಿಣ ಭಾರತದ ಪ್ರಮುಖ ಪ್ರೇಕ್ಷಣೀಯ ಸ್ಧಳಗಳಲ್ಲಿ ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ, ಕನ್ಯಾಕುಮಾರಿ ದೇವಿಯ ದೇವಸ್ಥಾನದಲ್ಲಿ ಕನ್ಯಾಕುಮಾರಿಯ ಪಾದುಕೆ, ಕನ್ಯಾಕುಮಾರಿಯ ಗಾಂಧಿ ಮಂಟಪ. ಇಲ್ಲಿ ಪ್ರತಿ ವರ್ಷ ಅಕ್ಟೋಬರ್ 2, ರಾಷ್ಟ್ರಪಿತನ ಜನ್ಮದಿನದಂದು ಅವರ ಸ್ಮಾರಕವಾದ ಗಾಂಧಿ ಮಂಟಪಕ್ಕೆ ಸೂರ್ಯನ ಬೆಳಕು ಬೀಳುತ್ತದೆ. ಇಲ್ಲಿಯ ಸಾಯಂಕಾಲದ ಸೂರ್ಯಾಸ್ತ ಮತ್ತು ಮುಂಜಾನೆಯ ಸೂರ್ಯೋದಯ ಮನೋರಂಜಕವಾಗಿತ್ತು. ರಾಮೇಶ್ವರಂ ನಲ್ಲಿರುವ ಸ್ಪಟಿಕ ಲಿಂಗ, ಜ್ಯೋತೀರ್ಲಿಂಗದ ದರ್ಶನ ಸಮುದ್ರ ಸ್ನಾನ ರಾಮನಾಥಸ್ವಾಮಿ ದೇವಸ್ಥಾನದ ಕಾರಿಡಾರ್‌ನಲ್ಲಿರುವ 22 ಬಾವಿಗಳಿಂದ ತೀರ್ಥಸ್ನಾನ, ಧನುಷ್ಕೋಡಿಗೆ ಮತ್ತು ರಾಮ-ಪಾದಕ್ಕೆ ಭೇಟಿ ನೀಡಿ ರಾಕ್ ಫ್ಲೋಟಿಂಗ್ ಮ್ಯೂಸಿಯಂ ಹಾಗೂ ಪಂಚಮುಖಿ ಹನುಮಾನ್ ದೇವರ ದರ್ಶನ ವನ್ನು ಎಲ್ಲರೂ ಪಡೆದರು.

ಭಾರತದ 11ನೇ ರಾಷ್ಟ್ರಪತಿಯಾಗಿದ್ದ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ಸ್ಮಾರಕ ಭವನ,ಸ್ಮಾರಕದ ಒಳಗೆ ಆಯ್ದ ಫೋಟೋಗಳು, ವರ್ಣಚಿತ್ರಗಳು ಮತ್ತು ಕ್ಷಿಪಣಿಗಳ ಚಿಕಣಿ ಮಾದರಿಗಳು ಮನಸ್ಸನ್ನು ತಲ್ಲಣಿಸಿದವು .

