Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಲಿ ವಲಯದ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ.

ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಲಿ ವಲಯದ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ.

ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಲಿ ವಲಯದ ಮಹಿಳಾ ವಿಭಾಗದವರಿಂದ ಫೆಬ್ರವರಿ 19 ರಂದು ಡೊಂಬಿವಲಿ ಪಶ್ಚಿಮದ ಪ್ರೀತಿ ಬ್ಯಾಂಕೈಟ್ ಸಭಾಗೃಹದಲ್ಲಿ ಸಂಜೆ 5ರಿಂದ ಅರಸಿನ ಕಾಂಕುಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ದೀಪ ಪ್ರಜ್ವಲನೆಯು ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಜಯಲಕ್ಷ್ಮಿ ಹರೀಶ್ ಶೆಟ್ಟಿ, ಶ್ರೀಮತಿ ಇಂದ್ರಾಳಿ ಸುಷ್ಮಾದಿವಾಕರ್ ಶೆಟ್ಟಿ ಮಾತೃ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ಪ್ರಪುಲ್ಲ ವಾಸು ದೇವಾಡಿಗ ಹಾಗೂ ಮಾತೃ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ರಂಜಿನಿ ರಮೇಶ್ ಮೊಯಿಲಿ, ಇನ್ನು ವಲಯದ ಮಹಿಳಾ ವಿಭಾಗದ ಸದಸ್ಯೆಯರಾದ ಶ್ರೀಮತಿ ವಿಶಾಲ ಎಚ್. ದೇವಾಡಿಗ, ಶ್ರೀಮತಿ ಪದ್ಮಲತಾ ಆರ್. ಮೊಯಿಲಿ, ಶ್ರೀಮತಿ ಪುಷ್ಪಲತಾ ಎಲ್. ದೇವಾಡಿಗರ ಪ್ರಾರ್ಥನರರೊಂದಿಗೆ ಪ್ರಾರಂಭಗೊಂಡಿತು.

ಸಭಾ ಕಾರ್ಯಕ್ರಮದ ಅತಿಥಿ ಗಣ್ಯರಿಗೆ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಶಾಲಿನಿ ಜಯಂತ್ ದೇವಾಡಿಗರು ವಲಯದ ಪರವಾಗಿ ಶಾಲು ಹೊದಿಸಿ ಪುಷ್ಪಗುಚ್ಚ ಕೊಟ್ಟು ಸತ್ಕರಿಸಲಾಯಿತು ಹಾಗೂ ಹಿರಿಯ ಸಮಾಜ ಬಾಂಧವರಿಗೆ ಶಾಲು ಹೊದಿಸಿ ಫಲಪುಷ್ಪ ಕೊಟ್ಟು ಸನ್ಮಾನಿಸಲಾಯಿತು.

ಅತಿಥಿ ಗಣ್ಯರಾಗಿ ಆಗಮಿಸಿದ ಗಾಯತ್ರಿ ಪರಿವಾರದ ಶ್ರೀಮತಿ ಜಯಲಷ್ಮಿ ಹರೀಶ್ ಶೆಟ್ಟಿಯವರು ಸತ್ಕಾರ ಸ್ವೀಕರಿಸಿ ಮಾತಾನಾಡುತ್ತಾ ಈ ಮನುಷ್ಯ ಜನ್ಮವೆಂಬುದು ಒಂದು ಪವಿತ್ರವಾದುದು. ಮನುಷ್ಯನ ಮಸ್ತಿಷ್ಕವು ಒಂದು ಬ್ರಹಾಂಡ, ಇದು ಒಂದು ಲಕ್ಷ ಕಂಪ್ಯೂಟರ್ ಗಿಂತಲೂ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ನಾವು ಯಾವಾಗಲು ಸಕಾರಾತ್ಮಕ ಚಿಂತನೆಯನ್ನೇ ಮಾಡಬೇಕು. ನಕರಾತ್ಮಕ ಚಿಂತನೆಯ ಮನುಷ್ಯ ಅಧೋಗತಿಗೆ ಕಾರಣ, ಸಕಾರಾತ್ಮಕ ಚಿಂತನೆಯು ಭಕ್ತಿಯ ಮೂಲಕ ಬರುತ್ತದೆ. ಭಕ್ತಿ ಹಾಗೂ ಧರ್ಮದ ದಾರಿಯಲ್ಲಿ ನಡೆಯುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ, ಉಲ್ಲಾಸ ಶಾಂತಿ ಸಿಗುತ್ತದೆ. ಇದನ್ನೆ ನಮ್ಮ ಮುಂದಿನ ಪೀಳಿಗೆಗೆ ಮನವರಿಕೆ ಮಾಡಿದರೆ ಎಲ್ಲವೂ ದೊರೆತಂತೆ ಎಂದು ಸಭೆಗೆ ಹೇಳಿದರು.

