Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ : ಜೋಗೇಶ್ವರಿ ಸಮನ್ವಯ ಸಮಿತಿಯ ಸ್ನೇಹ ಸಮ್ಮೇಳನ - ಸಂಘಕ್ಕೆ ಯುವ ಶಕ್ತಿಯ ಅಗತ್ಯವಿದೆ : ಶ್ರೀ ಪ್ರವೀಣ್ ಎನ್. ದೇವಾಡಿಗ

ದೇವಾಡಿಗ ಸಂಘ ಮುಂಬಯಿ : ಜೋಗೇಶ್ವರಿ ಸಮನ್ವಯ ಸಮಿತಿಯ ಸ್ನೇಹ ಸಮ್ಮೇಳನ - ಸಂಘಕ್ಕೆ ಯುವ ಶಕ್ತಿಯ ಅಗತ್ಯವಿದೆ : ಶ್ರೀ ಪ್ರವೀಣ್ ಎನ್. ದೇವಾಡಿಗ

   ಜೋಗೇಶ್ವರಿ, ಮಾರ್ಚ್ 19: ಸಂಘದ ಎಲ್ಲ ಚಟುವಟಿಕೆಗಳಲ್ಲಿ ಯುವಕರು ಪಾಲ್ಗೊಳ್ಳಬೇಕು. ಇಂದಿನ ಯುವಕರೇ ಮುಂದಿನ ಸಂಘದ ಬೆಳವಣಿಗೆಯ ಬುನಾದಿ. ಯುವಕರಿಗೆ ವಯಸ್ಸು 18 ಕಳೆದ ಕೂಡಲೇ ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಬೇಕು. ಇದರಿಂದಾಗಿ ಅವರಿಗೆ ಸಂಘದ ಬಗ್ಗೆ ಕುತೂಹಲ ಮತ್ತು ಆಸಕ್ತಿ ಬೆಳೆದು ಸಂಘದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಿಸಿಕೊಳ್ಳುತ್ತಾರೆ. ಹಾಗಾಗಿ ಯುವಕರನ್ನು ಸಂಘದ ಕಡೆಗೆ ಸೆಳೆಯಬೇಕು ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರು ಹೇಳಿದರು.

ಸಂಘದ ಮಲಾಡ್, ಗೋರೆಗಾವ್, ಜೋಗೇಶ್ವರಿ ಮತ್ತು ಅಂಧೇರಿ ವಲಯ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಹಳದಿ ಕುಂಕುಮ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮವು ರವಿವಾರ ಮಾರ್ಚ್ 19ರಂದು ಇಲ್ಲಿಯ ನಿತ್ಯಾನಂದ ಸಭಾಗ್ರಹಾಲ್ಲಿ ಬಹಳ ಅದ್ದೂರಿಯಿಂದ್ ಜರಗಿತು. ಈ ಸಂದರ್ಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪ್ರವೀಣ್ ದೇವಾಡಿಗರು ಸದಸ್ಯರು ತಮ್ಮ ತಮ್ಮ ವಲಯಗಳಲ್ಲಿ ಆದಷ್ಟು ಸದಸ್ಯರನ್ನು ಒಟ್ಟುಮಾಡುವ ಕೆಲಸ ಮಾಡುವಂತೆ ಒತ್ತಿ ಹೇಳಿದರು. ನಮ್ಮ ಸಮಾಜದ ಜನರು ಅಧಿಕ ಸಂಖ್ಯೆಯಲ್ಲಿ ಇದ್ದು ಸಂಘದ ಸದಸ್ಯತ್ವ ಇನ್ನೂ ಪಡೆಯಲಿಲ್ಲ. ಸಮಾಜದ ಜನರು ಆದಷ್ಟು ಮುಂದೆ ಬಂದು ಸಂಘದ ಸದಸ್ಯತ್ವ ಪಡೆದರೆ ಸಂಘಕ್ಕೆ ಬಲ ಬರುತ್ತದೆ. ಅದೇ ಸಂಘದ ಆಸ್ತಿ ಎಂದು ಶ್ರೀ ಪ್ರವೀಣ್ ನಾರಾಯಣ್ ದೇವಾಡಿಗ ಹೇಳಿದರು. ಮುಖ್ಯ ಅತಿಥಿ ಶ್ರೀಮತಿ ರೂಪ ದೇವಾಡಿಗರು ತಮ್ಮ ಮಾತನಾಡಿ ಸಂಘದ ಮಂಹಿಳೆಯರಿಗೆ ಶುಭ ಕೋರಿದರು. ಸಂಘದ ಮಹಿಳಾ ಕಾರ್ಯಧ್ಯಕ್ಷೆ ಮಾತು ಕ್ರೀಡಾಪಟು ಶ್ರೀಮತಿ ಜಯಂತಿ ದೇವಾಡಿಗರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಮಹಿಳೆಯರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ತಮ್ಮ ದೈನಂದಿನ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕು. ತಾನು ಆರೋಗ್ಯವಾಗಿದ್ದಲ್ಲಿ ಇಡೀ ಸಂಸಾರವನ್ನು ಆರೋಗ್ಯವಾಗಿಡಬಹದು ಎಂದು ಅವರು ಹೇಳಿದರು. ವಲಯದ ಕಾರ್ಯಾಧ್ಯಕ್ಷ ಶ್ರೀ ಸತೀಶ್ ಕಣ್ವತೀರ್ಥ ಮಾತನಾಡುತ್ತಾ ನಮ್ಮ ಸಮಾಜದ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಂಘದ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಬೇಕು. ಇದರಿಂದಾಗಿ ಅವರ ಪ್ರತಿಭೆ ಹೆಚ್ಚಾಗುವದಲ್ಲದೆ ಅನ್ಯರಿಗೆ ಪ್ರೇರಣಾದಾಯಕವಾಗಿರುತ್ತದೆ ಎಂದು ಸೂಚಿಸುತ್ತಾ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ ಇವರ ನೇತೃತ್ವದಲ್ಲಿ ಸಂಘವು ಈಗ ಶತಮಾನೋತ್ಸವ ಆಚರಿಸಲು ತಯಾರಾಗುತ್ತಿದ್ದು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಸಂಗದೊಂದಿಗೆ ತಮ್ಮನ್ನು ಸೇರಿಸಿಕೊಳ್ಳಬೇಕು. ಇದರಿಂದಾಗಿ ಸದಸ್ಯರಿಗೆ ಉತ್ತಮ ಭವಿಷ್ಯ ಉಂಟಾಗುತ್ತದೆ ಅಲ್ಲದೆ ಸಂಘದ, ಸಂಘದ ಜನರ ಸಹಾಯ ದೊರೆಯುತ್ತದೆ ಎಂದು ಹೇಳಿದರು.

