Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗದವರಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.

ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗದವರಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಾರ್ಚ್ 8, ಈ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನ ಅಂದರೆ ದೇಶ ವಿದೇಶದಲ್ಲಿಯ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರನ್ನು ಗೌರವಿಸಿ ಪ್ರಶಂಸಿಸುವ ದಿನವೆಂದು ಹೇಳಬಹುದು.

ಈ ನಿಟ್ಟಿನಲ್ಲಿ ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರು "ವರ್ಚುವಲ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 7 ರಂದು ಸೇರಿದ ಸುಮಾರು 75+ ಮಹಿಳಾ ಮತ್ತು ಇತರ ಸದ್ಯಸರೊಂದಿಗೆ ಆಚರಿಸಿದರು.

ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿಯವರು ಎಲ್ಲರನ್ನೂ ಸ್ವಾಗತಿಸುತ್ತಾ "ಮಹಿಳಾ ದಿನದ ಶುಭ ಕೋರಿ ತುಳುನಾಡ ಸಂಸ್ಕೃತಿಯ ಹೆಣ್ಣು ದೈವ ದೇವರ ಕೆಲವು ಮಾಹಿತಿ ಹಾಗೂ ಸ್ವಾತಂತ್ರ ಪೂರ್ವದ ದೈರ್ಯವಂತ ಹಾಗೂ ಸಾಹಸೀಯಾರಾದ ಲಕ್ಷ್ಮಿಭಾಯಿ, ಸಾವಿತ್ರಿ ಭಾಯಿ ಹಾಗೂ ತುಳುನಾಡಿನ ರಾಣಿ ಅಬ್ಬಕ್ಕ ಇವರುಗಳ ಮಾಹಿತಿ ಹೇಳಿದರು. ಕಾರ್ಯಕಾರಿ ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿಯವರು ಅಂತಾರಾಷ್ಟ್ರೀಯ ಮಹಿಳಾ ದಿನದ ಬಗ್ಗೆ ಮಾತನಾಡುತ್ತಾ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕೆಲವು ವಿಶೇಷ ಮಹಿಳಾ ಸಾಧಕಿಯರ ಮಾಹಿತಿ ಕೊಟ್ಟು ಇವರೆಲ್ಲ ನಮ್ಮ ಗುರಿಯನ್ನು ಸಾದಿಸಲು ಉತ್ತೇಜಕರಾಗಿದ್ದಾರೆ ಎಂದು ಹೇಳಿದರು.

COVAXIN ಹಾಗೂ COVISHIELD ವ್ಯಾಕ್ಸಿನೇಶನ್ ಬಗ್ಗೆ ವಿವರವಾಗಿ ಮಾಹಿತಿಯನ್ನು ಡಾಕ್ಟರ್ ರೇಖಾ ದೇವಾಡಿಗ ಇವರು ಸದ್ಯಸರಿಗೆ ತಿಳಿಸಿದರು ಹಾಗೂ ಸದ್ಯಸರು ವಿಚಾರಿಸಿದ ಅದರ ಬಗೆಗಿನ ಸಂಶಯಾಸ್ಫದ ಪ್ರಶ್ನೆಗಳಿಗೆ ಮನವರಿಕೆಯಾಗುವಂತೆ ತಿಳಿಸಿದರು.

ಶ್ರೀಮತಿ ಪೂರ್ಣಿಮಾ ದೇವಾಡಿಗ ಹಾಗೂ ಶ್ರೀಮತಿ ಜಯಂತಿ ಆರ್ ಮೊಯಿಲಿ ಇವರು "ರಸ ಪ್ರಶ್ನೆ" ಸ್ಪರ್ದೆಯನ್ನು ದೇವಾಡಿಗ ಸಂಘ ಮುಂಬಯಿಯ 10 ಸಮನ್ವಯ ಸಮಿತಿಯ ಮಹಿಳಾ ಸದ್ಯಸರೊಂದಿಗೆ ಮಾಡಿದರು. ಅದರಲ್ಲಿ ಡೊಂಬಿವಿಲಿ ಸಮನ್ವಯ ಸಮಿತಿಯ ಡಾಕ್ಟರ್ ಶ್ರೀಮತಿ ಪ್ರೀತಿ ಉಮೇಶ್ ದೇವಾಡಿಗ ಇವರು ವಿಜೇತರಾದರು.

ಫೌಂಡ್ರೀ ಯಲ್ಲಿ ಸಾದನೆಗೈದ ದೇವಾಡಿಗ ಮಹಿಳೆಯಾದ
1. ಶ್ರೀಮತಿ ಶ್ಯಾಮಲಾ ಅರೋಸ್ಕರ್ -ರೀಜನಲ್ ಡೈರೆಕ್ಟರ್ ಫಾರ್ ವೆಸ್ಟರ್ನ್ ರೀಜನ್- ಮಹಾರಾಷ್ಟ್ರ, ಗುಜರಾತ್ -M. P.
2. ಶ್ರೀಮತಿ ಸುಶೀಲಾ ದೇವಾಡಿಗ, M. PHIL ಮುಂಬೈ ಆಕಾಶ ವಾಣಿ ನಿರೂಪಕಿ(ಕನ್ನಡ ವಿಭಾಗ)
3. ಶ್ರೀಮತಿ ಜಯಂತಿ ಎಂ. ದೇವಾಡಿಗ - ವೆಟರೆನ್ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಫಿಟ್‌ನೆಸ್ ಟ್ರೇನರ್ ಆಫ್ ZEAL ಫಿಟ್‌ನೆಸ್ ಟ್ರೈನಿಂಗ್ ಕ್ಲಾಸ್, ಚೆಂಬೂರ್
4. ಶ್ರೀಮತಿ ಸುರೇಖಾ ಏಚ್. ದೇವಾಡಿಗ- M.A, M. PHIL ಸಂಪ್ರಬಂದನ-ದೇವಾಡಿಗ ಜನಾಂಗ-ಒಂದು ಸಾಂಸ್ಕೃತಿಕ ಅಧ್ಯಯನ.
5. ಸಿ. ಎ ಶ್ರೀಮತಿ ನಿಲಿಶಾ ಎಸ್. ಮೊಯಿಲಿ, ಕ್ರೀಡಾಪಟು , ಮ್ಯಾರತಾನ್ ಓಟಗಾರ್ತಿ
6. ಕುಮಾರಿ ಪ್ರಿಯಾ ಜೆ. ದೇವಾಡಿಗ -ದೇವಾಡಿಗ ಯುನೈಟೆಡ್-ಬೆಂಗಳೂರು ಇದರ 2020 ಸಾಲಿನ ಮಿಸ್ ದೇವಾಡಿಗ ಪ್ರಶಸ್ತಿ ವಿಜೇತೆ
ಇವರೆಲ್ಲರ ಪರಿಚಯವನ್ನು ಸಂದರ್ಶದ ಮೂಲಕ ದೇವಾಡಿಗ "ಯುವ ವಿಭಾಗದ ಕುಮಾರಿ ವಿಜೇತ ದೇವಾಡಿಗ ಇವರು ಮಾಡಿದರು.

ಕಾರ್ಯಕ್ರಮದಲ್ಲಿ 80 ಕ್ಕೂ ಮಿಕ್ಕಿ ದೇವಾಡಿಗ ಮಹಿಳಾ ಸದ್ಯಸರೊಂದಿಗೆ ಕಾರ್ಯಕಾರಿ ಸಮಿತಿಯ ಮಾಜಿ ಉಪ ಖಛಾಂಜಿ ಹಾಗೂ ಉಪಕಾರ್ಯದರ್ಶಿ ಶ್ರೀಮತಿ ರುಕ್ಮಿಣಿ ದೇವಾಡಿಗ, ಸಂಘದ ಸ್ಥಳೀಯ ಸಮನ್ವಯ ಸಮಿತಿಯ ಮಹಿಳಾ ಕಾರ್ಯಾದ್ಯಕ್ಷೆಯಾರಾದ ಶ್ರೀಮತಿ ವಿಜಯಲಕ್ಷ್ಮಿ ದೇವಾಡಿಗ ಮೀರಾ ರೋಡ್, ರೇಖಾ ದೇವಾಡಿಗ ಜೋಗೇಶ್ವರಿ, ಲತಾ ಮೊಯಿಲಿ ನಗರ, ಸುಜಯ ದೇವಾಡಿಗ, ಭಂದೂಪ್, ಉಷಾ ದೇವಾಡಿಗ ಠಾನೆ, ಲತಾ ಶೇರಿಗಾರ್ ನವೀ ಮುಂಬೈ ಹಾಗೂ ಮಹಿಳಾ ಕಾರ್ಯಾದ್ಯಕ್ಷೆಯಾರಾದ ಶ್ರೀಮತಿ ನಳಿನಿ ದೇವಾಡಿಗ, ಶುಭ ದೇವಾಡಿಗ, ಗೀತ ಬಿ ದೇವಾಡಿಗ, ಸುಜಾತಾ ಶೇರಿಗಾರ್, ಮಮತಾ ದೇವಾಡಿಗ, ಶಕುಂತಲಾ ಶೇರಿಗಾರ್, ಗೀತ ಎಲ್ ದೇವಾಡಿಗ ಇವರೆಲ್ಲರೂ ಉಪಸ್ಥಿತರಿದ್ದರು.

ಬೋರಿವಿಲಿ ಸಮಿತಿಯ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಕುಸುಮ ದೇವಾಡಿಗ ಇವರು ಪ್ರಾಥನೆ ಗೈದರೆ, ಸಂಪೂರ್ಣ ನಿರೂಪಣೆ ಮಹಿಳಾ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಮಾಡಿದರು. ಉಪ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ಜಿ ದೇವಾಡಿಗ ಇವರು ಎಲ್ಲರಿಗೂ ಧನ್ಯವಾದವನ್ನಿತರು.ಮಾಜಿ ಮಹಿಳಾ ಅಧ್ಯಕ್ಷೆಯಾರಾದ ಶ್ರೀಮತಿ ಮಾಲತಿ ಜೆ. ಮೊಯಿಲಿ, ಶ್ರೀಮತಿ ಪ್ರಫುಲ್ಲ ವಿ. ದೇವಾಡಿಗ, ಶ್ರೀಮತಿ ಜಯಂತಿ ಆರ್. ಮೊಯಿಲಿ ಹಾಗೂ ಇತ್ತೀಚಿನ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಆರ್. ಮೊಯಿಲಿ ಇವರೊಂದಿಗೆ ಅವರ ಕಾಲಾವಾದಿಯಲ್ಲಿಯ ಅನಿಸಿಕೆಗಳನ್ನು ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು "ಸಂವಾದ" ಮಾಡಿದರು.
ಶ್ರೀಮತಿ ಹೇಮಲತಾ ಶೇರಿಗಾರ್, ಶ್ರೀಮತಿ ಲಕ್ಷ್ಮಿ ದೇವಾಡಿಗ ಇವರು ಭಾವಗೀತೆ ಹಾಗೂ ಶ್ರೀಮತಿ ಸುಶೀಲಾ ದೇವಾಡಿಗ ಇವರು ಚಿತ್ರಗೀತೆಯನ್ನು ಸುಮದುರವಾಗಿ ಹಾಡಿದರು.

ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಇವರು ಮಹಿಳಾ ದಿನದ ಹಾರ್ದಿಕ ಶುಭಾಶಯ ಕೋರುತ್ತಾ ಮಹಿಳಾ ವಿಭಾಗದವರು ಒಳ್ಳೆಯ ಸ್ಪಿರಿಟ್ ಮೇನ್‌ಟೇನ್ ಮಾಡಿದ್ದಾರೆ. ಎಲ್ಲ ಮಹಿಳೆಯರನ್ನು ಒಟ್ಟುಗೂಡಿಸಿ ಮಾಡುವ ಈ ಕಾರ್ಯಕ್ರಮವನ್ನು ನೋಡಿದರೆ "ಮನಸ್ಸಿದರೆ ಮಾರ್ಗವುಂಟು" ಎಂದು ಹೇಳಿದರು.

'ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್‌ದಾಸ್ ಅವರು ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯ ಕೋರುತ್ತಾ ಎಲ್ಲ ಮಹಿಳೆಯರು ಉತ್ಸಾಹದಿಂದ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು ತುಂಬಾ ಸಂತೋಷದ ವಿಷಯ ಎಂದರು. ಈ ಕಾರ್ಯಕ್ರಮಕ್ಕೆ 10 ಸಮನ್ವಯ ಸಮಿತಿಯ ಸದ್ಯಸರು, ಮಹಿಳಾ ವಿಭಾಗದ ಕಾರ್ಯಾದ್ಯಕ್ಷರು, FIRST LADY ಶ್ರೀಮತಿ ವನಿತಾ ರವಿ ದೇವಾಡಿಗ, ಮಹಿಳಾ ವಿಭಾಗದ ಮಾರ್ಗದರ್ಶಿ ಶ್ರೀ ಪ್ರವೀಣ್ ನಾರಾಯಣ್, ಉಪಾಧ್ಯಕ್ಷರಾದ ನರೇಶ್ ದೇವಾಡಿಗ, ಗೌರವ ಪ್ರದಾನ ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗ ಇವರೆಲ್ಲಾ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸೇರಿದ್ದರು. ವೀಡಿಯೋ ಕಾನ್ಫರೆನ್ಸ್ ನ್ನು ನಿತೇಶ್ ದೇವಾಡಿಗರು ಸುಸೂತ್ರವಾಗಿ ನಡೆಸಿಕೊಟ್ಟರು.

ಶ್ರೀಮತಿ ಗೀತಾ ವೆಂಕಟೇಶ್ ಇವರು ಪ್ರಾಥನೆ ಗೈದರೆ, ಶ್ರೀಮತಿ ಪ್ರಮೀಳಾ ವಿ ಶೇರಿಗಾರ್ ಇವರು ಕಾರ್ಯಕ್ರಮದ ನಿರೂಪಣೆ ಹಾಗೂ ಕೊನೆಗೆ ಧನ್ಯವಾದ ಇತ್ತರು.