Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ:
ಯೋಗ ಮಾಡುವುದರಿಂದ ಸಂಪೂರ್ಣ ಅರೋಗ್ಯ ಸ್ವಾಸ್ಥ್ಯ; ಜಯಂತಿ ಎಂ. ದೇವಾಡಿಗ

   ನವಿ ಮುಂಬಯಿ, ಜೂನ್ 23: ನಮ್ಮ ದೈನಂದಿನ ಜೀವನದಲ್ಲಿ ಹಸಿವು, ಬಾಯಾರಿಕೆ, ಮನೋರಂಜನೆ, ನೌಕರಿ ಉದ್ಯೋಗ ಎಲ್ಲೆದೊಂದಿಗೆ ದೇಹದ ಸ್ವಾಸ್ಥ್ಯವೂ ಅಗತ್ಯ. ನಮ್ಮ ನಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸ್ವಲ್ಪವೂ ಹಣ ಖರ್ಚು ಮಾಡದೇ ಇರುವ ಒಂದೇ ಸಾಧನೆ ಅಂದರೆ ದಿನ ನಿತ್ಯದ ಯೋಗ ಮತ್ತು ವ್ಯಾಯಾಮದ ಸಾಧನೆ. ಸ್ವಲ್ಪ ಸಮಯದ ಯೋಗಾಭ್ಯಾಸವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ನಿರೋಗಿಯಾಗಿ ಯಾವುದೇ ಖಾಯಿಲೆಗಳು ಇಲ್ಲದೆ ಆರಾಮದಾಯಕ ಜೀವನವವನ್ನು ಆನಂದಿಸಬಹುದು ಎಂದು ಪ್ರಖ್ಯಾತ ಯೋಗ ಪಟು ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಹೇಳಿದರು

ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀಮತಿ ಜಯಂತಿ ದೇವಾಡಿಗ ಇವರ ನೇತೃತ್ವದಲ್ಲಿ ಇಂದು (23-6-2024) ಸಂಜೆ ಇಲ್ಲಿಯ ನೆರೂಲ್ ಪಶ್ಚಿಮದ ದೇವಾಡಿಗ ಭವನದಲ್ಲಿ ಆಚರಿಸಿದರು. ಈ ಸಂದರ್ಭದಲ್ಲಿ ಸೇರಿದ ಸಂಘದ ಸದಸ್ಯರಿಗೆ ಯೋಗದ ಮಾಹಿತಿ ನೀಡಿದ ಜಯಂತಿ ದೇವಾಡಿಗ ಇವರು ಅನೇಕ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿ ಯೋಗದಿಂದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿ ಹೇಳಿದರು. “ಜನರು ಹೆಚ್ಚಾಗಿ ಮಂಡಿನೋವು, ಸೊಂಟ ನೋವು, ಬೊಜ್ಜು, ಥೈರಾಯಿಡ್, ಹೃದಯರೋಗ, ಡಯಾಬೆಟಿಕ್ಸ್, ಹೈ ಮತ್ತು ಲೊ ಬ್ಲಡ್ ಪ್ರೆಷರ್ ಖಾಯಿಲೆಗಳಿಂದ ಬಳಲುತ್ತಿದ್ದು ನಿಯಮಿತ ಮತ್ತು ವೈಜ್ಞಾನಿಕ ಯೋಗದಿಂದ ಇಂತಹ ಎಲ್ಲಾ ಖಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದು”; ಎಂದು ಶ್ರೀಮತಿ ಜಯಂತಿ ದೇವಾಡಿಗ ಇವರು ತಿಳಿಸಿ ಹೇಳಿದರು.

