Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
"ವರ್ಚುವಲ್-ಅಂತರಾಷ್ಟ್ರೀಯ ಯೋಗ ದಿನ" ಆಚರಣೆ - ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗ ಇವರಿಂದ....

"ವರ್ಚುವಲ್-ಅಂತರಾಷ್ಟ್ರೀಯ ಯೋಗ ದಿನ" ಆಚರಣೆ - ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗ ಇವರಿಂದ....

ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ನಿಮಿತ್ತ ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದವರು ಜೂನ್ 20ರಂದು ಬೆಳಿಗ್ಗೆ 9.00 ಗಂಟೆ ಯಿಂದ 11.00 ಗಂಟೆಯವರೆಗೆ " ಅಂತರಾಷ್ಟ್ರೀಯ ಯೋಗ ದಿನ" ವನ್ನು 50+ ಸದಸ್ಯರೊಂದಿಗೆ ಝೂಮ್ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಆಚರಿಸಿದರು.

ಕಾರ್ಯಕ್ರಮವು ಶ್ರೀಮತಿ ಲಲಿತಾ ದೇವಾಡಿಗ, ಕಾಂದಿವಲಿ ಇವರು ಹಾಡಿದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ಇಂಟರ್ನ್ಯಾಷನಲ್ ಮಾಸ್ಟರ್ ಅಥ್ಲೀಟ್, ಝೀಲ್ ಸ್ಪೋರ್ಟ್ಸ್ & ಫಿಟ್ನೆಸ್ ನ ಸ್ಥಾಪಕಿ ಹಾಗೂ ಯೋಗ ಟ್ರೈನರ್ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ತಾಡಾಸನ, ಸ್ಕಂದಾಸನ, ಸೂರ್ಯನಮಸ್ಕಾರ, ಭ್ರಾಮರಿ ಪ್ರಾಣಾಯಾಮ, ಧ್ಯಾನ, ಭಸ್ತ್ರಿಕ ಪ್ರಾಣಾಯಾಮ, ವೀರಭದ್ರಾಸನ, ತ್ರಿಕೋನಾಸನ ಹೀಗೆ ಹಲವಾರು ಯೋಗಾಸನ ಹಾಗೂ ಪ್ರಾಣಾಯಾಮ ಗಳನ್ನು ಮಾಡಿ ತೋರಿಸಿ ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು ಹಾಗೂ ಶಾಂತಿಪಾಠ ಮಾಡಿದರು.

ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗರು ಯೋಗ ದಿನದ ಶುಭಾಶಯ ನೀಡುತ್ತಾ ನಿತ್ಯ ಯೋಗಾಸನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬಲ ಸಿಗುತ್ತದೆ ಎಂದರೆ, ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ್ ಹಾಗೂ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಇವರು ಯೋಗ ದಿನದ ಶುಭಾಶಯ ನೀಡುತ್ತಾ ಮಹಿಳಾ ವಿಭಾಗದವರ ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹನೆ ನೀಡಿದರು. ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನದಾಸ್ ಇವರು ಯೋಗ ದಿನದ ಶುಭಾಶಯ ನೀಡುತ್ತಾ, "ಯೋಗ" ಅಂದರೆ ಅದೃಷ್ಟ ಭಾಗ್ಯ ಆದ್ದರಿಂದ ಯೋಗಾಸನ ಮಾಡಿದರೆ ಆರೋಗ್ಯ ಭಾಗ್ಯ ಸಿಗುತ್ತದೆ ಎಂಬುದನ್ನು ತಿಳಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜನಿ ಮೊಯ್ಲಿಯವರು ತಮ್ಮ ಮಾತಿನಲ್ಲಿ ಯೋಗದ ಮೂಲಕ ಪ್ರಕೃತಿಯಲ್ಲಿ ಸಿಗುವ ಜಲ ಮತ್ತು ವಾಯುವಿನಿಂದ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿ ಇಡಬಹುದು ಹಾಗೂ ಪ್ರಾಣಾಯಾಮದಿಂದ ದೇಹದ ರಕ್ತ ಶುದ್ಧಿಯಾಗುವುದಲ್ಲದೆ ಆಯುಷ್ಯ ಕೂಡ ಹೆಚ್ಚಾಗುವುದು ಎಂಬುದನ್ನು ತಿಳಿಸಿದರೆ ಮಹಿಳಾ ವಿಭಾಗದ ಸಲಹೆಗಾರ್ತಿ ಶ್ರೀಮತಿ ಜಯಂತಿ ಮೊಯ್ಲಿ ಇವರು ಯೋಗ ದಿನದ ಶುಭಾಶಯ ನೀಡಿದರು.

ಕ್ರೀಡಾ ವಿಭಾಗದ ಅಧ್ಯಕ್ಷರಾದ ಶ್ರೀ ರಘು ಮೊಯ್ಲಿ ಯವರು ಪ್ರತಿ ದಿನ ಕನಿಷ್ಟ ಒಂದು ಗಂಟೆಯಾದರೂ ಯೋಗಾಸನ ಹಾಗೂ ಪ್ರಾಣಾಯಾಮ ಮಾಡಲೇಬೇಕು ಅಲ್ಲದೇ ನಮ್ಮ ನಿತ್ಯದ ಮನೆಕೆಲಸವನ್ನು ಆದಷ್ಟು ನಾವೇ ಮಾಡಿದ್ದಾದರೆ ಒಂದಿಷ್ಟು ದೈಹಿಕ ವ್ಯಾಯಾಮ ಮಾಡಿದಂತಾಗುತ್ತದೆ ಎಂದರು.

ಝೂಮ್ ವಿಡಿಯೋ ಕಾನ್ಫರೆನ್ಸ್ ನ್ನು ಶ್ರೀ ಗಿರೀಶ್ ದೇವಾಡಿಗ ಇವರು ಸುಸೂತ್ರವಾಗಿ ನಡೆಸಿಕೊಟ್ಟರೆ, ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಝೂಮ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸೇರಿದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನಿತ್ತರು.