Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ : ಮಹಿಳಾ ವಿಭಾಗದಿಂದ ಅಂತತಾರಾಷ್ಟೀಯ ಮಹಿಳಾ ದಿನ ಆಚರಣೆ ಅವಕಾಶ ಸಿಕ್ಕಿದರೆ ನಮ್ಮ ಮಹಿಳೆಯರು ಏನನ್ನೂ ಸಾಧಿಸಲು ಶಕ್ಯರು - ಶ್ರೀಮತಿ ಜಯಂತಿ ಎಂ. ದೇವಾಡಿಗ

ದೇವಾಡಿಗ ಸಂಘ ಮುಂಬಯಿ : ಮಹಿಳಾ ವಿಭಾಗದಿಂದ ಅಂತತಾರಾಷ್ಟೀಯ ಮಹಿಳಾ ದಿನ ಆಚರಣೆ
ಅವಕಾಶ ಸಿಕ್ಕಿದರೆ ನಮ್ಮ ಮಹಿಳೆಯರು ಏನನ್ನೂ ಸಾಧಿಸಲು ಶಕ್ಯರು - ಶ್ರೀಮತಿ ಜಯಂತಿ ಎಂ. ದೇವಾಡಿಗ

   ಮುಂಬಯಿ, ಮಾರ್ಚ್ 12 : ನಮ್ಮ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬಂದು ತಮ್ಮನ್ನು ಗುರುತಿಸಿಕೊಳ್ಳಲು ಶಕ್ಯರು. ಆದರೆ ಅವರಿಗೆ ಅವಕಾಶ, ಸಂದರ್ಭ ಮತ್ತು ವೇದಿಕೆ ಬೇಕಾಗಿದೆ, ಎಂದು ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಹೇಳಿದರು. ದಾದರ್ ಇಲ್ಲಿ ಸಂಘದ ಕಿರು ಸಭಾಗ್ರಹದಲ್ಲಿ ಅಂತತಾರಾಷ್ಟೀಯ ಮಹಿಳಾ ದಿನ ಆಚರಣೆ ಅಂಗವಾಗಿ ಆಚರಿಸಿದ (11-03-2023) ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ; ಸಮಾಜದಲ್ಲಿ ಮಹಿಳೆಯರ ಪಾತ್ರ; ಭಾಷಣ ಸ್ಪರ್ಧೆ ಆಯೋಜಿಸಲಾಗಿದ್ದು ಕಾರ್ಯಕ್ರಮಕ್ಕೆ ಮಹಿಳೆಯರು ಬಹಳ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭಾಷಣ ಸ್ಪರ್ಧೆಯೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ಭಾರೀ ಯಶಸ್ಸನ್ನು ಹೊಂದಿದೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ನಿಮ್ಮ ಪ್ರತಿಭೆಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮಕ್ಕೆ ಮುಂಬಯಿ ಬಂಟರ ಸಂಘದ ಶ್ರೀಮತಿ ಶುಭಲಕ್ಷ್ಮಿ ಸಿ. ಶೆಟ್ಟಿ ಇವರು ನಮ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಹಿಳಾ ದಿನ ಆಚರಣೆಯ ಕಾರ್ಯಕ್ರಮವನ್ನು ಶ್ಲಾಘಿಸಿ, ಇಂತಹ ಕಾರ್ಯಕ್ರಗಳಿಂದ ಮಹಿಳೆಯರಿಗೆ ತಮ್ಮ ಪ್ರತಿಭೆಗಳನ್ನು ತೋರಿಸುವ ಅವಕಾಶ ದೊರೆತು ಸಮಾಜದಲ್ಲಿ ಸ್ಥಾನ ಮಾನ ಪಡೆಯಲು ಶಕ್ಯವಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಮಹಿಳೆಯರು ಯಾವುದಾದರೂ ಚಟುವಟಿಕೆಗಳಲ್ಲಿ ವ್ಯಸ್ತವಾಗಿದ್ದರೆ ಅವರು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ಅವರ ಹೇಳಿದರು. ಶ್ರೀಮತಿ ಜಯಂತಿ ದೇವಾಡಿಗರು ಮುಖ್ಯ ಅತಿಥಿಯವರನ್ನು ಸತ್ಕರಿಸಿ ಧನ್ಯವಾದಗಳನ್ನು ಸಲ್ಲಿಸಿದರು.

