Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
56ನೇ ವಾರ್ಷಿಕ ಕ್ರೀಡಾ ಕೂಟ, ತುಳು ಕನ್ನಡಿಗರಿಗಾಗಿ ಹಗ್ಗ ಜಗ್ಗಾಟದ ಸ್ಪೆರ್ಧೆ

ದೇವಾಡಿಗ ಸಂಘ ಮುಂಬಯಿಯ ಶತಮಾನೋತ್ಸವ ವರ್ಷ:
56ನೇ ವಾರ್ಷಿಕ ಕ್ರೀಡಾ ಕೂಟ, ತುಳು ಕನ್ನಡಿಗರಿಗಾಗಿ ಹಗ್ಗ ಜಗ್ಗಾಟದ ಸ್ಪೆರ್ಧೆ:
ಕ್ರೀಡೆಯು ಪ್ರಗತಿಗೆ ಸ್ಫೂರ್ತಿ-ವಿಶ್ವಾಸ್ ಅತ್ತಾವರ್

ಮುಂಬಯಿ ಡಿ. 1: ದೇವಾಡಿಗ ಸಂಘದ ಮುಂಬಯಿ ಇದರ ಶತಮಾನೋತ್ಸವ ವರ್ಷ ಆಚರಿಸುತ್ತಿರುವುದು ಸಂತೋಷದ ವಿಷಯ. ಶತಮಾನೋತ್ಸವ ವರ್ಷದಲ್ಲಿ ನಡೆಯುವ ಸಂಘದ 56ನೇ ಕ್ರೀಡಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ. ಸಂಘದ ಸದಸ್ಯರು ಬಹು ಸಂಖ್ಯೆಯಲ್ಲಿ ಈ ವಾರ್ಷಿಕ ಕ್ರೀಡಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದರಿಂದ ಸಂಘಟನೆಗೆ ಬಲ ತಂದಿದೆ. ಕ್ರೀಡೆ ಇದು ಅರೋಗ್ಯ ಮತ್ತು ಪ್ರಗತಿಗೆ ಸ್ಫೂರ್ತಿಯಾಗಿದ್ದು ಸದಸ್ಯರು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವಾಸ್ ಅತ್ತಾವರ್ ಅವರು ಇಂದು ಹೇಳಿದರು.

ದೇವಾಡಿಗ ಸಂಘ ಮುಂಬಯಿ ಇದರ ಶತಮಾನೋತ್ಸವ ವರ್ಷದಲ್ಲಿ ಆಚರಿಸಲಾದ ಸಂಘದ 56ನೇ ಕ್ರೀಡಾ ಮಹೋತ್ಸವವು ಇಂದು ಇಲ್ಲಿಯ ಮರೀನ್ ಲೈನ್ಸ್ ಇಲ್ಲಿಯ ಮುಂಬಯಿ ಯುನಿವೆಸರ್ಸಿಟಿ ಸ್ಪೋರ್ಟ್ಸ್ ಪವಲಿಯನ್ ಆಚರಿಸಲಾಗಿದ್ದು ಇದರ ಉದ್ಘಾಟನಾ ಸಂದರ್ಭ ಮಾತನಾಡಿದ ಶ್ರೀ ವಿಶ್ವಾಸ್ ಅತ್ತಾವರ್ ಇವರು ಈ ಮೇಲಿನ ಮಾತುಗಳನ್ನು ಹೇಳಿದರು.

ತಮ್ಮ ಮಾತುಗಳನ್ನು ಮುಂದುವರಿಸಿದ ಶ್ರೀ ಅತ್ತಾವರ್ ಇವರು ದೇವಾಡಿಗ ಸಂಘದ ಚಟುವಟಿಕೆಗಳನ್ನು ಶ್ಲಾಘಸಿ, ದೇವಾಡಿಗ ಕ್ರೀಡಾ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೇ, ಸಂಘಕ್ಕೆ ತನ್ನ ಸಂಪೂರ್ಣ ಸಹಕಾರ ಇರುವುದಾಗಿ ಆಶ್ವಾಸನೆ ನೀಡಿದರು.

ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಿಶ್ವ ದೇವಾಡಿಗ ಮಹಾ ಮಂಡಳದ ಅಧ್ಯಕ್ಷರು ಮತ್ತು ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಧರ್ಮಪಾಲ ದೇವಾಡಿಗ ಇವರು ಮಾತನಾಡಿ, ಸಂಘ ಹಾಗೂ ಕ್ರೀಡಾ ಸಮಿತಿಗೆ ಶುಭಾಶಯ ಕೋರಿದರು. ಶ್ರೀ ಪ್ರವೀಣ್ ಎನ್. ದೇವಾಡಿಗ ಇವರ ಸಂಘದ ನೇತೃತ್ವವನ್ನು ಶ್ಲಾಘಸಿ ಸಂಘದ ಕ್ರೀಡಾ ಮಂಡಳಿಯ ಉತ್ತಮ ಕಾರ್ಯಗಳನ್ನು ಅಭಿನಂದಿಸಿಸರು. ಸಂಘದ ಶತಮಾನೋತ್ಸವ ಆಚರಣೆಗೆ ಶುಭ ಕೋರಿದ ಶ್ರೀ ಧರ್ಮಪಾಲ ದೇವಾಡಿಗರು ನಗರದ ಎಲ್ಲಾ ಸಮಾಜ ಬಾಂಧವರು ಮುಂದೆ ಬಂದು ತಮ್ಮ ಒಮ್ಮತವನ್ನು ತೋರಿಸಬೇಕಾಗಿ ಕೇಳಿಕೊಂಡು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಂಘದ ಶತಮಾನೋತ್ಸವ ಆಚರಣಾ ಸಮಿತಿಯ ಸಂಯೋಜಕರಾದ ಶ್ರೀ ಹಿರಿಯಡ್ಕ ಮೋಹನದಾಸ್ ಇವರು ಮಾತನಾಡಿ ಸಂಘದ ಸದಸ್ಯರು ಎಲ್ಲಾ ತರಹದ ಸಹಕಾರ ನೀಡಿ ಶತಮಾನೋತ್ಸವವನ್ನು ಸಫಲಗೊಳಿಸಬೇಕಾಗಿ ಕೇಳಿಕೊಂಡರು. ಶತಮಾನೋತ್ಸವದ ಆಚರಣೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದ ಅವರು, ಬರುವ ಏಪ್ರಿಲ್ ತಿಂಗಳಲ್ಲಿ ನಡೆಯುವ ಎರಡು ದಿನದ ಕಾರ್ಯಕ್ರಮಕ್ಕೆ ಮಾಹಿತಿ ನೀಡಿ, ಸದಸ್ಯರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಶತಮಾನೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಂಡರು.

ಸಂಘದ ಕ್ರೀಡಾಮಹೋತ್ಸವವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಮಾತನಾಡಿ, ಸಂಘದ 56ನೇ ಕ್ರೀಡಾ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾ ಪಟುಗಳು, ಸದಸ್ಯರು ಮತ್ತು ಸಂಘದ ಕ್ರೀಡಾ ಮಂಡಳಿಯನ್ನು ಅಭಿನಂದಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರಾದ ಶ್ರೀ ವಿಶ್ವಾಸ್ ಅತ್ತಾವರ್ ಇವರನ್ನು ಅಭಿನಂದಿಸಿ ಮುಖ್ಯ ಪ್ರಯೋಜಕರಾಗಿ ಸಹಕರಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ವ್ಯಕ್ತ ಪಡಿಸಿದರು.

ಈ ಕ್ರೀಡಾಮಹೋತ್ಸವವು ಸಂಘದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಮಂಡಳಿಯ ಮಾರ್ಗದರ್ಶನದಲ್ಲಿ, ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಜೊತೆ ಖಜಾಂಚಿ ಶ್ರೀ ಸುರೇಶ್ ದೇವಾಡಿಗ, ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಮೋಹನದಾಸ್ ಗುಜರನ್, ಆಯೋಜನಾ ಸಮಿತಿಯ ಸಲಹೆಗಾರರಾದ ವಾಸು ಎಸ್ ದೇವಾಡಿಗ, ಜಯ ಹೆಚ್ ದೇವಾಡಿಗ, ರಘು ಎ ಮೊಯಿಲಿ, ಬ್ರಿಜೇಶ್ ನಿಟ್ಟೇಕರ್, ಆಯೋಜನಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಜಯಂತಿ ಎಂ. ದೇವಾಡಿಗ, ಕ್ರೀಡಾ ಸಮಿತಿಯ ಉಪಾಧ್ಯಕ್ಷೆ ಶುಭ ಎಸ್ ದೇವಾಡಿಗ, ಉಪಾಧ್ಯಕ್ಷ ವಿಜಯ್ ದೇವಾಡಿಗ, ಕಾರ್ಯದರ್ಶಿ ಶ್ರೀ ಗಣೇಶ್ ಕೆ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ಉತೇಜ್ ದೇವಾಡಿಗ ಮತ್ತು ರಕ್ಷಾ ದೇವಾಡಿಗ ಮೊದಲಾದವರ ನೇತೃತ್ವದಲ್ಲಿ ಮತ್ತು ಎಲ್ಲರ ಸಹಕಾರದಿಂದ ಇಂದು 56ನೇ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು.

