Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಶತಮಾನೋತ್ಸವದ ಅಂಗವಾಗಿ ತುಳು-ಕನ್ನಡಿಗ ಕ್ರೀಡಾ ಸ್ಪರ್ಧೆಮತ್ತು 56 ನೇ ಕ್ರೀಡಾ ಮಹೋತ್ಸವ-ಪ್ರವೇಶ ಪತ್ರಗಳ ಬಿಡುಗಡೆ

ದೇವಾಡಿಗ ಸಂಘ ಮುಂಬಯಿ: ಶತಮಾನೋತ್ಸವದ ಅಂಗವಾಗಿ ತುಳು-ಕನ್ನಡಿಗ ಕ್ರೀಡಾ ಸ್ಪರ್ಧೆಮತ್ತು 56 ನೇ ಕ್ರೀಡಾ ಮಹೋತ್ಸವ-ಪ್ರವೇಶ ಪತ್ರಗಳ ಬಿಡುಗಡೆ

ಮುಂಬಯಿ, ಅ 27: ಮುಂಬಯಿಯ ಪ್ರಸಿದ್ಧ ಸಂಘ ಸಂಸ್ಥೆಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿ ಇದರ ಶತಮಾನೋತ್ಸವ ಅಂಗವಾಗಿ ತುಳು-ಕನ್ನಡಿಗ ಕ್ರೀಡಾ ಸ್ಪರ್ಧೆ ಮತ್ತು ಸಂಘದ ೫೬ನೇ ವಾರ್ಷಿಕ ಕ್ರೀಡಾ ಮಹೋತ್ಸವದ ಕುರಿತು ಚರ್ಚೆ ನಡೆಸಿ, ಎರಡೂ ವಿಭಾಗಗಳ ಕ್ರೀಡಾ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹದಲ್ಲಿ ಇಂದು ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಸಂಘದ ಶತಮಾನೋತ್ಸವ ಸಮಿತಿಗಳ ಸದಸ್ಯರ ಮತ್ತು ಕ್ರೀಡಾ ಸಮಿತಿಯ ಸದಸ್ಯರ ಸಭೆ ನಡೆಯಿತು. ಜೊತೆಗೆ ಸಂಘದ ಸ್ಮರಣಿಕೆ ಸಮಿತಿ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ಸಮಿತಿಗಳ ಸಭೆಯೂ ನಡೆಯಿತು.
ಶತಮಾನೋತ್ಸವ ಆಚರಣಾ ಸಮಿತಿಯ ಕಾರ್ಯಧ್ಯಕ್ಷರು ಮತ್ತು ಜಾಗತಿಕ ದೇವಾಡಿಗ ಮಹಾಮಂಡಳದ ಅಧ್ಯಕ್ಷರೂ ಆದ ಶ್ರೀ ಧರ್ಮಪಾಲ ಯು. ದೇವಾಡಿಗ ಶತಮಾನೋತ್ಸವ ಸಮಿತಿಯ ಸಂಯೋಜಕರಾದ ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ ದಾಸ್, ಮಾಜಿ ಅಧ್ಯಕ್ಷರು ಶ್ರೀ ವಾಸು ದೇವಾಡಿಗ, ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಜೆ. ಮೊಯ್ಲಿ, ಗೌ. ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶ್ರೀ ಮೋಹನ್ ಗುಜರನ್ ಮತ್ತು ಕಾರ್ಯದರ್ಶಿ ಶ್ರೀ ಗಣೇಶ್ ಕೆ. ದೇವಾಡಿಗ ಇವರು ಸಂಘದ 56 ನೇ ಕ್ರೀಡಾ ಮಹೋತ್ಸವದ ವಿಷಯ ಮಂಡಿಸಿ ವಿವಿಧ ಕ್ರೀಡಾ ಸ್ಪರ್ಧೆಗಳ ಸಂಪೂರ್ಣ ಮಾಹಿತಿ ನೀಡಿದರು. ಈ ಕ್ರೀಡಾ ಮಹೋತ್ಸವವನ್ನು ರವಿವಾರ ಡಿಸೆಂಬರ್ 1 ನೇ ತಾರೀಕು 2024 ರಂದು ಮರೀನ್ ಲೈನ್ಸ್ ಬಳಿಯ ಮುಂಬಯಿ ವಿದ್ಯಾಪೀಠದ ಕ್ರೀಡಾ ಮೈದಾನದಲ್ಲಿ ಮುಂಜಾನೆ ೮.೦೦ ಗಂಟೆಯಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಸಂಘದ 56 ನೇ ಕ್ರೀಡಾ ಮಹೋತ್ಸವದ ವಿಷಯ ಮಂಡಿಸಿದ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಇದರ ಕಾರ್ಯಧ್ಯಕ್ಷ ಶ್ರೀ ಮೋಹನ್ ಗುಜರನ್ ಮಾತನಾಡಿ ಕ್ರೀಡಾ ಮಹೋತ್ಸವದ ವಿವರಣೆ ನೀಡಿದರು. ವಿವಿಧ ವಯೋಘಟದ ಕ್ರೀಡಾಪಟುಗಳಿಗೆ ಸುಮಾರು 43 ಪ್ರಕಾರದ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿರುವುದಾಗಿ ಮಾಹಿತಿ ನೀಡಿದ ಅವರು ಸದಸ್ಯರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾಮಹೋತ್ಸವದಲ್ಲಿ ಭಾಗವಸಬೇಕಾಗಿ ವಿನಂತಸಿಕೊಂಡರು.