ಈ ಸ್ಪರ್ಧೆಯಲ್ಲಿ 20 ಮಹಿಳೆಯರು ಭಾಗವಹಿಸಿದ್ದರು ಮತ್ತು ಎಲ್ಲರೂ ಅತ್ಯುತ್ತಮ ಭಾಷಣವನ್ನು ಪ್ರಸ್ತುತಿಪಾದಿಸಿದರು. ಶ್ರೀಮತಿ ಅಂಬಿಕಾ ಜೆ. ದೇವಾಡಿಗ ಇವರು ಪ್ರಥಮ ಬಹುಮಾನ ಪಡೆದರು. ದ್ವಿತೀಯ ಬಹುಮಾನವನ್ನು ಶ್ರೀಮತಿ ಮಾನಸಾ ದೇವಾಡಿಗ ಮತ್ತು ತೃತೀಯ ಬಹುಮಾನವನ್ನು ಕುಮಾರಿ ತನ್ವಿ ಡಿ. ದೇವಾಡಿಗ ಇವರು ಪಡೆದರು. ಶ್ರೀಮತಿ ನಿರ್ಮಲಾ ದೇವಾಡಿಗ, ಶ್ರೀಮತಿ ಇಂದುಮತಿ ದೇವಾಡಿಗ ಶ್ರೀಮತಿ ಪೂರ್ಣಿಮಾ ದೇವಾಡಿಗ ಇವರು ಸಮಾಧಾನಕರ ಬಹುಮಾನ ಪಡೆದರು. ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ವಿಭಾಗದ ಸದಸ್ಯರಾದ ಶ್ರೀಮತಿ ಪ್ರಮೀಳಾ ಶೇರಿಗಾರ್, ಶ್ರೀಮತಿ ಪ್ರತಿಭಾ ದೇವಾಡಿಗ, ಶ್ರೀಮತಿ ಸುಜಯ ವಿ ದೇವಾಡಿಗ ಮತ್ತು ಶ್ರೀಮತಿ ಲತಾ ಶೇರಿಗಾರ ಅವರಿಗೆ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಅಭಿನಂದನೆಗಳನ್ನು ಸಮರ್ಪಿಸಿದರು. ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ನಾರಾಯಣ ದೇವಾಡಿಗ, ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗ ಮತ್ತು ಶ್ರೀ ರವಿ ಎಸ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ದೇವಾಡಿಗ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಎಲ್ಲರನ್ನೂ ಮಹಿಳಾ ವಿಭಾಗದಿಂದ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ನಾರಾಯಣ ದೇವಾಡಿಗ ಇವರು ಮಾತನಾಡಿ ಮಹಿಳಾ ವಿಭಾಗದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಇಂತಹ ಕಾರ್ಯಕ್ರಮಗಳಿಗೆ ಸಂಘದ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಲನೆ ನೀಡಿದರು ಮತ್ತು ಶ್ರೀಮತಿ ಲಕ್ಷ್ಮಿ ಜಿ. ದೇವಾಡಿಗ ಇವರು ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ಪ್ರತಿಭಾ ಭರತ್ ಕುಮಾರ್ ಮತ್ತು ಶ್ರೀಮತಿ ಲಲಿತಾ ಗುಣಪಾಲ್ ಉಡುಪಿ ಇವರು ಉಪಸ್ಥಿತರಿದ್ದು ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಸುರೇಖಾ ಹೆಚ್. ದೇವಾಡಿಗ ಮತ್ತು ಡಾ. ರೇಖಾ ದೇವಾಡಿಗ ಇವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದುದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಯುವ ಪ್ರತಿಭೆಗಳಾದ ಕುಮಾರಿ ರಕ್ಷಿತಾ ದೇವಾಡಿಗ, ಕುಮಾರಿ ಕ್ಷಿಥಿ ದೇವಾಡಿಗ ಮತ್ತು ಕುಮಾರಿ ತನ್ವಿ ದೇವಾಡಿಗ ಇವರ ಯಕ್ಷಗಾನ ಮತ್ತು ಇತರ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, “ದೇವಾಡಿಗರತ್ನ” ಶ್ರೀ ಗುಣಪಾಲ್ ಉಡುಪಿ, ಸಂಘದ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ ಎಲ್ಲೂರು, ಸಮಿತಿ ಸದಸ್ಯರು ಶ್ರೀ ಜಯ ಎಲ್ ದೇವಾಡಿಗ, ಶ್ರೀ ಸುರೇಶ್ ದೇವಾಡಿಗ, ಸದಸ್ಯರಾದ ಶ್ರೀ ಹೇಮನಾಥ ದೇವಾಡಿಗ, ಭಾಂಡುಬ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷೆ ಶ್ರೀಮತಿ ಪ್ರಫುಲ್ಲ ವಿ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಆರ್ ಮೊಯ್ಲಿ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಉಮಾವತಿ ಗುಜರನ್, ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ದೇವಾಡಿಗ ಮೊದಲಾದವರು ಪ್ರಾಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀಮತಿ ಲತಾ ಎ. ಸೇರಿಗಾರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶ್ರೀಮತಿ ಪ್ರತಿಭಾ ದೇವಾಡಿಗರು ವಂದನಾರ್ಪಣೆ ಮಾಡಿದರು.