Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮಹಿಳಾ ವಿಭಾಗದ ದೀಪಾವಳಿ ಸಂಭ್ರಮ ಮತ್ತು ರಂಗೋಲಿ ಸ್ಪರ್ಧೆ

ದೇವಾಡಿಗ ಸಂಘ ಮಹಿಳಾ ವಿಭಾಗದ ದೀಪಾವಳಿ ಸಂಭ್ರಮ ಮತ್ತು ರಂಗೋಲಿ ಸ್ಪರ್ಧೆ

   ಮಹಿಳಾ ವಿಭಾಗವು ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗರವರ ನೇತೃತ್ವದಲ್ಲಿ 29 ಅಕ್ಟೋಬರ್ 2022 ರಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವಾಡಿಗ ಕೇಂದ್ರ, ದಾದರ್ ಕಛೇರಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿತ್ತು. ಮಹಿಳಾ ಸದಸ್ಯರಿಂದ ಸಾಂಪ್ರದಾಯಿಕ ಕಲಾ ಪ್ರಕಾರವಾಗಿರುವ ಹಬ್ಬದ ಉತ್ಸಾಹ ಮತ್ತು ಗುಪ್ತ ಪ್ರತಿಭೆಯನ್ನು ಹೊರತರಲು ದೀಪಾವಳಿ ಆಚರಣೆಯ ಅತ್ಯಗತ್ಯ ಭಾಗವಾಗಿದೆ ಎಂದು ಮಹಿಳಾ ಕಾರ್ಯಾಧ್ಯಕ್ಷೆ ನುಡಿದರು. ವಿವಿಧ ಪ್ರಾದೇಶಿಕ ಸಮನ್ವಯ ಸಮಿತಿ ಗಳ 14 ಮಂದಿ ಮಹಿಳಾ ಸದಸ್ಯೆಯರು ಚುಕ್ಕೆ ಮತ್ತು ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯ ಆಯ್ಕೆಯ ತೀರ್ಪಿನ ಮಾನದಂಡವು ಕಲಾತ್ಮಕ ವಿನ್ಯಾಸ, ಸೃಜನಶೀಲತೆ, ಬಣ್ಣ ಸಂಯೋಜನೆ, ಸ್ಪಷ್ಟತೆ ಯಾಗಿತ್ತು.

ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಾಲತಿ ಜಯಕರ್ ದೇವಾಡಿಗ - ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ, ದ್ವಿತೀಯ ವೀಣಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್, ತೃತೀಯ ಶಿಲ್ಪಾ ಕಾರ್ಕಲ್ - ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ ಮತ್ತು ಸಮಾಧಾನಕರ ಬಹುಮಾನಗಳನ್ನು ಹೇಮಲತಾ ಶೇರಿಗಾರ್ - ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು, ರೀನಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಬೋರಿವಲಿ ಗೆದ್ದುಕೊಂಡರೆ; ಚುಕ್ಕಿ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ತ್ರಿಷಾ ಉದಯ್ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು, ದ್ವಿತೀಯ ಚೈತ್ರಾ ದೇವಾಡಿಗ - ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ, ತೃತೀಯ ಸುಜಾತಾ ಶೇರಿಗಾರ್ - ಪ್ರಾದೇಶಿಕ ಸಮನ್ವಯ ಸಮಿತಿ ಠಾಣೆ ಮತ್ತು ಸಮಾಧಾನಕರ ಬಹುಮಾನಗಳನ್ನು ಕವಿತಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್, ಉಮಾವತಿ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಬೋರಿವಲಿ ಗೆದ್ದಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹಕ ಬಹುಮಾನಗಳನ್ನು ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರತಿಭಾ ಜಿ ದೇವಾಡಿಗ ಪ್ರಾಯೋಜಿಸಿದರು.