ಕ್ರೀಡಾಮಹೋತ್ಸವ ಉದ್ಘಾಟನಾ ಸಂದರ್ಭ, ವಡಾಲದ ಎನ್. ಕೆ. ಹೈ ಸ್ಕೂಲ್ ವಿದ್ಯಾರ್ಥಿಗಳ ಬ್ಯಾಂಡ್ ವಾದನಕ್ಕೆ ಸಂಘದ ಹತ್ತು ಪ್ರಾದೇಶಿಕ ಸಮಿತಿಗಳಿಂದ ಧ್ವಜ ಸಂಚಲನ ನಡೆಸಲಾಯಿತು. ಮುಖ್ಯ ಅತಿಥಿಗಳು ಮಾನವಂದನೆ ಸ್ವೀಕರಿಸಿದರು. ಬಳಿಕ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು

ಈ ಕ್ರೀಡಾ ಮಹೋತ್ಸವದಲ್ಲಿ ಸುಮಾರು 45 ವಿಭಾಗಗಳ ಸ್ಪರ್ಧೆಗಳು ನಡೆದಿದ್ದು, ಇದರಲ್ಲಿ ಮಕ್ಕಳು, ಯುವಕರು, ವಯಸ್ಕರು (ಮಹಿಳೆಯರು ಮತ್ತು ಪುರುಷರು) ಭಾಗವಹಿಸಲಿದ್ದಾರೆ. 50, 80, 100, 200 ಮತ್ತು 400 ಮೀಟರಿನ ಓಟ, ಶಾಟ್ ಪುಟ್. ಲಾಂಗ್ ಜಂಪ್, ರಿಲೇ ಮತ್ತು ಹಗ್ಗ ಜಗ್ಗಾಟ ಮೊದಲಾದ ಕ್ರೀಡೆಗಳು ಈ ಕ್ರೀಡಾಕೂಟದಲ್ಲಿ ಸಮಾವೇಶಗೊಂಡಿವೆ. ಸಂಘದ ಶತಮಾನೋತ್ಸವ ಆಚರಣೆಯ ಅಂಗವಾಗಿ ಮುಂಬಯಿಯ ತುಳು ಕನ್ನಡಿಗರಿಗೆ ವಿಶೇಷವಾದ ಹಗ್ಗ ಜಗ್ಗಾಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಈ ಕ್ರೀಡಾ ಮಹೋತ್ಸವದಲ್ಲಿ ಸಂಘದ ಹತ್ತು ಪ್ರಾದೇಶಿಕ ಸಮಿತಿ ಗಳಾದ ಸಿಟಿ, ಚೆಂಬೂರು, ಭಾಂಡುಪ್, ಠಾಣೆ, ಡೊಂಬಿವಲಿ, ನವಿ ಮುಂಬಯಿ, ಅಸಲ್ಫಾ, ಜೋಗೇಶ್ವರಿ, ಬೋರಿವಲಿ ಮತ್ತು ಮೀರಾ ರೋಡ್ ವಲಯ ಪ್ರಾದೇಶಿಕ ಸಮಿತಿಗಳು ಸಕ್ರಿಯವಾಗಿ ಭಾಗವಹಿಸಿದ್ದು, ಅಂತ್ಯದಲ್ಲಿ, ಜೋಗೇಶ್ವರಿ ಪ್ರಾದೇಶಿಕ ಸಮಿತಿಯು ಪ್ರಥಮ ಪಾರಿತೋಷಕವನ್ನು ಪಡೆಯಿತು ಮತ್ತು ಮೀರಾರೋಡ್ ಪ್ರಾದೇಶಿಕ ಸಮಿತಿಯು ದ್ವಿತೀಯ ಸ್ಥಾನ ಪಡೆಯಿತು.

