Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ -ಶತಮಾನೋತ್ಸವದ ಪೂರ್ವಭಾವಿ ಸಭೆ

ದೇವಾಡಿಗ ಸಂಘ ಮುಂಬಯಿ -ಶತಮಾನೋತ್ಸವದ ಪೂರ್ವಭಾವಿ ಸಭೆ

ದೇವಾಡಿಗ ಸಂಘ ಮುಂಬಯಿ ಸಂಘದ ಅಧ್ಯಕ್ಷ ಶ್ರೀ ರವಿ ಯಸ್ . ದೇವಾಡಿಗರ ನೇತೃತ್ವದಲ್ಲಿ 2025ರಲ್ಲಿ ಸಂಘವು ಶತಮಾನೋತ್ಸವ ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯು ದಿನಾಂಕ 28 ನವೆಂಬರ್ 2021ರಂದು ದಾದರ್ ನಲ್ಲಿನ ದೇವಾಡಿಗ ಸೆಂಟರ್ ನಲ್ಲಿ ಜರುಗಿತು.

ಸಭೆಯಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಹಾಗೂ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಶ್ರೀ ವಾಸು ಎಸ್. ದೇವಾಡಿಗ, ಶ್ರೀ ಹಿರಿಯಡ್ಕ ಮೋಹನದಾಸ್, ಉಪಾಧ್ಯಕ್ಷರುಗಳಾದ ಶ್ರೀ ಪ್ರವೀಣ್ ನಾರಾಯಣ್, ಶ್ರೀ ನರೇಶ್ ದೇವಾಡಿಗ, ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ.ಮೊಯಿಲಿ ಮತ್ತು ಶ್ರೀ ಜಯ ಎಲ್. ದೇವಾಡಿಗ, ಕೋಶಾಧಿಕಾರಿ ಶ್ರೀ ಕೃಷ್ಣ ಬಿ. ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್. ಮೊಯಿಲಿ, ಡೊಂಬಿವಿಲಿ, ಚೆಮ್ಬುರ್, ಜೋಗೇಶ್ವರಿ, ಅಸಲ್ಫಾ, ಬೊರಿವಿಲಿ, ಮೀರಾರೋಡ್, ಭಾಂಡುಪ್, ನವಿಮುಂಬಯಿ, ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಕ್ರೀಯ ಸದ್ಯಸರು ಉಪಸ್ಥಿತರಿದ್ದರು.

ಶ್ರೀಮತಿ ಲಕ್ಷ್ಮಿ ದೇವಾಡಿಗ ಮತ್ತು ಶ್ರೀಮತಿ ಕುಸುಮ ದೇವಾಡಿಗರ ಪ್ರಾಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು.

ಡೊಂಬಿವಿಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ್ ದೇವಾಡಿಗ, ಶ್ರೀ ದಿನೇಶ್ ದೇವಾಡಿಗ, ಹಾಗೂ ಯುವ ವಿಭಾಗದ ಶ್ರೀ ವಿನೀಶ್ ದೇವಾಡಿಗ ರವರು ತಮ್ಮ ಪ್ರಾದೇಶಿಕ ಸಮಿತಿಯ ಪರವಾಗಿ ಮಾತನಾಡಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಬೋರಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಕುಸುಮ ದೇವಾಡಿಗ, ಶ್ರೀಮತಿ ಲಕ್ಷ್ಮೀ ದೇವಾಡಿಗ, ಶ್ರೀಮತಿ ಇಂದುಮತಿ ಶ್ರೀಯಾನ್, ಶ್ರೀಮತಿ ಉಷಾ ದೇವಾಡಿಗ, ಮೀರಾರೋಡ್ ಪ್ರಾದೇಶಿಕ ಸಮಿತಿಯ ಶ್ರೀಮತಿ ವಿಜಯಲಕ್ಷ್ಮಿ ದೇವಾಡಿಗ, ಶ್ರೀಮತಿ ಶಕುಂತಳಾ ಶೇರಿಗಾರ್, ಸಿಟಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಲತಾ ಮೋಯ್ಲಿ, ಶ್ರೀಮತಿ ಸುಜಯಾ ದೇವಾಡಿಗ, ಶ್ರೀಮತಿ ಮಮತ ದೇವಾಡಿಗ, ಶ್ರೀಮತಿ ಗೀತಾ ದೇವಾಡಿಗ, ಶ್ರೀಮತಿ ಸರಸ್ವತಿ ಕಾರ್ಕಳ, ಚೆಂಬೂರು ಶ್ರೀಮತಿ ಹೇಮ ಶೇರಿಗಾರ್, ಶ್ರೀಮತಿ ಸೌಮ್ಯ ದೇವಾಡಿಗ ಇವರೆಲ್ಲರೂ ಉಪಸ್ಥಿತರಿದ್ದರು.

