Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ - ಮಹಿಳಾ ವಿಭಾಗದವರಿಂದ ಚೆಂಬೂರುನಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ

ದೇವಾಡಿಗ ಸಂಘ ಮುಂಬಯಿ - ಮಹಿಳಾ ವಿಭಾಗದವರಿಂದ ಚೆಂಬೂರುನಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ

ಮುಂಬಯಿಯ ದೇವಾಡಿಗ ಸಂಘದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ. ಜಯಂತಿ ಎಂ ದೇವಾಡಿಗ ನೇತೃತ್ವದಲ್ಲಿ 2023 ರ ಅಕ್ಟೋಬರ್ 1 ಮತ್ತು 2 ರಂದು ತಿಲಕ್ ನಗರ, ಹನುಮಾನ್ ದೇವಸ್ಥಾನದ ಸಭಾಂಗಣ, ಚೆಂಬೂರುನಲ್ಲಿ *ವಸ್ತು ಪ್ರದರ್ಶನ ಮತ್ತು ಮಾರಾಟವನ್ನು* ಆಯೋಜಿಸಿದರು.

ಹದಿನೆಂಟು ಮಳಿಗೆಗಳು /ಸ್ಟಾಲ್ಸ್ ತಮ್ಮ ಗೃಹೋಪಯೋಗಿ ವಸ್ತುಗಳಾದ ರೇಷ್ಮೆ/ ಹತ್ತಿ/ ಕೈಮಗ್ಗದ ಸೀರೆಗಳು, ಕೃತಕ ಆಭರಣಗಳು, ಉಡುಪುಗಳು, ಕೂದಲು ಪರಿಕರಗಳು, ಪ್ರಕೃತಿ ಚಿಕಿತ್ಸಾ ಔಷಧ, ಚೀಲಗಳು, ನೆಟಿಂಗ್ ಉತ್ಪನ್ನಗಳು, ಟಪ್ಪರ್‌ವೇರ್, ಬಾಯಲ್ಲಿ ನೀರೂರಿಸುವ ರುಚಿಕರವಾದ ತಿಂಡಿಗಳು ಸೇರಿದಂತೆ ಅಡುಗೆ ಮಸಾಲೆ ಸಾಮಾನುಗಳು ಇತ್ಯಾದಿಗಳನ್ನು ಪ್ರದರ್ಶಿಸಿದವು.

