Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಅಭಿವೃದ್ಧಿ ನಿಗಮದ ಸ್ಥಾಪನೆಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯೆಡ್ಯೂರಪ್ಪ ಮತ್ತು ಮಾನ್ಯ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರರನ್ನು ಭೇಟಿಯಾದ ದೇವಾಡಿಗ ಸಮನ್ವಯ ಸಮಿತಿಯ ಸದಸ್ಯರು.

ದೇವಾಡಿಗ ಅಭಿವೃದ್ಧಿ ನಿಗಮದ ಸ್ಥಾಪನೆಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯೆಡ್ಯೂರಪ್ಪ ಮತ್ತು ಮಾನ್ಯ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರರನ್ನು ಭೇಟಿಯಾದ ದೇವಾಡಿಗ ಸಮನ್ವಯ ಸಮಿತಿಯ ಸದಸ್ಯರು.

ದಿನಾಂಕ 01/03/2021 ರಂದು ಮಾನ್ಯ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರರನ್ನು ಭೇಟಿಯಾಗಲು, ದೇವಾಡಿಗ ಸಮನ್ವಯ ಸಮಿತಿ ಪರವಾಗಿ ಹಿರಿಯಡ್ಕ ಮೋಹನದಾಸ್, ಆಲೂರು ರಘುರಾಮ್ ದೇವಾಡಿಗ, ರವಿ ಎಸ್.ದೇವಾಡಿಗ , ಮುಂಬಯಿ, ರತ್ನಾಕರ ದೇವಾಡಿಗ ಉಡುಪಿ, ನಾರಾಯಣ ದೇವಾಡಿಗ ಕುಂದಾಪುರ ರವರು ನಿನ್ನೆ ಶಿವಮೊಗ್ಗಕ್ಕೆ ಬಂದಿದ್ದು, ಅದೃಷ್ಟವಶಾತ್ ಮಾನ್ಯ ಮುಖ್ಯ ಮಂತ್ರಿ ಶ್ರೀ ಬಿ. ಎಸ್ ಯೆಡ್ಯೂರಪ್ಪರವನ್ನು ಕ್ಷಣಕಾಲಕ್ಕೆ ಭೇಟಿಯಾದಾಗ ದೇವಾಡಿಗ ಸಮಾಜದ ಮನವಿಯನ್ನು ನೀಡಿ ವಿಸ್ತ್ರತ ಮಾತುಕತೆಗೆ ಬೆಂಗಳೂರಿಗೆ ನಮ್ಮ ನಿಯೋಗ ಭೇಟಿಯಾಗುವ ವಿಚಾರ ತಿಳಿಸಲಾಯ್ತು.

ಇಂದು ಬೆಳಿಗ್ಗೆ ಮಾನ್ಯ ಸಂಸದ ಶ್ರೀ ರಾಘವೇಂದ್ರರನ್ನು ಶ್ರೀಮತಿ ಪ್ರಿಯದರ್ಶಿನಿ ಬೆಸ್ಕೂರ್ ರೊಂದಿಗೆ ಭೇಟಿ ಮಾಡಿ ಸುಮಾರು ಮುಕ್ಕಾಲು ಗಂಟೆ ಮಾತುಕತೆ ನಡೆಸಿ ದೇವಾಡಿಗ ಸಮಾಜದ ಬೇಡಿಕೆ ಬಗ್ಗೆ ಮನವಿ ನೀಡಲಾಯ್ತು . ಸಂಸದರು ನಮ್ಮ ಮನವಿ ಬಗ್ಗೆ ಮಾನ್ಯ ಮುಖ್ಯ ಮಂತ್ರಿಯ ವರಲ್ಲಿ ಚರ್ಚಿಸಿ ಸಾಧ್ಯವಾದಷ್ಟು ಸಹಾಯ ಕೊಡಿಸುವುದಾಗಿ ತಿಳಿಸಿ ದರು.


