Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದ ವತಿಯಿಂದ ಗ್ರಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ. ಸ್ತ್ರೀ ಶಕ್ತಿಯನ್ನು ಪ್ರೋತ್ಸಾಹಿಸಬೇಕು: ಶ್ರೀ ಧರ್ಮಪಾಲ್ ದೇವಾಡಿಗ

ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದ ವತಿಯಿಂದ ಗ್ರಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ. ಸ್ತ್ರೀ ಶಕ್ತಿಯನ್ನು ಪ್ರೋತ್ಸಾಹಿಸಬೇಕು: ಶ್ರೀ ಧರ್ಮಪಾಲ್ ದೇವಾಡಿಗ

ಮುಂಬಯಿ ಸೆ. 28: ಮಹಿಳೆಯರು ದಕ್ಷರು, ಮಹಿಳೆಯರಿಂದ ಸಂಘಕ್ಕೆ ಬಲ ಬರುತ್ತದೆ. ಮಹಿಳೆಯರು ಪಾಲ್ಗೊಂಡ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಮಹಿಳೆಯರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಸಂಸ್ಥೆಗೆ ಸಮಾಜಕ್ಕೆ ಬಲ ಬರುತ್ತದೆ. ಎಂದು ವಿಶ್ವ ದೇವಾಡಿಗ ಮಹಾಮಂಡಳ ಅಧ್ಯಕ್ಷರು ಹಾಗೂ ದೇವಾಡಿಗ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ದೇವಾಡಿಗ ಇವರು ಹೇಳಿದರು.

ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದ ವತಿಯಿಂದ ಇಲ್ಲಿಯ ಚೆಂಬೂರು ತಿಲಕ್ ನಗರದ ಸುಲಭ್ ಸ್ಕೂಲ್ ಇಲ್ಲಿ ಸೆಪ್ಟೆಂಬರ್ 28 ಮತ್ತು 29ನೇ 2024 ರಂದು, ಎರಡು ದಿನಗಳ ಗ್ರಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಧರ್ಮಪಾಲ್ ದೇವಾಡಿಗರು ಈ ಮೇಲಿನ ಮಾತುಗಳನ್ನು ಹೇಳಿದರು ಅಲ್ಲದೆ ಕಾರ್ಯಕ್ರಮಕ್ಕೆ ಶುಭಕೋರಿದರು.

ಈ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಶ್ರೀಮತಿ ಪ್ರಭಾವತಿ ದೇವಾಡಿಗ, (ನವಿ ಮುಂಬಯಿ ಪ್ರಾದೇಶಿಕ ಸಮಿತಿ) ಇವರು ಪ್ರಾರ್ಥಿಸಿದರು. ದೇವಾಡಿಗ ಸಂಘ ಮುಂಬಯಿ ಇದರ ಶತಮಾನೋತ್ಸವ ಸಂದರ್ಭ, ವಿವಿಧ ವಿಭಾಗಗಳಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು ಮಹಿಳಾ ವಿಭಾಗ ತನ್ನ ವಿಭಿನ್ನ ಕಾರ್ಯಕ್ರಮಗಳಿಂದ ಬಹಳ ಸಕ್ರಿಯವಾಗಿದೆ ಎಂದು ತೋರಿಸಿಕೊಟ್ಟಿದೆ. ಇದು ಇತರ ವಿಭಾಗಗಳಿಗೆ ಮಾದರಿಯಾಗಿದ್ದು ಸಂಘಕ್ಕೆ ಸ್ಫೂರ್ತಿದಾಯಕವಾಗಿದೆ. ವಿಭಾಗದ ಎಲ್ಲಾ ಕಾರ್ಯಕ್ರಮಗಳಿಗೆ ಸಂಘದ ಸಂಪೂರ್ಣ ಸಹಕಾರ ಇದೆ ಎಂದು ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಹೇಳಿದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನ ದಾಸ್, ವಾಸು ದೇವಾಡಿಗ ಮತ್ತು ಶ್ರೀ ರವಿ ದೇವಾಡಿಗ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಪ್ರಥಮ ಮಹಿಳೆ ಶ್ರೀಮತಿ ಪ್ರಮೀಳಾ ಪಿ. ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯಿಲಿ, ಗೌರವ ಪ್ರದಾನ ಕಾರ್ಯದರ್ಶಿ - ಶ್ರೀವಿಶ್ವನಾಥ್ ಬಿ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ – ಶ್ರೀಮತಿ ಜಯಂತಿ ಎಂ. ದೇವಾಡಿಗ, ಉಪಾಧ್ಯಕ್ಷರಾದ ಶ್ರೀಮತಿ ಪ್ರತಿಭಾ ಜಿ. ದೇವಾಡಿಗ ಮತ್ತು ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್, ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಲತಾ ಶೇರಿಗಾರ್, ಶ್ರೀಮತಿ ನಳಿನಿ ದೇವಾಡಿಗ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಅತಿಥಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲದೆ ಅತಿಥಿಗಳು ಮತ್ತು ಪ್ರದರ್ಶನದ ಸ್ಟಾಲ್ ಧಾರಕರನ್ನು ಪರಿಚಯಿಸಿದರು.

ಈ ಪ್ರದರ್ಶನ ಮತ್ತು ಮಾರಾಟದಲ್ಲಿ ರೇಷ್ಮೆ, ಹತ್ತಿ, ಕೈಮಗ್ಗ ಸೀರೆಗಳು, ಚಿನ್ನಾಭರಣ, ಕೃತಕ ಆಭರಣಗಳು, ಉಡುಪುಗಳು, ಮೋದಿ ಕೇರ್ ಉತ್ಪನ್ನಗಳು, ಎಲೆಕ್ಟ್ರಿಕಲ್ ಬೈಕ್, ಕರ್ಟೈನ್ಸ್, ಪ್ರಕೃತಿ ಚಿಕಿತ್ಸೆ ,ಔಷಧ, ಕೈಗಳಿಂದ ತಯಾರಿಸಿದ ಚೀಲಗಳು, ಜಾಲರಿ ಉತ್ಪನ್ನಗಳು, ಅಡುಗೆ ಮಸಾಲೆಗಳು, ಕೇಕ್, ರಂಗೋಲಿ, ತೋರಣ ದೀಪ ಮೊದಲಾದ ದೀಪಾವಳಿ ವಸ್ತುಗಳು, ಹಳೆಯ ಜರಿ ಸೀರೆಗಳು, ಹಳೆಯ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಹಳೆಯ ಕೈಗಡಿಯಾರಗಳು, ತಾಮ್ರದ ನಾಣ್ಯಗಳು, ಹಳೆಯ ಕರೆನ್ಸಿ ನೋಟುಗಳ ಎಕ್ಸ್ಚೇಂಜ್, ಮೊದಲಾದ ಸುಮಾರು ಮೂವತ್ತು ಸ್ಟಾಲ್ಗಳನ್ನು ಬಳಸಲಾಗಿತ್ತು. ಸಂಘದ ಎಲ್ಲಾ ಸದಸ್ಯರು, ಪ್ರಾದೇಶಿಕ ಸಮಿತಿ ಸದಸ್ಯರು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮ ಆಯೋಜನದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಇದು ನಮ್ಮ ಎರಡನೇ ಗ್ರಹೋಪಯೋಗಿ ವಸ್ತುಗಳ ಪ್ರದರ್ಶನ. ಇದರಿಂದ ಬಂದ ಲಾಭಾಂಶವನ್ನು ನಾವು ಸಂಘದ ಶತಮಾನೋತ್ಸವ ಆಚರಣೆಗೆ ದೇಣಿಗೆಯಾಗಿ ನೀಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಸ್ಟಾಲ್ ಧಾರಕರು, ಮತ್ತು ಭೇಟಿನೀಡಿ ಸಹಕರಿಸಿದ ಎಲ್ಲಾ ಸದಸ್ಯರು ಮತ್ತು ವಿಶೇಷವಾಗಿ ಪ್ರೋತ್ಸಾಹಿಸಿದ ಸಂಘದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಮಂಡಳಿಗೆ ನನ್ನ ಧನ್ಯವಾದಗಳು ಎಂದು ಹೇಳಿದರು.