ಸಮಾರಂಭದ ಉದ್ಘಾಟನಾ ಸಮಾರಂಭವನ್ನು ಹನುಮಾನ್ ದೇವಸ್ಥಾನದ ಪ್ರಧಾನ ಟ್ರಸ್ಟಿ ಶ್ರೀ ಕಿರಣ ಶಿರವಾಳಕರ್ ಹಾಗೂ ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಎನ್ ದೇವಾಡಿಗ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಕ್ರೀಡಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಶುಭ ದೇವಾಡಿಗ ಅವರ ಪ್ರಾರ್ಥನೆಯೊಂದಿಗೆ ವೇದಿಕೆ ಕಾರ್ಯಕ್ರಮವು ಪ್ರಾರಂಭವಾಯಿತು. ಮಹಿಳಾ ವಿಭಾಗಡಾ ಕಾರ್ಯಾಧ್ಯಕ್ಷೆ - ಶ್ರೀಮತಿ ಜಯಂತಿ ಎಂ ದೇವಾಡಿಗ, ಶ್ರೀಮತಿ. ಪ್ರಮೀಳಾ ಪ್ರವೀಣ್ ದೇವಾಡಿಗ, ಶ್ರೀ ಶ್ರೀಧರ ಶೆಟ್ಟಿ- ನಿವೃತ್ತ ಸಹಾಯಕ ಮಹಾ ಪ್ರಭಂದಕರು , ವಿಜಯಾ ಬ್ಯಾಂಕ್ ಶ್ರೀಮತಿ. ನಾಗವೇಣಿ ಶೆಟ್ಟಿ - ತಿಲಕ್ ನಗರ ಕನ್ನಡ ಸಂಘದ ಮಾಜಿ ಕಾರ್ಯದ್ಯಕ್ಷೆ, ಶ್ರೀ ಅರುಣಕುಮಾರ ಶೆಟ್ಟಿ-ಪ್ರಧಾನ ಕಾರ್ಯದರ್ಶಿ, - ಶ್ರೀ ನಿತ್ಯಾನಂದ ಶೆಟ್ಟಿ- ಮಾಜಿ ಅಧ್ಯಕ್ಷರು, ದೇವಾಡಿಗ ಸಂಘದ ಉಪಾಧ್ಯಕ್ಷೆ - ಶ್ರೀಮತಿ ಮಾಲತಿ ಜೆ ಮೊಯ್ಲಿ, ಸಂಘದ ಜೊತೆ ಕೋಶಾಧಿಕಾರಿಗಳು - ಶ್ರೀಮತಿ. ಸುರೇಖಾ ಹೆಚ್ ದೇವಾಡಿಗ, ಶ್ರೀ ಸುರೇಶ್ ಆರ್ ದೇವಾಡಿಗ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆಯರಾದ - ಶ್ರೀಮತಿ. ಪ್ರಮೀಳಾ ವಿ ಶೇರಿಗಾರ್, ಶ್ರೀಮತಿ. ಪ್ರತಿಭಾ ಜಿ ದೇವಾಡಿಗ, ಕಾರ್ಯದರ್ಶಿ- ಶ್ರೀಮತಿ ಸುಜಯ ವಿ ದೇವಾಡಿಗ, , ಜೊತೆ ಕಾರ್ಯದರ್ಶಿಗಳು- ಶ್ರೀಮತಿ. ಲತಾ ಎ ಶೇರಿಗಾರ ಮತ್ತು ಶ್ರೀಮತಿ. ನಳಿನಿ ಎಸ್ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯರಾದ ಶ್ರೀಮತಿ ರಂಜಿನಿ ಆರ್ ಮೊಯ್ಲಿ, ಶ್ರೀಮತಿ ಜಯಂತಿ ಮೊಯ್ಲಿ, ಚೆಂಬೂರು ಪ್ರಾದೇಶಿಕ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಶ್ರೀ ರಾಮಣ್ಣ ದೇವಾಡಿಗ, ಶ್ರೀ ರಘು ಎ ಮೊಯ್ಲಿ, ಚೆಂಬೂರು ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಯಶವಂತ ದೇವಾಡಿಗ , ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ನಿರ್ಮಲಾ ಆರ್ ದೇವಾಡಿಗ, ಕಾರ್ಯದರ್ಶಿ ಶ್ರೀ ಯೋಗೇಶ್ ಗುಜರಾನ್ ಶ್ರೀ ಹೇಮಂತ್ ದೇವಾಡಿಗ, ಶ್ರೀಮತಿ ಶಾಂತ ದೇವಾಡಿಗ, ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗ ಅವರು ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು ಮತ್ತು ಪ್ರದರ್ಶನದಲ್ಲಿ ಭಾಗವಹಿಸಿದವರು ಸೇರಿದಂತೆ ಎಲ್ಲಾ ಅತಿಥಿಗಳನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ಯು ದೇವಾಡಿಗ, ಶ್ರೀಮತಿ. ಸುಜಾತಾ ಡಿ ದೇವಾಡಿಗ, ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಹಿರಿಯಡ್ಕ ಮೋಹನದಾಸ್, ಶ್ರೀಮತಿ. ಪ್ರದ್ನ್ಯಾಮೋಹನ್ ದಾಸ್, ದೇವಾಡಿಗ ಸಂಘದ ಉಪಾಧ್ಯಕ್ಷ ಶ್ರೀ ನರೇಶ್ ಎಸ್ ದೇವಾಡಿಗ , ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ,ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಸಂಘದ ಆಂತರಿಕ ಲೆಕ್ಕ ಪರಿಶೋಧಕರು CA ಜಗದೀಶ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗ, ವೈವಾಹಿಕ ಸಮಿತಿಯ ಕಾರ್ಯಾಧ್ಯಕ್ಷೆ - ಶ್ರೀಮತಿ. ಪ್ರಫುಲ್ಲ ವಿ ದೇವಾಡಿಗ, ಪ್ರಾದೇಶಿಕ ಸಮಿತಿ ಸಂಯೋಜಕ - ಶ್ರೀ ಜಯ ಎಲ್ ದೇವಾಡಿಗ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಮೋಹನ್‌ದಾಸ್ ಗುಜರನ್ , ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಸುಧಾಕರ ಎಲ್ಲೂರು, ಯುವ ಘಟಕದ ಹಂಗಾಮಿ ಕಾರ್ಯಾಧ್ಯಕ್ಷ ಶ್ರೀ ರಾಕೇಶ್ ದೇವಾಡಿಗ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಪೂರ್ಣಿಮಾ ದೇವಾಡಿಗ , ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ. ಪುಷ್ಪಾ ಎಸ್ ರಾವ್ ಮತ್ತು ಶ್ರೀಮತಿ. ಭಾರತಿ ಎಸ್ ನಿಟ್ಟೆಕರ್, ಪ್ರಾದೇಶಿಕ ಸಮನ್ವಯ ಸಮಿತಿಗಳ ಕಾರ್ಯಾಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ , ಶ್ರೀ ಸತೀಶ್ ಕಣ್ವತೀರ್ಥ , ಮಹಿಳಾ ಕಾರ್ಯಧ್ಯಕ್ಷೆಯರಾದ ಶ್ರೀಮತಿ. ರೇಖಾ ದೇವಾಡಿಗ , ಶ್ರೀಮತಿ ಮಮತಾ ದೇವಾಡಿಗ ಮತ್ತು ಶ್ರೀಮತಿ ಉಷಾ ದೇವಾಡಿಗ ರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗ ತಂಡದ ಸದಸ್ಯರಿಂದ ಲಕ್ಕಿ ಡಿಪ್ಸ್ ಏರ್ಪಡಿಸಲಾಗಿತ್ತು ಹಾಗೂ ಲಕ್ಕಿ ಡಿಪ್‌ಗೆ ಮೂರು ಬಹುಮಾನಗಳನ್ನು ಘೋಷಿಸಲಾಯಿತು.

