Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ ವಿಶ್ವ ಮಹಿಳಾ ದಿನ ಆಚರಣೆ.

ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ ವಿಶ್ವ ಮಹಿಳಾ ದಿನ ಆಚರಣೆ

ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು 4.00 ಗಂಟೆಗೆ ದಾದರ್ ನಲ್ಲಿರುವ ದೇವಾಡಿಗ ಸೆಂಟರ್ ನಲ್ಲಿ ಆಚರಿಸಲಾಯಿತು. ಆರ್ಗನ್ಸ್ ಡೊನೇಶನ್ ಬಗ್ಗೆ ಡಾಕ್ಟರ್ ಜಿಮ್ಮಿಯವರು ಸವಿಸ್ತಾರವಾಗಿ ವಿವರಿಸುತ್ತಾ, ಈಗಿನ ನಮ್ಮ ಜೀವನದಲ್ಲಿ ಇಂತಹ ಮಹತ್ತರ ಕೆಲಸ ಮನುಷ್ಯ ಕುಲಕ್ಕೆ ಅತ್ಯಂತ ಉಪಕಾರಿಯಾಗಿದೆ ಹಾಗೂ ಪುಣ್ಯಕಾರಿ ಕೆಲಸವಾಗಿದೆ ಎಂದರು. ಡಾಕ್ಟರ್ ರೇಖಾ ಸಿ ದೇವಾಡಿಗರು ಮಹಿಳೆಯರು ನಿತ್ಯ ಜೀವನದಲ್ಲಿ ಕಾಪಾಡಬೇಕಾದ ಶಾರೀರಿಕ ಸ್ವಚತೆ, ನಿಯಮಿತವಾಗಿ ದೇಹದ ತಪಾಸಣೆ ಇನ್ನೂ ಅನೇಕ ಆರೋಗ್ಯ ಕಾಪಾಡುವಲ್ಲಿ ಅನುಸರಿಸಬೇಕಾದ ಮಾಹಿತಿಯನ್ನು ನೀಡಿದರು.

ಮಹಿಳಾ ವಿಭಾಗದ ಮಾರ್ಗದರ್ಶಿ ಉಪಾದ್ಯಕ್ಷ ಶ್ರೀ ಪ್ರವೀಣ್ ನಾರಾಯಣ್ರವರು ಎಲ್ಲ ಮಹಿಳೆಯರಿಗೆ ವಿಶ್ವ ಮಹಿಳಾ ದಿನದ ಪ್ರಯುಕ್ತ ಶುಭಾಶಯ ಕೋರಿ ತಮ್ಮಲ್ಲಿರುವ ಪ್ರತಿಭೆಯನ್ನು ನಾಲ್ಕು ಗೋಡೆಗಳ ಮಧ್ಯೆ ಮುಚ್ಚಿಡದೆ ಸ್ವಲ್ಪ ಸಮಯವನ್ನು ಸಮಾಜದ ಸೇವೆಗೆ ಮೀಸಲಿಟ್ಟು ತಾವುಗಳು ಸದ್ರಡರಾಗಬೇಕು ಎಂದು ಹಿತ ನುಡಿದರು. ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿಯವರು ಸಂಸಾರದಲ್ಲಿ ಹೆಣ್ಣಿನ ಪಾತ್ರ ಬಹುಮುಖ್ಯ, ಜೀಜಾಭಾಯಿ ತನ್ನ ಮಗ ಶಿವಾಜಿ ಮಹಾರಾಜರನ್ನು ಒಬ್ಬ ಬಲಿಷ್ಟ ವ್ಯಕ್ತಿಯಾಗಿ ಅಕಾರ ಕೊಟ್ಟ ದೀಮಂತ ಮಹಿಳೆ. ಮಹಿಳೆಗೆ ಗೌರವ ಕೊಡುವುದು ಅತ್ಯಂತ ಪ್ರಾಮುಖ್ಯ. ಸಮಾಜದ ಎಲ್ಲ ಮಹಿಳೆಯರು ಸಂಘದ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲು ಕರೆಯಿತ್ತರು. ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ದೇವಾಡಿಗರು "ವಿಶ್ವ ಮಹಿಳಾ ದಿನದ" ಬಗ್ಗೆ ಮಾತನಾಡುತ್ತಾ “ಹೆಣ್ಣು ಸಮಾಜದ ಕಣ್ಣು” 21ನೇ ಶತಮಾನದಲ್ಲಿ ಮಹಿಳೆಯರ ಪಾತ್ರ ಬದಲಾಗುತ್ತಾ ಬಂದಿದೆ. ಹೊರಗಿನ ಕೆಲಸ ಸಂಸಾರ ಇವೆಲ್ಲವನ್ನೂ ನಿಭಾಯಿಸುವ ಶಕ್ತಿ ಮತ್ತು ಚಾಣಕ್ಯತೆಗೂ ಮಾದರಿ ಆಗಿ ನಿಲ್ಲುತ್ತೇವೆ ಹಾಗೂ ದೇಶಕ್ಕೆ ನಿಸ್ವಾರ್ಥ ಸೇವೆ ನೀಡಿದ ಸುಷ್ಮಾ ಸ್ವರಾಜ್ ಯಾವುದೇ ಆಡಂಬರ ಅಹಂಕಾರ ಇಲ್ಲದೆ ನಿರಂತರ ಸಮಾಜ ಸೇವೆಯನ್ನು ಮಾಡುವ ಮಹಾನ್ ಸ್ಪೂರ್ತಿ ಸರಳತನದ ಸಾಕಾರ ಮೂರ್ತಿಯರಾದ ಇನ್‌ಫೋಸಿಸ್ನ ಡಾಕ್ಟರ್ ಸುಧಾ ಮೂರ್ತಿ ಇವರುಗಳು ತಮ್ಮ ಜೀವನದ ಮಾದರಿ ಆಗಬೇಕು ಎಂದರು.