ದೇವಾಡಿಗ ಅಭಿವೃದ್ಧಿ ನಿಗಮದ ಬಗ್ಗೆ ಆಡಳಿತಾತ್ಮಕ ತೊಂದರೆ ವಿವರಿಸಿದರು.
ನಮ್ಮ ಮನವಿ ಯಲ್ಲಿ ಈ ಕೆಳಗಿನ ಬೇಡಿಕೆ ಮಂಡಿಸಿದ್ದೇವೆ.
1. ವಿವಿಧ ಸಂಘಗಳಲ್ಲಿ ಸಮುದಾಯ ಭವನ ನಿರ್ಮಾಣ ಸ್ಥಗಿತ ಗೊಂಡಿದ್ದು ಆ ಯೋಜನೆಗಳಿಗೆ ಸರಕಾರದಿಂದ ಸೂಕ್ತ ಅನುದಾನ.
2. ಸಮಾಜದ ಯುವಕ ಯುವತಿಯರು ಮತ್ತು ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಆರ್ಥಿಕ ಸಹಾಯಕ್ಕೆ ಅನುದಾನ.
3. ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಒಳ ಮೀಸಲಾತಿ.
ಈ ಎಲ್ಲಾ ಯೋಜನೆಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಕನಿಷ್ಠ 50 ಕೋಟಿ ರೂಪಾಯಿಗಳನ್ನು ಕಾದಿರಿಸುವಂತೆ ವಿನಂತಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸುತ್ತ ಬಜೆಟ್ ನಲ್ಲಿ ಯಾವುದೇ ಸಮಾಜಗಳಿಗೆ ಅನುದಾನ ಮಿತಿ ಕಾದಿರಿಸುವುದಿಲ್ಲ ಬದಲಾಗಿ ಸಂಬಂಧ ಪಟ್ಟ ಇಲಾಖೆಗಳಿಗೆ ಅನುದಾನ ಮಿತಿ ನಿಗದಿ ಪಡಿಸಲಾಗುವುದೆಂದರು. ನಮ್ಮ ಬೇಡಿಕೆ 2 ಮತ್ತು 3 ರ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಸಮುದಾಯ ಭವನಗಳಿಗೆ ಅನುದಾನಕ್ಕಾಗಿ ಸ್ಥಳೀಯ ಶಾಸಕರ ಮುಖಾಂತರ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಕೂಡಲೇ ಮನವಿ ಮಾಡಲು ತಿಳಿಸಿದರು. ಆ ಮನವಿಯ ಪ್ರತಿಯನ್ನು ಪೂರ್ಣ ಮಾಹಿತಿಯೊಂದಿಗೆ ಮಾನ್ಯ ರಾಘವೇಂದ್ರರಿಗೆ ಕಳುಹಿಸಬೇಕೆಂದರು.
ಇದಕ್ಕಾಗಿ ಸಮನ್ವಯ ಸಮಿತಿ ಸಹಕರಿಸುವುದು. ಈ ಭೇಟಿಯನ್ನು ಸಮನ್ವಯಿಸಿದ ಶ್ರೀಮತಿ ಪ್ರಿಯದರ್ಶಿನಿ ಬೆಸ್ಕೂರ್ ಬೈಂದೂರ್ ಇವರಿಗೆ ಕೃತಜ್ಞತೆಗಳು ಅವರೊಂದಿಗೆ ಶ್ರೀ ಕಮಲೇಶ ಬೆಸ್ಕೂರ್ ಕೂಡ ಉಪಸ್ಥಿತರಿದ್ದರು. ಈ ಭೇಟಿಯ ವೇಳೆ ಶಿವಮೊಗ್ಗದಲ್ಲಿ ಸರ್ವ ಅಥಿತ್ಯ ಮತ್ತು ಸಂಯೋಜನೆಗೆ ಸಹಕರಿಸಿದ ಆಲೂರು ರಘುರಾಮ್ ದೇವಾಡಿಗರಿಗೆ ಕೃತಜ್ಞತೆಗಳು. ನಮ್ಮ ಪ್ರಯತ್ನಕ್ಕೆ ತಾಯಿ ಏಕನಾಥೇಶ್ವರಿ ದೇವಿಯ ಸದಾ ಕೃಪೆ ಇರಲೆಂದು ನಮ್ಮೆಲ್ಲರ ಪ್ರಾರ್ಥನೆ. ದೇವಾಡಿಗರ ಒಗ್ಗಟ್ಟಿಗೆ ಜಯವಾಗಲಿ