ಕಾರ್ಯಕ್ರಮವು ತ್ರಿಶಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರ್ ಮತ್ತು ವೀಣಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಜಯ ವಿ ದೇವಾಡಿಗರು ತೀರ್ಪುಗಾರರಿಗೆ ಮತ್ತು ಮಹಿಳಾ ವಿಭಾಗ ಪದಾಧಿಕಾರಿಗಳಿಗೆ ಹಾಗು ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲ ಸದಸ್ಯರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು. ಸ್ಪರ್ಧೆಯ ತೀರ್ಪುಗಾರರಾದ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ ಮೊಯ್ಲಿ, ವೈವಾಹಿಕ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ವಿ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಆರ್ ಮೊಯ್ಲಿ ಇವರ ಕಿರು ಪರಿಚಯವನ್ನು ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆಯಾರಾದ ಶ್ರೀಮತಿ ಪ್ರತಿಭಾ ದೇವಾಡಿಗ, ಮತ್ತು ಶ್ರೀಮತಿ ಪ್ರಮೀಳಾ ಶೇರಿಗಾರ್, ಮಹಿಳಾ ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಶೇರಿಗಾರ್ ಕ್ರಮವಾಗಿ ನೀಡಿದರು.

ಇಂತಹ ಕಾರ್ಯ ಕ್ರಮಗಳನ್ನು ಆಯೋಜಿಸುವುದರಿಂದ ಮಹಿಳಾ ಸದಸ್ಯರು ತಮ್ಮ ಸಂಸ್ಕೃತಿಯೊಂದಿಗೆ ನಿಕಟ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ಈ ರಂಗೋಲಿ ಮಾಡುವ ಸ್ಪರ್ಧೆಯು ಮಹಿಳಾ ಸದಸ್ಯರಿಗೆ ತಮ್ಮ ಗುಪ್ತ ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸಲು / ಹೊಮ್ಮಲು ಪ್ರೇರೇಪಿಸುತ್ತದೆ ಎಂದು ಮಹಿಳಾ ಕಾರ್ಯಾಧ್ಯಕ್ಷೆ ನುಡಿದರು.

ಈ ಸಂದರ್ಭದಲ್ಲಿ ಶ್ರೀ ವಾಸು ಎಸ್ ದೇವಾಡಿಗ - ಸಂಘದ ಮಾಜಿ ಅಧ್ಯಕ್ಷರು, ಶ್ರೀ ಹೇಮನಾಥ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿಯ ಮಾಜಿ ಕಾರ್ಯಾಧ್ಯಕ್ಷರು, ಶ್ರೀಮತಿ ರಂಜಿನಿ ಆರ್ ಮೊಯ್ಲಿ - ನಿಕಟಪೂರ್ವ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ, ಸುರೇಖಾ ಎಚ್ ದೇವಾಡಿಗ - ಸಂಘದ ಖಜಾಂಚಿ, ಶ್ರೀಮತಿ ಗೀತಾ ಎಲ್ ದೇವಾಡಿಗ - ಸಂಘದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗದ ಉಪಕಾರ್ಯಧ್ಯಕ್ಷೆ, ಶ್ರೀಮತಿ ಮಮತಾ ಸಿ ದೇವಾಡಿಗ - ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಪದ್ಮಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಜೋಗೇಶ್ವರಿಯ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಅಸಲ್ಫಾ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವೀಣಾ ದೇವಾಡಿಗ - ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್ ಇದರ ಮಹಿಳಾ ಕಾರ್ಯಾಧ್ಯಕ್ಷೆ ಉಪಸ್ಥಿತರಿದ್ದರು.

ಮಹಿಳಾ ಜೊತೆ ಕಾರ್ಯದರ್ಶಿ ಶ್ರೀಮತಿ ನಳಿನಿ ಎಸ್ ದೇವಾಡಿಗ, ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೀಶ್ ದೇವಾಡಿಗರ ಸಹಕಾರಕ್ಕೆ, ತೀರ್ಪುಗಾರರಿಗೆ, ಬಂದ ಎಲ್ಲಾ ಸದ್ಯಸರಿಗೆ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.