Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ- ಮಹಿಳಾ ವಿಭಾಗ- 24ನೇ ಮಾರ್ಚ್ 2024 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ದೇವಾಡಿಗ ಸಂಘ ಮುಂಬಯಿ- ಮಹಿಳಾ ವಿಭಾಗ- 24ನೇ ಮಾರ್ಚ್ 2024 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

   ದೇವಾಡಿಗ ಸಂಘ, ಮುಂಬಯಿ- ಮಹಿಳಾ ವಿಭಾಗವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಹೂ ಮಾಲೆ ತಯಾರಿಕೆ, ತರಕಾರಿ- ಕೆತ್ತನೆ ಮತ್ತು ತ್ಯಾಜ್ಯದಿಂದ ಉತ್ತಮ ( ಕಸದಿಂದ ರಸ ) ಹೀಗೆ ಸ್ಪರ್ಧೆಗಳನ್ನು ಮಹಿಳೆಯರಲ್ಲಿ ಅಡಗಿರುವ ತಮ್ಮ ಪ್ರತಿಭೆಯನ್ನು ತೋರಿಸಲು ಆಯೋಜಿಸಿಸಲಾದ ಕಾರ್ಯಕ್ರಮವು ಮಾರ್ಚ್ 24, 2024 ರಂದು ಶ್ರೀಮತಿ ಜಯಂತಿ ಎಂ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ದೇವಾಡಿಗ ಸೆಂಟರ್, ದಾದರ್ ಪೂರ್ವ, ಮುಂಬೈಯಲ್ಲಿ ನಡೆಯಿತು.

ಕಾರ್ಯದರ್ಶಿ ಸುಜಯ ವಿ ದೇವಾಡಿಗ ಸರ್ವ ಸದಸ್ಯರನ್ನು ಸ್ವಾಗತಿಸಿ, ಮಹಿಳಾ ವಿಭಾಗದ ಪದಾಧಿಕಾರಿಗಳು ವೇದಿಕೆಗೆ ಆಗಮಿಸುವಂತೆ ವಿನಂತಿಸಿದರು. ಚೆಂಬೂರು ವಲಯದ ಮಾನಸಾ ದೇವಾಡಿಗ ಅವರ ಪ್ರಾರ್ಥನೆಯೊಂದಿಗೆ ಎಲ್ಲಾ ಪದಾಧಿಕಾರಿಗಳು ಸಾಂಪ್ರದಾಯಿಕವಾಗಿ ದೀಪವನ್ನು ಬೆಳಗಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಎಂ ದೇವಾಡಿಗ ಅವರು ಸ್ಪರ್ಧೆಗಳ ತೀರ್ಪುಗಾರರ ಸಹಿತ ಮಹಿಳಾ ವಿಭಾಗದ ಸರ್ವ ಸದಸ್ಯರಿಗೆ (ಸಹಾಯಕರಾಗಿ ಜೊತೆ ಕಾರ್ಯದರ್ಶಿ- ನಳಿನಿ ದೇವಾಡಿಗ) ಸ್ವಾಗತಿಸಿದರು. ಹಾಗೂ ಎಲ್ಲಾ 24 ಉತ್ಸಾಹಿ ಮಹಿಳಾ ಸದಸ್ಯರು ಸೇರಿದಂತೆ ಎಲ್ಲಾ ವಲಯದ ಯುವತಿಯರು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರಿಗೆ ಅಭಿನಂದಿಸಿದರು.

ಸ್ಪರ್ಧೆಯ ತೀರ್ಪುಗಾರರಾದ ಶಾಮಲಾ ಅರೋಸ್ಕರ್ ಮತ್ತು ಶಶಿಕಲಾ ಎಸ್ ಮೊಯ್ಲಿ ಮತ್ತು ಉಪನ್ಯಾಸಕರಾದ ಡಾ.ರೇಖಾ ದೇವಾಡಿಗ, ಎಂಬಿಬಿಎಸ್ ಅವರನ್ನು ಸನ್ಮಾನಿಸಲಾಯಿತು. ಇವರುಗಳ ಸಂಕ್ಷಿಪ್ತ ಪರಿಚಯವನ್ನು ಉಪಾಧ್ಯಕ್ಷೆಯರಾದ ಪ್ರಮೀಳಾ ವಿ ಶೇರಿಗಾರ್ , ಪ್ರತಿಭಾ ಜಿ ದೇವಾಡಿಗ , ಜೊತೆ ಕಾರ್ಯದರ್ಶಿ ಲತಾ ಎ ಶೇರಿಗಾರ್ ಇವರು ಕ್ರಮವಾಗಿ ವಾಚಿಸಿದರು.

ಈ ಸಂದರ್ಭದಲ್ಲಿ ದೇವಾಡಿಗ ಸಂಘ ಮುಂಬಯಿ - ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆಯರು ತಮ್ಮ ಕೊಡುಗೆ ಮತ್ತು ಸಂಘದ ವಿವಿಧ ವೇದಿಕೆಗಳಲ್ಲಿ ಭಾಗವಹಿಸಿ ಉತ್ತಮ ಸೇವೆಯನ್ನು ನೀಡಿ ಕಾರ್ಯ ನಿರ್ವಹಿಸಿದ ಮಾಲತಿ ಜೆ ಮೊಯ್ಲಿ, ಪ್ರಫುಲ್ಲ ವಿ ದೇವಾಡಿಗ, ಪುಷ್ಪಾ ಎಸ್ ರಾವ್, ಜಯಂತಿ ಆರ್ ಮೊಯ್ಲಿ ಇವರನ್ನು ಸನ್ಮಾನಿಸಲಾಯಿತು ಹಾಗೂ ಶಾಂತಾ ಜಿ ಮೊಯ್ಲಿ, ಭಾರತಿ ಎಸ್ ನಿಟ್ಟೆಕರ್ ಮತ್ತು ರಂಜಿನಿ ಆರ್ ಮೊಯ್ಲಿ ಅವರ ಅನುಪಸ್ಥಿತಿಯಲ್ಲಿ ಸಮಾರಂಭದಲ್ಲಿ ಗುರುತಿಸಲಾಯಿತು.

ದೇವಾಡಿಗ ಸಂಘ ಮುಂಬಯಿ - ಮಹಿಳಾ ವಿಭಾಗದ ಹಿರಿಯ ಸದಸ್ಯೆಯರಾದ ಶಶಿಕಲಾ ಎಸ್ ಮೊಯ್ಲಿ,ಶಾಂತಾ ದೇವಾಡಿಗ, ಲೋಲಾಕ್ಷಿ ದೇವಾಡಿಗ, ಲಕ್ಷ್ಮೀ ಜಿ ದೇವಾಡಿಗ, ಲತಾ ಮೊಯ್ಲಿ, ಪ್ರತಿಮಾ ಮೊಯ್ಲಿ, ಗೀತಾ ಎಲ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು ಹಾಗೂ ಪ್ರೇಮಾ ಮೋಹನ್ ದಾಸ್, ಜಲಜಾಕ್ಷಿ ಎಸ್ ಶೇರಿಗಾರ್, ಜಲಜಾ ಎ ದೇವಾಡಿಗ ಮತ್ತು ಸುರೇಖಾ ದೇವಾಡಿಗ ಅವರ ಅನುಪಸ್ಥಿತಿಯಲ್ಲಿ ಸಮಾರಂಭದಲ್ಲಿ ಗುರುತಿಸಲಾಯಿತು.

ಸಭಿಕರಿಗೆ ಪಿಕ್ ಮತ್ತು ಸ್ಪೀಚ್ ಹಾಗೂ ವಿವಿಧ ರೀತಿಯ ಒಂದು ನಿಮಿಷದ ಆಟಗಳನ್ನು ಆಡಿಸುವ ಮೂಲಕ ಮಹಿಳೆಯರು ಸಂಭ್ರಮಪಟ್ಟರು. ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯವರು ಜಯಂತಿ ದೇವಾಡಿಗ ಇವರನ್ನು ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ ೨ ನೇ ದಕ್ಷಿಣ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್‌ಶಿಪ್ 2024 ರಲ್ಲಿ ೨ ಚಿನ್ನದ ಹಾಗೂ ೨ ಕಂಚಿನ ಪದಕಗಳನ್ನು ಗೆದ್ದ ಸಂಭ್ರಮದಲ್ಲಿ ಸನ್ಮಾನಿಸಿದರು.

ಸ್ಪರ್ಧೆಯ ಫಲಿತಾಂಶದಲ್ಲಿ
ಮಾಲೆ ತಯಾರಿಕೆ: ಪ್ರಥಮ - ನಗರ ವಲಯದ ಮಾಲತಿ ಜೆ ದೇವಾಡಿಗ, ದ್ವಿತೀಯ - ಬೊರಿವಲಿ ವಲಯದ ಉಷಾ ದೇವಾಡಿಗ , ತೃತೀಯ - ಚೆಂಬೂರು ವಲಯದ ಶಕುಂತಲಾ ಟಿ ದೇವಾಡಿಗ.
ತ್ಯಾಜ್ಯದಿಂದ ಉತ್ತಮ: ಪ್ರಥಮ – ನಗರ ವಲಯದ ರಕ್ಷಾ ದೇವಾಡಿಗ, ದ್ವಿ ತೀಯ – ಜೋಗೇಶ್ವರಿ ವಲಯದ ವಿಜೇತಾ ದೇವಾಡಿಗ, ತೃತೀಯ – ಅಸಲ್ಫಾ ವಲಯದ ರೇಖಾ ದೇವಾಡಿಗ.
ತರಕಾರಿ ಕೆತ್ತನೆ : ಪ್ರಥಮ – ನಗರ ವಲಯದ ದೀಕ್ಷಾ ದೇವಾಡಿಗ, ದ್ವಿತೀಯ – ಚೆಂಬೂರು ವಲಯದ ಮಾನಸ ದೇವಾಡಿಗ.
ಫನ್ ಗೇಮ್ ನಲ್ಲಿ ನಗರ ವಲಯದ ಮಾಲತಿ ಮೊಯ್ಲಿ, ಮೀರಾರೋಡ್ ವಲಯದ ಸೋನಾಲಿ ಶೇರಿಗಾರ್
ಮೀರಾರೋಡ್ ವಲಯದ ಶೈಲಜಾ ಶೇರಿಗಾರ್ ಮತ್ತು ಚೆಂಬೂರು ವಲಯದ ಕು.ನಿಕಿತಾ ವೈ ಗುಜರನ್.
ಹಾಗೂ ಲಕ್ಕಿ ಡಿಪ್ ನಲ್ಲಿ – ಜೋಗೇಶ್ವರಿ ವಲಯದ ಪದ್ಮಾವತಿ ದೇವಾಡಿಗ ಇವರೆಲ್ಲರು ವಿಜೇತರಾದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಹಿರಿಯಡ್ಕ ಮೋಹನ್ ದಾಸ್, ವಾಸು ಎಸ್ ದೇವಾಡಿಗ; ಉಪಾಧ್ಯಕ್ಷರು - ನರೇಶ್ ಎಸ್ ದೇವಾಡಿಗ, ಗೌರವ. ಪ್ರಧಾನ ಕಾರ್ಯದರ್ಶಿ - ವಿಶ್ವನಾಥ ಬಿ ದೇವಾಡಿಗ, ಗೌರವ. ಜೊತೆ ಕಾರ್ಯದರ್ಶಿ- ನಿತೇಶ್ ದೇವಾಡಿಗ, ಜೊತೆ ಖಜಾಂಚಿ - ಸುರೇಶ್ ಆರ್ ದೇವಾಡಿಗ, ಪ್ರಾದೇಶಿಕ ಸಮಿತಿಗಳ -ಸಂಯೋಜಕ - ಜಯ ಎಲ್ ದೇವಾಡಿಗ, ಮೀರಾ ರೋಡ್‌ ವಲಯದ ಅಧ್ಯಕ್ಷ - ಗಣೇಶ್ ದೇವಾಡಿಗ, ನಗರ ವಲಯದ ಯುವ ಘಟಕದ ಮಾಜಿ ಅಧ್ಯಕ್ಷ ದೀಕ್ಷಿತ್ ಎಲ್ ದೇವಾಡಿಗ ಮತ್ತು ಕ್ರೀಡಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ. ಶುಭಾ ದೇವಾಡಿಗ ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಎಂ ದೇವಾಡಿಗ ಇವರ ಹಸ್ತದಿಂದ ಹೂಗುಚ್ಛೆ ಕೊಟ್ಟು ಗೌರವಿಸಲಾಯಿತು.

ಜೊತೆ ಕಾರ್ಯದರ್ಶಿ ಲತಾ ಎ ಶೇರಿಗಾರ್ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ವ್ಯವಸ್ಥಾಪಕ ಸಮಿತಿ ಸೇರಿದಂತೆ ಮಹಿಳಾ ಅಂತರಾಷ್ಟ್ರೀಯ ದಿನಾಚರಣೆಯನ್ನು ಯಶಸ್ವಿಗೊಳಿಸಲು ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಉಪಸ್ಥಿತರಿದ್ದ ಎಲ್ಲಾ ಸದಸ್ಯರಿಗೆ ಚಹಾ ಮತ್ತು ಉಪಹಾರ ಸೇರಿದಂತೆ ಪ್ರೀತಿ ಭೋಜನವನ್ನೂ ನೀಡಲಾಯಿತು.
ಕೊನೆಯಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಪರಸ್ಪರ ಬಣ್ಣ ವಿನಿಮಯ ಮಾಡಿಕೊಳ್ಳುವ ಮೂಲಕ ಹೋಳಿ ಹಬ್ಬ ಆಚರಿಸಿದರು.