ಅಥಿತಿಯಾಗಿ ಆಗಮಿಸಿದ ಡೈಮಂಡ್ ಜ್ಯೂವಲರೀ ಬುಟೀಕ್ ನಾ ಶ್ರೀಮತಿ ಪೂನಂ ಕೊದನನಿಯನ್ನು ಮಹಿಳಾ ಪದಾದಿಕಾರಿಗಳು ಶಾಲು, ಪುಷ್ಪ ಗೌರವ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ರಾಧಾ ಕೃಷ್ಣ ನೃತ್ಯ ಅಕಾಡೆಮಿ, ಮುಂಬೈ ಇವರು ಇತ್ತೀಚಿಗೆ ನಡೆಸಿದ 759 ಮಕ್ಕಳ ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸತತ 1 ಗಂಟೆ 10 ನಿಮಿಷಗಳ ಕಾಲ ಭರತ ನಾಟ್ಯ ಪ್ರದರ್ಶಿಸಿ ತಮ್ಮ ಹೆಸರನ್ನು "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್" ಮತ್ತು ಏಶಿಯಾ ಬುಕ್ ಆಫ್ ರೆಕಾರ್ಡ್ಸ್" ಗೆ ಸೇರ್ಪಡೆಯಾದ ಕುಮಾರಿ ಪ್ರತೀಕ್ಷಾ ಪ್ರಭಾಕರ್ ದೇವಾಡಿಗ, ತೃಪ್ತಿ ಲಕ್ಷ್ಮಣ್ ದೇವಾಡಿಗ, ಅಶ್ವಿತ ಕೃಷ್ಣ ದೇವಾಡಿಗ, ತನ್ವಿ ಲಕ್ಷ್ಮಣ್ ದೇವಾಡಿಗ, ಅಧ್ಯ ಅಶೋಕ್ ದೇವಾಡಿಗ, ಭವ್ಯ ಶೇಕರ್ ದೇವಾಡಿಗ, ಇವರುಗಳನ್ನು ಹಾಗೂ ಓಪನ್ ಸ್ಟೇಟ್ ಟೀಕ್ ವಂದೋ ಚ್ಯಾಂಪಿಯನ್ಶಿಪ್ 2020 ಯಲ್ಲಿ ಬಾಗವಹಿಸಿ ರಜತ ಪದಕವನ್ನು ತನ್ನದಾಗಿಸಿಕೊಂಡ ಕುಮಾರಿ ಪ್ರಣಾಲಿ ವಿನೋದ್ ರಾವು ಘಾಟ್ಕೋಪರ್ ಹಾಗೂ ಕುಮಾರಿ ಪ್ರೀತಿಕಾ ಪ್ರವೀಣ್ ದೇವಾಡಿಗ ಪೊವೈ, ಕಂಪ್ಯೂಟರ್ ಇಂಜಿನಿಯರಿಂಗ್ ಇವರ "360 ಡಿಗ್ರೀ ಓವರ್ವಿವ್ ಆಫ್ ಫಾಗ್ ಕಂಪ್ಯೂಟಿಂಗ್" ಎಂಬ ಸಂಶೋದನ ಲೇಖನ" ಇಂಟರ್‌ನ್ಯಾಶನಲ್ ಜರ್ನಲ್ ಫಾರ್ ರಿಸರ್ಚ್ ಇನ್ ಅಪ್ಲೈಡ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಟೆಕ್ನಾಲಜೀ (IJRASET) ಯಲ್ಲಿ ಪ್ರಕಟಣೆಯಾದ ಇವರನ್ನು ಹಾಗೂ ಭರತನಾಟ್ಯ ನೃತ್ಯದಲ್ಲಿ "ಅರಳು ಮಲ್ಲಿಗೆ" ಕರ್ನಾಟಕ ನಾಟ್ಯ ಮಯೂರಿ" "ವಚನದಾರೆ" "ಕರ್ನಾಟಕ ಚೇತನ" ಇಂತಹ ಹಲವಾರು ಬಿರುದುಗಳನ್ನು ಮತ್ತು "ವಿಷ್ಣು ದಿಗಂಬರ ಪಾಲೂಸ್ಕರ್" ಪ್ರಶಸ್ತಿಯನ್ನು ಪಡೆದ ಪ್ರತಿಭಾವಂತೆ ಕುಮಾರಿ ದೀಕ್ಷಾ ಲಕ್ಷ್ಮಣ್ ದೇವಾಡಿಗ, ಇವರೆಲ್ಲರನ್ನೂ ಮಹಿಳಾ ವಿಭಾಗದ ಪದಾದಿಕಾರಿಗಳು, ಮಹಿಳಾ ಮಾಜಿ ಕಾರ್ಯಾದ್ಯಕ್ಷೆ ಶ್ರೀಮತಿ ಶಾಂತಾ ಜಿ ಮೊಯಿಲಿ, ಜಯಂತಿ ಆರ್ ಮೊಯಿಲಿ, ಸಂಘದ ಜೊತೆ ಕೋಶದೀಕಾರಿಯಾದ ಶ್ರೀಮತಿ ಸುರೇಖಾ ದೇವಾಡಿಗ ಇವರುಗಳು ಎಲ್ಲ ಪ್ರತಿಬಾವಂತ ಮಕ್ಕಳಿಗೆ ಶಾಲು ಹೊದಿಸಿ ಪುಷ್ಪ ಗೌರವನ್ನಿತ್ತು ಸನ್ಮಾನಿಸಿದರು.