ಮಧುರೈ ಮೀನಾಕ್ಷಿ ಅಮ್ಮನ್ ದೇವಸ್ಥಾನ, ಪಳನಿ ಪಟ್ಟಣದ ಸಮೀಪವಿರುವ 689 ಮೆಟ್ಟಿಲುಗಳ ಬೆಟ್ಟದ ಮೇಲಿರುವ ಪಳನಿ ಮುರುಗನ್ ದೇವಸ್ಥಾನ ಹಾಗೂ ದೇವಸ್ಥಾನದ ಆನೆ ಉತ್ಸವಕ್ಕೆ ಹೆಸರುವಾಸಿಯಾದ ಗುರುವಾಯೂರ್ ದೇವಸ್ಥಾನಕ್ಕೂ ಭೇಟಿ ನೀಡಿದೆವು. ನಮ್ಮ ಈ ದಕ್ಷಿಣ ಪ್ರವಾಸದ ಸಮಾರೋಪದಲ್ಲಿ ಎಲ್ಲಾ ಸದಸ್ಯರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿ, ಉತ್ತಮವಾಗಿ ಆಯೋಜಿಸಲಾದ ಪ್ರವಾಸವನ್ನು ಶ್ಲಾಘಿಸಿ ಇದು ಮುಂದಿನ ವರ್ಷಗಳಲ್ಲಿ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಪ್ರವಾಸವಾಗಿರುತ್ತದೆ ಎಂದರು. ಪ್ರವಾಸದ ಆಯೋಜಕರಾದ ಪ್ರಕೃತಿ ಟ್ರಾವೆಲ್ಸನ ಶ್ರೀ ಪ್ರಕಾಶ್ ಅವರು ಮಹಿಳಾ ವಿಭಾಗದವರಿಗೆ ಕೃತಜ್ಞತೆ ಸಲ್ಲಿಸಿ ಮುಂದಿನ ಪ್ರವಾಸಗಳಲ್ಲಿ ತಮ್ಮ ಬೆಂಬಲದ ಅವಶ್ಯಕತೆ ಇದೆ ಎಂದರು.

ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಜಯಂತಿ ಎಂ ದೇವಾಡಿಗ, ಕಾರ್ಯದರ್ಶಿ- ಸುಜಯ ದೇವಾಡಿಗ, ಜೊತೆ ಕಾರ್ಯದರ್ಶಿ - ಲತಾ ಶೇರಿಗಾರ, ಉಪಾಧ್ಯಕ್ಷೆ - ಪ್ರಮೀಳಾ ಶೇರಿಗಾರ್ , ಉಪಾಧ್ಯಕ್ಷೆ - ಪ್ರತಿಭಾ ದೇವಾಡಿಗ ಇವರೆಲ್ಲರ ಸಹಕಾರ ಮತ್ತು ಯೋಜನೆಯಿಂದ ಪ್ರವಾಸವು ಸ್ಮರಣೀಯ ಯಶಸ್ಸನ್ನು ಕಂಡಿತು. ಕಾರ್ಯಧ್ಯಕ್ಷೆ ಜಯಂತಿ ಹಾಗೂ ಉಪಾಧ್ಯಕ್ಷೆ ಪ್ರತಿಭಾ ಭಾಗವಹಿಸಿದ ಎಲ್ಲಾ ಸದ್ಯಸರಿಗೆ ಹಾಗೂ ವಿಹಾರಕೂಟ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.

ಎಲ್ಲಾ ಸದಸ್ಯರಿಗೆ ಪ್ರಕೃತಿ ಟ್ರಾವೆಲ್ಸ್‌ನ ಸಿಬ್ಬಂದಿಗಳು ರುಚಿಕರವಾದ ಮನೆ ಅಡಿಗೆಯೊಂದಿಗೆ, ಬಹಳ ಆತ್ಮೀಯತೆಯಿಂದ , ಉಲ್ಲಾಸದಿಂದ ಸೇವೆ ಸಲ್ಲಿಸಿದರು ಹಾಗೂ ಪ್ರವಾಸದ ಅಂತಿಮ ದಿನದಂದು ರಾತ್ರಿ ದಕ್ಷಿಣ ಕೇರಳ ಶೈಲಿಯಲ್ಲಿ ಬಾಳೆಎಲೆಯಲ್ಲಿ ಪ್ರಕೃತಿ ಟ್ರಾವೆಲ್ಸ್ ಭೋಜನವನ್ನು ಏರ್ಪಡಿಸಿದರು. ಶನಿವಾರ ರಾತ್ರಿ ಮುಂಬಯಿಗೆ ಸಿಹಿ ನೆನಪುಗಳೊಂದಿಗೆ ಹಿಂತಿರುಗಿ ಈ ಆಧ್ಯಾತ್ಮಿಕ ಪ್ರಯಾಣವನ್ನು ಚಿರಸ್ಮರಣೀಯವಾಗಿ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡಿತು.