Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗದವರಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗದವರಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ವಾಗಿ ಆಚರಿಸಲ್ಪಡುವ ಸಂದರ್ಭ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರನ್ನು ಗೌರವಿಸಿ ಪ್ರಶಂಸಿಸುವ ದಿನ.

ದಾದರ್ ನ ದೇವಾಡಿಗ ಸೆಂಟರ್ ನಲ್ಲಿ ದಿನಾಂಕ 19 ಮಾರ್ಚ್ 2022 ರಂದು ಮಹಿಳಾ ದಿನಾಚರಣೆಯನ್ನು ಎಲ್ಲಾ ಹತ್ತು ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳಾ ಸದ್ಯಸರು ವಿಜೃಂಭಣೆಯಿಂದ ಆಚರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಉಪಾಧ್ಯಕ್ಷ ಶ್ರೀಯುತ ಪ್ರವೀಣ್ ಎನ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಮಾಲತಿ ಜೆ ಮೊಯಿಲಿ ಮತ್ತು ಶ್ರೀ ಜಯ ಎಲ್ ದೇವಾಡಿಗ, ಜೊತೆ ಖಚಾಂಜಿ ಶ್ರೀಮತಿ ಸುರೇಖಾ ದೇವಾಡಿಗ , ಮಹಿಳಾ ವಿಭಾಗದ ಸಲಹೆಗಾರ್ತಿ ಶ್ರೀಮತಿ ಜಯಂತಿ ಮೊಯಿಲಿ, ಅಥಿತಿಯಾಗಿ ಆಗಮಿಸಿದ ಶ್ರೀಮತಿ ಶ್ಯಾಮಲಾ ಗುಜರನ್ ಅರೋಸ್ಕರ್, ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿ, ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗ ಮತ್ತು ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ವಿ ಶೇರಿಗಾರ್ ಅವರು ದೀಪ ಪ್ರಜ್ವಲಿಸಿ ಶುಭಾರಂಭ ಮಾಡಿದರು.

ಮಹಿಳಾ ವಿಭಾಗದ ಸಲಹೆಗಾರ್ತಿ ಶ್ರೀಮತಿ ಜಯಂತಿ ಆರ್ ಮೊಯಿಲಿ ಯವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಅಥಿತಿಯಾಗಿ ಆಗಮಿಸಿದ ಶ್ರೀಮತಿ ಶ್ಯಾಮಲಾ ಗುಜರನ್ ಅರೋಸ್ಕರ್ ರವರು ಮಹಿಳೆಯರು ತಮ್ಮ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸಿ ತಮ್ಮ ಜೀವನದ ಗುರಿಯನ್ನು ವಯಸ್ಸಿನ ಪ್ರತಿಬಂಧವಿಲ್ಲದೆ ಸಾದಿಸಬಹುದು. ತುಳು ಭಾಷೆಯನ್ನು ನಮ್ಮ ಮಕ್ಕಳಿಗೆ ಕಲಿಸಿ ತುಳು ಸಂಸ್ಕ್ರತಿಯ ನ್ನು ಬೆಳೆಸೋಣ ಎಂದು ನೆರೆದಿದ್ದ ಸಮಸ್ತ ಮಹಿಳಾ ಸದ್ಯಸರಿಗೆ ಶುಭ ಹಾರೈಸಿದರು. ಆವರಿಗೆ ಮಹಿಳಾ ಸಧ್ಯಸೆಯರು ಶಾಲು ಮತ್ತು ಪುಷ್ಪ ಗೌರವವನ್ನು ನೀಡಿದರು.


