Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬೈಯ ನೂತನ ಮಹಿಳಾ ವಿಭಾಗ(2022-2025) ದ ಪದಗ್ರಹಣ

ದೇವಾಡಿಗ ಸಂಘ ಮುಂಬೈಯ ನೂತನ ಮಹಿಳಾ ವಿಭಾಗ(2022-2025) ದ ಪದಗ್ರಹಣ

   ಶ್ರೀಮತಿ ಜಯಂತಿ ಎಂ ದೇವಾಡಿಗ ಅವರ ಕಾರ್ಯಧ್ಯಕ್ಷತೆಯಲ್ಲಿ ಮಹಿಳಾ ವಿಭಾಗ 2022-2025 ದ ಅವಧಿಗೆ 6-9-2022, ರಂದು ದೇವಾಡಿಗ ಸೆಂಟರ್, ದಾದರ್ ಕಛೇರಿ, ಮುಂಬೈನಲ್ಲಿ ಪದಗ್ರಹಿಸಿತು. ಶ್ರೀಮತಿ ಲಕ್ಷ್ಮಿ ಜಿ ದೇವಾಡಿಗರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಗಿ 2022-2025 ಅವಧಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಶ್ರೀಮತಿ ಜಯಂತಿ ಎಂ ದೇವಾಡಿಗ, ಕಾರ್ಯಧ್ಯಕ್ಷೆ (ಚೆಂಬೂರು ಪ್ರಾದೇಶಿಕ ಸಮಿತಿ)
ಶ್ರೀಮತಿ ಪ್ರಮೀಳಾ ವಿ ಶೇರಿಗಾರ್, ಉಪಾಧ್ಯಕ್ಷೆ (ಠಾಣೆ ಪ್ರಾದೇಶಿಕ ಸಮಿತಿ )
ಶ್ರೀಮತಿ ಪ್ರತಿಭಾ ಜಿ ದೇವಾಡಿಗ, ಉಪಾಧ್ಯಕ್ಷೆ (ಅಸಲ್ಫಾಪ್ರಾದೇಶಿಕ ಸಮಿತಿ )
ಶ್ರೀಮತಿ ಸುಜಯ ವಿ ದೇವಾಡಿಗ, ಕಾರ್ಯದರ್ಶಿ (ಸಿಟಿ ಪ್ರಾದೇಶಿಕ ಸಮಿತಿ)
ಶ್ರೀಮತಿ ಲತಾ ಎ ಶೇರಿಗಾರ್, ಜೊತೆ ಕಾರ್ಯದರ್ಶಿ (ನವಿ ಮುಂಬೈ ಪ್ರಾದೇಶಿಕ ಸಮಿತಿ)
ಶ್ರೀಮತಿ ನಳಿನಿ ಎಸ್ ದೇವಾಡಿಗ, ಜೊತೆ ಕಾರ್ಯದರ್ಶಿ (ಡೊಂಬಿವಲಿ ಪ್ರಾದೇಶಿಕ ಸಮಿತಿ)