ಅಂತರರಾಷ್ಟ್ರೀಯ ಯೋಗದಿನಾಚರಣೆ ಮತ್ತು ಯೋಗ ಶಿಬಿರದ ಉದ್ಘಾಟಿಸಿದ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಎಲ್ಲರಿಗೂ ಶುಭ ಕೋರಿದರು. “ನಮ್ಮ ಮಹಿಳಾ ವಿಭಾಗದ ಅಧ್ಯಕ್ಷೆ ಓರ್ವ ಯೋಗ ಪಟು, ಕ್ರೀಡಾ ಪಟು ಮತ್ತು ಯೋಗ ತರಬೇತುದಾರರಾಗಿದ್ದಾರೆ. ಸಂಘದ ಸದಸ್ಯರು ಆದಷ್ಟು ಸಂಖ್ಯೆಯಲ್ಲಿ ಅವರಿಂದ ತರಬೇತು ಪಡದು ಆರೋಗ್ಯವಂತರಾಗಬೇಕು. ಇದರಿಂದಾಗಿ ನಮ್ಮ ಸಂಘದ ಶತಮಾನೋತ್ಸವ ಆಚರಣೆಗೆ ತುಂಬಾ ಲಾಭ ಇದೆ” ಎಂದು ಹೇಳಿದರು. ಅಲ್ಲದೆ ಇಂತಹ ಸಮಾಜಪರ ಕಾರ್ಯಕ್ರಮಗಳಿಗೆ ಸಂಘದ ಮತ್ತು ತನ್ನ ವೈಯಕ್ತಿಕವಾದ ಎಲ್ಲಾ ಸಹಕಾರದ ಅವರು ಆಶ್ವಾಸನೆಯನ್ನು ನೀಡಿ ಶ್ರೀಮತಿ ಜಯಂತಿ ದೇವಾಡಿಗ ಮತ್ತು ಅವರ ತಂಡಕ್ಕೆ ಧನ್ಯವಾದ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ಶ್ರೀಮತಿ ಮಾಲತಿ ಜೆ. ಮೊಯ್ಲಿ, ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನ ದಾಸ್, ಶ್ರೀ ರವಿ ಎಸ್. ದೇವಾಡಿಗ, ಶ್ರೀ ಶ್ರೀನಿವಾಸ್ ಕರ್ಮರನ್, ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಬಿ ದೇವಾಡಿಗ ಜೊತೆ ಕಾರ್ಯದರ್ಶಿಗಳಾದ ಅಡ್ವೋಕೇಟ್ ಶ್ರೀ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿ ಶ್ರೀ ಸುರೇಶ ದೇವಾಡಿಗ, ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯಾರಾದ ಶ್ರೀಮತಿ ಪ್ರತಿಭಾ ದೇವಾಡಿಗ ಮತ್ತು ಶ್ರೀಮತಿ ಪ್ರಮೀಳಾ ಶೇರಿಗಾರ್, ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಶೇರಿಗಾರ, ಶ್ರೀಮತಿ ನಳಿನಿ ದೇವಾಡಿಗ, ಮಹಿಳಾ ವಿಭಾಗದ ವ್ಯವಸ್ಥಾಪಕಿಯ ಸಮಿತಿ, ಯುವ ವಿಭಾಗದ ವ್ಯವಾಸ್ಥಾಪಕಿಯ ಸಮಿತಿ ಮತ್ತು ಸಂಘದ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು ಮತ್ತು ಅವರ ಸಮಿತಿ ಸದಸ್ಯರು ಹಾಗೂ ಸಂಘದ ಸದಸ್ಯರು ಬಹುಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದದಲ್ಲಿ ಶ್ರೀಮತಿ ಜಯಂತಿ ಎಂ. ದೇವಾಡಿಗ ಸಂಚಾಲಿತ ಝೀಯಲ್ ಸ್ಪೋರ್ಟ್ಸ್ ಅಂಡ್ ಫಿಟ್ನೆಸ್ ತಂಡದ ಸಂಚಿತ ಸಾಲಿಯಾನ್, ಭಾವನಾ ದೇವಾಡಿಗ, ನೇಹಲ್, ಸುರಭಿ, ವಿದ್ಯಾ, ಮತ್ತು ಸಿಮ್ರಾನ್ ಇವರಿಂದ ಜಯಂತಿ ಎಂ. ದೇವಾಡಿಗ ಇವರ ನೇತೃತ್ವದಲ್ಲಿ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಯಿತು. ಅಲ್ಲದೆ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ದೇವಾಡಿಗರ ಹಸ್ತದಿಂದ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಮಾಲತಿ ಜೆ. ಮೊಯ್ಲಿ ಮತ್ತು ಶ್ರೀಮತಿ ಉಮಾವತಿ ಗುಜರಾನ್ ಇವರು ಪ್ರಾರ್ಥನೆ ಸಲ್ಲಿಸಿದರು. ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಶೇರಿಗಾರ ಇವರು ವಂದಿಸಿದರು.