ಅಸಲ್ಫ ಪ್ರಾದೇಶಿಕ ಸಮನ್ವಯ ಸಮಿತಿಯ ಪರವಾಗಿ ಶ್ರೀ ಯೋಗೇಶ್ ದೇವಾಡಿಗ ಹಾಗೂ ವೇದ್ ಪ್ರಕಾಶ್ ಮೊಯಿಲಿ ಯವರು ಮಾತನಾಡಿದರು.

ಚೆಂಬೂರ್ ಪ್ರಾದೇಶಿಕ ಸಮನ್ವಯ ಸಮಿತಿಯ ಪರವಾಗಿ ಕಾರ್ಯದರ್ಶಿ ಶ್ರೀ ಸುಧಾಕರ್ ಎಲ್ಲೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ನಿರ್ಮಲ ಆರ್. ದೇವಾಡಿಗ, ದಯಾನಂದ ದೇವಾಡಿಗ ಮತ್ತು ಮಾಜಿ ಕಾರ್ಯಾಧ್ಯಕ್ಷ ಶ್ರೀ ರಾಮಣ್ಣ ದೇವಾಡಿಗರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿ ತಮ್ಮಿಂದಾದಷ್ಟು ಸಹಾಯ, ಸಹಕಾರ ಮಾಡುವುದಾಗಿ ಹೇಳಿದರು.

ಬೋರಿವಿಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಭಾಸ್ಕರ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಕುಸುಮ ದೇವಾಡಿಗ , ಲಕ್ಷ್ಮಿ ದೇವಾಡಿಗ ತಮ್ಮ ಸಮಿತಿಯು ಸಹಕಾರ ಯಾವಾಗಲೂ ಇದೆ ಎಂದರು.

ನವಿ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷರಾದ ಅಡ್ವೋಕೇಟ್ ಪ್ರಭಾಕರ್ ದೇವಾಡಿಗರು ತಮ್ಮ ಸಮಿತಿಯ ಒಂದು ವರ್ಷದ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು. ಮುಂದೆ ದೇವಾಡಿಗ ಯಕ್ಷಗಾನ ಮಂಡಳಿ ಹಾಗು ದೇವಾಡಿಗ ಕವಿ ಸಮ್ಮೇಳನ ನಡೆಸುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದರು. ಶ್ರೀ ರಾಮ ಭಜನಾ ಮಂಡಳಿ ನವಿಮುಂಬಯಿ ಪರಿಸರದಲ್ಲಿ ಭಜನಾ ಕಾರ್ಯಕ್ರಮ ನೀಡುತ್ತಾ ಬಂದಿದೆ ಎಂದರು.

ಮೀರಾ ರೋಡ್ ಪ್ರಾದೇಶಿಕ ಸಮನ್ವಯ ಸಮಿತಿಯ ಪರವಾಗಿ ಶ್ರೀ ಗಣೇಶ್ ದೇವಾಡಿಗ, ಶ್ರೀ ಎಂ .ಸಿ. ಹೆಮ್ಮಾಡಿ ಮತ್ತು ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿಯವರು ಮಾತನಾಡಿದರು.