ವಿವಿಧ ಸ್ಪರ್ಧೆಗಳ ವಿಜೇತರು ಈ ಕೆಳಗಿನಂತೆ :
16 ವರ್ಷಗಳ ಕೆಳಗಿನ ವಿಭಾಗದ ಹುಡುಗರ ಚಾಂಪಿಯನ್ ಬಹುಮಾನವನ್ನು ಮಾಸ್ಟರ್ ಇಶಾನ್ ದೇವಾಡಿಗ ಇವರು ಪಡೆದರು ಮತ್ತು ಹುಡುಗಿಯರ ವಿಭಾಗದಲ್ಲಿ ಕುಮಾರಿ ತಾಶಿ ಮೊಯಿಲಿ ಇವರು ಪಡೆದರು.
25 ವರ್ಷಗಳ ಕೆಳಗಿನ ವಿಭಾಗದ ಹುಡುಗರ ಚಾಂಪಿಯನ್ ಬಹುಮಾನವನ್ನು ಅಕ್ಷಿತ್ ಶ್ರೀಯಾನ್ ಇವರು ಪಡೆದರು ಮತ್ತು ಹುಡುಗಿಯರ ವಿಭಾಗದಲ್ಲಿ ಭೂಮಿಕಾ ದೇವಾಡಿಗ ಇವರು ಪಡೆದರು.
35 ವರ್ಷಗಳ ಕೆಳಗಿನ ವಿಭಾಗದ ಪುರುಷರ ಚಾಂಪಿಯನ್ ಬಹುಮಾನವನ್ನು ಶ್ರಿ ಪುನೀತ್ ದೇವಾಡಿಗ ಇವರು ಪಡೆದರು ಮತ್ತು ಮಹಿಳೆಯರ ವಿಭಾಗದಲ್ಲಿ ಶ್ರೀಮತಿ ಗಿರಿಜಾ ದೇವಾಡಿಗ ಇವರು ಪಡೆದರು.
45 ವರ್ಷಗಳ ಕೆಳಗಿನ ವಿಭಾಗದ ಪುರುಷರ ಚಾಂಪಿಯನ್ ಬಹುಮಾನವನ್ನು ಶ್ರಿ ಕಿರಣ್ ದೇವಾಡಿಗ ಇವರು ಪಡೆದರು ಮತ್ತು ಮಹಿಳೆಯರ ವಿಭಾಗದಲ್ಲಿ ಶ್ರೀಮತಿ ಶುಭ ದೇವಾಡಿಗ ಇವರು ಪಡೆದರು.

ಮುಂಬಯಿಯ ತುಳು ಕನ್ನಡಿಗರಿಗೆ ಆಯೋಜಿಸಲಾದ ಹಗ್ಗ ಜಗ್ಗಾಟದ ಸ್ಪರ್ಧೆಯು ಈ ಕ್ರೀಡಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆದ ಈ ಸ್ಪರ್ಧೆಯಲ್ಲಿ ನವಿ ಮುಂಬಯಿ ಬಂಟ್ಸ್ ತಂಡವು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುದ್ದು ದ್ವಿತೀಯ ಸ್ಥಾನವನ್ನು ತನಿಷ್ಕ್ ಡೊಂಬಿವಲಿ ತಂಡ ಪಡೆದುಕೊಂಡಿತು. ಪ್ರಥಮ ಸ್ಥಾನದ ಬಹುಮಾನವಾಗಿ ಅತ್ಯಾಕರ್ಷಕ ಟ್ರೋಫಿ ಮತ್ತು 20,000/- ರೂಪಾಯಿಯ ನಗದು ಹಣ ನೀಡಲಾಯಿತು. ಹಾಗೆಯೆ ದ್ವಿತೀಯ ಬಹುಮಾನವಾಗಿಯೂ ಅತ್ಯಾಕರ್ಷಕ ಟ್ರೋಫಿ ಮತ್ತು 15,000/- ರೂಪಾಯಿಯ ನಗದು ಹಣ ನೀಡಲಾಯಿತು. ದೇವಾಡಿಗ ಸಂಘ ಮುಂಬಯಿ ತಂಡ ಹೊರತುಪಡಿಸಿ ತುಳು-ಕನ್ನಡಿಗರ ಹನ್ನೊಂದು ತಂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರ ಜೊತೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀ ಮೋಹನದಾಸ್ ಹಿರಿಯಡ್ಕ, ಆಯೋಜನಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಜಯಂತಿ ಎಂ. ದೇವಾಡಿಗ, ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಮೋಹನದಾಸ್ ಗುಜರನ್, ಉಪಕಾರ್ಯಧ್ಯಕ್ಷರಾದ ಶ್ರೀ ವಿಜಯ್ ದೇವಾಡಿಗ, ಕ್ರೀಡಾ ಸಮಿತಿಯ ಕಾರ್ಯದರ್ಶಿ ಶ್ರೀ ಗಣೇಶ್ ಕೆ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ಉತೇಜ್ ದೇವಾಡಿಗ, ಕುಮಾರಿ ರಕ್ಷಾ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೇಕರ್ ಮೊದಲಾದವರು ಸೇರಿ ಬಹುಮಾನಗಳನ್ನು ನೀಡಿದರು.