ಸಾಧಕರಾದ ಕ್ರೀಡಾ ಮತ್ತು ಫಿಟ್ನೆಸ್ ತಜ್ಞೆ ಶ್ರೀಮತಿ ಜಯಂತಿ ಎಂ ದೇವಾಡಿಗ, ಡಾಕ್ಟರ್ ಶ್ರೀಮತಿ ರೇಖಾ ಸಿ ದೇವಾಡಿಗ ಮತ್ತು ಸಮಾಜ ಸೇವೆಗಾಗಿ ಶ್ರೀಮತಿ ಲಕ್ಷ್ಮಿ ದೇವಾಡಿಗರನ್ನು ಈ ಸಂದರ್ಭದಲ್ಲಿ ಶಾಲು ಮತ್ತು ಪುಷ ಗೌರವನ್ನಿತು ಸನ್ಮಾನಿಸಲಾಯಿತು. ನವಿ ಮುಂಬಯಿ ಪ್ರಾದೇಶಿಯ ಸಮನ್ವಯ ಸಮಿತಿಯ ಶ್ರೀಮತಿ ಲತಾ ಶೇರಿಗಾರ್, ಜೋಗೇಶ್ವರಿಯ ಶ್ರೀಮತಿ ರೇಖಾ ದೇವಾಡಿಗ, ಮೀರಾ ರೋಡಿನ ಶ್ರೀಮತಿ ವಿಜಯಲಕ್ಷ್ಮಿ ದೇವಾಡಿಗ, ಚೆಂಬೂರ್ ವಲಯದ ಶ್ರೀಮತಿ ನಿರ್ಮಲ ಆರ್ ದೇವಾಡಿಗ, ಅಸಲ್ಫ ದ ಶ್ರೀಮತಿ ಪ್ರಮೀಳಾ ಪ್ರವೀಣ್, ಬೊರಿವಿಲಿಯ ಶ್ರೀಮತಿ ಕುಸುಮ ದೇವಾಡಿಗ, ಸಿಟಿ ವಲಯದ ಶ್ರೀಮತಿ ಲತಾ ಮೊಯಿಲಿ , ಥಾಣೆ ವಲಯದ ಶ್ರೀಮತಿ ಉಷಾ ದೇವಾಡಿಗರನ್ನು ಅವರ ಸೇವೆಗಾಗಿ ಪುಷ್ಪ ಗೌರವ ಮತ್ತು ಶಾಲು ಹೊದಿಸಿ ಸನ್ಮಾನಿಸಲಾಯಿತು.


ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗರು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಬೇಕು . ಅಚಲ ನಿರ್ಧಾರ ಪರಿಪೂರ್ಣತೆ ಎಲ್ಲಾ ಮಹಿಳೆಯರ ಜೀವನದಲ್ಲಿ ಮುಂದೆ ಬರಲು ಪ್ರೇರಣೆಯಾಗಲಿ ಎಂದು ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.


ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ, ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀ ಜಯ ಎಲ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿಯವರು ನೆರೆದ ಮಹಿಳಾ ಸದ್ಯಸರಿಗೆ ಶುಭ ಕೋರಿದರು.


ಶ್ರೀಮತಿ ಜಯಂತಿ ಎಂ ದೇವಾಡಿಗರು ನೆರೆದ ಮಹಿಳೆಯರಿಗೆ ಅನೇಕ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಮತ್ತು ಆಟಗಳನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ನವಿ ಮುಂಬಯಿಯ ಶ್ರೀಮತಿ ಸುಂದರಿ ಮೊಯಿಲಿ, ಮೀರಾ ರೋಡಿನ ವಿಜಯಲಕ್ಷ್ಮಿ ದೇವಾಡಿಗ, ಥಾಣೆ ಯ ಉಷಾ ದೇವಾಡಿಗ, ವನಿತಾ ದೇವಾಡಿಗ ಮತ್ತು ಭಾಂಡೂಪಿನ ಲೋಲಾಕ್ಷಿ ದೇವಾಡಿಗರು ವಿಜಯಿಗಳಾದರು.


ಲಘು ಉಪಹಾರವನ್ನು ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ಜಿ ದೇವಾಡಿಗರು ಸಂಯೋಜಿಸಿದ್ದರು. ಚೆಂಬೂರ್ ವಲಯದ ಹೇಮಲತಾ ಶೇರಿಗಾರ್ ಇವರು ಪ್ರಾಥನೆ ಗೈದರೆ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ವಿ ಶೇರಿಗಾರ್ ಇವರು ಕಾರ್ಯಕ್ರಮದ ನಿರೂಪಣೆ ಹಾಗೂ ಕೊನೆಗೆ ಧನ್ಯವಾದ ಇತ್ತರು.