ಇನೊರ್ವ ಅತಿಥಿ ಡೊಂಬಿವಲಿ ಕರ್ನಾಟಕ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶುಷ್ಮಾ ದಿವಾಕರ ಶೆಟ್ಟಿ ಮಾತನಾಡುತ್ತ, ಹಿರಿಯರಿಂದ ಬಂದ ಸಂಸ್ಕಾರ, ಸಂಸ್ಕೃತಿ ನಮ್ಮ ಮುಂದಿನ ಪೀಳಿಗೆಗೆ ಹೆತ್ತವರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿ ಕೊಡಬೇಕು ಎಂದು ತಿಳಿಸಿದರು ಹಾಗೂ ದೇವಾಡಿಗ ಸಂಘ ಮುಂಬಯಿ (ಮಾತೃ ಸಂಘ) ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ಪ್ರಪುಲ್ಲ ವಾಸು ದೇವಾಡಿಗರು ಸಂದರ್ಭಕ್ಕೆ ಅನುಗುಣವಾಗಿ ಸಭೆಯಲ್ಲಿ ಮಾತನಾಡಿದರು.

ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ರಂಜಿನಿ ರಮೇಶ್ ಮೊಯಿಲಿಯವರು ಸಭೆಯಲ್ಲಿ ಮಾತನಾಡುತ್ತಾ, ಮಹಿಳೆಯರಿಗೆ ಉತ್ಸಾಹಿಸುತ್ತಾ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮಿಂದಾದ ಸೇವೆ ಮಾಡಬೇಕು ಆ ಸೇವೆ ಫಲಾಪೇಕ್ಷೆಯಾಗಿ ಇನ್ನುಳಿದ ಮಹಿಳೆಯರಿಗೆ ಪ್ರೋತ್ಸಾಹ ಕೊಡುವಂತಾಗಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಡೊಂಬಿವಲಿ ವಲಯದ ಹಿರಿಯ ಸಮಾಜ ಬಾಂಧವರಾದ ಶ್ರೀಮತಿ ಹಾಗೂ ಶ್ರೀ ಹರಿಯಪ್ಪ ದೇವಾಡಿಗ, ಶ್ರೀಮತಿ ಹಾಗೂ ಶ್ರೀ ಗೋಪಾಲ್ ದೇವಾಡಿಗ (ಬಡಕೇರೆ), ಶ್ರೀಮತಿ ಸತ್ಯಪ್ರೇಮ ಚಂದಯ್ಯ ಮೊಯಿಲಿ, ಶ್ರೀಮತಿ ಸೀತಾ ಹರಿಯಪ್ಪ ದೇವಾಡಿಗ, ಶ್ರೀಮತಿ ಜಾನಕಿ ರುಕ್ಮಯ ದೇವಾಡಿಗ, ಶ್ರೀಮತಿ ಪದ್ಮಾವತಿ ಚಂದಯ್ಯ ಕರ್ಮರನ್, ಶ್ರೀಮತಿ ಶಾರದಾ ಸುಂದರ ದೇವಾಡಿಗ (ಮಿಜಾರ್) ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೂ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಶ್ರೀ ಜಗದಂಬ ಮಂದಿರದ ಅಧ್ಯಕ್ಷರಾದ ಶ್ರೀಮಾನ್ ಹರೀಶ್ ಶೆಟ್ಟಿ, ಸಾಯಿನಾಥ್ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀ ಮೋಹನ್ ಸಾಲಿಯಾನ್ ಹೆಜಮಾಡಿ, ಮೊಗವೀರ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾದ ಶ್ರೀಮತಿ ಗೀತಾ ಜೆ. ಮೆಂಡನ್, ಕರ್ನಾಟಕ ಸಂಘದ ಮಹಿಳಾ ವಿಭಾಗದ ಸದಸ್ಯೆಯರಾದ ಶ್ರೀಮತಿ ಶಶಿ ಗಿರೀಶ್ ಶೆಟ್ಟಿ, ದೇವಾಡಿಗ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಪ್ರವೀಣ್ ನಾರಾಯಣ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀ ಜಯ ಎಚ್. ದೇವಾಡಿಗ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆಯಾದ ಶ್ರೀಮತಿ ಜಯಂತಿ ಮಾಧವ ದೇವಾಡಿಗ, ಕೋಶಾಧಿಕಾರಿ ಶ್ರೀಮತಿ ಸುರೇಖಾ ಹೇಮನಾಥ್ ದೇವಾಡಿಗ, ಮಾಜಿ ಪ್ರಧಾನ ಗೌರವ ಕಾರ್ಯದರ್ಶಿಯಾದ ಶ್ರೀ ಪದ್ಮನಾಭ ದೇವಾಡಿಗ, ಕ್ರೀಡಾ ಸಮಿತಿಯ ಉಪಕಾರ್ಯಾಧ್ಯಕ್ಷರಾದ ಶ್ರೀ ಸುರೇಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಮೀಳಾ ವಿ. ದೇವಾಡಿಗ, ಶ್ರೀ ನಿತೇಶ್ ದೇವಾಡಿಗ, ವಲಯದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮನ್ವಯ ಸಮಿತಿಯ ಪದಾಧಿಕಾರಿಗಳು ಹಾಗೂ ವಲಯದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ವಲಯದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಮಾತೃ ಸಂಘ ಹಾಗೂ ಸಮನ್ವಯ ಸಮಿತಿಯ ಪದಾಧಿಕಾರಿಗಳಿಗೆ, ಬ್ಯಾಂಕೈಟ್ ಸಭಾಗೃಹದ ಯಜಮಾನರಾದ ಶ್ರೀ ಲಕ್ಷ್ಮಣ್ ಪೂಜಾರಿಯವರಿಗೆ ವಲಯದ ಪದಾಧಿಕಾರಿಗಳು ಪುಷ್ಪಗುಚ್ಛ ಕೊಟ್ಟು ಸನ್ಮಾನಿಸಿದರು.