ಮಹಿಳೆಯರ ವಿಭಾಗದಲ್ಲಿ ಡೊಂಬಿವಲಿ ಬಂಟ್ಸ್ ತಂಡವು ಪ್ರಥಮ ಸ್ಥಾನ ಪಡೆದುದ್ದು ದ್ವಿತೀಯ ಸ್ಥಾನವನ್ನು ಜೈ ಭವಾನಿ ಶನೀಶ್ವರ ದೇವಾಲಯ ಡೊಂಬಿವಲಿ ತಂಡ ಪಡೆದುಕೊಂಡಿತು. ಪ್ರಥಮ ಸ್ಥಾನದ ಬಹುಮಾನವಾಗಿ ಅತ್ಯಾಕರ್ಷಕ ಟ್ರೋಫಿ ಮತ್ತು 15,000/- ರೂಪಾಯಿಯ ನಗದು ಹಣ ನೀಡಲಾಯಿತು. ಹಾಗೆಯೆ ದ್ವಿತೀಯ ಬಹುಮಾನವಾಗಿಯೂ ಅತ್ಯಾಕರ್ಷಕ ಟ್ರೋಫಿ ಮತ್ತು 10,000/- ರೂಪಾಯಿಯ ನಗದು ಹಣ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಮೊಯಿಲಿ, ಗೌ. ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಅಡ್ವೋಕೇಟ್ ಪ್ರಭಾಕರ್ ದೇವಾಡಿಗ ಮತ್ತು ನಿತೇಶ್ ದೇವಾಡಿಗ, ಜೊತೆ ಖಜಾಂಚಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ದೇವಾಡಿಗ, ಮಾಜಿಅಧ್ಯಕ್ಷರುಗಳಾದ ಶ್ರೀ ಮೋಹನದಾಸ್ ಹಿರಿಯಡ್ಕ, ಶ್ರೀ ವಾಸು ದೇವಾಡಿಗ, ಶ್ರೀ ರವಿ ದೇವಾಡಿಗ, ಶ್ರೀ ಎಸ್. ಪಿ. ಕರ್ಮರನ್, ಸಮಿತಿ ಸದಸ್ಯರು, ಕ್ರೀಡಾ ಸಮಿತಿಯ ಸದಸ್ಯರು ಯುವ ವಿಭಾಗ, ಮಹಿಳಾ ವಿಭಾಗ ಮತ್ತು ಪ್ರಾದೇಶಿಕ ಸಮಿತಿ ಸದಸ್ಯರು ಈ ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಯುವ ವಿಭಾಗದ ಕಾರ್ಯಧ್ಯಕ್ಷ Adv. ಶ್ರೀ ಬ್ರಿಜೇಶ್ ನಿಟ್ಟೆಕರ್ ಇವರು ಉದ್ಘಾಟನಾ ಸಮಾರಂಭವನ್ನು ನಿರೂಪಿಸಿದರು ಮತ್ತು ವಂದಿಸಿದರು. (ಚಿತ್ರಗಳು ಶ್ರೀ ಪ್ರಭಾಕರ್ ಎಸ್. ದೇವಾಡಿಗ)