ಶತಮಾನೋತ್ಸವ ಕ್ರೀಡಾ ಸಮಿತಿಯ ಪ್ರಮುಖರಾದ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟು ಖ್ಯಾತಿಯ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಶತಮಾನೋತ್ಸವ ಆಚರಣೆಯ ಪರವಾಗಿ ಮುಂಬಯಿಯ ಸಮಸ್ತ ತುಳು ಕನ್ನಡಿಗರ ಸಂಘ ಸಂಸ್ಥೆಗಳಿಗಾಗಿ ಸ್ತ್ರೀಯರ ಮತ್ತು ಪುರುಷರ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗ ಜಗ್ಗಾಟದ ಸ್ಪರ್ಧೆ ಆಯೋಜಿಸಿರುವುದಾಗಿ ಮಾಹಿತಿ ನೀಡಿದರು. ಈ ಸ್ಪರ್ಧೆಯು ಸಂಘದ ಕ್ರೀಡಾ ಸ್ಪರ್ಧೆಯಂದೇ ಅಂದರೆ ರವಿವಾರ ಡಿಸೆಂಬರ್ 1 ನೇ ತಾರೀಕು 2024 ರಂದು ಮರೀನ್ ಲೈನ್ಸ್ ಬಳಿಯ ಮುಂಬಯಿ ವಿದ್ಯಾಪೀಠದ ಕ್ರೀಡಾ ಮೈದಾನದಲ್ಲಿ ಮುಂಜಾನೆ ೮.೦೦ ಗಂಟೆಯಿಂದ ಆರಂಭವಾಗಲಿದೆ ಎಂದರು. ಈ ಕ್ರೀಡಾ ಸ್ಪರ್ಧೆಗೆ ರೂಪಾಯಿ 2000 ಪ್ರವೇಶ ಶುಲ್ಕ ವಿಧಿಸಿದ್ದು, ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ರೂಪಾಯಿ 20000 ಮತ್ತು ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ರೂಪಾಯಿ 15000 ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ, ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ರೂಪಾಯಿ 15000 ಮತ್ತು ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ರೂಪಾಯಿ 10000 ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಸಂಘದ ಅಧ್ಯಕ್ಷರು ಮತ್ತು ಎಲ್ಲಾರೂ ಸೇರಿ ಎರಡೂ ಕ್ರೀಡಾ ಸ್ಪರ್ಧೆಗಳ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಿದರು.