ಕಾರ್ಯಕ್ರಮದ ಮಧ್ಯಂತರ ವೇಳೆಯಲ್ಲಿ ತಿಂಡಿಯನ್ನು ಉಪಕಾರ್ಯದರ್ಶಿ ಶ್ರೀಮತಿ ಪ್ರತಿಭಾ ಜಿ. ದೇವಾಡಿಗರು ಪ್ರಾಯೋಜಿಸಿದರು.

ಕಾರ್ಯಕ್ರಮದಲ್ಲಿ 80 ಕ್ಕೂ ಮಿಕ್ಕಿ ದೇವಾಡಿಗ ಮಹಿಳಾ ಸದ್ಯಸರೊಂದಿಗೆ ಕಾರ್ಯಕಾರಿ ಸಮಿತಿಯ ಮಾಜಿ ಉಪ ಖಛಾಂಜಿ ಹಾಗೂ ಉಪಕಾರ್ಯದರ್ಶಿ ಶ್ರೀಮತಿ ರುಕ್ಮಿಣಿ ದೇವಾಡಿಗ, ಸಂಘದ ಸ್ಥಳೀಯ ಸಮನ್ವಯ ಸಮಿತಿಯ ಮಹಿಳಾ ಕಾರ್ಯಾದ್ಯಕ್ಷೆಯಾರಾದ ಶ್ರೀಮತಿ ವಿಜಯಲಕ್ಷ್ಮಿ ದೇವಾಡಿಗ ಮೀರಾ ರೋಡ್, ರೇಖಾ ದೇವಾಡಿಗ ಜೋಗೇಶ್ವರಿ, ಲತಾ ಮೊಯಿಲಿ ನಗರ, ಸುಜಯ ದೇವಾಡಿಗ, ಭಂದೂಪ್, ಉಷಾ ದೇವಾಡಿಗ ಠಾನೆ, ಲತಾ ಶೇರಿಗಾರ್ ನವೀ ಮುಂಬೈ ಹಾಗೂ ಮಹಿಳಾ ಕಾರ್ಯಾದ್ಯಕ್ಷೆಯಾರಾದ ಶ್ರೀಮತಿ ನಳಿನಿ ದೇವಾಡಿಗ, ಶುಭ ದೇವಾಡಿಗ, ಗೀತ ಬಿ ದೇವಾಡಿಗ, ಸುಜಾತಾ ಶೇರಿಗಾರ್, ಮಮತಾ ದೇವಾಡಿಗ, ಶಕುಂತಲಾ ಶೇರಿಗಾರ್, ಗೀತ ಎಲ್ ದೇವಾಡಿಗ ಇವರೆಲ್ಲರೂ ಉಪಸ್ಥಿತರಿದ್ದರು.

ಬೋರಿವಿಲಿ ಸಮಿತಿಯ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಕುಸುಮ ದೇವಾಡಿಗ ಇವರು ಪ್ರಾಥನೆ ಗೈದರೆ, ಸಂಪೂರ್ಣ ನಿರೂಪಣೆ ಮಹಿಳಾ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಮಾಡಿದರು. ಉಪ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ಜಿ ದೇವಾಡಿಗ ಇವರು ಎಲ್ಲರಿಗೂ ಧನ್ಯವಾದವನ್ನಿತರು.

For More photos Click Here