ಸಿಟಿ ವಲಯ ಪ್ರಾದೇಶಿಕ ಸಮನ್ವಯ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷ ಶ್ರೀ ಬಾಲಚಂದ್ರ ದೇವಾಡಿಗ, ಶ್ರೀ ಹೇಮನಾಥ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಡ್ವಕೇಟ್ ಬ್ರಿಜೇಶ್ ನಿಟ್ಟೇಕರ್ ಹಾಗು ಶ್ರೀಮತಿ ಗೀತಾ ಎಲ್. ದೇವಾಡಿಗರು ಮಾತನಾಡಿ ಶತಮಾನೋತ್ಸವದ ಬಗ್ಗೆ ತಮ್ಮ ತಮ್ಮ ಚಿಂತನೆ ಮಂಡಿಸಿ ತಮ್ಮಿಂದಾದಷ್ಟು ಸಹಾಯ/ಸಹಕಾರ ಮಾಡುವುದಾಗಿ ಭರವಸೆ ನೀಡಿದರು.

ಜೋಗೇಶ್ವರಿ ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳಾ ಕಾರ್ಯಧ್ಯಕೆ ಶ್ರೀ ಮತಿ ರೇಖಾ ದೇವಾಡಿಗ ಮತ್ತು ಶ್ರೀ ಸತೀಶ್ ಕಣ್ವತೀರ್ಥ ರವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್. ಮೊಯಿಲಿಯವರು ಮಾತನಾಡಿ ಕೊರೋನ ಮಹಾಮಾರಿಯ ಸಂದರ್ಭದಲ್ಲೂ ಮಹಿಳಾ ವಿಭಾಗ ಅಂತರ್ಜಾಲ ಮುಖೇನ ವಿವಿಧ ಕಾರ್ಯಕ್ರಮ ಏರ್ಪಡಿಸಿ ಎಲ್ಲಾ ಮಹಿಳೆಯರನ್ನು ಒಂದುಗೂಡಿಸಿದೆ. ಉಪಾಧ್ಯಕ್ಷೆ ಶ್ರೀಮತಿ ಜಯಂತಿ. ಎಂ ದೇವಾಡಿಗ ಮತ್ತು ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ಯು. ದೇವಾಡಿಗರು ಮಾತನಾಡುತ್ತಾ, ಎಲ್ಲಾ ಪೋಷಕರು ತಮ್ಮ ಮಕ್ಕಳೊಂದಿಗೆ ತುಳುವಿನಲ್ಲಿ ಮಾತನಾಡಲು ವಿನಂತಿಸಿದರು. ತುಳು ಭಾಷೆ ನಮ್ಮ ಮಾತೃ ಭಾಷೆ, ತುಳು ಭಾಷೆಗೆ ಈಗ ಮಾನ್ಯತೆ ಸಿಕ್ಕಿದೆ ಎಂದರು. ಸಂಘ ಸಂಸ್ಥೆ ಯಾಕೆ ಬೇಕೆಂದರೆ ಅದು ಒಂದು ಸಂಘಟನೆ. ಎಲ್ಲರೊಂದಿಗೆ ಕೂಡಿ ಬಾಳಿ ಬದುಕಬಹುದು. ಶತಮಾನೋತ್ಸವದ ತಯಾರಿ ಬಹಳ ಅದ್ದೂರಿಯಿಂದ ಮಾಡಬೇಕು ಕೊರೋನ ಮಹಾಮಾರಿಗೆ ಹೆದರದೆ ಅಂತಜಾಲದಲ್ಲಿ ಕಾರ್ಯಕ್ರಮದ ಪ್ರಗತಿಯ ಬಗ್ಗೆ ಎಲ್ಲರಿಗೂ ಸಮಯ ಸಮಯಕ್ಕೆ ತಿಳಿಸಬೇಕು ಎಂದರು.

