Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬೈಯವರಿಂದ ಭಾಷಣ ಸ್ಪರ್ಧೆ

ದೇವಾಡಿಗ ಸಂಘ ಮುಂಬೈಯವರಿಂದ ಭಾಷಣ ಸ್ಪರ್ಧೆ ತಾರೀಕು 22-12-2019 ರಂದು ದೇವಾಡಿಗ ಸೆಂಟರ್, ದಾದರ್, ಮುಂಬೈಯಲ್ಲಿ ಜರಗಿತು

ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ ದೇವಾಡಿಗ ಯುವ ವಿಭಾಗ ಮತ್ತು ಇತರ ಪ್ರಾದೇಶಿಕ ಸಮನ್ವಯ ಸಮಿತಿಗಳ ಸಹಕಾರದೊಂದಿಗೆ ಡಿಸೆಂಬರ್ 22 2019 ರಂದು ದಾದರ್ ಕಚೇರಿಯ ದೇವಾಡಿಗ ಸೆಂಟರ್ನಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿತು. ಇದರ ಮುಖ್ಯ ಉದ್ದೇಶವೇನೆಂದರೆ ಉತ್ತಮ ಭಾಷಣಕಾರರಾಗಿ ಪ್ರೇಕ್ಷಕರನ್ನು ಎದುರಿಸಲು ಪರಿಣಾಮಕಾರಿ ಮತ್ತು ವೃತ್ತಿಪರ ಮಾರ್ಗವನ್ನು ಉತ್ತೇಜಿಸುವುದು ಮತ್ತು ಯುವಕರಿಗೆ ನೀಡಲಾದ ಸಂಬಂಧಿತ ವಿಷಯಗಳನ್ನು ಸಂವಹನ ಮಾಡುವುದು, ಅವರ ಆತ್ಮವಿಶ್ವಾಸ, ಕೌಶಲ್ಯ, ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುವುದು , ಅವರ ಆಂತರಿಕ ಪ್ರತಿಭೆಯನ್ನು ಪೋಷಿಸಲು ರಚನಾತ್ಮಕ ಮತ್ತು ವ್ಯವಸ್ಥಿತ ವೇದಿಕೆಯನ್ನು ಒದಗಿಸುವುದಾಗಿತ್ತು.

ಕಾರ್ಯಕ್ರಮವು ಉಪಾಧ್ಯಕ್ಷ ಶ್ರೀ ನರೇಶ್ ದೇವಾಡಿಗ, ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿಯರಾದ ಶ್ರೀಮತಿ ಮಾಲತಿ ಜೆ. ಮೊಯಿಲಿ ಮತ್ತು ಶ್ರೀ ಜಯ ಎಲ್. ದೇವಾಡಿಗ, ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿ, ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ ಕಾರ್ಯಾದ್ಯಕ್ಷ ಶ್ರೀ ಬಾಲಚಂದ್ರ ದೇವಾಡಿಗ, ಮಾಜಿ ಕಾರ್ಯಾದ್ಯಕ್ಷ ಶ್ರೀ ಹೇಮನಾಥ್ ದೇವಾಡಿಗ ಹಾಗೂ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಲತಾ ಮೊಯಿಲಿ, ಯುವ ವಿಭಾಗದ ಅಧ್ಯಕ್ಷ ಶ್ರೀ ಹರೀಶ್ ದೇವಾಡಿಗ ಇವರ ದೀಪ ಪ್ರಜ್ವಲನೆ ಹಾಗೂ ಮಾಸ್ಟರ್ ನಿಹಾನ್ ದೇವಾಡಿಗರ ಪ್ರಾಥನೆಯೊಂದಿಗೆ ಪ್ರಾರಂಭವಾಯಿತು.

ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ ಮಹಿಳಾ ವಿಭಾಗದ ಉಪಕಾರ್ಯಾದ್ಯಕ್ಷೆ ಶ್ರೀಮತಿ ಸುಜಯ ವಿ. ದೇವಾಡಿಗ, ಶ್ರೀ ಕಿಶೋರ್ ದೇವಾಡಿಗ, ಶ್ರೀ ಕರಣ್ ದೇವಾಡಿಗ, ಶ್ರೀ ಅತೀಶ್ ದೇವಾಡಿಗ, ಯುವ ವಿಭಾಗದ ಉಪ ಕಾರ್ಯಾದ್ಯಕ್ಷ, ಶ್ರೀ ದಿನೇಶ್ ದೇವಾಡಿಗ, ಶ್ರೀ ವಿನಿಶ್ ದೇವಾಡಿಗ, ಇವರು ಕೂಡ ಸಹಕರಿಸಿದರು.
ಕಾರ್ಯಕ್ರಮವನ್ನು ಆಡ್ವೋಕೇಟ್ ಶ್ರೀ ಬ್ರಿಜೇಶ್ ನಿಟ್ಟೇಕರ್, ಶ್ರೀಮತಿ ಅಶ್ವಿನಿ ದೇವಾಡಿಗ,ಶ್ರೀಮತಿ ಸೋನಾಲಿ ದೇವಾಡಿಗರು ಸಂಯೋಜಿಸಿದರು.
ಯುವ ವಿಭಾಗದ ಮಿಸ್ ವಿಜೇತ ದೇವಾಡಿಗ, ಮಿಸ್ ಹರ್ಷ ದೇವಾಡಿಗ, ಶ್ರೀ ರೋಹಿತ್ ದೇವಾಡಿಗ, ಶ್ರೀಮತಿ ಅಶ್ವಿನಿ ದೇವಾಡಿಗ, ಶ್ರೀ ದಿನೇಶ್ ದೇವಾಡಿಗ, ಶ್ರೀ ಕಿಶೋರ್ ದೇವಾಡಿಗ ಮತ್ತು ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಯ ಮಿಸ್. ಪ್ರಿಯಾ ಜೆ ದೇವಾಡಿಗ ಇವರು ಕೂಡ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು
ಶ್ರೀ ಪ್ರಮೋದ್ ಮೋಹನ್‌ದಾಸ್, ಶ್ರೀಮತಿ ರಿಯಾ ಅತ್ತಾವರ್ ಮತ್ತು ಆಡ್ವೋಕೇಟ್ ವಿಶಾಲ್ ಪಿ. ಶಿರ್ಕೆ ತೀರ್ಪುಗಾರರಾಗಿದ್ದರು.
ಭಾಷಣ ಸ್ಪರ್ಧೆಯಲ್ಲಿ ಚಿಕ್ಕ ಮಕ್ಕಳು ಕೂಡ ಬಾಗವಹಿಸಿದ್ದರು ಎಲ್ಲರಿಗೂ ಬಹುಮಾನವಿತ್ತು ಪ್ರೋತ್ಸಾಹಿಸಲಾಯಿತು.