ಸಾಂಸ್ಕ್ರತಿಕ ಸಮಿತಿಯ ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಮಾತನಾಡಿ ಯಾವ ಯಾವ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮಾಹಿತಿ ನೀಡಿದರು. ಅವರಂದಿಗೆ ಅನೇಕರು ಚರ್ಚೆಯಲ್ಲಿ ಭಾಗವಹಿಸಿದರು. ಶ್ರೀ ಧರ್ಮಪಾಲ ಯು. ದೇವಾಡಿಗ ಇವರು ಮಾತನಾಡುತ್ತಾ ಕೇವಲ ತುಳು ಸಂಸ್ಕ್ರತಿಯುಳ್ಳ ಕಾರ್ಯಕ್ರಮ ಬೇಕು. ಯಾವುದೇ ಸಿನೆಮಾ ಆಧಾರಿತ ಕಾರ್ಯಕ್ರಮಗಳು ಬೇಡ ಎಂದು ಸೂಚಿಸಿದರು. ಮುಂದಿನ ಸಾಂಸ್ಕ್ರತಿಕ ಸಮಿತಿಯ ಸಭೆಯಲ್ಲಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಹೇಳಿದರು.

ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಮಾತನಾಡಿ ಸಂಘದ ಪ್ರತೀ ಸದಸ್ಯರಿಗೂ ಅವಕಾಶ ನೀಡಬೇಕು. ಯಾರನ್ನೂ ಬಿಡುವ ಹಾಗಿಲ್ಲ. ಎಲ್ಲರಿಂದಲೂ ಹೆಸರುಗಳನ್ನೂ ಪಡೆದು ಕಾರ್ಯಕ್ರಮಕ್ಕೆ ಬೇಕಾಗುವ ಗುಣಗಳನ್ನು ಹೊಂದಿದವರನ್ನು ಆರಿಸಬೇಕು ಎಂದರು. ಶ್ರೀ ಹಿರಿಯಡ್ಕ ಮೋಹನ ದಾಸ್, ಶ್ರೀ ವಾಸು ದೇವಾಡಿಗ ಇವರೂ ತಮ್ಮ ಸಲಹೆಗಳನ್ನು ನೀಡಿದರು. ಅಲ್ಲದೆ ಸಂಘದ ಉಪಸಮಿತಿಗಳ ಸದಸ್ಯರು, ಪ್ರಾದೇಶಿಕ ಸಮಿತಿಗಳ ಸದಸ್ಯರು ತಮ್ಮ ಸಲಹೆ ಸೂಚನೆಯನ್ನು ಮಂಡಿಸಿದರು.
ಸಂಪೂರ್ಣ ಸಭೆಯ ರೂಪ ರೇಷೆ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಂಡಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸುಜಾತ ಧರ್ಮಪಾಲ ದೇವಾಡಿಗ, ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ದೇವಾಡಿಗ, ಚೆಂಬೂರು ವಲಯದ ಶ್ರೀ ರಘು ಮೊಯ್ಲಿ, ಪ್ರಾದೇಶಿಕ ಸಮಿತಿಗಳ ಸಂಯೋಜಕರಾದ ಶ್ರೀ ಜಯ ಎಲ್. ದೇವಾಡಿಗ, ಮತ್ತು ಅಸಲ್ಫ ವಲಯದ ಕಾರ್ಯಾಧ್ಯಕ್ಷ ಶ್ರೀ ಹರೀಶ್ ದೇವಾಡಿಗ, ನವಿ ಮುಂಬಯಿ ವಲಯದ ಕಾರ್ಯಾಧ್ಯಕ್ಷ ಶ್ರೀ ರಮೇಶ್ ದೇವಾಡಿಗ, ಶಿಕ್ಷಣ ಸಮಿತಿಯ ಶ್ರೀ ಸುಧಾಕರ್ ಎಲ್ಲೂರು, ಸಮಿತಿ ಸದಸ್ಯರು ಶ್ರೀಮತಿ ಜಯಂತಿ ಮೊಯಿಲಿ, ಶ್ರೀಮತಿ ಗೀತಾ ದೇವಾಡಿಗ, ಶತಮಾನೋತ್ಸವ ಸಮಿತಿಯ ಶ್ರೀಮತಿ ಉಮಾವತಿ ಗುಜರನ್, ಶ್ರೀಮತಿ ಸುಜಯ ದೇವಾಡಿಗ, ಶ್ರೀಮತಿ ದೀಕ್ಷಾ ದೇವಾಡಿಗ, ಶ್ರೀಮತಿ ಶಾಂತ ಪಿ. ದೇವಾಡಿಗ, ಶ್ರೀಮತಿ ಮಮತಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು
ಗೌ. ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಇವರು ವಂದಿಸಿದರು.