ಮಾಜಿ ಅಧ್ಯಕ್ಷ ಶ್ರೀ ವಾಸು ಎಸ್ ದೇವಾಡಿಗರು ಮಾತನಾಡುತ್ತ ನಾವು ಯೋಜಿಸಿದ ಎಲ್ಲಾ ಕಾರ್ಯಕ್ರಮಗಳು ಇಷ್ಟರವರೆಗೆ ಯಶಸ್ವಿಗೊಂಡಿವೆ, ಮುಂದಕ್ಕೂ ಶತಮಾನೋತ್ಸವ ಯಶಸ್ವಿಗೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎಂದರು.

ಉಪಾಧ್ಯಕ್ಷ ಶ್ರೀ ಪ್ರವೀಣ್ ನಾರಾಯಣ್, ಇದು ಶತಮಾನೋತ್ಸವದ ಮೊದಲ ಸಮಾವೇಶ. ಪ್ರತಿ 2-3 ತಿಂಗಳಿಗೊಮ್ಮೆ ಸಮಾವೇಶವಿಟ್ಟು ಅದರ ಪ್ರಗತಿಯ ಬಗ್ಗೆ ಎಲ್ಲರಿಗೂ ತಿಳಿಸುತ್ತೇವೆ ಹಾಗೂ ಎಲ್ಲರ ಸಹಾಯ/ಸಹಕಾರ ಅಗತ್ಯವೆಂದರು.