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ ಮೊಯ್ಲಿ, ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆರಾದ ಶ್ರೀಮತಿ ಪ್ರಫುಲ್ಲ ವಿ ದೇವಾಡಿಗ, ಶ್ರೀಮತಿ ಭಾರತಿ ನಿಟ್ಟೇಕರ್ ಶ್ರೀಮತಿ ಜಯಂತಿ ಆರ್ ಮೊಯ್ಲಿ, ನಿಕಟಪೂರ್ವ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯ್ಲಿ, ಸಂಘದ ಜೊತೆ ಖಚಾಂಜಿ ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ, ಶ್ರೀಮತಿ ಪ್ರಮೀಳಾ ವಿ ಶೇರಿಗಾರ್, ಶ್ರೀಮತಿ ಪ್ರಭಾ ಜಿ ದೇವಾಡಿಗ, ಶ್ರೀಮತಿ ಸುಜಯ ವಿ ದೇವಾಡಿಗ, ಶ್ರೀಮತಿ ಲತಾ ಎ ಶೇರಿಗಾರ್, ಶ್ರೀಮತಿ ನಳಿನಿ ಎಸ್ ದೇವಾಡಿಗ, ಸಂಘದ ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ ಬಿ ದೇವಾಡಿಗ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗ ಮತ್ತು ಶ್ರೀ ಹಿರಿಯಡ್ಕ ಮೋಹನ್ ದಾಸ್,ಗೌರವ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ,ಜೊತೆ ಖಚಾಂಜಿ ಶ್ರೀ ಸುರೇಶ್ ಆರ್ ದೇವಾಡಿಗ , ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಬಾಲಚಂದ್ರ ಜಿ ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷರಾದ ಶ್ರೀ ಹೇಮನಾಥ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ. ಲತಾ ವಿ ಮೊಯ್ಲಿ, ಶ್ರೀಮತಿ. ಗೀತಾ ಎಲ್ ದೇವಾಡಿಗ, ಶ್ರೀಮತಿ. ಶಶಿಕಲಾ ಎಸ್ ಮೊಯ್ಲಿ, ಶ್ರೀಮತಿ ಮಮತಾ ಸಿ ದೇವಾಡಿಗ ಚೆoಬೂರ್ ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ನಿರ್ಮಲಾ ಆರ್ ದೇವಾಡಿಗ, ಶ್ರೀಮತಿ. ಶೋಭಾ ದೇವಾಡಿಗ, ಶ್ರೀಮತಿ. ಹೇಮಾ ಎಲ್ ದೇವಾಡಿಗ, ಶ್ರೀಮತಿ. ವನಿತ ಬಿ ದೇವಾಡಿಗ, ಶ್ರೀಮತಿ ಕುಸುಮ ದೇವಾಡಿಗ, ಶ್ರೀಮತಿ ಲಕ್ಷ್ಮೀ ಜಿ ದೇವಾಡಿಗ, ತಮ್ಮ ತಮ್ಮ ಅನಿಸಿಕೆಯನ್ನು ಮಂಡಿಸಿ ತಮ್ಮ ಸಂಪೂರ್ಣ ಸಹಕಾರ ಇದೆ ಎಂದರು.

ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗ, 2025 ರಲ್ಲಿ ಸಂಘದ ಶತಮಾನೋತ್ಸವ ಆಚರಣೆಯ ಪ್ರಗತಿ / ಪ್ರಸ್ತುತಿ / ದೃಷ್ಟಿಕೋನ / ಯೋಜಿತ ಚಟುವಟಿಕೆಗಳ ಕುರಿತು ಮಾತನಾಡಿ ಸಂಘದ ಉತ್ತಮ ಬೆಳವಣಿಗೆಗೆ ಮಹಿಳಾ ವಿಭಾಗದ ಪ್ರಮುಖ ಪಾತ್ರವಿದೆ ಎಂದರು. ಕೊನೆಯಲ್ಲಿ ಮಹಿಳಾ ವಿಭಾಗದ. ನೂತನ ಅಧ್ಯಕ್ಷೆ. ಸರ್ವ ಪ್ರಾದೇಶಿಕ ಸಮನ್ವಯ ಸಮಿತಿಗಳಲ್ಲಿ ಮಹಿಳಾ ಸದಸ್ಯರು ಸಕ್ರೀಯವಾಗಿ ಭಾಗವಹಿಸಿ. ಕೇಂದ್ರೀಯ ಮಹಿಳಾ ಸಮಿತಿಯನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಪ್ರಸ್ತುತ ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ ವಿ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿ ಜತೆ ಕಾರ್ಯದರ್ಶಿ ಶ್ರೀಮತಿ ಲತಾ ಎ ಶೇರಿಗಾರ್ ವಂದನಾರ್ಪಣೆಗೈದರು.