ವಲಯದ ಕಾರ್ಯಾಧ್ಯಕ್ಷರಾದ ಶ್ರೀ ಸತೀಶ್ ಕಣ್ವತೀರ್ಥ ಇವರ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪದ್ಮಾವತಿ ದೇವಾಡಿಗ ಇವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರು ಇತರ ಗಣ್ಯರೊಂದಿಗೆ ಸೇರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಶ್ರೀಮತಿ ರೂಪ ದೇವಾಡಿಗ ಇವರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪದ್ಮಾವತಿ ದೇವಾಡಿಗ ಮತ್ತು ಕಾರ್ಯಾಧ್ಯಕ್ಷರಾದ ಶ್ರೀ ಸತೀಶ್ ಕಣ್ವತೀರ್ಥ ಇವರು ವೇದಿಕೆಯಲ್ಲಿ ಆಸೀನರಾಗಿದ್ದರು. ಶ್ರೀಮತಿ ಶಾರದಾ ದೇವಾಡಿಗ ಮತ್ತು ಶ್ರೀಮತಿ ಶುಭ ದೇವಾಡಿಗ ಇವರು ಪ್ರಾರ್ಥನೆ ಸಲ್ಲಿಸಿದರು.

ಇತ್ತೀಚೆಗೆ ಅಂದರೆ ಕಳೆದ ಒಂದು ವರ್ಷದಲ್ಲಿ ಮಾದುವೆ ಆದ ನವ ದಂಪತಿಗಳ ಪರಿಚಯ, ಅವರ ಸನ್ಮಾನ, ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳು, ಉದ್ಯೋಗದಲ್ಲಿ ಪ್ರಗತಿ ಮಾಡಿದವರು, ವೃತ್ತಿಪರತೆಯ ಶಿಕ್ಷಣ ಪಡೆದು ಮುಂದೆ ಬಂದ ಯುವಕರು, ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ಸೇವೆ ಮಡಿದ ಅಗ್ರಗಣ್ಯರು ಅಲ್ಲದೆ ಸಂಘದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಲಯದ ಮಹಿಳಾ ಸದಸ್ಯರು ಮತ್ತು ಮಕ್ಕಳು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಹಳದಿ-ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿದರು. ಭಾಗವಸಿದ ಎಲ್ಲಾ ಸದಸ್ಯರನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾರಕ್ ಮೆಹತಾ ಹಿಂದಿ ಟೆಲಿ ಸೀರಿಯಲ್ ಮತ್ತು ಕೆಲವು ಚಿತ್ರಗಳಲ್ಲಿ ಅಭಿನಯಿಸಿದ ಕುಮಾರಿ ಯಶಸ್ವಿನಿ ದೇವಾಡಿಗ, ಕಾರ್ಪೊರೇಟ್ ಕ್ರಿಕೆಟರ್ ಲತೇಶ್ ದೇವಾಡಿಗ, ಕ್ರೀಡಾಪಟು ಶುಭ ದೇವಾಡಿಗ, ದೀಕ್ಷಾ ದೇವಾಡಿಗ, ಉದ್ಯೋಗದಲ್ಲಿ ಸಾಧನೆಮಾಡಿ ಯಶಸ್ಸು ಗಳಿಸುವದರಲ್ಲದೆ ಸಮಾಜದಲ್ಲಿ ದೀನ ದಲಿತರ ಸಹಾಯಕ ಉದಯ ದೇವಾಡಿಗ ಮತ್ತು ವಿನೋದ ದೇವಾಡಿಗ ಅಲ್ಲದೆ ಪ್ರತಿಭೆಗಳಾದ ವಂದನಾ ದೇವಾಡಿಗ, ರಕ್ಷಿತ್ ದೇವಾಡಿಗ, ರಾಘವ್ ವಾಸು ದೇವಾಡಿಗ, ವಿಶಾಲ್ ದೇವಾಡಿಗ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಜಾನಕೀ ದೇವಾಡಿಗ ಮತ್ತು ಶ್ರೀಮತಿ ಗಿರಿಜಾ ದೇವಾಡಿಗ ತಂಡದವರಿಂದ ಒಂದು ಕಿರು ಪ್ರಹಸನ ಸಾದರ ಪಡಿಸಿದರು. ಶ್ರೀ ಪಾಟೀಲ್ ಇವರು ತನ್ನ ಗಿಟಾರ್ ವಾದನ ಮತ್ತು ಹಾಡಿನೊಂದಿಗೆ ಎಲ್ಲರನ್ನು ರಂಜಿಸಿದರು. ಮಕ್ಕಳು ವಿಧ ವಿಧದ ನ್ರತ್ಯಗಳನ್ನು ಪ್ರದರ್ಶಿಸಿ ಉತ್ತಮ ಮನೋರಂಜನೆ ನೀಡಿದರು. ಎಲ್ಲರನ್ನೂ ಈ ಸಂದರ್ಭದಲ್ಲಿ ಬಾಹುಮಾನದೊಂದಿಗೆ ಗೌರವಿಸಲಾಯಿತು. ಅರುಣ್ ದೇವಾಡಿಗರ ವಿಶೇಷ ಅಡುಗೆಯನ್ನು ಎಲ್ಲರೂ ಸವಿದರು.

ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಸಂಘದ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಸಂಘದ ಮಾಜಿ ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಅಧ್ಯಕ್ಷ ಶ್ರೀ ವಾಸು ದೇವಾಡಿಗ, ಲೇಖಕಿ ಶ್ರೀಮತಿ ಸುರೇಖಾ ಹೆಚ್. ದೇವಾಡಿಗ, ಯುವ ಕಾರ್ಯಾಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೇಕರ್, ಪ್ರಾದೇಶಿಕ ಸಮಿತಿಗಳ ಸಮನ್ವಯಕರು ಶ್ರೀ ಜಯ ದೇವಾಡಿಗ, ಮಹಿಳಾ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರತಿಭ ದೇವಾಡಿಗ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಮೊಯ್ಲಿ, ಸಂಘದ ಮಹಿಳಾ ವಿಭಾಗದ ಶ್ರೀಮತಿ ಲತಾ ಶೇರಿಗಾರ್, ಪೂರ್ಣಿಮಾ ದೇವಾಡಿಗ, ಶಿಕ್ಷಣ ಸಮಿತಿಯ ಶ್ರೀ ಸುಧಾಕರ್ ಎಲ್ಲೂರು, ಅಲ್ಲದೆ ಡಾ. ಮೇಘಾ ದೇವಾಡಿಗ ಮತ್ತು ಅಮಮಂತ್ರಿತ ಅತಿಥಿಗಳನ್ನು ಗೌರವೋಚಿತವಾಗಿ ಸನ್ಮಾನಿಸಲಾಯಿತು.

ಭಾಂಡೂಭ್ ವಲಯದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ದೇವಾಡಿಗ, ಬೋರಿವ್ಲಿ ವಲಯದ ಕಾರ್ಯಧ್ಯಕ್ಷರಾದ ಶ್ರೀ ಭಾಸ್ಕರ್ ದೇವಾಡಿಗ, ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ವನಿತಾ ದೇವಾಡಿಗ ಅಲ್ಲದೆ ಇತರ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು ಮತ್ತು ವ್ಯವಸ್ಥಾಪಕ ಮಂಡಳಿ ಸದಸ್ಯರು ಬಹು ಸಂಖ್ಯೆಯಲ್ಲಿ ಸೇರಿದ್ದರು. ಎಲ್ಲರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಸಮಿತಿಯ ಕಾರ್ಯದರ್ಶಿ ಶ್ರೀ ಕಿರಣ್ ದೇವಾಡಿಗ ಇವರು ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥಾಪನೆಯನ್ನು ನೋಡಿಕೊಂಡರು. ಅವರೊಂದಿಗೆ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ದೇವಾಡಿಗ ಮತ್ತು ಪರಿವಾರದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕೊನೆಗೆ ಹಳದಿ ಕುಂಕುಮ ಕಾರ್ಯಕ್ರಮ ಮತ್ತು ಮಹಿಳಾ ಕಾರ್ಯಾಧ್ಯಕ್ಷೆ ಪದ್ಮಾವತಿ ದೇವಾಡಿಗ ಇವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.