ಉಪಾಧ್ಯಕ್ಷ ಶ್ರೀ ನರೇಶ್ ದೇವಾಡಿಗರು ಮಾತನಾಡುತ್ತ, ಶತಮಾನೋತ್ಸವದ ಸಂದರ್ಭದಲ್ಲಿ ಯುವಪೀಳಿಗೆಯು ದೇವಾಡಿಗ ಸಂಘದ ಬಗ್ಗೆ ಲೇಖನ ಬರೆಯಬೇಕು., ಮಾಜಿ ಅಧ್ಯಕ್ಷರ ಕಾರ್ಯಾವಧಿಯ ಬಗ್ಗೆ ಹಾಗೂ ಅವರ ಜೀವನದ ಬಗ್ಗೆ ವಿಶ್ಲೇಷಣಾ ಲೇಖನ ಬರೆಯಬೇಕು ಅಲ್ಲದೇ ಸಂಘದ ಯೋಜನೆಗಳ ಬಗ್ಗೆ ಬರೆಯಬೇಕೆಂದರು .ಈ ಎಲ್ಲ ಆಯೋಜನೆಗಳು ಸ್ಪರ್ಧಾತ್ಮಕವಾಗಿರುತ್ತದೆ ಎಂದರು. ಶತಮಾನೋತ್ಸವದ ವೇಳೆಗೆ ಸಮಾಜದ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ. ಸಂಘದ ಪ್ರಸ್ತುತ ಸಂಖ್ಯೆಯು ದ್ವಿಗುಣವಾಗ ಬೇಕೆಂದು ಒತ್ತಾಯಿಸಿದರು.ಎಲ್ಲರೂ ಇದಕ್ಕೆ ಪ್ರಯತ್ನಿಸಬೇಕು. ಸಂಘವು ಸದ್ಯಸರಲ್ಲಿ ಯಾರ ವಿವರ (ಡೀಟೇಲ್ಸ್) ಸಂಪೂರ್ಣವಿದೆಯೋ ಅವರಿಗೆ ಸಂಘದ ಐಡೆಂಟಿಟಿ ಕಾರ್ಡ್ (ಸ್ಮಾರ್ಟ್ ಕಾರ್ಡ್) ನೀಡಲಿದೆ ಅಲ್ಲದೆ ಯಾರ ವಿವರ ಸಂಪೂರ್ಣ ಇಲ್ಲವೋ ಅವರಿಗೆ ತಾತ್ಕಾಲಿಕ ಕಾರ್ಡ್ ನೀಡಲಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನದಾಸ್ ತಮ್ಮ ಮುಕ್ತಾಯದ ಭಾಷಣದಲ್ಲಿ ಸಂಘವು ಸಮಾಜ ಭಾಂಧವರ ತುರ್ತು ಸಹಾಯಕ್ಕಾಗಿ ಪ್ರತ್ಯೇಕ ವ್ಯವಸ್ಯೆಯನ್ನು ಯೋಜಿಸಿ ತನ್ಮೂಲಕ ವೈದ್ಯಕೀಯ, ಶಿಕ್ಷಣ ಮತ್ತು ಆರ್ಥಿಕ ಸಹಾಯ ಶೀಘ್ರಗತಿಯಲ್ಲಿ ನೀಡುವ ಬಗ್ಗೆ ಚಿಂತಿಸಬೇಕೆಂದರು. ಸಮಾಜ ಭಾಂದವರು ಧನ ಸಹಾಯ ನೀಡಿದಲ್ಲಿ ನೇರವಾಗಿ ಸಂತ್ರಸ್ತರಿಗೆ ನೀಡುವಂತಾಗಬೇಕು. ಈ ದಿಸೆಯಲ್ಲಿ ಸಂಘದ ವಾಟ್ಸಾಪ್ ಗ್ರೂಪ್ನಲ್ಲಿ ಪ್ರಚಾರ ನೀಡಬೇಕೆಂದರು. ಶತಮಾನೋತ್ಸವಕ್ಕೆ ಆರ್ಥಿಕ ಸಹಾಯ ಸಂಗ್ರಹಿಸುವ ವಿವಿಧ ಯೋಜನೆಗಳನ್ನೂ ವಿವರಿಸಿ ಪ್ರಾದೇಶಿಕ ಸಮನ್ವಯ ಸಮಿತಿಗಳು ಅಲ್ಲದೆ ದೇಶ ವಿದೇಶದಲ್ಲಿನ ಸರ್ವ ದೇವಾಡಿಗ ಸಂಸ್ಥೆಗಳ ಸಹಕಾರ ಕೋರಬೇಕೆಂದರು. ಶತಮಾನೋತ್ಸವ ಇದು ಮುಂಬಯಿ ಸಂಘ ಮಾತ್ರ ಅಲ್ಲ ಇಡೀ ದೇವಾಡಿಗ ಸಂಘಟನೆಯ ಶತಮಾನೋತ್ಸವದಂತಾಗಬೇಕೆಂದು ಆಶಿಸಿದರು.

ಕೊನೆಯಲ್ಲಿ, ಸಂಘದ ಅಧ್ಯಕ್ಷ ರವಿ ಯಸ್. ದೇವಾಡಿಗರು ತಮ್ಮ ಭಾಷಣದಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ/ಚಿಂತನೆ ಮಂಡಿಸಿದ್ದೀರಿ. ನೀವು ಹೇಳಿದ ಎಲ್ಲಾ ಸಲಹೆಗಳನ್ನು ವಿಚಾರ ವಿಮರ್ಶೆ ಮಾಡುತ್ತೇವೆ. ಎಲ್ಲರ ಸಹಾಯ/ಸಹಕಾರವಿದ್ದರೆ ಶತಮಾನೋತ್ಸವ ಬಹಳ ವೈಭವದಿಂದ ನಡೆಸುವ ಬಗ್ಗೆ ಭರವಸೆ ಇದೆ ಎಂದರು.

ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗರು ಎಲ್ಲರಿಗೂ ಧನ್ಯವಾದ ಸಮರ್ಪಿಸಿ, ರಾಷ್ಟ್ರ ಗೀತೆಯ ಬಳಿಕ ಪ್ರೀತಿ ಭೋಜನದೊಂದಿಗೆ ಮುಕ್ತಾಯಗೊಂಡಿತು.