Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ- ಹೊಸ(2022-2025) ಆಡಳಿತ ಮಂಡಳಿಯ ಪದಗ್ರಹಣ

ದೇವಾಡಿಗ ಸಂಘ ಮುಂಬಯಿ- ಹೊಸ(2022-2025) ಆಡಳಿತ ಮಂಡಳಿಯ ಪದಗ್ರಹಣ

   ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲಿ ಒಂದಾದ ದೇವಾಡಿಗ ಸಂಘ ಮುಂಬಯಿಯ ಹೊಸ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಇಲ್ಲಿಯ ಸಂಘದ ದಾದರ್ ಕಾರ್ಯಾಲಯದಲ್ಲಿ ಆಗಸ್ಟ್ 25, 2022 ರಂದು ಹೊಸ ನಿಯುಕ್ತ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಾರಂಭದಲ್ಲಿ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಇವರು ತಮ್ಮ ಆಡಳಿತ ಮಂಡಳಿಯ ಅವಧಿ ಮುಗಿರುವುದಾಗಿ ತಿಳಿಸಿ ಇತ್ತೀಚೆಗೆ ನಡೆದ 97ನೇ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿದಂತೆ, ಹೊಸ ಆಡಳಿತ ಮಂಡಳಿಗೆ ಬೇಕಾಗುವಷ್ಟೇ ನಾಮಾಂಕನ ಪತ್ರಗಳು ಬಂದಿದ್ದು ಚುನಾವಣೆಯ ಪ್ರಕರಣದ ಅವಶ್ಯಕತೆ ಇರಲಿಲ್ಲ ಎನ್ನುವುದಾಗಿ ಹೇಳಿ ಹೊಸತಾಗಿ ಆರಿಸಲಾದ ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್ ದೇವಾಡಿಗ ಇವರು ಮತ್ತು ಅವರ ಸಮಿತಿಗೆ ಅನುಮೋದನೆ ನೀಡಿ ಸಂಘದ ಆಡಳಿತವನ್ನು ಹೊಸ ಸಮಿತಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನದಾಸ್, ಶ್ರೀ ವಾಸು ಎಸ್ ದೇವಾಡಿಗ ಅಲ್ಲದೆ ಅನೇಕ ಆಜಿ ಮತ್ತು ಮಾಜಿ ಸದಸ್ಯರು ತಮ್ಮತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಹಿಂದಿನ ಆಡಳಿತ ಮಂಡಳಿಯ ಕಾರ್ಯಗಳನ್ನು ಶ್ಲಾಘಿಸಿ ಹೊಸ ಆಡಳಿತ ಮಂಡಳಿಗೆ (2022-2025) ಶುಭಾಶಯ ಕೋರಿದರು.

ಹೊಸ ಆಡಳಿತ ಮಂಡಳಿಯನ್ನು ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗ ಇವರುಹೊಸ ಆಡಳಿತ ಮಂಡಳಿಗೆ ಮುಂಬರುವ ಜವಾಬ್ದಾರಿಗಳನ್ನು ವಿವರಿಸಿ ಆಡಳಿತ ಮಂಡಳಿಯ ಸದಸ್ಯರಿಗೆ ಅವರವರ ಜವಾಬ್ದಾರಿಗಳನ್ನು ಹಂಚುತ್ತಾ ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೆ ಅವರವರ ಖಾತೆಗಳನ್ನು ಘೋಷಿಸಿದರು. ಅಂತೆಯೇ ಹೊಸ ಆಡಳಿತ ಮಂಡಳಿಯನ್ನು (2022-2025) ಈ ಕೆಳಗಿನಂತೆ ಸ್ಥಾಪಿಸಲಾಯಿತು .

