ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ.

ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ.

   ನವಿ ಮುಂಬಯಿ:ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 18 ರಂದು ಆಚರಿಸಲಾಯಿತು. ಆ ಪ್ರಯುಕ್ತ ಇಲ್ಲಿಯ ನೆರೂಲ್ ಇಲ್ಲಿರುವ ದೇವಾಡಿಗ ಭವನದಲ್ಲಿ ವಿವಿಧ ಯೋಗಾಸನ ಮತ್ತು ಆರೋಗ್ಯದ ವಿಷಯದ ಕುರಿತ ಕಾರ್ಯಕ್ರಮವನ್ನು 18 ಜೂನ್ 2023 ರಂದು (ಭಾನುವಾರ) ವಿಭಾಗದ ಕಾರ್ಯಾಧ್ಯಕ್ಷೆ ಮತ್ತು ಯೋಗಪಟು ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ ಅವರು ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷರು ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ವಾಸು ಎಸ್. ದೇವಾಡಿಗ, ಶ್ರೀ ಹಿರಿಯಡ್ಕ ಮೋಹನದಾಸ್, ಶ್ರೀ ರವಿ ಎಸ್. ದೇವಾಡಿಗ ಉಪಾಧ್ಯಕ್ಷರಾದ ಶ್ರೀ ನರೇಶ್ ಎಸ್. ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಬಿ. ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಡ್ವೋಕೇಟ್ ಬ್ರಿಜೇಶ್ ಎಸ್. ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ, ಶ್ರೀಮತಿ. ಜಯಂತಿ ಎಂ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರುಗಳು ಶ್ರೀಮತಿ. ಪ್ರಫುಲ್ಲ ವಿ. ದೇವಾಡಿಗ, ಶ್ರೀಮತಿ. ಪುಷ್ಪಾ ಎಸ್. ರಾವ್, ಶ್ರೀಮತಿ ಜಯಂತಿ ಆರ್. ಮೊಯ್ಲಿ, ಉಪಾಧ್ಯಕ್ಷರು - ಶ್ರೀಮತಿ. ಪ್ರತಿಭಾ ಜಿ. ದೇವಾಡಿಗ, ಶ್ರೀಮತಿ. ಪ್ರಮೀಳಾ ವಿ ಶೇರಿಗಾರ್,ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ. ಲತಾ ಎ ಶೇರಿಗಾರ ಮತ್ತು ಶ್ರೀಮತಿ ನಳಿನಿ ದೇವಾಡಿಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಆಶಾ ಆರ್, ದೇವಾಡಿಗ ಮತ್ತು ಮತ್ತು ಶ್ರೀಮತಿ. ಆಶಾ ಪಿ. ದೇವಾಡಿಗ ಇವರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಎಲ್ಲರಿಗೂ ಶುಭಾಶಯ ಕೋರಿದರು.

ಯೋಗದ ಬಗ್ಗೆ ಮಾಹಿತಿ ನೀಡಿದ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಸರ್ವ ಸದಸ್ಯರಿಗೆ ಯೋಗದ ಮಹತ್ವವನ್ನು ತಿಳಿಸಿ ಹೇಳಿದರು. ಆರೋಗ್ಯವನ್ನು ಕಾಪಾಡಲು ಮತ್ತು ವೈದ್ಯರಿಂದ ದೂರ ಇರಬೇಕಾದರೆ ನಿರಂತರ ಯೋಗಾಭ್ಯಾಸ ಮಾಡಬೇಕು ಎಂದು ಅವರು ಹೇಳಿದರು ಬೆನ್ನು / ಮೊಣಕಾಲು ನೋವಿನಿಂದ ಬಳಲುತ್ತಿರುವ ಜನರಿಗೆ ಮತ್ತು ಮಧುಮೇಹ ಹೊಂದಿರುವವರಿಗೆ ಯೋಗ ಮತ್ತು ಆಸನಗಳ ಪ್ರಯೋಜನಗಳು ಮತ್ತು ಯಾವ ನೋವನ್ನು ನಿವಾರಿಸಲು ಯಾವ ಯೋಗ ಮಾಡಬೇಕು ಎನ್ನುವುದಾಗಿ ಅವರು ಹೇಳಿದರು. ಹಿರಿಯ ನಾಗರಿಕರು ಕುರ್ಚಿಗಳಲ್ಲಿ ಕುಳಿತುಕೊಂಡು ಯಾವ ರೀತಿಯಲ್ಲಿ ಯೋಗಾಸನ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅಲ್ಲದೆ ಉದ್ಯೋಗಿಗಳು ತಮ್ಮ ದಿನನಿತ್ಯದ ಕಚೇರಿ ಕೆಲಸಗಳಲ್ಲಿ ದೀರ್ಘ ಸಮಯ ಕುಳಿತುಕೊಳ್ಳುವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಯೋಗಸನ ಮಾಡಿ ತಮ್ಮ ಅರೋಗ್ಯ ಕಾಪಾಡಿಕೊಳಬಹುದು ಎನ್ನುವುದಾಗಿ ಹೇಳಿದರು. ಪ್ರಾಣಾಯಾಮ ಸೇರಿದಂತೆ ಉಸಿರಾಟದ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಅವರು ಮಾಹಿತಿ ನೀಡಿದರು. ಯೋಗಾಸನದ ವಯೋಮಾರ್ಯದೆ, ಆಹಾರ ಸೇವನೆ, ಯೋಗ ಮಾಡುವ ವಿಧಾನಗಳು ಬಗ್ಗೆಯೂ ಶ್ರೀಮತಿ ಜಯಂತಿ ಎಂ. ದೇವಾಡಿಗರು ತಿಳಿಸಿದರು.