ವಸ್ತು ಪ್ರದರ್ಶನ ಹಾಗೂ ಮಾರಾಟದ ಮುಕ್ತಾಯದ ದಿನದಂದು, ಶ್ರೀ ಪ್ರವೀಣ್ ಎನ್ ದೇವಾಡಿಗ ಮತ್ತು ಶ್ರೀ ವಿಶ್ವನಾಥ ಬಿ ದೇವಾಡಿಗ ಸೇರಿದಂತೆ ಎಲ್ಲಾ ಸದಸ್ಯರು , ಪ್ರಪ್ರಥಮ ಬಾರಿಗೆ ಜರುಗಿಸಿದ ಕಾರ್ಯಕ್ರಮವನ್ನು ಯಶಸ್ವಿ ಮತ್ತು ಸುಗಮವಾಗಿ ಆಯೋಜಸಿದ ಮಹಿಳಾ ವಿಭಾಗದವರನ್ನು ಮತ್ತು ಸಹಕಾರ ನೀಡಿದ ಎಲ್ಲಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರನ್ನು ಅ ಭಿನಂದಿಸಿದರುಹಾಗೂ ಮುಂದಿನ ದಿನಗಳಲ್ಲಿ ಮಹಿಳಾ ಸಬಲೀಕರಣದ ಪ್ರಯೋಜನಕ್ಕಾಗಿ ಇಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಕರೆಯಿತ್ತರು