ಅಧ್ಯಕ್ಷರು - ಶ್ರೀ ಪ್ರವೀಣ್ ಎನ್ ದೇವಾಡಿಗ
ಉಪಾಧ್ಯಕ್ಷರು – ಶ್ರೀ ನರೇಶ್ ಎಸ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಜೆ ಮೊಯ್ಲಿ
ಗೌರವ ಪ್ರಧಾನ ಕಾರ್ಯದರ್ಶಿ – ಶ್ರೀ ವಿಶ್ವನಾಥ ಬಿ ದೇವಾಡಿಗ
ಜೊತೆಕಾರ್ಯದರ್ಶಿಗಳು- ನ್ಯಾಯವಾದಿ ಪ್ರಭಾಕರ ಎಸ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ
ಖಜಾಂಚಿ -ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಮತ್ತು ಜೊತೆ ಖಜಾಂಚಿ ಮತ್ತು ಶ್ರೀಸುರೇಶ್ ಆರ್ ದೇವಾಡಿಗ
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗ
ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಮೋಹನದಾಸ್ ಗುಜರನ್ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಶುಭಾ ದೇವಾಡಿಗ
ವೈದ್ಯಕೀಯ ಮಾರ್ಗದರ್ಶನ ಮತ್ತು ಸಹಾಯ ಸಮಿತಿ ಅಧ್ಯಕ್ಷ- ಶ್ರೀ ಸುಂದರ್ ಸಿ ಮೊಯಿಲಿ
ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ – ಶ್ರೀ ಸುಧಾಕರ ಎಲ್ಲೂರು
ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ –ಶ್ರೀಮತಿ ಪೂರ್ಣಿಮಾ ಡಿ ದೇವಾಡಿಗ
ಉಪ ಕಾರ್ಯಾಧ್ಯಕ್ಷೆ – ಶ್ರೀಮತಿ ಗೀತಾ ಎಲ್ ದೇವಾಡಿಗ
ಸ್ಥಳೀಯ ಸಮನ್ವಯ ಸಮಿತಿ ಮತ್ತು ಸದಸ್ಯತ್ವ ಸಮಿತಿ ಕಾರ್ಯಾಧ್ಯಕ್ಷ- ಶ್ರೀಜಯ ಎಲ್ ದೇವಾಡಿಗ
ವೈವಾಹಿಕ ಸೇವಾ ಸಮಿತಿ ಕಾರ್ಯಾಧ್ಯಕ್ಷೆ- ಶ್ರೀಮತಿ ಪ್ರಫುಲ್ಲ ವಿ ದೇವಾಡಿಗ
ಸಾಮಾಜಿಕ ಹೊಣೆಗಾರಿಕೆಯ ವಿಶೇಷ ಯೋಜನೆಗಳ ಕಾರ್ಯಾಧ್ಯಕ್ಷೆ – ಶ್ರೀಮತಿ ಜಯಂತಿ ಆರ್ ಮೊಯಿಲಿ
ಜನ ಸಂಪರ್ಕ ಸಮಿತಿ ಕಾರ್ಯಾಧ್ಯಕ್ಷ –ಶ್ರೀ ಪ್ರಭಾಕರ ಎಸ್ ದೇವಾಡಿಗ
ಆಂತರಿಕ ಲೆಕ್ಕ ಪರಿಶೋಧನಾ ಸಮಿತಿ ಕಾರ್ಯಾಧ್ಯಕ್ಷ- CA ಜಗದೀಶ್ ದೇವಾಡಿಗ
ಕೋ- ಒಪ್ಟೆಡ್ (co-opt.) ಸದ್ಯಸರು: ನಿಕಟ ಪೂರ್ವ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಶ್ರೀ ವಾಸು ಎಸ್ ದೇವಾಡಿಗ, ಶ್ರೀ ಹಿರಿಯಡ್ಕ ಮೋಹನದಾಸ್

ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರನ್ನು ಶಾಲು ಹೊದಿಸಿ ಪುಷ್ಪ ಗುಚ್ಚವನ್ನಿತು ಸನ್ಮಾನಿಸಲಾಯಿತು ಹಾಗೇ ಅಧ್ಯಕ್ಷ ಶ್ರೀ ಪ್ರವೀಣ್ ಎನ್ ದೇವಾಡಿಗರನ್ನು ಶಾಲು ಹೊದಿಸಿ ಪುಷ್ಪ ಗುಚ್ಚವನ್ನಿತು ಸ್ವಾಗತಿಸಲಾಯಿತು.

ಜೊತೆಕಾರ್ಯದರ್ಶಿ ನ್ಯಾಯವಾದಿ ಪ್ರಭಾಕರ ಎಸ್ ದೇವಾಡಿಗ ಧನ್ಯವಾದ ಸಮರ್ಪಿಸಿದರು.
ಶ್ರೀ ರವಿ ಎಸ್ ದೇವಾಡಿಗರು ಕಾರ್ಯಕ್ರಮದ ಅಂತ್ಯದಲ್ಲಿ ಬಂದ ಸದ್ಯಸರಿಗೆ ಪ್ರೀತಿ ಭೋಜನವನ್ನು ಪ್ರಾಯೋಜಿಸಿದರು.