ಬಳಿಕ ಸಹಾಯಕಿ ಯೋಗ ಪಟು ಶ್ರೀಮತಿ. ಸಚಿತಾ ಸಾಲಿಯಾನ್ ಇವರ ಸಹಕಾರದೊಂದಿಗೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಅವರ ಮಾರ್ಗದರ್ಶನ ಮತ್ತು ಸಲಹೆಯೊಂದಿಗೆ ಯೋಗದ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು. ಅದರಂತೆ ಸೇರಿದ ಸದಸ್ಯರೆಲ್ಲರೂ ಯೋಗ ಪ್ರಾತ್ಯಕ್ಷಿಕೆ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ಎಸ್ ದೇವಾಡಿಗ, ಸಿಟಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಶ್ರೀ ಬಾಲಚಂದ್ರ ಜಿ ದೇವಾಡಿಗ, ಪ್ರಾದೇಶಿಕ ಸಮಿತಿಯ ಡೊಂಬಿವಲಿ ಶ್ರೀ ಅಶೋಕ್ ದೇವಾಡಿಗ, ಪ್ರಾದೇಶಿಕ ಸಮಿತಿಯ ಬೋರವಿಲಿ ಶ್ರೀಮತಿ. ವನಿತಾ ಬಿ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ. ಮಮತಾ ದೇವಾಡಿಗ, ಜೋಗೇಶ್ವರಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಶ್ರೀ ಸತೀಶ್ ಕಣ್ವತೀರ್ಥ, ಬೊರಿವಿಲಿ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಜಿ. ದೇವಾಡಿಗ, ಚೆಂಬೂರು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಶ್ರೀ ಯಶವಂತ ಎಂ. ದೇವಾಡಿಗ, ಡಾ. (ಶ್ರೀಮತಿ) ರೇಖಾ ದೇವಾಡಿಗ, ಶ್ರೀ ರಘು ಎ. ಮೊಯ್ಲಿ, ಜನಸಂಪರ್ಕ ವಿಭಾಗದ ಶ್ರೀ ಪ್ರಭಾಕರ ದೇವಾಡಿಗ, ಶ್ರೀಮತಿ. ಪ್ರದ್ನ್ಯಾ ಮೋಹನದಾಸ್, ಶ್ರೀಮತಿ. ವನಿತಾ ರವಿ ದೇವಾಡಿಗ, ಶ್ರೀ ಆನಂದ ಶೇರಿಗಾರ ಅಲ್ಲದೆ ಸಂಘದ ಪ್ರಾದೇಶಿಕ ಸಮಿತಿಗಳ ಸದಸ್ಯರು ಬಹು ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಸಿದರು.

ಯೋಗದಿನದ ಕಾರ್ಯಕ್ರಮ ಸಂಯೋಜಕರಾದ ಸಚಿತಾ ಸಾಲಿಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ. ಜಯಂತಿ ಎಂ ದೇವಾಡಿಗ ಅವರು ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು. ಸೇರಿದ ಎಲ್ಲರಿಗೂ ಹಣ್ಣುಹಂಪಲುಗಳ ಉಪಹಾರ ನೀಡುವುದರೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.