ಕಾರ್ಯಕ್ರಮದ ಸಂಪೂರ್ಣ ಭೋಜನದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದ ಶ್ರೀಮತಿ ಮತ್ತು ಜಯಂತ್ ದೇವಾಡಿಗರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ಶಾಲಿನಿ ಜೆ. ದೇವಾಡಿಗರು ತನ್ನ ಅಧ್ಯಕ್ಷತೆಯ ಭಾಷಣದಲ್ಲಿ ಅರಸಿನ ಕುಂಕುಮದ ಉದ್ದೇಶ ಹಾಗೂ ಮಹತ್ವವನ್ನು ಸೂಕ್ತವಾಗಿ ತಿಳಿಸಿದರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಯಾಗುವಂತೆ ಮಾಡಿಕೊಟ್ಟದಕ್ಕೆ ಕೃತಜ್ಞತೆ ಸಲ್ಲಿಸಿದರು.

ವಲಯದ ಮಕ್ಕಳು ವೈವಿಧ್ಯಮಯ ಮನೋರಂಜನೆ ಕಾರ್ಯಕ್ರಮವನ್ನು ಸಾದರ ಪಡಿಸಿದರು. ನಿರೂಪಣೆಯನ್ನು ಶ್ರೀ ಕೃಷ್ಣ ದೇವಾಡಿಗ, ಕುಮಾರಿ ಶ್ರುತಿ ದೇವಾಡಿಗ, ಕಾರ್ತಿಕ್ ಎಲ್ ದೇವಾಡಿಗ ಹಾಗೂ ವಿನೀಶ್ ದೇವಾಡಿಗರು ಮಾಡಿದರು. ವಂದನಾರ್ಪಣೆಯನ್ನು ಶ್ರೀಮತಿ ವಿಶಾಲ ಎಚ್. ದೇವಾಡಿಗರು ಮಾಡಿದರು ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

For More photos Click Here