ಕಾರ್ಯಕ್ರಮದ ಬಗ್ಗೆ ವಿವರಿಸಿದ ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ಜಿ. ದೇವಾಡಿಗ ಇವರು ಈ ಕಾರ್ಯಕ್ರಮವು ಯಾವುದೇ ಲಾಭಕ್ಕಾಗಿ ಅಲ್ಲ, ಇದು ಜನರನ್ನು ಒಟ್ಟುಗೂಡಿಸುವ ಒಂದು ಉತ್ತಮ ಮಾಧ್ಯಮ ಎಂದು ಹೇಳಿದರು. ವಿಭಾಗದ ಇನ್ನೋರ್ವ ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್ ಪ್ರತಿಕ್ರಿಯಿಸಿ ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ರೆಸ್ಪಾನ್ಸ್ ದೊರಕಿರುವುದಾಗಿ ಹೇಳಿದರು. ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ ಕಾರ್ಯಕ್ರಮದ ಆಯೋಜನೆಯ ಬಗ್ಗೆ ಹೇಳುತ್ತಾ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘದ ಮಹಿಳಾ ವಿಭಾಗ ಬಹಳ ಶ್ರಮಪಟ್ಟಿದೆ. ಅನೇಕ ದೇವಾಡಿಗರು ಮತ್ತು ದೇವಾಡಿಗರೇತರು ಸ್ಟಾಲ್ ಪಡೆದು ಸಹಕರಿಸಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.
ಪ್ರದರ್ಶನ ಮತ್ತು ಮಾರಾಟದ ಬಗ್ಗೆ ಮಾಹಿತಿ ನೀಡಿದ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯಿಲಿ ಇವರು ಭಾಂಡೂಬ್ ವಲಯದ ಶ್ರೀಮತಿ ಪ್ರಫುಲ್ಲಾ ದೇವಾಡಿಗ ಮತ್ತು ಪರಿವಾರ, ನವಿ ಮುಂಬಯಿಯ ಶ್ರೀಮತಿ ಪ್ರಭಾವತಿ ದೇವಾಡಿಗ ಮತ್ತು ಪರಿವಾರ, ಮೀರಾರೋಡ್ ವಲಯದ ಶ್ರೀ ಗಣೇಶ್ ದೇವಾಡಿಗ ಮತ್ತು ಪರಿವಾರ, ಬೋರಿವಲಿ ವಲಯದ ಶ್ರೀಮತಿ ಉಮಾವತಿ ಗುಜರನ್ ಇವರು ವಿಭಿನ್ನ ಸ್ಟಾಲ್ ಗಳ ಮೂಲಕ ಕಾರ್ಯಕ್ರಮಕ್ಕೆ ಶೋಭೆ ನೀಡಿದ್ದಾರೆ ಅಲ್ಲದೆ ಇನ್ನೂ ಅನೇಕ ಉದ್ಯೋಗಸ್ಥರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ., ಕ್ರೀಡಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಶ್ರೀ ರಘು ಮೊಯಿಲಿ, ಶ್ರೀಮತಿ ಸುಜಾತಾ ಡಿ. ದೇವಾಡಿಗ, ಶ್ರೀಮತಿ ಪ್ರಜ್ಞಾ ಮೋಹನದಾಸ್, ಶ್ರೀಮತಿ ಶಾಂತ ಜಿ ಮೊಯ್ಲಿ, ಡಾ. ರೇಖಾ ಸಿ . ದೇವಾಡಿಗ ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಜೊತೆ ಖಜಾಂಚಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ದೇವಾಡಿಗ, ಯುವ ವಿಭಾಗದ ಕಾರ್ಯಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೇಕರ್, ಮಾಜಿ ಮಹಿಳಾ ಕಾರ್ಯಾಧ್ಯಕ್ಷರುಗಳು ಶ್ರೀಮತಿ ರಂಜಿನಿ ಆರ್. ಮೊಯಿಲಿ, ಶ್ರೀಮತಿ ಪ್ರಫುಲ್ಲಾ ವಿ. ದೇವಾಡಿಗ, ಶ್ರೀಮತಿ ಗೀತಾ ದೇವಾಡಿಗ, ಶ್ರೀಮತಿ ಭಾರತೀ ಎಸ್. ನಿಟ್ಟೇಕರ್, ಮೊದಲಾದವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.
ದೇವಾಡಿಗ ಸಂಘದ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಸಂಘದ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳು, ಪ್ರಾದೇಶಿಕ ಸಮಿತಿಗಳ ಮಾಜಿ ಕಾರ್ಯಾಧ್ಯಕ್ಷರುಗಳು, ಮಹಿಳಾ ಸಮಿತಿಗಳ ಸದಸ್ಯರು, ಯುವ ವಿಭಾಗದ ಸದಸ್ಯರು ಬಹು ಸಂಖ್ಯೆಯಲ್ಲಿ ಈ ಕಾರ್ಯಕ್ರದಲ್ಲಿ ಭಾಗವಹಿಸಿದರು.
ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಶ್ರೀಮತಿ ಜಯಂತಿ ಆರ್. ಮೊಯಿಲಿ, ಅಸಲ್ಫಾ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯಿಲಿ ಮತ್ತು ಮಹಿಳಾವಿಭಾಗದ ಎಲ್ಲಾ ಸದಸ್ಯರು ಶ್ರಮ ವಹಿಸಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶ್ರೀ ಪ್ರಭಾಕರ್ ದೇವಾಡಿಗ ಖಾರ್ಘರ್ ಇವರು ಕಾರ್ಯಕ್ರಮದ ಚಿತ್ರೀಕರಣ ಮಾಡುವುದರ ಮೂಲಕ ಸಹಕರಿಸಿದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಸದಸ್ಯರು ಲಕ್ಕಿಡಿಪ್ ಆಯೋಜಿಸಿದ್ದು, ಇದರಲ್ಲಿ ಶ್ರೀ ಸುಧಾಕರ್ ಎಲ್ಲೂರ್ ಪ್ರಥಮ ಬಹುಮಾನ, ಶ್ರೀ ರವಿ ಎಸ್. ದೇವಾಡಿಗ ದ್ವಿತೀಯ ಬಹುಮಾನ ಮತ್ತು ಶ್ರೀ ಪ್ರಭಾಕರ್ ದೇವಾಡಿಗ ಖಾರ್ಘರ್ ಇವರು ತೃತೀಯ ಬಹುಮಾನ ಪಡೆದರು.
ಈ ಪ್ರದರ್ಶನ ಮತ್ತು ಮಾರಾಟದ ಸಮಾರೋಪ ಸಮಾರಂಭವು 29 ಸೆಪ್ಟೆಂಬರ್ ಸಂಜೆ 9 .೦೦ ಗಂಟೆಗೆ ನಡೆಯಿತು. (ಚಿತ್ರಗಳು, ಶ್ರೀ ಪ್ರಭಾಕರ್ ದೇವಾಡಿಗ ಖಾರ್ಘರ್).