ಸ್ಪರ್ಧೆಯ ವಿಜೇತರು:
ಕ್ಯಾಟಗರಿ-4 ಪ್ರಥಮ ಶ್ರೀ ಹಿತೇಶ್ ಕಾರ್ಕಲ್, ಸಿಟಿ ಎಲ್‌ಸಿಸಿ, ದ್ವಿತೀಯ ಶ್ರೀ ಶಿವಾನಂದ್ ದೇವಾಡಿಗ, ಭಾಂಡೂಪ್ ಎಲ್‌ಸಿಸಿ,
ಕ್ಯಾಟಗರಿ-3 ಪ್ರಥಮ ಮಿಸ್ ವೈಷ್ಣವಿ ಆರ್ ದೇವಾಡಿಗ, ನವೀ ಮುಂಬಯಿ ಎಲ್‌ಸಿಸಿ; ದ್ವಿತೀಯ ಮಿಸ್ ವೈಷ್ಣವಿ ವಿ. ದೇವಾಡಿಗ, ಮೀರಾ ರೋಡ್ ಎಲ್‌ಸಿಸಿ.
ಕ್ಯಾಟಗರಿ-2 ಪ್ರಥಮ ಮಿಸ್ ತನ್ವಿ ಡಿ ದೇವಾಡಿಗ, ನವಿ ಮುಂಬಯಿ ಎಲ್‌ಸಿಸಿ; ದ್ವಿತೀಯ ಮಿಸ್ ಮಯೂರಿ ದೇವಾಡಿಗ ಡೊಂಬಿವಲಿ ಎಲ್‌ಸಿಸಿ.
ಕ್ಯಾಟಗರಿ-1 ಪ್ರಥಮ ಶ್ರೀ ಚಿರಾಗ್ ದೇವಾಡಿಗ, ನವಿ ಮುಂಬಯಿ ಎಲ್‌ಸಿಸಿ.
ಅತ್ಯುತ್ತಮ ಎಲ್‌ಸಿಸಿ ಪ್ರಶಸ್ತಿ - ನವಿ ಮುಂಬಯಿ ಎಲ್‌ಸಿಸಿಗೆ ಅವರ ಸಾಧನೆ ಮತ್ತು ಭಾಗವಹಿಸುವಿಕೆಗಾಗಿ ನೀಡಲಾಯಿತು.
ಕಾರ್ಯಕ್ರಮಕ್ಕೆ ನಿಧಿಯನ್ನು ಒಟ್ಟುಗೂಡಿಸುವಲ್ಲಿ ಶ್ರೀಮತಿ ಮಾಲತಿ ಜೆ. ಮೊಯಿಲಿ,ಶ್ರೀಮತಿ ಭಾರತಿ ಎಸ್ ನಿಟ್ಟೇಕರ್, ಶ್ರೀಮತಿ ರಂಜಿನಿ ಆರ್. ಮೊಯಿಲಿ, ಶ್ರೀ ಹೇಮನಾಥ್ ದೇವಾಡಿಗ, ಶ್ರೀ ಬಾಲಚಂದ್ರ ದೇವಾಡಿಗ, ಶ್ರೀಮತಿ ಲತಾ ವಿ ಮೊಯಿಲಿ,ಶ್ರೀಮತಿ ಸುಜಯ ವಿ.ದೇವಾಡಿಗ, ಶ್ರೀಮತಿ ಪ್ರಡ್ನ್ಯಾ ಮೋಹನ್‌ದಾಸ್,ಶ್ರೀಮತಿ ಜಲಜಾಕ್ಷಿ ಎಸ್ ಶೇರಿಗಾರ್, ಆಡ್ವೋಕೇಟ್ ಶ್ರೀ ಬ್ರಿಜೇಶ್ ಎಸ್. ನಿಟ್ಟೇಕರ್ ಸಹಕರಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು

ಹೆಚ್ಚಿನ ಫೋಟೋಗಳಿಗಾಗಿ Click Me